ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಮಾರ್ಲೇಶ್ವರ ಶಿವಧಾರ ದೇವಸ್ಥಾನ ಭಾರಿ ಟ್ರೆಂಡ್ ಆಗುತ್ತಿದೆ. ಅತ್ಯಂತ ಸುಂದರ ಪ್ರಕೃತಿ ಮಡಿನಲ್ಲಿರುವ ಈ ದೇವಸ್ಥಾನ ಭಾರತದ ನಂಬಿಕೆ, ಶ್ರದ್ಧೆ ಹಾಗೂ ಪ್ರಕೃತಿ ಆರಾಧನೆ ಕೇಂದ್ರವಾಗಿದೆ. ಈ ತಾಣ ಎಲ್ಲಿದೆ?
ಭಾರತದಲ್ಲಿರುವ ಹಲವು ದೇವಸ್ಥಾನಗಳು ಈಗಲು ಪ್ರಕೃತಿಯ ಮಡಲಿಲ್ಲಿದೆ. ಸುಂದರ ತಾಣದಲ್ಲಿ ಪ್ರಶಾಂತವಾಗಿರುವ ದೇವಸ್ಥಾನಗಳ ಹಿಂದೆ ಐತಿಹಾಸಿಕ, ಪುರಾಣದ ಉಲ್ಲೇಖಗಳಿವೆ. ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಾರ್ಲೇಶ್ವರ ಶಿವಧಾರ ದೇವಸ್ಥಾನ ಕುರಿತು ಪೋಸ್ಟ್ ಹಾಕಿದ ಬೆನ್ನಲ್ಲೇ ದೇಶಾದ್ಯಂತ ಈ ದೇಗುಲ ಟ್ರೆಂಡ್ ಆಗಿದೆ. ಈ ದೇವಸ್ಥಾನದ ಸುತ್ತಲಿನ ಪ್ರಕೃತಿಯನ್ನು ಗಮನಿಸಿದರೆ ಶಿವನ ದರ್ಶನ ಪಡೆಯಲು ಮನಸ್ಸಾಗದೇ ಇರದು. ಗುಹೆಯೊಳಗಿರುವ ಈ ದೇವಸ್ಥಾನ ಇದೀಗ ಭಾರಿ ಚರ್ಚೆಯಾಗುತ್ತಿದೆ.
ಪ್ರಕೃತಿ ಸಂರಕ್ಷಣೆ ಮಾಡುತ್ತಾ ಬಂದಿರುವ ಮಾರ್ಲೇಶ್ವರ
ಮಾರ್ಲೇಶ್ವರ ದೇವಸ್ಥಾನ ಸಾಂಸ್ಕೃತಿಕ ಪರಂಪರೆ ಸಂರಕ್ಷಣೆಯ ಸಂಕೇತ ಎಂದು ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಈ ತಾಣ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, ಪ್ರಕೃತಿಯೊಂದಿಗೆ ಬೆಸದುಕೊಂಡಿದೆ. ಇದು ಹಿಂದೂಗಳ ಶ್ರದ್ಧಾ ಕೇಂದ್ರ ಪ್ರಕೃತಿಯೊಂದಿಗೆ ಬೆಸೆದು ಸಂರಕ್ಷಣೆಯಾಗಿ ನಿಂತಿರುವ ದೇಗುಲ ಎಂದಿದ್ದಾರೆ. ಶ್ರಾವಣ ಮಾಸದಲ್ಲಿ ಈ ದೇವಸ್ಥಾನದಲ್ಲಿ ವಿಶೇಷ ಪೂಜೆಗಳಿವೆ. ಈ ಮಾಸದಲ್ಲಿ ಇಲ್ಲಿಗೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಫಡ್ನವಿಸ್ ಪೋಸ್ಟ್‌ನಿಂದ ನಿರ್ಗದ ಸೌಂದರ್ಯದ ನಡುವೆ ಇರುವ ಈ ದೇವಸ್ಥಾನ ಕುರಿತು ಹಲವರು ಸರ್ಚ್ ಮಾಡುತ್ತಿದ್ದಾರೆ. ದೇಗುಲ, ಸುತ್ತಲಿನ ಪರಿಸರವನ್ನು ಭೇಟಿ ನೀಡಲು ಮುಂದಾಗಿದ್ದಾರೆ.
