Asianet Suvarna News Asianet Suvarna News

ಸೆಕ್ಸ್‌ಗೆ ರಾಖಿ ಗುಡ್ ಬೈ,  ಇನ್ನೇನಿದ್ರೂ ನೇರವಾಗಿ ಮದುವೆ! ಕಾರಣ

ಬಾಲಿವುಡ್ ನ ಸೆಕ್ಸ್ ಬಾಂಬ್ ಎಂದೆ ಕರೆಸಿಕೊಂಡಿದ್ದ ರಾಖಿ ಸಾವಂತ್  ಇನ್ನು ಮುಂದೆ ಸೆಕ್ಸ್ ಮಾಡುವುದಿಲ್ಲವಂತೆ! ನೇರವಾಗಿ ಮದುವೆ ಆಗ್ತಾರಂತೆ... ಜತೆಗೆ ದೇವಾಲಯದಂತಹ ತನ್ನ ದೇಹವನ್ನು ಸದಾ ಶುದ್ಧವಾಗಿರಿಸಿಕೊಳ್ಳುತ್ತಾರಂತೆ!

Video Bollywood Actress rakhi sawant bizarre statement on sex life
Author
Bengaluru, First Published Oct 29, 2018, 2:59 PM IST
  • Facebook
  • Twitter
  • Whatsapp

ಮುಂಬೈ[ಅ.29]  ರಾಖಿ ಸಾವಂತ್ ಬದಲಾಗಿದ್ದಾರೆ. ಅವರೇ ಹೇಳುವಂತೆ ಇನ್ನು ಮುಂದೆ ಸೆಕ್ಸ್ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ.

ರಾಖಿ ಸಾವಂತ್ ಸಂದರ್ಶನದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಈ ವಿಡಿಯೋದಲ್ಲಿ ತನುಶ್ರೀ ದತ್ತಾ ಯಾಕೆ ತಲೆ ಕೂದಲು ಬೋಳಿಸಿದ್ದರು ಎಂಬುದನ್ನು ಹೇಳಿದ್ದಾರೆ.

ಗಾಯಕ ಮಿಕಾ ಸಿಂಗ್ ನನಗೆ ಕಿಸ್ ಮಾಡಿದ್ದ ಕಾರಣ ನನ್ನ ಮೇಲಿನ ಪ್ರೀತಿಗೆ ತನುಶ್ರೀ ತಲೆಕೂದಲು ಬೋಳಿಸಿ ಆಶ್ರಮಕ್ಕೆ ಹೋಗಿದ್ದಳು ಎಂದು ರಾಖಿ ತನುಶ್ರೀ ಮೇಲೆ ಮತ್ತೆ ಹರಿಹಾಯ್ದಿದ್ದಾರೆ.

ಹೆಣ್ಮಕ್ಕಳ ಮಾನ ಸಂರಕ್ಷಣೆಗೆ ರಾಖಿ ಬೆಚ್ಚಿ ಬೀಳಿಸೋ ಸಂಶೋಧನೆ! ವಿಡಿಯೋ

ತನುಶ್ರೀ ದತ್ತಾ ಒಬ್ಬಳು ಸಲಿಂಗಕಾಮಿ. ಆಕೆ ಒಳಗೆ ಒಬ್ಬ ಪುರುಷನಿದ್ದಾನೆ. ತನು ನನಗೆ ರೇವ್ ಪಾರ್ಟಿಗೆ ಕರೆದುಕೊಂಡು ಹೋಗುತ್ತಿದ್ದಳು. ಅಲ್ಲಿ ಆಕೆ ನಶೆಯ ಪದಾರ್ಥಗಳನ್ನು ತೆಗೆದುಕೊಳ್ಳುತ್ತಿದ್ದಳು ಎಂದು ಆರೋಪಿಸಿರುವ ರಾಖಿಯ ಖಡಕ್ ಮಾತುಗಳು ಸೋಶಿಯಲ್ ಮೀಡಿಯಾದ ಸದ್ಯದ ಆಹಾರ.

ಮೀ ಟೂ ಮತ್ತು ಅತ್ಯಾಚಾರದ ಪ್ರಕರಣಗಳು ಸದ್ದು ಮಾಡಿದ ನಂತರ ತನುಶ್ರೀ ದತ್ತಾ ಮತ್ತು ರಾಖಿ ಸಾವಂತ್ ನಡುವೆ ವಾಗ್ವಾದ ನಡೆದಿತ್ತು. ಆದರೆ ಮಹಿಳೆಯರ, ಹೆಣ್ಣು ಮಕ್ಕಳ ಮಾನ ರಕ್ಷಣೆ ಹೇಗೆ ಮಾಡಬೇಕು? ಹೆಣ್ಣು ಮಕ್ಕಳೆ ತಮಗೆ ತಾವೇ ಯಾವ ರೀತಿ ಸುರಕ್ಷತೆ ವಹಿಸಿಕೊಳ್ಳಬಹುದು ಎಂಬುದನ್ನು ರಾಖಿ ಸಂಶೋಧನೆ ಮೂಲಕ ಬಹಿರಂಗ ಮಾಡಿಯೂ ಇದ್ದರು!

 

 

 

Follow Us:
Download App:
  • android
  • ios