ಮೊದಲ ಬಾರಿಗೆ ಐಸ್‌ಕ್ರೀಂ ತಿಂದ ಮಗುವಿನ ಪ್ರತಿಕ್ರಿಯೆ ವೈರಲ್ ಆಗಿದೆ. ಐಸ್‌ಕ್ರೀಂ ಕ್ಯಾಂಡಿಯನ್ನು ಬಾಯಿಗೆ ನೀಡಿದಾಗ ಮಗುವಿನ ಮುಖಭಾವ ಮತ್ತು ವರ್ತನೆ ನೋಡುಗರನ್ನು ರಂಜಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಮೊದಲ ಬಾರಿ ಐಸ್‌ಕ್ರೀಂ ರುಚಿ ನೋಡಿದ ಮಗು
ಐಸ್‌ಕ್ರೀಂ ಯಾರಿಗೆ ಇಷ್ಟ ಇಲ್ಲ ಹೇಳಿ ಬೇಸಿಗೆಯಲ್ಲಿ ಉರಿಯುವ ಬಿಸಿಲ ಬೇಗೆಗೆ ತಾತ್ಕಾಲಿಕವಾಗಿ ತಂಪು ನೀಡುವ ಜೊತೆಗೆ ಬಾಯಿಗೂ ರುಚಿ ನೀಡುವ ಈ ಐಸ್‌ಕ್ರೀಂನ್ನು ಮಕ್ಕಳಿಂದ ಹಿರಿಯರಾದಿಯವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಬಾಯಲ್ಲಿಟ್ಟರೆ ಕರಗುವ ಐಸ್‌ಕ್ರೀಂ ಹಲ್ಲು ಬಾರದ ಹಾಲುಗಲ್ಲದ ಕಂದನಿಂದ ಹಿಡಿದು ಹಲ್ಲು ಉದುರಿ ಹೋಗಿರುವ ವೃದ್ಧರವರೆಗೂ ಎಲ್ಲರೂ ಇಷ್ಟಪಡುವ ಅಚ್ಚುಮೆಚ್ಚಿನ ತಿನಿಸು. ಹೀಗಿರುವಾಗ ಪುಟ್ಟ ಮಕ್ಕಳಿಗೆ ಮೊದಲ ಬಾರಿಗೆ ಐಸ್‌ಕ್ರೀಂ ರುಚಿ ತೋರಿಸಲು ಕೊಟ್ಟರೆ ಅವರು ಹೇಗೆ ವರ್ತಿಸುತ್ತಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಇಲ್ಲೊಂದು ಕಡೆ ಇನ್ನೂ ಹಲ್ಲು ಮೂಡದ ಪುಟ್ಟ ಕಂದನಿಗೆ ಐಸ್‌ಕ್ರೀಂ ನೀಡಿದ್ದು, ಐಸ್‌ಕ್ರೀಂ ರುಚಿ ನೋಡಿದ ನಂತರ ಮಗು ಪ್ರತಿಕ್ರಿಯಿಸಿದ ರೀತಿ ಭಾರಿ ವೈರಲ್ ಆಗಿದೆ.
ಪುಟಾಣಿಯ ರಿಯಾಕ್ಷನ್ ಭಾರಿ ವೈರಲ್
contractopia ಹೆಸರಿನ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಮಗುವಿನ ಮುದ್ದು ಮುದ್ದು ರಿಯಾಕ್ಷನ್ ನೋಡಿ ಎಲ್ಲರೂ ಈ ವೀಡಿಯೋಗೆ ಫಿದಾ ಆಗಿದ್ದಾರೆ. ಮೊದಲ ಐಸ್ ಕ್ರೀಂ ತಿಂದಾಗ ಸಿಗುವ ಸಂತೋಷಕ್ಕೆ ಯಾವುದೂ ಸಾಟಿಯಿಲ್ಲ, ಅವಳ ಪ್ರತಿಕ್ರಿಯೆ ಇಂದು ನೀವು ನೋಡುವ ಅತ್ಯಂತ ಸಿಹಿಯಾದ ವಿಷಯ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವೀಡಿಯೋದಲ್ಲಿ ಮಗುವಿಗೆ ಐಸ್‌ಕ್ರೀಂ ಕ್ಯಾಂಡಿಯನ್ನು ಬಾಯಿಗೆ ನೀಡಲಾಗಿದ್ದು, ಈ ವೇಳೆ ಸ್ವಲ್ಪ ರುಚಿ ನೋಡಿದ ಆ ಮಗು ಅರ್ಧದಷ್ಟು ಐಸ್‌ಕ್ರೀಂ ಕ್ಯಾಂಡಿಯನ್ನೇ ಕಚ್ಚಿ ಬಾಯಿತುಂಬಾ ತುಂಬಿಸಿಕೊಂಡಿದೆ. ಆದರೆ ಅದು ಒಮ್ಮೆಲೇ ಬಾಯ್ತುಂಬ ಐಸ್ ಐಸ್ ಆಗಿದ್ದರಿಂದ ಬಾಯೊಳಗೆ ಕೈ ತುರಿಸುವ ಪ್ರಯತ್ನ ಮಾಡಿದೆಯಾದರೂ ಅಷ್ಟರಲ್ಲಿ ಒಳಗಿದ್ದ ಐಸ್‌ಕ್ರೀಮ್ ಕರಗಿ ಹೊಟ್ಟೆ ಸೇರಿದಂತೆ ಸುಮ್ಮನಾಗಿ ಬಿಟ್ಟಿದೆ.
ಮಗುವಿನ ವೀಡಿಯೋಗೆ ಫಿದಾ ಆದ ನೆಟ್ಟಿಗರು
ಈ ವೀಡಿಯೋ ನೋಡಿದ ಹಲವರು ಮಗುವಿನ ಕ್ಯೂಟ್ ರಿಯಾಕ್ಷನ್‌ಗೆ ಫಿದಾ ಆಗಿದ್ದು, ಹಲವು ಕಾಮೆಂಟ್ ಮಾಡಿದ್ದಾರೆ. ಅಮ್ಮನ ಹಾಲಿಗಿಂತಲೂ ರುಚಿಯಾದುದು ಇನ್ನೂ ಏನೇನೋ ಇದೆ ಎಂದು ಮಗುವಿಗೆ ಮೊದಲ ಬಾರಿ ಗೊತ್ತಾಯ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಐಸ್‌ಕ್ರೀಂ ತಿನ್ನುವ ಮೊದಲು ಬಹಳ ಖುಷಿಯಾಗಿದ್ದ ಮಗು ಐಸ್‌ಕ್ರೀಂ ತಿಂದ ನಂತರ ಏಕೆ ಅಷ್ಟು ಗಂಭೀರ ಆಯ್ತು ಎಂದು ಮತ್ತೊಬ್ಬರು ಕೇಳಿದ್ದಾರೆ. ಆಕೆ ರುಚಿ ನೋಡಿದ ಮೇಲೆ ಸ್ವಲ್ಪ ಅಲ್ಲ ಇಡೀ ಕೊಟ್ಟುಬಿಡಿ ಎಂದು ಕೇಳ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಹುಡುಗಿ ಪಕ್ಕಾ ಐಸ್‌ಕ್ರೀಂನ ದೊಡ್ಡ ಅಭಿಮಾನಿಯಾಗಿ ಬಿಡುತ್ತಾಳೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮಕ್ಕಳು ಮೊದಲ ಬಾರಿ ಹೊಸ ಹೊಸ ತಿನಿಸುಗಳ ರುಚಿ ನೋಡಿದಾಗ ಬಹಳ ಅಚ್ಚರಿ ವ್ಯಕ್ತಪಡಿಸುತ್ತಾರೆ. ಕೆಲವರು ಪುಟ್ಟ ಮಕ್ಕಳಿಗೆ ಹುಳಿಯಾದ ನಿಂಬೆಯ ಹೋಳನ್ನು ಅವರ ರಿಯಾಕ್ಷನ್ ನೋಡುವುದಕ್ಕಾಗಿಯೇ ನೀಡುವುದನ್ನು ನೀವು ನೋಡಿರಬಹುದು. ತೀವ್ರವಾದ ಹುಳಿಯನ್ನು ಒಮ್ಮೆಗೆ ಬಾಯಿಗಿಟ್ಟ ಮಕ್ಕಳು ಮುಖ ಹುಳ್ಳಹುಳ್ಳಗೆ ಮಾಡಿಕೊಂಡು ಕಿವಿಚಿಬಿಡುತ್ತಾರೆ. ಅದೇ ರೀತಿ ಇಲ್ಲಿ ಮಗು ಐಸ್‌ಕ್ರೀಂ ಒಮ್ಮೆಗೆ ಬಾಯ್ತೊಂಬ ಐಸ್‌ಕ್ರೀಂ ಸೇರಿಕೊಂಡಾಗ ಒಮ್ಮೆಗೆ ಶಾಕ್ ಆದಂತೆ ವರ್ತಿಸಿದ್ದಾಳೆ. ಒಟ್ಟಿನಲ್ಲಿ ಈ ವೀಡಿಯೋ ಭಾರಿ ವೈರಲ್ ಆಗಿದೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ..
ಡ್ರಮ್ ಒಳಗೆ ಸಿಲುಕಿದ ಹೋರಿ
ಹಾಗೆಯೇ ವೈರಲ್ ಆದ ಮತ್ತೊಂದು ವೀಡಿಯೋದಲ್ಲಿ ಹೋರಿಯೊಂದು ಏನೋ ತಿನ್ನಲು ಹೋಗಿ ಡ್ರಮ್ ಒಳಗೆ ತಲೆ ಹೊಕ್ಕಿಸಿಕೊಂಡು ಬೀದಿಯಲ್ಲೇ ಸುತ್ತಾಡಿದ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜಸ್ಥಾನದ ಶಿಖರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಜನಸಂದಣಿಯ ಮಾರುಕಟ್ಟೆಯ ಬಳಿ ಇದ್ದ ಡ್ರಮೊಂದರ ಒಳಗೆ ಏನೋ ತಿನ್ನುವುದಕ್ಕಾಗಿ ಹೋರಿಯೊಂದು ತಲೆ ಹಾಕಿದೆ. ಈ ವೇಳೆ ಹೋರಿಯ ಕೊಂಬು ಒಳಗೆ ಸಿಲುಕಿಕೊಂಡು ತಲೆಯನ್ನು ವಾಪಸ್ ಹೊರಗೆ ತೆಗೆಯಲಾಗದೇ ಹೋರಿ ಅಲ್ಲಿನ ರಸ್ತೆಯಲ್ಲೆಲ್ಲಾ ಕಣ್ಣಿಗೆ ಪಟ್ಟಿ ಕಟ್ಟಿ ಕಳುಹಿಸಿದಂತೆ ಓಡಾಡಿದೆ. ಹೋರಿಯ ತಲೆಗೆ ಸಿಲುಕಿದ ಈ ಡ್ರಮ್ ಅನ್ನೋ ಹೋರಿ ಕೆಳಗೆ ಬೀಳಿಸಿ ಬಿಡಿಸಿಕೊಳ್ಳುವುದಕ್ಕೆ ಪ್ರಯತ್ನ ಪಟ್ಟರು ಸಾಧ್ಯವಾಗಿಲ್ಲ. ನಂತರ ಅಲ್ಲಿ ಸೇರಿದ ಜನ ಹೋರಿಯ ತಲೆ ಸಿಲುಕಿದ ಡ್ರಮ್ ಅನ್ನು ಬಿಡಿಸಲು ಹಲವು ಭಾರಿ ಪ್ರಯತ್ನಿಸಿದ್ದಾರೆ. ಶತಪ್ರಯತ್ನದ ನಂತರ ಹೋರಿಯ ತಲೆಯಿಂದ ಡ್ರಮ್ಮನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಜನ ಹೋರಿಯ ಸಹಾಯಕ್ಕೆ ಧಾವಿಸಿ ಬಂದಿದ್ದು, ಈ ವೇಳೆ ಕೆಲ ಕಾಲ ತಾಳ್ಮೆಯಿಂದ ಕಾದ ಹೋರಿ ನಂತರ ಏನೋ ಮಾಡುತ್ತಾರೋ ಎಂದು ಭಯ ಹಾಗೂ ಗೊಂದಲಕ್ಕೊಳಗಾಗಿ ಓಡಾಡಲು ಶುರು ಮಾಡಿದೆ.
ಇದನ್ನೂ ಓದಿ: ನನ್ನ ಆತ್ಮೀಯ ಗೆಳೆಯ ಮೋದಿ ಜೊತೆ ಮಾತನಾಡಲು ಎದುರು ನೋಡುತ್ತಿದ್ದೇನೆ: ಡೋನಾಲ್ಡ್ ಟ್ರಂಪ್
ಇದನ್ನೂ ಓದಿ: ತನಗೇ ದಾರಿ ತೋರಿಸಿದ ಫಾರೆಸ್ಟ್ ಆಫೀಸರ್‌ಗೆ ಲುಕ್ ಕೊಟ್ಟ ಕಾಡಾನೆ: ವೀಡಿಯೋ ಭಾರಿ ವೈರಲ್
