ನೇಪಾಳದಲ್ಲಿ ಜೆನ್ ಜೆಡ್ ಸಮುದಾಯದ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು, ಆಕ್ರೋಶವೆಲ್ಲಾ ಅಲ್ಲಿನ ರಾಜಕಾರಣಿಗಳತ್ತ ತಿರುಗಿದೆ. ಕೈಗೆ ಸಿಕ್ಕ ತಮ್ಮ ದೇಶದ ವಿದೇಶಾಂಗ ಸಚಿವೆಗೆ ಮುಖ ಮೂತಿ ನೋಡದೇ ಪ್ರತಿಭಟನಾಕಾರರು ಥಳಿಸಿದ್ದಾರೆ.
ಕೈಗೆ ಸಿಕ್ಕ ವಿದೇಶಾಂಗ ಸಚಿವೆಗೆ ಮುಖ ಮೂತಿ ನೋಡದೇ ಥಳಿಸಿದ ಪ್ರತಿಭಟನಾಕಾರರು
ನೇಪಾಳದಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ನಿಷೇಧ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ಉಗ್ರ ಸ್ವರೂಪ ತಾಳಿದ್ದು, ಪ್ರತಿಭಟನಾಕಾರರನ್ನು ನಿಯಂತ್ರಿಸುವವರೇ ಇಲ್ಲವಾಗಿದ್ದಾರೆ. ದೇಶದ ರಾಜಕಾರಣಿಗಳನ್ನೇ ಹುಡುಕಿ ಹುಡುಕಿ ಹಲ್ಲೆ ಮಾಡುತ್ತಿರುವ ಪ್ರತಿಭಟನಾಕಾರರು ದೇಶದ ಮಾಜಿ ಪ್ರಧಾನಿ ಪತ್ನಿಯನ್ನೇ ಸಜೀವವಾಗಿ ಸುಟ್ಟಿದ್ದಾರೆ. ಪ್ರತಿಭಟನಾಕಾರರ ಕೈಗೆ ಸಿಕ್ಕ ನೇಪಾಳ ವಿದೇಶಾಂಗ ಸಚಿವರಿಗೂ ಪ್ರತಿಭಟನಾಕಾರರು ಮುಖ ಮೂತಿ ನೋಡದೇ ಹೊಡೆದಿದ್ದಾರೆ.
ಮನೆಗೆ ನುಗ್ಗಿ ವಿದೇಶಾಂಗ ಸಚಿವೆ ಅರ್ಝು ದೆವುಬಾ ಮೇಲೆ ಹಲ್ಲೆ:
ನೇಪಾಳದ ವಿದೇಶಾಂಗ ಸಚಿವೆ 63 ವರ್ಷದ ಅರ್ಝು ದೆವುಬಾ ಅವರನ್ನು ಪ್ರತಿಭಟನಾಕಾರರು ಅಟ್ಟಾಡಿಸಿಕೊಂಡು ಹೋಗಿ ಹೊಡೆದಿದ್ದಾರೆ. ಈ ಘಟನೆಯ ವೀಡಿಯೋವೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಘಟನೆಯ ವೀಡಿಯೋದಲ್ಲಿ ಎನ್ನಲಾದ ವೀಡಿಯೋದಲ್ಲಿ ಅರ್ಝ ದೆವುಬಾ ಅವರನ್ನು ಓಡಿಸಿಕೊಂಡು ಬರುತ್ತಿರುವ ದೃಶ್ಯವಿದೆ. ಆದರೆ ಕೆಲ ವರದಿಗಳ ಪ್ರಕಾರ ಪ್ರತಿಭಟನಾಕಾರರು ಅವರ ಮನೆಗೆ ನುಗ್ಗಿ ಅವರ ಮುಖಕ್ಕೆ ಪಂಚ್ ಮಾಡಿದ್ದಾರೆ.
ಆಘಾತಕಾರಿ ವೀಡಿಯೋದಲ್ಲಿ ಅವರು ತಮ್ಮ ಮುಖದಲ್ಲಿ ಸುರಿಯುತ್ತಿರುವ ರಕ್ತವನ್ನು ಒರೆಸುತ್ತಿರುವ ದೃಶ್ಯ ಸೆರೆ ಆಗಿದೆ. ಸುತ್ತಲೂ ನಿಂತ ಪ್ರತಿಭಟನಾಕಾರರು ಈ ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಕೆಲವರು 63 ವರ್ಷದ ಆ ಮಹಿಳೆಯನ್ನು ಹಿಂದಿನಿಂದ ಒದೆಯುತ್ತಿದ್ದರೆ ಮತ್ತೆ ಕೆಲವರು ಮುಂದಿನಿಂದ ಮುಖ ಮೂತಿ ನೋಡದೆ ಪಂಚ್ ಮಾಡುತ್ತಿದ್ದು, ಅವರ ಮುಖದಿಂದ ರಕ್ತ ಸೋರಿದೆ.