ಎಲ್ಲಿದೆ ಮಾರ್ಲೇಶ್ವರ ಶಿವಧಾರ ದೇವಸ್ಥಾನ
ಮಾರ್ಲೇಶ್ವರ ಶಿವಧಾರ ದೇಗುಲ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಸಂಗಮೇಶ್ವರ ತಾಲೂಕಿನಲ್ಲಿದೆ. ಸಹ್ಯಾದ್ರಿ ಪರ್ವತ ಶ್ರೇಣಿಗಳ ನಡುವೆ ಇರುವ ಈ ದೇವಸ್ಥಾನ ಅತ್ಯಂತ ಪವಿತ್ರ ದೇಗುಲ. ಇಷ್ಟೇ ಅಲ್ಲ ಈ ಜಲಪಾತಕ್ಕೆ ಶಿವಧಾರ ಎಂದು ಕರೆಯುತ್ತಾರೆ. ಇದು ಶಿವನ ಧಾರೆ ಎಂಬ ನಂಬಿಕೆ ಇದೆ. ನೈಸರ್ಗಿಕವಾಗಿ ರೂಪಗೊಂಡ ಗುಹೆಯ ಒಳಗ ಈ ದೇವಸ್ಥಾನವಿದೆ. ಸುತ್ತಲೂ ಸಹ್ಯಾದ್ರಿ ಪರ್ವತ ಶ್ರೇಣಿ. ಈ ಪರ್ವತ ಶ್ರೇಣಿಗಳಲ್ಲಿ ಅತೀ ದೊಡ್ಡ ಜಲಪಾತಗಳಿವೆ. ಸಣ್ಣ ಸಣ್ಣ ಜಲಪಾತ, ಅತೀ ದೊಡ್ಡ ಹಾಲಿನಂತೆ ಧುಮ್ಮಿಕ್ಕುವ ಜಲಪಾತಗಳು ಈ ಶ್ರೇಣಿಯಲ್ಲಿದೆ. ವಿಶೇಷ ಅಂದರೆ ಸುಮಾರು 100ಕ್ಕೂ ಹೆಚ್ಚು ಜಲಪಾತಗಳನ್ನು ಇಲ್ಲಿ ಕಾಣಸಲು ಸಾಧ್ಯವಿದೆ.
ಈ ಪ್ರಕೃತಿ ಮಡಿಲ್ಲಿರುವ ಈ ದೇವಸ್ಥಾನದ ಪಕ್ಕದಲ್ಲೇ ಧುಮುಕುವ ಶಿವಧಾರ ಜಲಪಾತವಿದೆ. ಶ್ರಾವಣ ಹಾಗೂ ಮಹಾಶಿವರಾತ್ರಿಗಳಲ್ಲಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಪ್ರಕೃತಿಯ ಮಡಿಲಲ್ಲಿ ಸಾಕ್ಷಾತ್ ಶಿವನ ದರ್ಶನ ಪಡೆಯಲು ಸಾಧ್ಯ. ಪ್ರಕೃತಿ ಸೌಂದರ್ಯ ಜೊತೆ ಶಿವನ ಆರಾಧಿಸಲು ಇದು ಅತ್ಯಂತ ಸೂಕ್ತ ದೇವಸ್ಥಾನವಾಗಿದೆ. ಆದರೆ ಈ ತಾಣ ಮೋಜು ಮಸ್ತಿ ಮಾಡುವ ಪ್ರವಾಸಿ ತಾಣವಲ್ಲ, ಧಾರ್ಮಿಕ ತಾಣ. ಭಾರತದ ಅಸಲಿ ಸಂಸ್ಕೃತಿ, ಆಧ್ಯಾತ್ಮಿಕತೆ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆ ಸಂರಕ್ಷಿಸುವ ಕರ್ತವ್ಯ ನಮ್ಮ ಮೇಲಿದೆ ಎಂದು ಫಡ್ನವಿಸ್ ಹೇಳಿದ್ದಾರೆ.


