ಚಿನ್ನದ ದರದಲ್ಲಿ ಸರ್ವಕಾಲಿಕ ದಾಖಲೆಯ ಏರಿಕೆ: ಹೇಗಿದೆ ಇಂದಿನ ದರ
ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳ ವಿವರ ಇಲ್ಲಿದೆ.

ಇವತ್ತಿನ ಬಂಗಾರದ ದರ
ಚಿನ್ನದ ಸರ್ವಕಾಲೀಕ ದಾಖಲೆಯ ಭಾರಿ ಏರಿಕೆ ಕಂಡಿದ್ದು, ಜನಸಾಮಾನ್ಯರ ಪಾಲಿಗೆ ಚಿನ್ನ ಖರೀದಿಸುವುದು ಇನ್ನು ಕನಸೇ ಎಂಬಂತಾಗಿದೆ. ಬಹುತೇಕರು ಚಿನ್ನವನ್ನು ಆಭರಣಕ್ಕಿಂತ ಹೆಚ್ಚು ಆಸ್ತಿ ಎಂದು ಪರಿಗಣಿಸಿರುವುದರಿಂದ ಚಿನ್ನದ ಮೇಲೆ ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿದ್ದು, ಇದು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಅಮೆರಿಕಾದ ತೆರಿಗೆ ನೀತಿಯಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಬಹಳ ಏರಿಳಿತವಾಗುತ್ತಿದ್ದು, ಮಾರುಕಟ್ಟೆ ಕುಸಿತ ಕಾಣುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ ಹೋಗುತ್ತದೆ. ಹಾಗಿದ್ದರೆ ಇಂದಿನ ಚಿನ್ನಾಭರಣಗಳ ದರ ವಿವಿಧ ನಗರಗಳಲ್ಲಿ ಹೇಗಿದೆ ಅಂತ ನೋಡೋಣ.
ಚಿನ್ನದ ದರ ಇಂದು ಹೇಗಿದೆ
ವಿವಿಧ ಮಹಾನಗರಗಳಲ್ಲಿ ಚಿನ್ನದ ದರದಲ್ಲಿ ತುಸು ವ್ಯತ್ಯಾಸವಿರುತ್ತದೆ. ಹೀಗಾಗಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ 24 ಹಾಗೂ 22 ಕ್ಯಾರೆಟ್ ಚಿನ್ನದ ದರ ಇಂದು ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಇಂದು 24 ಕ್ಯಾರೆಟ್ ಚಿನ್ನದ ದರದಲ್ಲಿ ನಿನ್ನೆಗಿಂತ ಏರಿಕೆಯಾಗಿದೆ. ಗ್ರಾಂ ಗೆ 11,051 ರೂಪಾಯಿ ಇದೆ. ಹಾಗೆಯೇ 22 ಕ್ಯಾರೆಟ್ ಚಿನ್ನದ 10,130 ಹಾಗೆಯೇ 18 ಕ್ಯಾರೆಟ್ ಚಿನ್ನದ ದರ 8,288 ಇದೆ.
24 ಕ್ಯಾರೆಟ್ ಚಿನ್ನದ ದರ
1 ಗ್ರಾಂ ಚಿನ್ನದ ದರ 11,051 ರೂಪಾಯಿ (ನಿನ್ನೆಗಿಂತ 21.90 ರೂಪಾಯಿ ಏರಿಕೆ)
8 ಗ್ರಾಂ ಚಿನ್ನದ ದರ 88,407.20 ರೂಪಾಯಿ ( ನಿನ್ನೆಗಿಂತ 175.20 ರೂಪಾಯಿ ಏರಿಕೆ)
10 ಗ್ರಾಂ ಚಿನ್ನದ ದರ 1,10,509 ರೂಪಾಯಿ (ನಿನ್ನೆಗಿಂತ 2119 ರೂಪಾಯಿ ಏರಿಕೆ)
100 ಗ್ರಾಂ ಚಿನ್ನದ ದರ 11,05,090 ರೂಪಾಯಿ (ನಿನ್ನೆಗಿಂತ 2,190 ರೂಪಾಯಿ ಏರಿಕೆ)
22 ಕ್ಯಾರೆಟ್ ಚಿನ್ನದ ದರ
1 ಗ್ರಾಂ ಚಿನ್ನದ ದರ 10,110 ರೂಪಾಯಿ (ನಿನ್ನೆಗಿಂತ 20 ರೂಪಾಯಿ ಏರಿಕೆ)
8 ಗ್ರಾಂ ಚಿನ್ನದ ದರ 81,040 ರೂಪಾಯಿ (ನಿನ್ನೆಗಿಂತ 1,60 ರೂಪಾಯಿ ಏರಿಕೆ)
10 ಗ್ರಾಂ ಚಿನ್ನದ ದರ 1,01,300 ರೂಪಾಯಿ (ನಿನ್ನೆಗಿಂತ 200 ರೂಪಾಯಿ ಏರಿಕೆ)
100 ಗ್ರಾಂ ಚಿನ್ನದ ದರ 10,13,000 ರೂಪಾಯಿ (ನಿನ್ನೆಗಿಂತ 2,000 ರೂಪಾಯಿ ಏರಿಕೆ)
18 ಕ್ಯಾರೆಟ್ ಚಿನ್ನದ ದರ
1 ಗ್ರಾಂ ಚಿನ್ನದ ದರ 8,288 ರೂಪಾಯಿ (ನಿನ್ನೆಗಿಂತ 16 ರೂಪಾಯಿ ಏರಿಕೆ)
8 ಗ್ರಾಂ ಚಿನ್ನದ ದರ 66,304 ರೂಪಾಯಿ (ನಿನ್ನೆಗಿಂತ 128 ರೂಪಾಯಿ ಏರಿಕೆ)
10 ಗ್ರಾಂ ಚಿನ್ನದ ದರ 82,880 ರೂಪಾಯಿ (ನಿನ್ನೆಗಿಂತ 160 ರೂಪಾಯಿ ಏರಿಕೆ)
100 ಗ್ರಾಂ ಚಿನ್ನದ ದರ 8,28,800 ರೂಪಾಯಿ (ನಿನ್ನೆಗಿಂತ 1,600 ರೂಪಾಯಿ ಏರಿಕೆ)
ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 10,1500 ರೂಪಾಯಿ, ಮುಂಬೈ: 10,1300 ರೂಪಾಯಿ, ದೆಹಲಿ: 10,1450 ರೂಪಾಯಿ, ಬೆಂಗಳೂರು: 10,1300 ರೂಪಾಯಿ, ಅಹಮದಾಬಾದ್: 10,1350 ರೂಪಾಯಿ, ಕೋಲ್ಕತ್ತಾ: 10,1300 ರೂಪಾಯಿ, ಹೈದರಾಬಾದ್: 10,1300 ರೂಪಾಯಿ, ವಡೋದರಾ: 10,1350 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಚಿನ್ನದ ಜೊತೆಯಲ್ಲಿ ಬೆಳ್ಳಿ ದರದಲ್ಲೂ ಇಳಿಕೆ ಆಗಿದೆ. ಇಂದಿನ ದರ ಎಷ್ಟಿದೆ ಎಂದು ನೋಡೋಣ ಬನ್ನಿ
10 ಗ್ರಾಂ: 1,300 ರೂಪಾಯಿ
100 ಗ್ರಾಂ: 13,000 ರೂಪಾಯಿ
1000 ಗ್ರಾಂ: 1,30,000 ರೂಪಾಯಿ
ಇದನ್ನೂ ಓದಿ: ಮೊದಲ ಬಾರಿ ಐಸ್‌ಕ್ರೀಂ ರುಚಿ ನೋಡಿದ ಮಗುವಿನ ರಿಯಾಕ್ಷನ್ ಹೇಗಿತ್ತು ನೋಡಿ: ವೈರಲ್ ವೀಡಿಯೋ
ಇದನ್ನೂ ಓದಿ: ನನ್ನ ಆತ್ಮೀಯ ಗೆಳೆಯ ಮೋದಿ ಜೊತೆ ಮಾತನಾಡಲು ಎದುರು ನೋಡುತ್ತಿದ್ದೇನೆ: ಡೋನಾಲ್ಡ್ ಟ್ರಂಪ್
ಇದನ್ನೂ ಓದಿ: ನೇಪಾಳ ವಿದೇಶಾಂಗ ಸಚಿವೆಗೆ ಮುಖ ಮೂತಿ ನೋಡದೇ ಥಳಿಸಿದ ಜೆನ್ ಜೆಡ್ ಪ್ರತಿಭಟನಾಕಾರರು
ಇದನ್ನೂ ಓದಿ: ನೇಪಾಳ: ದೇಶದ ಸಂಸತ್‌ಗೆ ಬೆಂಕಿ ಇಟ್ಟು ಉರಿಯುವ ಬೆಂಕಿ ಮುಂದೆ ಡಾನ್ಸ್ ರೀಲ್ ಮಾಡಿದ ಸೋಶಿಯಲ್ ಮೀಡಿಯಾ ಸ್ಟಾರ್