- Home
- Business
- Gold Investment: ಬಂಗಾರದ ಮೇಲೆ ಹಣ ಹೂಡಬೇಡಿ, ಅಪ್ಪ-ಅಮ್ಮ ಮಾಡಿದ ತಪ್ಪು ಮಾಡ್ಬೇಡಿ- Kotak Mutual Fund nilesh shah
Gold Investment: ಬಂಗಾರದ ಮೇಲೆ ಹಣ ಹೂಡಬೇಡಿ, ಅಪ್ಪ-ಅಮ್ಮ ಮಾಡಿದ ತಪ್ಪು ಮಾಡ್ಬೇಡಿ- Kotak Mutual Fund nilesh shah
ಈಗಾಗಲೇ ಚಿನ್ನದ ರೇಟ್ 10 ಗ್ರಾಂಗೆ ಒಂದು ಲಕ್ಷ ರೂಪಾಯಿ ದರ ಆಗಿದೆ. ಕೆಲವರು ಇನ್ನೂ ರೇಟ್ ಹೆಚ್ಚಾಗಲಿದೆ, ಚಿನ್ನದ ಮೇಲೆ ಹೂಡಿಕೆ ಮಾಡಿ ಎಂದು ಹೇಳುತ್ತಾರೆ. ಆದರೆ ಕೋಟಕ್ ಮ್ಯೂಚ್ಯುವಲ್ ಫಂಡ್ ಮ್ಯಾನೇಜಿಂಗ್ ಡೈರೆಕ್ಟರ್ ನಿಲೇಶ್ ಶಾ ಅವರು ಮಾತ್ರ ಚಿನ್ನದಲ್ಲಿ ಹೂಡಿಕೆ ಮಾಡಬೇಡಿ ಎಂದು ಹೇಳಿದ್ದಾರೆ.

ನಿಲೇಶ್ ಶಾ ಅವರು ನೀಡಿದ ಸಂದರ್ಶನದ ತುಣುಕೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. “ನಿಮ್ಮ ತಂದೆ ಮತ್ತು ನನ್ನ ತಂದೆ ಈಗಾಗಲೇ ಚಿನ್ನದಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದಾರೆ, ನೀವು ಮಾಡಬೇಡಿ” ಎಂದು ಹೇಳಿದ್ದಾರೆ.
“ಪದ್ಮನಾಭಸ್ವಾಮಿ ದೇವಸ್ಥಾನವನ್ನು ತೆರೆಯದೆಯೇ ನಾವು ವಿಶ್ವದ ಅತಿದೊಡ್ಡ ಚಿನ್ನದ ಮಾಲೀಕರಾಗಿದ್ದೇವೆ. ನಾವು ಇನ್ನು ಹೆಚ್ಚಿನ ಚಿನ್ನವನ್ನು ಖರೀದಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
“ದೇಶದ ಭವಿಷ್ಯದ ದೃಷ್ಟಿಕೋನದಿಂದ, ದಯವಿಟ್ಟು ಚಿನ್ನದಲ್ಲಿ ಹೂಡಿಕೆ ಮಾಡುವುದನ್ನು ನಿಲ್ಲಿಸಿ, ನಮ್ಮ ತಲೆಮಾರು ನಮ್ಮ ಪೋಷಕರು ಮಾಡಿದ ತಪ್ಪನ್ನು ಮಾಡಬಾರದು” ಎಂದು ಅವರು ಹೇಳಿದ್ದಾರೆ.
“ನೀವು ಯಾವಾಗಲೂ ಸಾಲ, ಷೇರು, ರಿಯಲ್ ಎಸ್ಟೇಟ್, ಸರಕು, ಕರೆನ್ಸಿಗಳ ನಡುವೆ ವೈವಿಧ್ಯೀಕರಣ ಮಾಡಿಕೊಳ್ಳಬೇಕು. ಆದರೆ ದಿನದ ಅಂತ್ಯದಲ್ಲಿ, ಸಾಲದ ಸುರಕ್ಷತೆಯು ಷೇರಿನ ವೇಗವನ್ನು ಎಂದಿಗೂ ನೀಡುವುದಿಲ್ಲ. ಭಾರತೀಯರು ತಮ್ಮ ಚಿನ್ನವನ್ನು ಮಾರಾಟಕ್ಕೆ ಹೋದರೆ, ಯಾರು ನಮ್ಮಿಂದ ಖರೀದಿಸುತ್ತಾರೆ ಮತ್ತು ಯಾವ ಬೆಲೆಗೆ ಎಂದು ನನಗೆ ಗೊತ್ತಿಲ್ಲ” ಎಂದು ಅವರು ಹೇಳಿದ್ದಾರೆ.
ನಿಲೇಶ್ ಶಾ ಅವರು 2025ರಲ್ಲಿ 482.5 ಕೋಟಿ ರೂಪಾಯಿ ಶೇರ್ ಹೋಲ್ಡರ್ ಆಗಿದ್ದಾರೆ. ಕೋಟಕ್ ಬ್ಯಾಂಕ್‌ನಲ್ಲಿ ಇವರಿಗೆ ವಾರ್ಷಿಕ 15.6 ಕೋಟಿ ರೂಪಾಯಿ ಸಂಬಳ ಸಿಗುವುದು ಎನ್ನಲಾಗಿದೆ.