MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • 'ದೇವದಾಸ್'ಗೆ ಅಂಡರ್‌ವರ್ಲ್ಡ್‌ನಿಂದ ಹಣ ಆರೋಪ; ಜೈಲು ಸೇರಿದ್ದ ನಿರ್ಮಾಪಕರು

'ದೇವದಾಸ್'ಗೆ ಅಂಡರ್‌ವರ್ಲ್ಡ್‌ನಿಂದ ಹಣ ಆರೋಪ; ಜೈಲು ಸೇರಿದ್ದ ನಿರ್ಮಾಪಕರು

20 ವರ್ಷಗಳ ಹಿಂದೆ, ಇದೇ ದಿನ, ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರ ದೇವದಾಸ್‌ ಬಿಡುಗಡೆಯಾಯಿತು. ಅದನ್ನು ಇಂದಿಗೂ ಮಾಸ್ಟರ್ ಪೀಸ್ ಎಂದು ಪರಿಗಣಿಸಲಾಗಿದೆ. ಈ ಚಿತ್ರ ಶಾರುಖ್ ಖಾನ್, ಐಶ್ವರ್ಯ ರೈ ಬಚ್ಚನ್ ಮತ್ತು ಮಾಧುರಿ ದೀಕ್ಷಿತ್ ಅಭಿನಯದ 'ದೇವದಾಸ್'. ಅದು ಚಿತ್ರದ ಹಾಡುಗಳಾಗಲಿ ಅಥವಾ ಭವ್ಯವಾದ ಸೆಟ್‌ಗಳಾಗಲಿ, ನಟರ ವೇಷಭೂಷಣಗಳು ಅಥವಾ ಸಂಗೀತವಾಗಿರಲಿ ಎಲ್ಲವು ಅದ್ಭುತವಾಗಿದ್ದವು. 'ದೇವದಾಸ್' 20 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಆ ಕಾಲದ ಈ ಅತ್ಯಂತ ದುಬಾರಿ ಚಿತ್ರಕ್ಕೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್‌ ಸಂಗತಿಗಳು ಇಲ್ಲಿವೆ.

3 Min read
Suvarna News
Published : Jul 12 2022, 07:04 PM IST
Share this Photo Gallery
  • FB
  • TW
  • Linkdin
  • Whatsapp
112

ಈ ಚಿತ್ರದ ಕಥೆಯು ಅದೇ ಹೆಸರಿನ ಪ್ರಸಿದ್ಧ ಕಾದಂಬರಿಯನ್ನು ಆಧರಿಸಿದೆಯಾದರೂ, ಈ ಕಥೆ ಮತ್ತು ಬನ್ಸಾಲಿ ಅವರ ನೈಜ ಕಥೆಗೂ ಕೆಲವು ಸಾಮ್ಯತೆಗಳಿವೆ. ಸಂಜಯ್ ಸಂದರ್ಶನವೊಂದರಲ್ಲಿ ತಮ್ಮ ತಂದೆ ನಿರ್ಮಾಪಕರಾಗಿದ್ದು, ಸಿನಿಮಾದಲ್ಲಿ ಕೆಲಸ ಮಾಡದ ಕಾರಣ ಮದ್ಯದಲ್ಲಿ ಮುಳುಗಿದ್ದರು. ಅವರ ಕೊನೆಯ ದಿನಗಳಲ್ಲಿ ಅವನ ತಂದೆ ತನ್ನ ಹೆಂಡತಿ ಲೀಲಾಗೆ ಕೈ ಚಾಚಿದರು ಮತ್ತು ಲೀಲಾ ಅವರ  ಚಾಚಿದ ತಕ್ಷಣ, ಅವರ ತಂದೆ ಸತ್ತರು. ತಂದೆಯ ಮರಣದ ನಂತರ ಸಂಜಯ್ 'ದೇವದಾಸ್' ಓದಿ ಈ ಸಿನಿಮಾ ಮಾಡಲು ನಿರ್ಧರಿಸಿದರು. ಚಿತ್ರದ ಕೊನೆಯ ದೃಶ್ಯದಲ್ಲೂ ಅವರು ಈ ದೃಶ್ಯವನ್ನು ಮರುಸೃಷ್ಟಿಸಿದರು. ಐಶ್ವರ್ಯಾ ಓಡಿ ಬಂದರೂ ಶಾರುಖ್ ಕೈ ಹಿಡಿಯಲು ಸಾಧ್ಯವಾಗುತ್ತಿಲ್ಲ. ಹೀಗೆ ಸಂಜಯ್ ತಮ್ಮ ವೈಯಕ್ತಿಕ ಅನುಭವವನ್ನು ಚಿತ್ರದಲ್ಲಿ ಬಳಸಿಕೊಂಡಿದ್ದಾರೆ.


 

212

ಈ ಚಿತ್ರಕ್ಕಾಗಿ ಬನ್ಸಾಲಿ ಮೊದಲು ಸಲ್ಮಾನ್ ಖಾನ್ ಅವರಿಗೆ 'ದೇವದಾಸ್' ಪಾತ್ರವನ್ನು ನೀಡಿದರು. ಅವರು ತಿರಸ್ಕರಿಸಿದ ನಂತರ, ಶಾರುಖ್‌ಗೆ ಚಿತ್ರವನ್ನು ಆಫರ್ ಮಾಡಲಾಯಿತು. ಅಂದಹಾಗೆ, ಚಿತ್ರದಲ್ಲಿ ಚುನಿಲಾಲ್ ಮುಖ್ಯ ಪಾತ್ರವನ್ನು ಜಾಕಿ ಶ್ರಾಫ್ ನಿರ್ವಹಿಸಿದ್ದಾರೆ. ಜಾಕಿ ಮೊದಲು, ಸೈಫ್ ಅಲಿ ಖಾನ್, ಮನೋಜ್ ಬಾಜ್ಪೇಯಿ ಮತ್ತು ಗೋವಿಂದ ಅವರನ್ನು ಈ ಪಾತ್ರಕ್ಕಾಗಿ ಸಂಪರ್ಕಿಸಲಾಯಿತು ಆದರೆ ಮೂವರೂ ಅದನ್ನು ತಿರಸ್ಕರಿಸಿದರು.

312

ಈ ಚಿತ್ರವು ಆ ಸಮಯದಲ್ಲಿ ಬಿಡುಗಡೆಯಾದ ಅತ್ಯಂತ ದುಬಾರಿ ಮತ್ತು ವರ್ಷದ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿತ್ತು. ಆಗ ಸುಮಾರು 50 ಕೋಟಿ ವೆಚ್ಚದಲ್ಲಿ ತಯಾರಾದ ಚಿತ್ರ ತನ್ನ ಬಜೆಟ್‌ಗಿಂತ ದುಪ್ಪಟ್ಟು ಅಂದರೆ 104 ಕೋಟಿ ಗಳಿಸಿತ್ತು. ಈ ಚಿತ್ರದ ಚಿತ್ರೀಕರಣಕ್ಕೆ ದಿನವೊಂದಕ್ಕೆ 7 ಲಕ್ಷ ರೂ ಖರ್ಚಾಗಿತ್ತು. ಆ ಸಮಯದ ಪ್ರಕಾರ ಚಿತ್ರದ ಬಜೆಟ್ ತುಂಬಾ ಹೆಚ್ಚಿತ್ತು, ನಿರ್ಮಾಪಕ ಭರತ್ ಶಾ ಅವರನ್ನು ಪೊಲೀಸರು ಬಂಧಿಸಿದರು. ಈ ಚಿತ್ರಕ್ಕೆ ಭೂಗತ ಲೋಕದವರು ಹಣ ಹೂಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.   ಭರತ್ 16 ತಿಂಗಳು ಜೈಲು ಸೇರಬೇಕಾಗಿ ಬಂದಿದ್ದು, ಜೈಲಿನಿಂದ ಹೊರಬಂದ ಬಳಿಕ ಮತ್ತೊಮ್ಮೆ ‘ದೇವದಾಸ್’ ಚಿತ್ರೀಕರಣ ಶುರುವಾಯಿತು. ಇದು ನಂತರ 2002ರಲ್ಲಿ ಅತಿ ಹೆಚ್ಚು ಹಣ ಗಳಿಸಿದ ಚಿತ್ರವಾಯಿತು. ಅಲ್ಲದೆ, ಮುಂದಿನ 4 ವರ್ಷಗಳ ಗಳಿಕೆಯಲ್ಲಿ ಈ ಚಿತ್ರದ ದಾಖಲೆಯನ್ನು ಯಾವ ಚಿತ್ರವೂ ಮುರಿಯಲಿಲ್ಲ.


 

412

 275 ದಿನಗಳ ಕಾಲ ನಡೆದ ಈ ಚಿತ್ರದ ಚಿತ್ರೀಕರಣದಲ್ಲಿ 6 ವಿವಿಧ ಸೆಟ್‌ಗಳಲ್ಲಿ 2500 ಲೈಟ್‌ಗಳು, 700 ಲೈಟ್ ಮೆನ್, 42 ಜನರೇಟರ್ ಮತ್ತು 3 ಮಿಲಿಯನ್ ವ್ಯಾಟ್ ವಿದ್ಯುತ್ ಪೂರೈಕೆಯನ್ನು ಬಳಸಲಾಗಿದೆ. ಸಾಮಾನ್ಯವಾಗಿ 2 ರಿಂದ 3 ಜನರೇಟರ್‌ಗಳನ್ನು ಚಿತ್ರೀಕರಿಸಲು ಬಳಸಲಾಗುತ್ತಿತ್ತು. ಪಾರೋ ಮನೆಯ ಸೆಟ್ ತಯಾರಿಸಲು ಕೇವಲ 1.5 ಲಕ್ಷ ಬಣ್ಣದ ಗಾಜಿನ ತುಂಡುಗಳನ್ನು ಬಳಸಲಾಗಿದೆ. ಚಿತ್ರದ ಎಲ್ಲಾ ಸೆಟ್‌ಗಳು ತುಂಬಾ ಐಷಾರಾಮಿಯಾಗಿದ್ದವು, ಅವುಗಳನ್ನು ಪೂರ್ಣಗೊಳಿಸಲು ಸುಮಾರು ಒಂಬತ್ತು ತಿಂಗಳು ಬೇಕಾಯಿತು.

512

ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಪಾತ್ರದ ಚಂದ್ರಮುಖಿಯ ಕೋಣೆ ಚಿತ್ರದ ಅತ್ಯಂತ ದುಬಾರಿ ಭಾಗವಾಗಿತ್ತು. ಈ ಕೋಠವನ್ನು ನಿರ್ಮಿಸಲು 12 ಕೋಟಿ ರೂ ವ್ಯಯಿಸಿಲಾಗಿತ್ತು. ಇದೇ ವೇಳೆ ಪಾರೋ ಮನೆಯ ಸೆಟ್ ಸುಮಾರು 3 ಕೋಟಿ ರೂ. ಹಲವಾರು ಬಾರಿ ಚಿತ್ರದ ಸೆಟ್‌ಗಳಲ್ಲಿ ಬೆಂಕಿಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿದೆ. ಆದರೆ ಅದನ್ನು ಪರಿಪೂರ್ಣಗೊಳಿಸಲು ಬನ್ಸಾಲಿ ಯಾವುದೇ ಸಣ್ಣ ಅವಕಾಶವನ್ನು ಬಿಡಲಿಲ್ಲ.

612

ಅಬು ಜಾನಿ ಸಂದೀಪ್ ಖೋಸ್ಲಾ ಅವರು ಚಿತ್ರದಲ್ಲಿ ಮಾಧುರಿಗಾಗಿ ವೇಷಭೂಷಣಗಳನ್ನು ವಿನ್ಯಾಸಗೊಳಿಸಿದ್ದರು. ಮಾಧುರಿಯ ಪ್ರತಿ ವೇಷಭೂಷಣದ ಬೆಲೆ 15 ಲಕ್ಷ ರೂ. ಮಾಧುರಿ ತಮ್ಮ ಚಿತ್ರದಲ್ಲಿನ 'ಕಹೆ ಚೆಡ್ ಚೆಡ್ ಮೋಹೆ' ಹಾಡಿನಲ್ಲಿ 30 ಕೆಜಿಯ ಲೆಹೆಂಗಾವನ್ನು ಧರಿಸಿದ್ದರು.ಅದನ್ನು ಧರಿಸಿ, ಆಕೆಗೆ ನೃತ್ಯ ಮಾಡಲು ಸಾಧ್ಯವಾಗದಿದ್ದಾಗ, ಬನ್ಸಾಲಿ ತನ್ನ ಲೆಹೆಂಗಾವನ್ನು ಬದಲಾಯಿಸಿದರು ಮತ್ತು ಅವರಿಗಾಗಿ 16 ಕೆಜಿ ಘಾಗ್ರಾವನ್ನು ಮಾಡಿದರು.

712

ಅದೇ ಸಮಯದಲ್ಲಿ, ಬನ್ಸಾಲಿ ಪಾರೋ ಪಾತ್ರದಲ್ಲಿ ನಟಿಸಿದ ಐಶ್ವರ್ಯಾ ರೈ ಅವರ ಲುಕ್‌ಗಾಗಿ ತುಂಬಾ ಶ್ರಮಿಸಿದರು. ಚಿತ್ರದಲ್ಲಿ ಅವರ ವೇಷಭೂಷಣಗಳನ್ನು ನೀತಾ ಲುಲ್ಲಾ ವಿನ್ಯಾಸಗೊಳಿಸಿದ್ದಾರೆ. ಐಶ್ವರ್ಯಾಗೆಉತ್ತಮವಾದ ಸೀರೆಯನ್ನು ಖರೀದಿಸಲು ಅವರು ಕೋಲ್ಕತ್ತಾಗೆ ಅನೇಕ ಪ್ರವಾಸಗಳನ್ನು ಮಾಡಿದರು. ಬನ್ಸಾಲಿ ಅವರೇ ಕೋಲ್ಕತ್ತಾದಿಂದ ಐಶ್ವರ್ಯಾಗೆ 600 ಸೀರೆಗಳನ್ನು ಆರ್ಡರ್ ಮಾಡಿದ್ದರು. ಈ ಸೀರೆಗಳ ಪೈಕಿ ಐಶ್ವರ್ಯಾಗೆ ಸುಂದರ ಲುಕ್ ನೀಡಲಾಗಿದೆ.


 

812

ಇಸ್ಮಾಯಿಲ್ ದರ್ಬಾರ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡುಗಳನ್ನು ಸಿದ್ಧಪಡಿಸಲು ಎರಡು ವರ್ಷಗಳ ದೀರ್ಘ ಸಮಯ ತೆಗೆದುಕೊಂಡಿತು. ಚಿತ್ರದ ಪ್ರತಿ ಹಾಡನ್ನು ಸುಮಾರು 10 ದಿನಗಳಲ್ಲಿ ರೆಕಾರ್ಡ್ ಮಾಡಲಾಗಿದೆ. ಇದರ ನಂತರ ಅವುಗಳನ್ನು ಕನಿಷ್ಠ 10 ಬಾರಿ ಮಿಕ್ಸ್‌ ಮಾಲಾಗಿದೆ ಈ ಸಂದರ್ಭದಲ್ಲಿ, ಇಸ್ಮಾಯಿಲ್ ಮತ್ತು ಬನ್ಸಾಲಿ ನಡುವೆ ಹಲವು ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳಿದ್ದವು. ನುಸ್ರತ್ ಬದ್ರ್ ಅಂತಿಮ ಮಿಕ್ಸಿಂಗ್ ಹಂತದಲ್ಲಿ 'ಡೋಲಾ ರೇ ಡೋಲಾ' ಹಾಡಿನಲ್ಲಿ ಒಂದು ಸಾಲನ್ನು ಬದಲಾಯಿಸಿದರು ಮತ್ತು ಇದರಿಂದಾಗಿ ಚಿತ್ರದ ವೆಚ್ಚವೂ ಹೆಚ್ಚಾಗಿದೆ.


 

912

ಈ ಚಿತ್ರವು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 41.66 ಕೋಟಿ ಗಳಿಸಿತು. ಆ ಸಮಯದಲ್ಲಿ ಈ ದಾಖಲೆ ಅತ್ಯಂತ ದೊಡ್ಡದಾಗಿತ್ತು.  ಇದು ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲೂ ಪ್ರಥಮ ಪ್ರದರ್ಶನ ಕಂಡಿತ್ತು. ಅಷ್ಟೇ ಅಲ್ಲ ಚಿತ್ರದ ಮ್ಯೂಸಿಕ್ ರೈಟ್ಸ್ ಕೂಡ 12.5 ಕೋಟಿಗೆ ಮಾರಾಟವಾಗಿದೆ.

1012

ಈ ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆಯಾಗಿದೆ. ಒಟ್ಟು 106 ನಾಮನಿರ್ದೇಶನಗಳಲ್ಲಿ, ಇದು ಸುಮಾರು 69 ಪ್ರಶಸ್ತಿಗಳನ್ನು ಗೆದ್ದಿದೆ. ಈ ಪ್ರಶಸ್ತಿಗಳಲ್ಲಿ 5 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು 11 ಫಿಲ್ಮ್‌ಫೇರ್ ಪ್ರಶಸ್ತಿಗಳ ಜೊತೆ  16 IIFA ಪ್ರಶಸ್ತಿಗಳನ್ನು ಒಳಗೊಂಡಿವೆ.


 

1112

ಸಂಜಯ್ ಲೀಲಾ ಬನ್ಸಾಲಿ ಈ ಚಿತ್ರದ ಹೆಸರು ಮತ್ತು ಪರಿಕಲ್ಪನೆಯನ್ನು ಶರತ್ಚಂದ್ರ ಚಟ್ಟೋಪಾಧ್ಯಾಯ ಅವರ ಕಾದಂಬರಿಯಿಂದ ತೆಗೆದುಕೊಂಡಿದ್ದಾರೆ.
ಬನ್ಸಾಲಿ ಮತ್ತು ಶಾರುಖ್ ಒಟ್ಟಿಗೆ ಕೆಲಸ ಮಾಡಿದ್ದು ಇದೇ ಮೊದಲು. ಈ ಹಿಂದೆ 1955 ರಲ್ಲಿ ಈ ಕಥೆ ಮತ್ತು ಕಾದಂಬರಿಯ ಮೇಲೆ 'ದೇವದಾಸ್' ಚಲನಚಿತ್ರವನ್ನು ನಿರ್ಮಿಸಲಾಯಿತು. ದಿಲೀಪ್ ಕುಮಾರ್ ಅಭಿನಯದ ಆ ಚಿತ್ರವನ್ನು ವಿಮಲ್ ರಾಯ್ ನಿರ್ದೇಶಿಸಿದ್ದಾರೆ.

1212

ಸಂದರ್ಶನವೊಂದರಲ್ಲಿ, ನಿರ್ದೇಶಕ ಬಿಮಲ್ ರಾಯ್ ಅವರು 1955 ರಲ್ಲಿ ನಿರ್ಮಿಸಿದ 'ದೇವದಾಸ್' ಚಿತ್ರದಿಂದ ಪ್ರಸ್ತುತಿ ಶೈಲಿಯನ್ನು ಮಾತ್ರ ಬದಲಾಯಿಸಿದ್ದೇನೆ ಮತ್ತು ಉಳಿದಂತೆ ಅದೇ ಇದೆ ಎಂದು ಬನ್ಸಾಲಿ ಹೇಳಿಕೊಂಡಿದ್ದಾರೆ. 'ದೇವದಾಸ್' ಪಾತ್ರವನ್ನು ನೈಜವಾಗಿಸಲು, ಶಾರುಖ್ ಖಾನ್ ದೃಶ್ಯಕ್ಕೆ ಮೊದಲು ಸೆಟ್‌ನಲ್ಲಿ ಸ್ವಲ್ಪ ಮದ್ಯ ಸೇವಿಸುತ್ತಿದ್ದರು ಎಂದು ಹೇಳಲಾಗುತ್ತದೆ.

About the Author

SN
Suvarna News
ಐಶ್ವರ್ಯಾ ರೈ
ಬಾಲಿವುಡ್
ಮಾಧುರಿ ದೀಕ್ಷಿತ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved