Gold Rate Today: ಬಂಗಾರದ ದರ ಹೆಚ್ಚಾಗಿದೆ, ಕಡಿಮೆ ಆದ್ಮೇಲೆ ಖರೀದಿ ಮಾಡೋಣ ಎಂದುಕೊಂಡವರಿಗೆ ಖ್ಯಾತ ಸಂಖ್ಯಾಶಾಸ್ತ್ರಜ್ಞರು ಶಾಕ್‌ ನೀಡಿದ್ದಾರೆ. 

ಇಂದು ಬಂಗಾರದ ದರ ಗಗನಕ್ಕೇರಿದೆ. 22 ಕ್ಯಾರೆಟ್‌ ಬಂಗಾರವು 10 ಗ್ರಾಂಗೆ 1 ಲಕ್ಷ ರೂಪಾಯಿವರೆಗೂ ಹೋಗಿದೆ. ಬಂಗಾರ ಖರೀದಿ ಮಾಡಬೇಕು ಎಂದುಕೊಂಡಿರೋ ಸಾಮಾನ್ಯ ಜನರು ಇಂದು ಅಥವಾ ನಾಳೆ ರೇಟ್‌ ಕಡಿಮೆ ಆಗುತ್ತದೆ, ಆಗ ಖರೀದಿ ಮಾಡೋಣ ಎಂದು ಕಾದು ಕುಳಿತಿದ್ದಾರೆ. ಈ ರೀತಿ ಅಂದುಕೊಂಡರೆ ಪ್ರಯೋಜನ ಇಲ್ಲ ಎಂದು ಖ್ಯಾತ ಆದಿತ್ಯಕುಂಡಲಿ ಪಾಡ್‌ಕಾಸ್ಟ್‌ನಲ್ಲಿ ಖ್ಯಾತ ಜ್ಯೋತಿಷಿಯೋರ್ವರು ಹೇಳಿದ್ದಾರೆ.

ಜ್ಯೋತಿಷಿ / ಸಂಖ್ಯಾಶಾಸ್ತ್ರಜ್ಞ ಏನಂತಾರೆ?

“ಬಂಗಾರದ ದರ ಕಡಿಮೆ ಆಗುತ್ತದೆ, ಆಮೇಲೆ ತಗೋಬಹುದು ಅಂತ ಯಾರು ಅಂದುಕೊಳ್ತೀರೋ ಅದು ತಪ್ಪು. ಈಗ ನಿಮಗೆ ಎಷ್ಟು ರೇಟ್‌ಗೆ ಬಂಗಾರ ಸಿಗುವೂದೋ ಅದೇ ರೇಟ್‌ಗೆ ಬಂಗಾರವನ್ನು ಖರೀದಿಸಿ. ನೀವು ಎಷ್ಟು ಬಂಗಾರಕ್ಕೆ ಹಣ ಹೂಡುತ್ತೀರೋ, ಅದರ ರಿಟರ್ನ್ಸ್‌ ಹೆಚ್ಚಾಗುವುದು. ಈ ರೀತಿ ರಿಟರ್ನ್ಸ್‌ ಬೇರೆ ಎಲ್ಲರಿಯೂ ಸಿಗೋದಿಲ್ಲ, ಮುಂದಿನ ಐದು ವರ್ಷಗಳಲ್ಲಿ 1, 70,000 ರೂಪಾಯಿಗೆ ಸಿಗುವುದು. ಅಕ್ಟೋಬರ್‌, ನವೆಂಬರ್‌ಗೆ ಬಂಗಾರದ ದರ ಹೆಚ್ಚಾಗುವುದು” ಎಂದು ಸಂಖ್ಯಾಶಾಸ್ತ್ರಜ್ಞರು ಹೇಳಿದ್ದಾರೆ.

ಬಂಗಾರದ ದರ ಯಾಕೆ ಕಡಿಮೆ ಆಗತ್ತೆ?

ರಾಜಕೀಯ ಅಸ್ಥಿರತೆ, ಜಾಗತಿಕ ವ್ಯಾಪಾರ ಹಾಗೂ ಯುದ್ಧದಿಂದ ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. RBI ಬಳಿ 880 ಮೆಟ್ರಿಕ್‌ ಟನ್‌ ಬಂಗಾರ ಇದೆ. ಈ ಬಾರಿ ಆರ್‌ಬಿಐ ಚಿನ್ನ ಖರೀದಿಸಿಲ್ಲ ಎನ್ನಲಾಗಿದೆ. ಚಿನ್ನದ ಬೆಲೆ ಔನ್ಸ್‌ಗೆ 3,445 ಡಾಲರ್‌ನಿಂದ ಇಳಿಯಲಿದೆ ಎಂದು ಫಿಚ್ ರಿಸರ್ಚ್‌ ಡಿವಿಷನ್‌, ಸಿಟಿ, ಮೋತಿಲಾಲ್ ಓಸ್ವಾಲ್ ಸೆಕ್ಯುರಿಟೀಸ್, ಐಸಿಐಸಿಐ ಬ್ಯಾಂಕ್‌ಗಳು ಎಂದು ಹೇಳಿತ್ತು. ಬಂಗಾರದ ರೇಟ್‌ ಇದಕ್ಕಿಂತ ಹೆಚ್ಚು ಏರೋದಿಲ್ಲ ಎನ್ನಲಾಗಿದೆ. ಚಿನ್ನದ ಬೆಲೆ ಇಳಿದರೆ ಏನು ಕಾರಣ ಇರಬಹುದು ಎಂದು ಹುಡುಕಿದಾಗ, ಅಮೆರಿಕದ ಫೆಡರಲ್ ರಿಸರ್ವ್‌ನಿಂದ ನಿರೀಕ್ಷಿತ ಬಡ್ಡಿದರ ಕಡಿತ, ಜಾಗತಿಕ ರಾಜಕೀಯ ಉದ್ವಿಗ್ನತೆಗಳಲ್ಲಿನ ಸಂಭಾವ್ಯ ಕಡಿತ ಎಂದು ಹೇಳಲಾಗುತ್ತಿದೆ.

ಬಂಗಾರದ ದರ ಕಡಿಮೆ ಆಗೋದು ಯಾವಾಗ?

ಅಮೆರಿಕ ಮೂಲದ ಮಾರ್ನಿಂಗ್‌ ಸ್ಟಾರ್‌ನ ವಿಶ್ಲೇಷಕ ಜಾನ್‌ ಮಿಲ್ಸ್‌ ಅವರು 55- 60 ಸಾವಿರ ರೂಪಾಯಿಗೆ ಬಂಗಾರದ ದರ ಕಡಿಮೆ ಆಗತ್ತೆ ಅಂತ ಹೇಳಿದ್ದರು. ಈಗ ಇರುವ ಬೆಲೆಗೆ ಶೇ.38ರಷ್ಟು ಕುಸಿತ ಕಾಣಲಿದೆ ಎಂದು ಹೇಳಲಾಗಿತ್ತು. ಅಂದ್ರೆ 10 ಗ್ರಾಂ ಚಿನ್ನವು 70 ಸಾವಿರ ರೂಪಾಯಿಗಿಂತ ಕಡಿಮೆ ದರದಲ್ಲಿ ಸಿಗಲಿದೆ ಎನ್ನಲಾಗಿದೆ. 2026ರಲ್ಲಿ ಬಂಗಾರದ ಬೆಲೆ ಭಾರೀ ಇಳಿಕೆ ಕಾಣಲಿದೆ ಎಂದು ಲೇಯ್ಟನ್‌ ಹೇಳಿದ್ದರು.

View post on Instagram