ನೂರಾರು ಕೋಟಿ ಆಸ್ತಿ ಹೊಂದಿದ್ದಾರೆ ಎನ್ನಲಾಗುವ ಸೂಪರ್‌ಸ್ಟಾರ್ ರಜನಿಕಾಂತ್, ಶರ್ಟ್-ಲುಂಗಿ ಹಾಗೂ ಸಾಮಾನ್ಯ ಚಪ್ಪಲಿಯಲ್ಲಿ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸೂಪರ್‌ಸ್ಟಾರ್‌ಗಳ ಜೀವನ ಅಂದ್ರೆ ಐಷಾರಾಮಿ ಲೈಫ್‌ಸ್ಟೈಲ್, ದುಬಾರಿ ಕಾರುಗಳು, ಅದ್ಧೂರಿ ಮನೆಗಳು, ಬ್ರಾಂಡೆಡ್ ಬಟ್ಟೆಗಳು ನೆನಪಾಗುತ್ತವೆ. ಆದ್ರೆ ಇಲ್ಲೊಬ್ಬ ಸೂಪರ್‌ಸ್ಟಾರ್ ಮಾತ್ರ ನೂರಾರು ಕೋಟಿ ರೂಪಾಯಿ ಆಸ್ತಿಯ ಒಡೆಯನಾಗಿದ್ದರೂ, ತಮ್ಮ ಸರಳ ಜೀವನಶೈಲಿಯಿಂದಲೇ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ. ಇದೀಗ ಅವರ ಒಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಸ್ಟಾರ್‌ನ ಸಿಂಪಲ್ ಲುಕ್ ನೋಡಿ ಫಿದಾ ಆಗಿದ್ದಾರೆ. ಅಷ್ಟಕ್ಕೂ ಆ ಸೂಪರ್‌ಸ್ಟಾರ್ ಯಾರು ಅಂತೀರಾ? ಅವರೇ ರಜನಿಕಾಂತ್!
₹500 ಕೋಟಿಗೂ ಅಧಿಕ ಆಸ್ತಿ.. ಆದ್ರೂ ಸಿಂಪಲ್ ಲೈಫ್!
ಸೌತ್ ಇಂಡಿಯಾದ ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎನ್ನಲಾಗುತ್ತದೆ. ಆದರೆ ಇಷ್ಟೊಂದು ದೊಡ್ಡ ಸ್ಟಾರ್‌ಡಮ್ ಹೊಂದಿದ್ದರೂ ರಜನಿಕಾಂತ್ ಅವರು ತಮ್ಮ ಸರಳತೆ ಹಾಗೂ ವಿನಯಕ್ಕೆ ಹೆಸರುವಾಸಿ. ಸದ್ಯ ರಜನಿಕಾಂತ್ ಅವರ ಒಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಫೋಟೋದಲ್ಲಿ ಅವರು ಶರ್ಟ್ ಹಾಗೂ ಲುಂಗಿ ಧರಿಸಿಕೊಂಡು ಬೆಟ್ಟದ ಮೇಲೆ ನಡೆದುಕೊಂಡು ಹೋಗುತ್ತಿರುವುದು ಕಾಣಿಸುತ್ತದೆ. ಇದಕ್ಕಿಂತಲೂ ಗಮನ ಸೆಳೆದಿರುವುದು ಅವರ ಕಾಲಿನಲ್ಲಿರುವ ಸಾಮಾನ್ಯ ಚಪ್ಪಲಿಗಳು.
₹200-₹500ರ ಚಪ್ಪಲಿ.. ಇದೇನಾ ಸೂಪರ್‌ಸ್ಟಾರ್ ಸ್ಟೈಲ್?
ವೈರಲ್ ಆಗಿರುವ ಫೋಟೋದಲ್ಲಿ ರಜನಿಕಾಂತ್ ಯಾವುದೇ ದುಬಾರಿ ಶೂ ಅಥವಾ ಬ್ರಾಂಡೆಡ್ ಫುಟ್‌ವೇರ್ ಧರಿಸಿಲ್ಲ. ಬದಲಿಗೆ ಸಾಮಾನ್ಯ ಚಪ್ಪಲಿಯಲ್ಲೇ ಸರಳವಾಗಿ ಕಾಣಿಸಿಕೊಂಡಿದ್ದಾರೆ. ಈ ಚಪ್ಪಲಿಯ ಬೆಲೆ ಸುಮಾರು ₹200ರಿಂದ ₹500ರ ಒಳಗಿರಬಹುದು ಎಂದು ವರದಿಯಾಗಿದೆ. ನೂರಾರು ಕೋಟಿ ರೂಪಾಯಿ ಆಸ್ತಿ ಹೊಂದಿರುವ ಸೂಪರ್‌ಸ್ಟಾರ್ ಒಬ್ಬರು ಇಷ್ಟು ಸಿಂಪಲ್ ಆಗಿ ಓಡಾಡುತ್ತಿರುವುದನ್ನು ಕಂಡು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಅವರ ಸರಳತೆಯೇ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದೆ.
ಗುರು ದರ್ಶನಕ್ಕೆ ಹೋದ ರಜನಿಕಾಂತ್
ರಜನಿಕಾಂತ್ ಅವರು ತಮ್ಮ ಗುರು ಮಹಾ ಅವತಾರ್ ಬಾಬಾಜಿ ಅವರ ದರ್ಶನಕ್ಕಾಗಿ ತೆರಳಿದ್ದ ಸಂದರ್ಭದಲ್ಲಿ ಈ ಫೋಟೋ ತೆಗೆಯಲಾಗಿದೆ ಎಂದು ವರದಿಯಾಗಿದೆ. ಗುರುಗಳ ಮೇಲಿನ ಗೌರವ ಹಾಗೂ ಭಕ್ತಿಯನ್ನು ತೋರಿಸುವ ರಜನಿಕಾಂತ್ ಅವರ ಈ ಸರಳ ನೋಟ ಅಭಿಮಾನಿಗಳ ಗಮನ ಸೆಳೆದಿದೆ. ಫೋಟೋ ವೈರಲ್ ಆಗುತ್ತಿದ್ದಂತೆ ಸಾವಿರಾರು ಮಂದಿ ಇದನ್ನು ಲೈಕ್ ಮಾಡಿ ಶೇರ್ ಮಾಡುತ್ತಿದ್ದಾರೆ. ನೆಟ್ಟಿಗರು ಕೂಡ ರಜನಿಕಾಂತ್ ಅವರ ಸರಳತೆ ಮತ್ತು ವಿನಯವನ್ನು ಕೊಂಡಾಡುತ್ತಿದ್ದಾರೆ.
‘ಇಷ್ಟೊಂದು ದೊಡ್ಡ ಸ್ಟಾರ್‌ಡಮ್ ಇದ್ದರೂ ತಮ್ಮ ಗುರುಗಳ ಬಗ್ಗೆ ಇಷ್ಟು ಗೌರವ ಮತ್ತು ಭಕ್ತಿ ಹೊಂದಿರುವುದು ನಿಜಕ್ಕೂ ವಿಶೇಷ’ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ತೆರೆ ಮೇಲಷ್ಟೇ ಅಲ್ಲ, ತೆರೆ ಹಿಂದೆಯೂ ತಮ್ಮ ಬೇರುಗಳು ಮತ್ತು ಸಂಪ್ರದಾಯಗಳಿಗೆ ಕನೆಕ್ಟ್ ಆಗಿರುವವರೇ ನಿಜವಾದ ಸೂಪರ್‌ಸ್ಟಾರ್‌ಗಳು’ ಎಂದು ಬರೆದಿದ್ದಾರೆ.
75ರ ವಯಸ್ಸಿನಲ್ಲೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು!
ರಜನಿಕಾಂತ್ ಅವರಿಗೆ ಈಗ 75 ವರ್ಷ ವಯಸ್ಸು. ಆದರೂ ಅವರ ಸಿನಿಮಾ ಕ್ರೇಜ್ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ಯಂಗ್ ಹೀರೋಗಳಿಗೆ ಪೈಪೋಟಿ ನೀಡುವಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಸಿನಿಮಾಗಳ ಬಗ್ಗೆ ಅಭಿಮಾನಿಗಳಲ್ಲಿರುವ ನಿರೀಕ್ಷೆಯೂ ಮುಂದುವರಿದಿದೆ.
‘ಜೈಲರ್ 2’ನಲ್ಲಿ ಮತ್ತೆ ಟೈಗರ್ ಮುತ್ತುವೇಲ್ ಪಾಂಡಿಯನ್!
ಸದ್ಯ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. 2023ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದ ‘ಜೈಲರ್’ ಸಿನಿಮಾದ ಸೀಕ್ವೆಲ್ ಆಗಿ ಈ ಚಿತ್ರ ಮೂಡಿಬರುತ್ತಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರವನ್ನು ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ.
ಇನ್ನು ರಜನಿಕಾಂತ್ ಅವರು ಮತ್ತೊಮ್ಮೆ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ರಮ್ಯಾ ಕೃಷ್ಣನ್ ಹಾಗೂ ಯೋಗಿ ಬಾಬು ಕೂಡ ತಮ್ಮ ಪಾತ್ರಗಳನ್ನು ಮುಂದುವರಿಸಲಿದ್ದಾರೆ. ಒಂದೆಡೆ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸ್ಟಾರ್‌ಡಮ್.. ಮತ್ತೊಂದೆಡೆ ಇಷ್ಟು ಸರಳ ಜೀವನಶೈಲಿ. ಇದೇ ಕಾರಣಕ್ಕೆ ರಜನಿಕಾಂತ್ ಅವರನ್ನು ಅಭಿಮಾನಿಗಳು ‘ಸೂಪರ್‌ಸ್ಟಾರ್’ ಮಾತ್ರವಲ್ಲ, ಸರಳತೆಯ ಪ್ರತೀಕ ಎಂದೂ ಮೆಚ್ಚಿಕೊಳ್ಳುತ್ತಿದ್ದಾರೆ.


