ಈ ಲಕ್ಷಣಗಳಿದ್ದರೆ ಜೀವನದ ಮೇಲೆ ಸರ್ಪ ಗ್ರಹ ಸ್ಥಾನ ಪರಿಣಾಮ ಬೀರುತ್ತಿದೆ ಎಂದರ್ಥ, ಪರಿಹಾರವೇನು?
ಸರ್ಪ ಗ್ರಹಗಳ ದೋಷಗಳು ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ಲಕ್ಷಣಗಳು ಕಂಡು ಬಂದರೆ ಸರ್ಪ ಗ್ರಹ ದೋಷಗಳಿವೆ ಎಂದರ್ಥ, ಹಾಗಂತ ಆತಂಕ ಪಡಬೇಕಿಲ್ಲ,ಪರಿಹಾರ ಸೂತ್ರವೂ ಇದೆ.

ಸರ್ಪ ಗ್ರಹ ಪರಿಣಾಮ
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸ್ಥಾನ, ಪಲ್ಲಟ, ಅನುಗ್ರಹಗಳು ಅತೀ ಮುಖ್ಯ. ಈ ಪೈಕಿ ಸರ್ಪ ಗ್ರಹಗಳ ಸ್ಥಾನ ಹಾಗೂ ದಶೆ ಪ್ರತಿಯೊಬ್ಬರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕೆಲ ಲಕ್ಷಣಗಳು, ಸೂಚನೆಗಳು ಸರ್ಪ ಗ್ರಹ ಸ್ಥಾನ ಬಿರುತ್ತಿರುವ ಪರಿಣಾಮವನ್ನು ಸೂಚಿಸುತ್ತದೆ. ಈ ಸೂಚನೆಗಳನ್ನು ನಿರ್ಲಕ್ಷಿಸುವುದಕ್ಕಿಂತ ಪರಿಹಾರ ಕಂಡುಕೊಳ್ಳುವುದು ಮುಖ್ಯ.
ಸರ್ಪ ಗ್ರಹ ದೋಷ ನೀಡುವ ಸೂಚನೆ
ಜ್ಯೋತಿಷ್ಯದಲ್ಲಿ ರಾಹುವನ್ನು ಸರ್ಪದ ತಲೆ ಹಾಗೂ ಕೇತು ಸರ್ಪದ ಬಾಲ ಎಂದು ಪರಿಗಣಿಸಲಾಗುತ್ತದೆ. ರಾಹು ಹಾಗೂ ಕೇತು ಅಶುಭ ಸ್ಥಾನದಲ್ಲಿದ್ದರೆ ದೋಷಗಳು ಕಾಣಿಸಿಕೊಳ್ಳುತ್ತದೆ. ಕೆಟ್ಟ ಕನಸುಗಳು ಬೀಳುವುದು, ಮನೆಯಲ್ಲಿ ಹಾವು ಕಾಣಿಸಿಕೊಳ್ಳುವುದು, ಹಾವಿನ ಕನಸು, ಪ್ರಯತ್ನ ವಿಫಲ, ದಿಢೀರ್ ಎದುರಾಗುವ ಸಮಸ್ಯೆಯಲ್ಲೇ ಎಲ್ಲಾ ಪ್ರಯತ್ನ ವ್ಯರ್ಥವಾಗುವುದು, ವೃತ್ತಿಯಲ್ಲಿನ ಅಡಚಣೆ, ಆರ್ಥಿಕ ನಷ್ಟ, ಸಾಲದ ಸಮಸ್ಯೆ, ಭಯ, ಆಚತಂಕ, ನಿದ್ರಾಹೀನತೆ, ಅಸ್ಪಸ್ಥತೆ, ಆಸಕ್ತಿ ಕಳೆದುಕೊಳ್ಳುವಿಕೆ,ದಾಂಪತ್ಯದಲ್ಲಿ ಮನಸ್ತಾಪ, ಕುಟುಂಬದಲ್ಲಿ ಅಶಾಂತಿ, ಚರ್ಮ ಸಮಸ್ಯೆ, ಹಾವು ಸೇರಿದಂತೆ ವಿಷಕಾರಿ ಜಂತುಗಳ ಕಡಿತ, ಮಾನಸಿಕ ಒತ್ತಡ, ಸಾವಿನ ಭಯ ಸೂಚನೆಗಳಿದ್ದರೆ ರಾಹು ಕೇತುವಿನ ಪರಿಣಾಮದ ಸೂಚನೆಗಳು.
ಪರಿಹಾರವೇನು?
ರಾಹು ಹಾಗೂ ಕೇತು ದೋಷದಿಂದ ದೂರವಾಗಲು ಸರಳ ಸೂತ್ರ ಪಾಲಿಸಿದರೆ ಸಾಕು. ಪ್ರತಿ ದಿನ ಕೆಲ ಅಭ್ಯಾಸಗಳು, ದೇವರ ಜಪ ತಪ ದೋಷಗಳಿಂದ ಮುಕ್ತಿ ಸಿಗುವಂತೆ ಮಾಡುತ್ತದೆ. ಇಷ್ಟೇ ಅಲ್ಲ ಸಮಸ್ಯೆಗಳು ನಿಧಾನವಾಗಿ ದೂರವಾಗುತ್ತದೆ. ಬೆಳಗ್ಗೆ ಸ್ನಾನದ ಬಳಿಕ ಗಂಗಾಜಲ ಅಥವಾ ಶುದ್ದ ನೀರಿಗೆ ಸ್ವಲ್ಪ ಉಪ್ಪು ಹಾಕಿ ಮನೆ ಮೂಲೆಗಳಲ್ಲಿ ಸಿಂಪಡಿಸಬೇಕು. ಇದು ನೆಗಟೀವ್ ಶಕ್ತಿಯನ್ನು ದೂರ ಮಾಡುತ್ತದೆ.
ನೀಲಿ ಹೂವು
ಶುಕ್ರವಾರ, ಶನಿವಾರ ಎಳ್ಳು ಎಣ್ಣೆಯ ದೀಪ ಹಚ್ಚಬೇಕು. ಇದು ಮನೆಯೊಳಗಿನ ನೆಗಟೀವ್ ಎನರ್ಜಿಯನ್ನು ಮಾತ್ರವಲ್ಲ, ದೇಹ ಹಾಗೂ ಮನಸ್ಸಿನ ನೆಗಿಟೀವ್ ಎನರ್ಜಿಯನ್ನು ದೂರ ಮಾಡುತ್ತದೆ. ಬೆಳಕು ಪ್ರಜ್ವಲಿಸುತ್ತಿದ್ದಂತೆ ಮನಸ್ಸು ಶಾಂತಗೊಳ್ಳುತ್ತದೆ. ರಾಹುವಿನ ಇಷ್ಟದ ಬಣ್ಣ ನೀಲಿ. ಹೀಗಾಗಿ ನೀಲಿ ಬಟ್ಟೆ, ನೀಲಿ ಹೂವು ದಾನ ಮಾಡುವುದು, ದೇವರಿಗೆ ಅರ್ಪಿಸುವುದು ಉತ್ತಮ. ಕೇತುವಿಗೆ ಕಪ್ಪು. ಹೀಗಾಗಿ ಕಪ್ಪು ಬಟ್ಟೆ, ಕಪ್ಪು ಎಳ್ಳು ದಾನ ಮಾಡುವುದು ಉತ್ತಮ.
ಶ್ರಾವಣ ಮಾಸ ಅತ್ಯಂತ ಮುಖ್ಯ
ಶ್ರಾವಣ ಮಾಸದಲ್ಲಿ ಅಥವಾ ಪ್ರತಿ ಸೋಮವಾರ ನಾಗ ದೇವಸ್ಥಾನ, ನಾಗ ಕಟ್ಟೆಗಳಿಗೆ ಬೇಟಿ ನೀಡಿ, ಹಾಲು ಅಕ್ಕಿ, ಎಳ್ಳು, ಹೂವು ಅರ್ಪಿಸುವುದು ಉತ್ತಮ. ನಾಗರ ಪಂಚಮಿ ದಿನ ನಾಗ ಬನ, ನಾಗ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ, ಹಾಲು ಅರ್ಪಿಸುವುದು ಉತ್ತಮ. ಮಹಾಮೃತ್ಯುಂಜಯ ಮಂತ್ರ, ರಾಹು ಮಂತ್ರಗಳನ್ನು ಜುಪಿಸುವುದು ಉತ್ತಮ. ಇನ್ನು ರುದ್ರಾಭಿಷೇಕ, ನವಗ್ರಹ ಶಾಂತಿ ಪೂಜೆ, ಪರಿಹಾರ ಪೂಜೆ ಸೇರಿದಂತೆ ಇತರ ಪೂಜೆಗಳಿಂದಲೂ ದೋಷ ಪರಿಹಾರ ಅಥವಾ ದೋಷದಿಂದ ದೂರವಿರಲು ಸಾಧ್ಯವಿದೆ.