ಹಿಂಸಾಚಾರಕ್ಕೆ ಇದುವರೆಗೆ 21 ಬಲಿ:
ನೇಪಾಳದಲ್ಲಿ ಸಾಮಾಜಿಕ ಜಾಲತಾಣ ನಿಷೇಧ ಖಂಡಿಸಿ ಆರಂಭವಾದ ಪ್ರತಿಭಟನೆಯಲ್ಲಿ ಇದುವರೆಗೆ 21 ಜನ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ನೇಪಾಳದ ಯುವ ಸಮುದಾಯದ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಗೆ ಕೇವಲ ಸೋಶಿಯಲ್ ಮೀಡಿಯಾ ಬ್ಯಾನ್ ಮಾತ್ರ ಕಾರಣವಲ್ಲ, ಅಲ್ಲಿನ ರಾಜಕಾರಣಿಗಳು ಹಾಗು ಅವರ ಕುಟುಂಬ ರಾಜಕಾರಣ ವಿರುದ್ಧದ ದೀರ್ಘಕಾಲದ ಭಾವನೆ ಮತ್ತು ಭ್ರಷ್ಟಾಚಾರ ಕಾರಣ ಎಂದು ಅಲ್ಲಿನ ಕೆಲವರು ಹೇಳುತ್ತಿದ್ದಾರೆ.
ನಿಗಿನಿಗಿ ಕೆಂಡವಾದ ಹಿಮಲಯನ್ ರಾಷ್ಟ್ರ:
ಉಗ್ರ ಸ್ವರೂಪ ಪಡೆದ ಜೆನ್ ಜೆಡ್ ಸಮುದಾಯದ ಪ್ರತಿಭಟನೆಯಿಂದಾಗಿ ಪುಟ್ಟ ದೇಶ ನೇಪಾಳದಲ್ಲಿ ರಾಜಕೀಯ ಅಸ್ಥಿರತೆ ಕಾಡುತ್ತಿದ್ದು, ತಂಪಾದ ಹಿಮಾಲಯದ ತಪ್ಪಲ್ಲಿನಲ್ಲಿದ್ದರೂ ನಿಗಿನಿಗಿ ಕೆಂಡದಂತಾಗಿದೆ ನೇಪಾಳ. 30 ಮಿಲಿಯನ್ ಜನರಿರುವ ಹಿಮಾಲಯನ್ ರಾಷ್ಟ್ರದಲ್ಲಿ ಶುಕ್ರವಾರ ಸರ್ಕಾರವೂ ಸೋಶಿಯಲ್ ಮೀಡಿಯಾಗೆ ನಿಷೇಧ ಹೇರಿತ್ತು. ದೇಶದಲ್ಲಿ 26 ನೋಂದಾಯಿಸದ ಸೋಶಿಯಲ್ ಮಿಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿಫೇಸ್‌ಬುಕ್, ಯೂಟ್ಯೂಬ್ ಮತ್ತು ಎಕ್ಸ್ ಕೂಡ ಸೇರಿತ್ತು.ಇದನ್ನು ಖಂಡಿಸಿ ಸೋಮವಾರ ಪ್ರತಿಭಟನೆಗೆ ಇಳಿದ ಇಲ್ಲಿನ ಜೆನ್ ಜೆಡ್ ಸಮುದಾಯ ದೇಶವನ್ನೇ ಸ್ಮಶಾನ ಮಾಡುವತ್ತ ಹೊರಟಿದೆ. ದೇಶದ ಸಂಸತ್‌ಗೆ ಬೆಂಕಿ ಹಚ್ಚಿದ್ದಲ್ಲದೇ ದೇಶದ ಹಲವು ರಾಜಕಾರಣಿಗಳ ಮನೆಗೂ ಬೆಂಕಿ ಹಚ್ಚಿದ್ದು, ದೇಶದ ಮಾಜಿ ಪ್ರಧಾನಿಯೊಬ್ಬರ ಪತ್ನಿ ಈ ಬೆಂಕಿಯಲ್ಲಿ ಸಜೀವ ದಹನಗೊಂಡಿದ್ದಾರೆ.
ಇದನ್ನೂ ಓದಿ: ನೇಪಾಳ: ದೇಶದ ಸಂಸತ್‌ಗೆ ಬೆಂಕಿ ಇಟ್ಟು ಉರಿಯುವ ಬೆಂಕಿ ಮುಂದೆ ಡಾನ್ಸ್ ರೀಲ್ ಮಾಡಿದ ಸೋಶಿಯಲ್ ಮೀಡಿಯಾ ಸ್ಟಾರ್
ಇದನ್ನೂ ಓದಿ: ಹಸುವಿನ ಹೊಟ್ಟೆಯಲ್ಲಿದ್ದ 40 ಕೆ.ಜಿ. ಪ್ಲಾಸ್ಟಿಕ್ ಹೊರತೆಗೆದ ಪಶು ವೈದ್ಯರು
