ರಾಖಿ ವೈಲೆಂಟ್ ಆಗದಿದ್ದರೆ ಎಲ್ಲರಿಗೂ ಟೆನ್ಷನ್ನೋ ಟೆನ್ಷನ್. ಆಗಸ್ಟ್‌ನಲ್ಲಿಯೇ 'ಸೆಕ್ಸ್‌ಗಿನ್ನು ನೋ...' ಎಂದು ಸೊಂಟಕ್ಕೆ ಲಾಕ್ ಆ್ಯಂಡ್ ಕೀ ಧರಿಸಿ ಸುದ್ದಿಯಾಗಿದ್ದಳು ಈ ಬೆಡಗಿ. ನಂತರ ವ್ರೆಸ್ಲಿಂಗ್ ಸ್ಟಾರ್‌ಗೇ ಜಾಲೆಂಜ್ ಮಾಡಿ ಆಸ್ಪತ್ರೆ ಸೇರಿಕೊಂಡಿದ್ದೂ ಎಲ್ಲರಿಗೂ ಗೊತ್ತು.

ಅಷ್ಟೇ ಅಲ್ಲ... ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ದೀಪಕ್ ಕಲಾರ್‌ರನ್ನು ಮದುವೆಯಾಗಿವುದಾಗಿ ಘೋಷಿಸಿದ್ದು ಮಾತ್ರವಲ್ಲ, ನೇಕೆಡ್ ಆಗಿ ಅಮೆರಿಕದಲ್ಲಿ ಸಪ್ತಪದಿ ತುಳಿಯುತ್ತಿದ್ದೇನೆ ಎಂದು ಹೇಳಿ ಮತ್ತೊಮ್ಮೆ ಸದ್ದು ಮಾಡಿದರು. 'ನಾನಿನ್ನೂ ಕನ್ಯೆ..' ಎಂದು ಪ್ರೂಫ್ ಬೇರೆ ತೋರಿಸಿದರು.

ರೆಸ್ಲಿಂಗ್ ಸ್ಟಾರ್ ಜೊತೆ ಫೈಟ್ ಮಾಡಿ ಆಸ್ಪತ್ರೆ ಸೇರಿದ ರಾಖಿ!

ಈಗ ಮತ್ತೇನಪ್ಪ ಎಂದು ಯೋಚಿಸುತ್ತಿದ್ದೀರಾ? ತನ್ನ ಬ್ಯೂಟಿ ಸೀಕ್ರೆಟ್ ಅನ್ನು ಜಗತ್ತಿಗೇ ಬಿಚ್ಚಿಟ್ಟಿದ್ದಾರೆ ರಾಖಿ. ಮುಖಕ್ಕೆ ಸಗಣಿ ಫೇಸ್ ಪ್ಯಾಕ್ ಮಾಡಿಕೊಂಡು, ತಮ್ಮ ಇನ್‌ಸ್ಟಾಗ್ರಾಮ್ ಪೇಜಿನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

 

‘ನಿಮಗೆ ಆದಾಯ ತೆರಿಗೆ ಅಥವಾ ಬೇರೆ ಸಮಸ್ಯೆಗಳಿದ್ದರೆ ಚಿಂತೆ ಬಿಟ್ಹಾಕಿ. ಡಾ. ಉಮೇಶ್ ಎಂಬುವರ ಕ್ಲಿನಿಕ್‌ನಲ್ಲಿ ನಾನಿದ್ದೇನೆ. ನನ್ನ ಎಲ್ಲಾ ಸಮಸ್ಯೆ ನಿವಾರಿಸಲು ಗಂಟೆ ಹಿಂದೆ ಅವರು ನನ್ನ ಮುಖಕ್ಕೆ ಸಗಣಿ ಪ್ಯಾಕ್ ಹಾಕಿದ್ದಾರೆ. ಗೋವಿನ ಸೆಗಣಿ ಪ್ಯಾಕ್ ನೀವೂ ಮಾಡಿಕೊಳ್ಳಿ. ಇದರಿಂದ ನಿಮಗಿರುವ ಆದಾಯ ತೆರಿಗೆ ಸಮಸ್ಯೆ, ಮಾತ್ರವಲ್ಲದೇ ವಿಚ್ಛೇದನ ಸೇರಿ ಇನ್ನಿತರ ಸಮಸ್ಯೆಗಳೂ ದೂರವಾಗಲಿವೆ. ಸಮಯ ಹಾಳು ಮಾಡದೆ ಬೇಗ ಗೋಬರ್ ಪ್ಯಾಕ್ ಮುಖಕ್ಕೆ ಹಚ್ಚಿಕೊಳ್ಳಿ... ’ಎಂದು ಹೇಳಿದ್ದಾಳೆ.

ಸೆಕ್ಸ್‌ಗೆ ರಾಖಿ ಗುಡ್ ಬೈ, ಇನ್ನೇನಿದ್ರೂ ನೇರವಾಗಿ ಮದುವೆ! ಕಾರಣ

ಸದ್ಯಕ್ಕೆ ಹಸುವಿನ ಸಗಣಿ ಹಂಚಿಕೊಳ್ಳಲು ಹೇಳಲಿರುವ ರಾಖಿ ಇನ್ನು ಯಾವುದರ ಸಗಣಿ ಹಚ್ಚಿಕೊಳ್ಳಿ ಎಂತಾಳೋ ಕಾಣೆ.....ಇನ್ನೇನ್ನೇನು ನೋಡಬೇಕೋ....!