MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ವಿಜ್ಜು ತೆಕ್ಕೆಯೊಳಗೆ ನಾನು, ಆ ರಾತ್ರಿಯ ಗುಂಗಿನಿಂದ ಇನ್ನೂ ಹೊರ ಬರಲಾಗಿಲ್ಲ: Rashmika Mandanna

ವಿಜ್ಜು ತೆಕ್ಕೆಯೊಳಗೆ ನಾನು, ಆ ರಾತ್ರಿಯ ಗುಂಗಿನಿಂದ ಇನ್ನೂ ಹೊರ ಬರಲಾಗಿಲ್ಲ: Rashmika Mandanna

rashmika mandanna vijay deverakonda sangeet ceremony : ರಶ್ಮಿಕಾ ಮಂದಣ್ಣಗೆ ಆ ರಾತ್ರಿ ಮರೆಯಲಾಗ್ತಿಲ್ಲ. ಬೆಳಗಿನ ಜಾವ 4 ಗಂಟೆಯವರೆಗೆ ಏನೆಲ್ಲ ಆಯ್ತು ಎಂಬುದನ್ನು ರಶ್ಮಿಕಾ ತಮ್ಮ ಪೋಸ್ಟ್ ಮೂಲಕ ತಿಳಿಸಿದ್ದಾರೆ. 

2 Min read
Author : Roopa Hegde
Published : Mar 03 2026, 12:08 PM IST
Share this Photo Gallery
  • FB
  • TW
  • Linkdin
  • Whatsapp
17
ರಶ್ಮಿಕಾ ವಿಜ್ಜು ಮದುವೆ
Image Credit : Asianet News

ರಶ್ಮಿಕಾ ವಿಜ್ಜು ಮದುವೆ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟು ನಾಲ್ಕು ದಿನ ಕಳೆದಿದೆ. ಫೆಬ್ರವರಿ 26, 2026 ರಂದು ಉದಯಪುರದಲ್ಲಿ ಅದ್ಧೂರಿಯಾಗಿ ಮದುವೆ ನಡೆದಿದೆ. ಆದ್ರೆ ಮದುವೆ ಅತ್ಯಂತ ಪ್ರೈವೆಟ್ ಆಗಿತ್ತು. ಹಾಗಾಗಿ ಯಾವುದೇ ಫೋಟೋ, ವಿಡಿಯೋಗಳು ವೈರಲ್ ಆಗಿರಲಿಲ್ಲ. ಮದುವೆ ದಿನವೇ ರಶ್ಮಿಕಾ ,ಮದುವೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಮದುವೆ ನಂತ್ರ ಸತ್ಯನಾರಾಯಣ ಪೂಜೆ ಮಾಡಿದ್ದ ರಶ್ಮಿಕಾ ದಂಪತಿ ತಿರುಪತಿಗೆ ಭೇಟಿ ನೀಡಿದ್ದರು. ಈಗ ಮದುವೆಗೆ ಸಂಬಂಧಿಸಿದ ಒಂದೊಂದೇ ಫೋಟೋ, ವಿಡಿಯೋಗಳು ವೈರಲ್ ಆಗ್ತಿವೆ.

27
ಸಂಗೀತ ಕಾರ್ಯಕ್ರಮದ ಫೋಟೋ
Image Credit : Asianet News

ಸಂಗೀತ ಕಾರ್ಯಕ್ರಮದ ಫೋಟೋ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸಂಗೀತ ಕಾರ್ಯಕ್ರಮ ಫೆಬ್ರವರಿ 24 ರಂದು ನಡೆದಿದೆ. ಅದ್ರ ಫೋಟೋ ಹಾಗೂ ವಿಡಿಯೋಗಳನ್ನು ರಶ್ಮಿಕಾ ಮಂದಣ್ಣ ಫೋಸ್ಟ್ ಮಾಡಿದ್ದಾರೆ. ಇದ್ರಲ್ಲಿ ರಶ್ಮಿಕಾ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಡಾನ್ಸ್ ಮಾಡ್ತಿರೋದನ್ನು ನೋಡ್ಬಹುದು. ಅನೇಕ ಕನಸುಗಳನ್ನು ಹೊತ್ತ ಇಬ್ಬರ ಕಣ್ಣುಗಳು ಆ ಸಮಯದಲ್ಲಿ ಬೆರೆತಿತ್ತು. ಹಸೆಮಣೆ ಏರಲು ಇಬ್ಬರು ಕಾತರದಲ್ಲಿರೋದನ್ನು ಕಣ್ಣುಗಳೇ ಹೇಳ್ತಿದ್ವು.

Related Articles

Related image1
ರಶ್ಮಿಕಾ ಸೊಸೆಯಾಗಿ ಬಂದಿದ್ದೇ ತಡ 'ತೆಲುಗು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸ್ಕಾಲರ್‌ಶಿಪ್' ಘೋಷಿಸಿದ ವಿಜಯ್ ದೇವರಕೊಂಡ
Related image2
ಮಕ್ಕಳ ಬಗ್ಗೆ ರಶ್ಮಿಕಾ ಮಂದಣ್ಣ ಮಾತು, ಆಗಲೇ ತಾಯಿಯಾದ ಫೀಲಿಂಗ್! ಶೀಘ್ರದಲ್ಲೇ ನಟನೆಗೆ ಗುಡ್‌ಬೈ?
37
ರಶ್ಮಿಕಾ ಭಾವುಕ ಫೋಸ್ಟ್
Image Credit : Asianet News

ರಶ್ಮಿಕಾ ಭಾವುಕ ಫೋಸ್ಟ್

ಒಂದಿಷ್ಟು ಫೋಟೋ ಹಂಚಿಕೊಂಡಿರುವ ರಶ್ಮಿಕಾ, ಭಾವನಾತ್ಮಕ ಫೋಸ್ಟ್ ಹಂಚಿಕೊಂಡಿದ್ದಾರೆ. ರಶ್ಮಿಕಾಗೆ ಆ ರಾತ್ರಿ ಮರೆಯಲು ಸಾಧ್ಯವಾಗ್ತಿಲ್ಲ. ಪ್ರೀತಿ, ಕಣ್ಣೀರು, ನಗು, ಸಂಗೀತ, ಹಾಡುಗಾರಿಕೆಯಿಂದ ತುಂಬಿದ ಆ ರಾತ್ರಿ. ರಾತ್ರಿ ಇಡೀ ನಾವು ನೃತ್ಯ ಮಾಡಿದ್ದೆವು. ಇದು ನಿಜಕ್ಕೂ ಅತ್ಯಂತ ಮೋಜಿನ ರಾತ್ರಿಯಾಗಿತ್ತು. ವಿಜ್ಜು ಮತ್ತು ನಾನು ಒಬ್ಬರನ್ನೊಬ್ಬರು ಅಚ್ಚರಿಗೊಳಿಸಲು ಬಯಸಿದ್ದೆವು. ಕುಟುಂಬದ ಸದಸ್ಯರು ನಮ್ಮನ್ನು ಅಚ್ಚರಿಗೊಳಿಸಲು ಬಯಸಿದ್ದರು. ನಮ್ಮ ಕುಟುಂಬಸ್ಥರು ತುಂಬಾ ಮುಕ್ತವಾಗಿ ಮತ್ತು ತುಂಬಾ ಚೆನ್ನಾಗಿ ಡಾನ್ಸ್ ಮಾಡಿದ್ರು. ಅದನ್ನು ನೋಡಲು ನಾನು ಉತ್ಸುಕನಾಗಿದ್ದೆ. ಇದೊಂದು ಮೋಜಿನ ರಾತ್ರಿ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

47
ವಿಜಯ್ ದೇವರಕೊಂಡ ತೆಕ್ಕೆಯಲ್ಲಿ ರಶ್ಮಿಕಾ
Image Credit : Asianet News

ವಿಜಯ್ ದೇವರಕೊಂಡ ತೆಕ್ಕೆಯಲ್ಲಿ ರಶ್ಮಿಕಾ

ಸಂಗೀತ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ರಶ್ಮಿಕಾ ಕುಟುಂಬಸ್ಥರು, ವಿಜಯ್ ಫ್ಯಾಮಿಲಿ ಡಾನ್ಸ್ ಮಾಡಿದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಡಾನ್ಸ್ ಮಾಡ್ತಾ ಒಬ್ಬರನ್ನೊಬ್ಬರು ಮರೆತಿದ್ದಾರೆ. ರಶ್ಮಿಕಾ ವಿಜಯ್ ಗೆ ಸರ್ಪ್ರೈಸ್ ನೀಡಿದ್ದಾರೆ. ಇಬ್ಬರು ರೋಮ್ಯಾಂಟಿಕ್ ಡಾನ್ಸ್ ಮಾಡಿದ್ದು, ಬೆಳಗಿನ ಜಾವ ನಾಲ್ಕಾಗಿದ್ದೇ ತಿಳಿಯಲಿಲ್ಲ. ವಿವಾಹಪೂರ್ವ ಕಾರ್ಯಕ್ರಮಗಳನ್ನು ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಪೂರ್ಣವಾಗಿ ಆನಂದಿಸಿದ್ದಾರೆ. ವಿಜಯ್ ತೆಕ್ಕೆಯಲ್ಲಿ ಬಂಧಿಯಾದ ರಶ್ಮಿಕಾ ಎಲ್ಲವನ್ನು ಮರೆತು ಡಾನ್ಸ್ ಮಾಡಿದ್ದಾರೆ.

57
ಡಿಸೈನರ್ ಬಟ್ಟೆಯಲ್ಲಿ ರಶ್ಮಿಕಾ ವಿಜಯ್
Image Credit : Asianet News

ಡಿಸೈನರ್ ಬಟ್ಟೆಯಲ್ಲಿ ರಶ್ಮಿಕಾ ವಿಜಯ್

ಡಿಸೈನರ್ ಫಲ್ಗುಣಿ-ಶೇನ್ ಪೀಕಾಕ್, ಸಂಗೀತ ಕಾರ್ಯಕ್ರಮಕ್ಕೆ ಡ್ರೆಸ್ ಡಿಸೈನ್ ಮಾಡಿದ್ದರು. ರಶ್ಮಿಕಾ ತಿಳಿ ಬಣ್ಣದ, ಸೀಕ್ವಿನ್ಡ್ ಲೆಹೆಂಗಾ ಚೋಲಿ ಧರಿಸಿದ್ದರು. ಅವರ ಲುಕ್ ಅನ್ನು ಪೂರ್ಣಗೊಳಿಸಲು, ಅವರು ವಜ್ರದ ಹಾರ ಮತ್ತು ಬನ್ ಧರಿಸಿದ್ದರು. ವಿಜಯ್ ದೇವರಕೊಂಡ ನೀಲಿ ಕಸೂತಿ ಮಾಡಿದ ಶೇರ್ವಾನಿ ಧರಿಸಿದ್ದರು. ಅವರು ತಮ್ಮ ಲುಕ್ ಗೆ ಇನ್ನಷ್ಟು ಮೆರಗು ನೀಡಲು ಶೋಲ್ಡರ್ ಬಳಿ ಲೈಟ್ ಕಲರ್ ಶ್ರಗ್ ಹಾಕಿದ್ದರು.

67
ಪೋಸ್ಟ್ ನಲ್ಲಿ ಏನೆಲ್ಲ ಇದೆ?
Image Credit : Asianet News

ಪೋಸ್ಟ್ ನಲ್ಲಿ ಏನೆಲ್ಲ ಇದೆ?

ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಜೊತೆ ಡಾನ್ಸ್ ಮಾಡಿರುವ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ದೆ ಸ್ಟೇಜ್ ಮೇಲೆ ವಿಜಯ್ ಮಾಡಿರುವ ಡಾನ್ಸ್ ಫೋಟೋ, ತಾವು ಮಾಡಿರುವ ಡಾನ್ಸ್ ಫೋಟೋ ಜೊತೆ ತಮ್ಮ ಕುಟುಂಬಸ್ಥರು ಮಾಡಿರುವ ಡಾನ್ಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

77
ಮಾರ್ಚ್ 4 ರಂದು ಆರತಕ್ಷತೆ
Image Credit : Asianet News

ಮಾರ್ಚ್ 4 ರಂದು ಆರತಕ್ಷತೆ

ವರದಿಗಳ ಪ್ರಕಾರ, ದಂಪತಿಗಳು ನಾಳೆ ಮಾರ್ಚ್ 4 ರಂದು ಆರತಕ್ಷತೆಯನ್ನು ಆಯೋಜಿಸಲಿದ್ದಾರೆ, ಇದರಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ವ್ಯಕ್ತಿಗಳು ಭಾಗವಹಿಸುವ ಸಾಧ್ಯತೆ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ

Latest Videos
Recommended Stories
Recommended image1
ಮಕ್ಕಳ ಬಗ್ಗೆ ರಶ್ಮಿಕಾ ಮಂದಣ್ಣ ಮಾತು, ಆಗಲೇ ತಾಯಿಯಾದ ಫೀಲಿಂಗ್! ಶೀಘ್ರದಲ್ಲೇ ನಟನೆಗೆ ಗುಡ್‌ಬೈ?
Recommended image2
ರಶ್ಮಿಕಾ ಸೊಸೆಯಾಗಿ ಬಂದಿದ್ದೇ ತಡ 'ತೆಲುಗು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸ್ಕಾಲರ್‌ಶಿಪ್' ಘೋಷಿಸಿದ ವಿಜಯ್ ದೇವರಕೊಂಡ
Recommended image3
ಜೋಸೆಫ್‌ ವಿಜಯ್‌ ಜೊತೆಗಿನ ಸಂಬಂಧದ ನಡುವೆಯೇ ತಮಿಳುನಾಡಿನ ಜಯಲಲಿತಾ ಆಗ್ತಾರಾ ನಟಿ ತ್ರಿಶಾ, ಇದಕ್ಕೆ ಕಾರಣವೂ ಇದೆ!
Related Stories
Recommended image1
ರಶ್ಮಿಕಾ ಸೊಸೆಯಾಗಿ ಬಂದಿದ್ದೇ ತಡ 'ತೆಲುಗು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸ್ಕಾಲರ್‌ಶಿಪ್' ಘೋಷಿಸಿದ ವಿಜಯ್ ದೇವರಕೊಂಡ
Recommended image2
ಮಕ್ಕಳ ಬಗ್ಗೆ ರಶ್ಮಿಕಾ ಮಂದಣ್ಣ ಮಾತು, ಆಗಲೇ ತಾಯಿಯಾದ ಫೀಲಿಂಗ್! ಶೀಘ್ರದಲ್ಲೇ ನಟನೆಗೆ ಗುಡ್‌ಬೈ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved