ಕಿಲ್ಲಿಂಗ್ ಲುಕ್ಸ್‌ನಿಂದ ನಟಿ ಕಯಾದು ಲೋಹರ್ ಸಖತ್ ಸದ್ದು: ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್!
ನಟಿ ಕಯಾದು ಲೋಹರ್ ಅವರ ಲೇಟೆಸ್ಟ್ ಗ್ಲಾಮರಸ್ ಫೋಟೋಸ್ ವೈರಲ್ ಆಗಿವೆ. ಕಯಾದು ಅವರ ಕಿಲ್ಲಿಂಗ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಲೇಟೆಸ್ಟ್ ಫೋಟೋಶೂಟ್
ಪ್ರಸ್ತುತ ಯೂತ್ ಕ್ರಶ್ ಆಗಿ ಗುರುತಿಸಿಕೊಂಡಿರುವ ಕಯಾದು ಲೋಹರ್ ಬಗ್ಗೆ ಕನ್ನಡ ಸಿನಿಪ್ರಿಯರಿಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ತಮ್ಮ ಗ್ಲಾಮರಸ್ ಲುಕ್ ಹಾಗೂ ಅಭಿನಯದ ಮೂಲಕವೇ ಅಭಿಮಾನಿಗಳ ಗಮನ ಸೆಳೆಯುತ್ತಿರುವ ಈ ಬೆಡಗಿ, ಇದೀಗ ಮತ್ತೊಮ್ಮೆ ತಮ್ಮ ಲೇಟೆಸ್ಟ್ ಫೋಟೋಶೂಟ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.
ಅಸ್ಸಾಂನ ತೇಜ್‌ಪುರದವರು
2000ರ ಏಪ್ರಿಲ್ 11ರಂದು ಅಸ್ಸಾಂನ ತೇಜ್‌ಪುರದಲ್ಲಿ ಜನಿಸಿದ ಕಯಾದು ಲೋಹರ್, 2021ರಲ್ಲಿ ನಡೆದ ‘ಪುಣೆ ಫ್ರೆಶ್ ಫೇಸ್’ ಸ್ಪರ್ಧೆಯಲ್ಲಿ ವಿಜೇತರಾಗಿ ಹೊರಹೊಮ್ಮಿದ್ದರು. ಇದೇ ಗೆಲುವು ಅವರಿಗೆ ಚಿತ್ರರಂಗದ ಬಾಗಿಲು ತೆರೆಯುವಂತೆ ಮಾಡಿತು.
ಮುಗಿಲ್‌ಪೇಟೆ ಚಿತ್ರದ ಮೂಲಕ ಎಂಟ್ರಿ
2021ರಲ್ಲಿ ತೆರೆಕಂಡ ಕನ್ನಡದ ‘ಮುಗಿಲ್‌ಪೇಟೆ’ ಚಿತ್ರದ ಮೂಲಕ ನಾಯಕಿಯಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಕಯಾದು, ಬಳಿಕ ಮಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟರು. 2022ರಲ್ಲಿ ಬಿಡುಗಡೆಯಾದ ‘ಪಾಥೋನ್‌ಪಥಮ್ ನೂಟ್ಟಾಂಡು’ ಚಿತ್ರದ ಮೂಲಕ ಮಲಯಾಳಂ ಪ್ರೇಕ್ಷಕರ ಗಮನ ಸೆಳೆದರು.
ಯೂತ್ ಫೇವರಿಟ್
ಇತ್ತೀಚೆಗೆ ತೆರೆಕಂಡ ‘ಡ್ರ್ಯಾಗನ್’ ಸಿನಿಮಾದ ಮೂಲಕ ಕಯಾದು ಲೋಹರ್‌ಗೆ ಮತ್ತಷ್ಟು ಜನಪ್ರಿಯತೆ ಸಿಕ್ಕಿದೆ. ಈ ಚಿತ್ರದಲ್ಲಿ ತಮ್ಮ ಗ್ಲಾಮರಸ್ ಲುಕ್‌ನಿಂದಲೇ ಕಿರುತೆರೆಯಷ್ಟೇ ಅಲ್ಲದೆ ಸಿನಿಪ್ರಿಯರ ಗಮನವನ್ನೂ ಸೆಳೆದಿರುವ ಈ ನಟಿ, ಯೂತ್ ಫೇವರಿಟ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ್
ಸದ್ಯ ಕಯಾದು ಲೋಹರ್ ತೆಲುಗು, ಮರಾಠಿ ಹಾಗೂ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಥಾರಂ’ ಮತ್ತು ‘ಇಧಯಂ ಮುರಳಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿರುವ ಅವರು, ದಕ್ಷಿಣ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸುವತ್ತ ಹೆಜ್ಜೆ ಇಡುತ್ತಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲೂ ಕಯಾದು ಸಖತ್ ಆಕ್ಟಿವ್ ಆಗಿದ್ದಾರೆ.
ಫೋಟೋಗಳು ಸಖತ್ ವೈರಲ್
ಆಗಾಗ್ಗೆ ತಮ್ಮ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಅವರು ಶೇರ್ ಮಾಡಿರುವ ಹೊಸ ಫೋಟೋಗಳು ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಹಾಗೂ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು ಕಯಾದು ಲೋಹರ್ ಅವರ ಈ ಕಿಲ್ಲಿಂಗ್ ಲುಕ್ಸ್‌ಗೆ ಅಭಿಮಾನಿಗಳಿಂದ ಕಾಮೆಂಟ್‌ಗಳ ಸುರಿಮಳೆಯೇ ಹರಿದುಬರುತ್ತಿದ್ದು, ಲೇಟೆಸ್ಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

