MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Asian Games 2026
Today's Horoscope
Srirangapatna Dasara 2026
Shivamogga Rain Deficit
Karnataka Power Crisis
Satish Jarkiholi ED Probe
Sharavathi Back Water Muppane
Yeswantpur-Mangaluru Vande Bharat
Kasturi Rangan Report
Siddaramaiah vs Dr HC Mahadevappa
Actress Krishi Thapanda
  • Home
  • Entertainment
  • 'ಕೈಲಾಗದವ ಮೈ ಪರ್ಚೊಂಡ' ಅಂತಾರಲ್ಲ, ಹಾಗಾಯ್ತು ಇವರ ಕಥೆ: ನಟ ಅನಂತ್​ ನಾಗ್​ ತಿರುಗೇಟು

'ಕೈಲಾಗದವ ಮೈ ಪರ್ಚೊಂಡ' ಅಂತಾರಲ್ಲ, ಹಾಗಾಯ್ತು ಇವರ ಕಥೆ: ನಟ ಅನಂತ್​ ನಾಗ್​ ತಿರುಗೇಟು

ಹಿರಿಯ ನಟ ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಒಲಿದಿರುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಯವರನ್ನು ಹೊಗಳಿದ್ದಕ್ಕೇ ಈ ಪ್ರಶಸ್ತಿ ಸಿಕ್ಕಿದೆ ಎಂಬ ಟೀಕೆಗಳಿಗೆ ಅನಂತ್ ನಾಗ್ ಖಡಕ್ ತಿರುಗೇಟು ನೀಡಿದ್ದಾರೆ.

2 Min read
Author : Suchethana D
Published : Sep 21 2026, 01:58 PM IST
Share this Photo Gallery
  • FB
  • TW
  • Linkdin
  • Whatsapp
16
ದಾದಾ ಸಾಹೇಬ್​ ಫಾಲ್ಕೆ
Image Credit : Social Media

ದಾದಾ ಸಾಹೇಬ್​ ಫಾಲ್ಕೆ

ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದರಲ್ಲಿ ಒಬ್ಬರು ಅನಂತ್​ನಾಗ್​. ಅವರ ಅಭಿನಯವನ್ನು ಮೆಚ್ಚಿದವರು ಕೋಟ್ಯಂತರ ಮಂದಿ. ಆದರೆ ಅವರು ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುತ್ತಿದ್ದಂತೆಯೇ ಅವರ ವಿರುದ್ಧ ತಿರುಗಿ ಬಿದ್ದವರು ಕೆಲವರು! ಅದರ ಬೆನ್ನಲ್ಲೇ ಚಿತ್ರರಂಗದ ಪ್ರತಿಷ್ಠಿತ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ಸಿಗುತ್ತಿದ್ದಂತೆಯೇ, ಕೆಲವರು ನಖಶಿಖಾಂತ ಉರಿದುಬಿದ್ದಿದ್ದಾರೆ. ಅನಂತ್​ನಾಗ್​ ಅವರ ನಟನೆಯನ್ನು ಮೆಚ್ಚಿಕೊಳ್ಳುತ್ತಿದ್ದವರೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದರಿಂದ ಅವರಿಗೆ ಈ ಪ್ರಶಸ್ತಿ ಸಿಕ್ಕಿದೆ ಎಂದು ಆಡಿಕೊಳ್ಳುತ್ತಿದ್ದಾರೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಅರಗಿಸಿಕೊಳ್ಳಲಾಗದ ಪ್ರಶಸ್ತಿ
Image Credit : others

ಅರಗಿಸಿಕೊಳ್ಳಲಾಗದ ಪ್ರಶಸ್ತಿ

ಇಷ್ಟು ವರ್ಷ ಬೇರೆ ನಟರಿಗೆ ಈ ಪ್ರಶಸ್ತಿ ಸಿಕ್ಕಾಗ, ಅವರಿಗೆ ಸಿಗಬೇಕಿತ್ತು, ಇವರಿಗೆ ಸಿಗಬೇಕಿತ್ತು ಎಂದೆಲ್ಲಾ ಹೇಳದವರು, ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಬೇರೆ ನಟರ ಹೆಸರನ್ನು ಹೇಳಲು ಆರಂಭಿಸಿದ್ದಾರೆ. ಇಷ್ಟು ವರ್ಷಗಳಲ್ಲಿ ಕನ್ನಡಿಗನೊಬ್ಬನಿಗೆ ಅದೂ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ, ಎಂಥ ಪಾತ್ರಕ್ಕೂ ಸೈ ಎನ್ನಿಸಿಕೊಂಡು ಮೇಧಾವಿ ನಟನಾಗಿರುವ ಅನಂತ್​ನಾಗ್​ ಅವರಿಗೆ ಸಿಕ್ಕರೂ ಅದನ್ನು ಅರಗಿಸಿಕೊಳ್ಳಲಾಗದೇ ನೆಗೆಟಿವ್​ ಕಮೆಂಟ್​ ಹಾಕುತ್ತಿದ್ದಾರೆ.

Related Articles

Related image1
ಸಿನಿಮಾ ನಟನೆ ನಿಲ್ಲಿಸಿದ್ಯಾಕೆ ಅನಂತ್ ನಾಗ್? ಕೊನೆಗೂ ಸತ್ಯ ಬಿಚ್ಚಿಟ್ಟ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ನಟ!
Related image2
ಪ್ರತಿಷ್ಠಿತ ಫಾಲ್ಕೆ ಪ್ರಶಸ್ತಿಗೆ ಸಿಗುವ ಮೊತ್ತವೆಷ್ಟು? ಸಿಗುವ ಸೌಲಭ್ಯಗಳೇನು? ಪ್ರಶಸ್ತಿ ಆರಂಭವಾಗಿದ್ದು ಹೇಗೆ
36
ಈಗಲೂ ಮಾತಿಗೆ ಬದ್ಧ
Image Credit : others

ಈಗಲೂ ಮಾತಿಗೆ ಬದ್ಧ

ಈ ಬಗ್ಗೆ ಸುದ್ದಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟ ಅನಂತ್​ಕುಮಾರ್ ಬೇಸರದಿಂದ ನುಡಿದಿದ್ದಾರೆ. ಇನ್ನೆರಡು ವರ್ಷಗಳಲ್ಲಿ ನಮಗೆ ಸ್ವಾತಂತ್ರ್ಯ ಬಂದು 80 ವರ್ಷ ಆಗುತ್ತದೆ. ಆದರೆ ಈಗಲೂ ನಾನು ನನ್ನ ಮಾತಿಗೆ ಬದ್ಧವಾಗಿದ್ದೇನೆ. ನರೇಂದ್ರ ಮೋದಿ ಅವರಂಥ ಪ್ರಧಾನಿ ಇಲ್ಲಿಯವರೆಗೆ ಬಂದಿಲ್ಲ. ಅವರ ಕಾರ್ಯಗಳನ್ನು ನಾನು ಹೊಗಳಿದ್ದೇನೆ. ಅದು ಹೊಗಳಿಕೆ ಅಲ್ಲ. ದೇಶದ ಪ್ರಗತಿ, ಅರ್ಥವ್ಯವಸ್ಥೆಯಲ್ಲಿನ ಏರುಗತಿಯನ್ನು ಕಣ್ಣಾರೆ ನೋಡಿದವರು ಯಾರು ಬೇಕಾದರೂ ಅವರನ್ನು ಹೊಗಳುತ್ತಾರೆ. ಇದರಲ್ಲಿ ಅತಿಶಯೋಕ್ತಿ ಏನೂ ಇಲ್ಲ ಎಂದಿದ್ದಾರೆ.

46
ಕೈಲಾಗದವನು ಮೈ ಪರಚಿಕೊಂಡ...
Image Credit : Social Media

ಕೈಲಾಗದವನು ಮೈ ಪರಚಿಕೊಂಡ...

ಕೆಲವರು ಪ್ರಶಸ್ತಿ ಸಿಕ್ಕಿದ್ದಕ್ಕೆ ಏನೇನೋ ಮಾತನಾಡುತ್ತಿದ್ದಾರೆ. ಕೈಲಾಗದವನು ಮೈ ಪರಚಿಕೊಂಡ ಅಂತಾರಲ್ಲ, ಆ ರೀತಿ ಆಗಿದೆ ಅವರ ಸ್ಥಿತಿ. ನಾನು ಮೋದಿ ಅವರಿಗಿಂದ ಎರಡು ವರ್ಷ ದೊಡ್ಡವನು. ಅವರನ್ನು ಸುಖಾಸುಮ್ಮನೆ ಹೊಗಳಿ ನನಗೇನೂ ಆಗಬೇಕಿಲ್ಲ. ಆದರೆ ಅವರಂಥ ನಾಯಕ ದೇಶ ಕಂಡಿಲ್ಲ ಎನ್ನುವುದು ಯಾರು ಏನೇ ಪರಚಿಕೊಂಡರೂ ಸತ್ಯ ಎಂದಿದ್ದಾರೆ ನಟ ಅನಂತ್ ನಾಗ್​.

56
ದೇಶಕ್ಕೆ ಒಳ್ಳೆಯದ್ದನ್ನೇ ಮಾಡ್ತಿದ್ದಾರೆ
Image Credit : others

ದೇಶಕ್ಕೆ ಒಳ್ಳೆಯದ್ದನ್ನೇ ಮಾಡ್ತಿದ್ದಾರೆ

ಒಬ್ಬರು ದೇಶಕ್ಕಾಗಿ ಒಳ್ಳೆಯದನ್ನು ಮಾಡುತ್ತಿರುವಾಗ ಅವರನ್ನು ಹೊಗಳಿದರೆ, ಅವರ ಸಾಧನೆಯನ್ನು ಬೆಂಬಲಿಸಿದರೆ ಸುಖಾ ಸುಮ್ಮನೇ ಕೆಟ್ಟಕೆಟ್ಟದ್ದಾಗಿ ಹೇಳುವುದಕ್ಕೆ ಏನು ಪ್ರಯೋಜನ ಎಂದು ನಟ ಪ್ರಶ್ನಿಸಿದ್ದಾರೆ.

66
ಇಂಥ ನಾಯಕ ಸಿಕ್ಕಿದ್ದೇ ಪುಣ್ಯ
Image Credit : X

ಇಂಥ ನಾಯಕ ಸಿಕ್ಕಿದ್ದೇ ಪುಣ್ಯ

ಹಾಗೆ ನೋಡಿದರೆ ನಮ್ಮ ದೇಶಕ್ಕೆ ಇಂಥ ನಾಯಕ ಸಿಕ್ಕಿದ್ದೇ ಪುಣ್ಯ. ಈಗಲೂ ನಾನು ಅದನ್ನೇ ಹೇಳುತ್ತೇನೆ. ಅವರ ಸಾಧನೆ ಅವರ ಕೃತ್ಯವೇ ತೋರಿಸುತ್ತಿದೆ. ಅಂಥಅಪರೂಪದ ನಾಯಕ ಅವರು ಎಂದು ಅನಂತ್​ನಾಗ್​ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅನಂತ್ ನಾಗ್
ಪ್ರಶಸ್ತಿಗಳು
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್
ನರೇಂದ್ರ ಮೋದಿ
 

Latest Videos
Recommended Stories
Recommended image1
'ಡಿಸೆಂಬರ್‌ನಲ್ಲಿ ಮೇಧಾ ಪಾಟ್ಕರ್ ಜೊತೆ ಮದುವೆ ಆಗೋಕಾಗಲ್ಲ!'.. ಸಮಯ್ ರೈನಾ ಪೋಸ್ಟ್‌ಗೆ ನೆಟ್ಟಿಗರು ಸುಸ್ತೋ ಸುಸ್ತು!
Recommended image2
Bigg Boss ಮನೆಯಲ್ಲೇ ಮೇಕಪ್​ ಕೋರ್ಸ್​ ಮಾಡಿದ ಗಗನ್, ತಾಂಡವ್​​! ಬ್ಯೂಟಿ ಪಾರ್ಲರ್​ ಇಡಲು ರೆಡಿ
Recommended image3
Karna Serial ಭವ್ಯಾ ಗೌಡ ಮನೆಯಲ್ಲಿ ಮದುವೆ ಸಂಭ್ರಮ: ತಾರೆಯರ ಸಮಾಗಮ- ಬೀಳ್ಕೊಡುವೆ ವೇಳೆ ನಟಿ ಕಣ್ಣೀರು
Related Stories
Recommended image1
ಸಿನಿಮಾ ನಟನೆ ನಿಲ್ಲಿಸಿದ್ಯಾಕೆ ಅನಂತ್ ನಾಗ್? ಕೊನೆಗೂ ಸತ್ಯ ಬಿಚ್ಚಿಟ್ಟ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ನಟ!
Recommended image2
ಪ್ರತಿಷ್ಠಿತ ಫಾಲ್ಕೆ ಪ್ರಶಸ್ತಿಗೆ ಸಿಗುವ ಮೊತ್ತವೆಷ್ಟು? ಸಿಗುವ ಸೌಲಭ್ಯಗಳೇನು? ಪ್ರಶಸ್ತಿ ಆರಂಭವಾಗಿದ್ದು ಹೇಗೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved