ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ರಾಣಿಯಾಗಬೇಕು: ಆಸೆ ಬಿಚ್ಚಿಟ್ಟ ಸಾರಾ
ಬಾಕ್ಸ್ ಆಫೀಸ್ ಹಿಟ್ ನಂತರ ಮುಂದಿನ ಸಿನಿಮಾ ಆಸೆಗಳ ಬಗ್ಗೆ ರಿವೀಲ್ ಮಾಡಿದ್ದಾರೆ ಸಾರಾ ಅಲಿ ಖಾನ್.
ಬಾಲಿವುಡ್ ಸುಂದರಿ ಸಾರಾ ಅಲಿ ಖಾನ್ ಅತ್ರಾಂಗಿ ರೆ ಸಿನಿಮಾ ನಂತರ ಹೊಸ ಅನೌನ್ಸ್‌ಮೆಂಟ್ ಮಾಡಿಲ್ಲ ಹೀಗಾಗಿ ಅನೇಕರು ಮುಂದಿನ ಪ್ರಾಜೆಕ್ಟ್ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ.
'ಬಾಕ್ಸ್ ಆಫೀಸ್ ಕೆಲೆಕ್ಷನ್‌ಗಳು ನಿರ್ಮಾಪಕರಿಗೆ ಸೇರುತ್ತದೆ. ನಾವು ಪ್ರೀತಿಯಿಂದ ಎಲ್ಲರಿಗೂ ಒಪ್ಪಿಗೆ ಆಗುವ ರೀತಿಯಲ್ಲಿ ಪ್ರಾಮಾಣಿಕವಾಗಿ ಸಿನಿಮಾ ಮಾಡಬೇಕು' ಎಂದು ಇಟೈಮ್ಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಸಿನಿಮಾ ಆಯ್ಕೆಗಳ ಬಗ್ಗೆ ನಾನು choosy ಅಗಿಲ್ಲ. ಅತ್ರಾಂಗಿ ರೆ ಸಿನಿಮಾ ನಂತರ ಆನಂದ್ ಎಲ್ ರಾಯ್ ಹೇಳಿರುವ ಮಾತುಗಳು ನನಗೆ ಚೆನ್ನಾಗಿ ನೆನಪಿದೆ.'
'ಯಾವ ಭಾಷೆಯಲ್ಲಿ ಸಿನಿಮಾ ಮಾಡ್ತೀವಿ ಅನ್ನೋದು ಮುಖ್ಯವಲ್ಲ ಆದರೆ ಅರ್ಧಂಬರ್ಧ ಬರೆದಿರುವ ಕಥೆ ಯಾರಿಗೂ ಇಷ್ಟ ಆಗುವುದಿಲ್ಲ. ಒಳ್ಳೆ ಪಾತ್ರಗಳನ್ನು ಆಯ್ಕೆ ಮಾಡಬೇಕು ಎನ್ನುವ ಹಸಿವು ಶುರುವಾಗಿದೆ'
'ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ರಾಣಿಯಾಗಿ ನಟಿಸಬೇಕು ಇಲ್ಲವಾದರೆ ಝೋಯಾ ಅಖ್ತರ್ ಸಿನಿಮಾದಲ್ಲಿ ಮಾಡ್ರನ್ ಹುಡುಗಿಯಾಗಿ ನಟಿಸಬೇಕು'
'ವಿಕ್ಕ ಕೌಶಾಲ್ ಜೊತೆ ಸಿನಿಮಾ ಮಾಡುವುದಕ್ಕೆ ಖುಷಿಯಾಗುತ್ತದೆ. ಟ್ಯಾಲೆಂಟ್ ಹೊಂದಿರುವ ಅದ್ಭುತ ನಟ, ಅವರ ಜೊತೆ ಸಿನಿಮಾ ಮಾಡುವುದಕ್ಕೆ ಮಜಾ ಇದೆ' ಎಂದಿದ್ದಾರೆ ಸಾರಾ.