Asianet Suvarna News Asianet Suvarna News

ಮೊದಲ ಹೆಂಡತಿ ಬಗ್ಗೆಯೂ ಸೈಫ್ ಅಲಿಖಾನ್ ಮುಕ್ತಛಂದ

ಕಾಫಿ ವಿತ್ ಕರಣ್ ಶೋ ನಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಕರೀನಾ ಕಪೂರ್ ಜೊತೆಗಿನ ಸೆಕ್ಸ್ ಲೈಫ್ ಬಗ್ಗೆ ರಿವೀಲ್ ಮಾಡಿದ ಬೆನ್ನಲ್ಲೇ ಮೊದಲ ಪತ್ನಿ ಅಮೃತಾ ಬಗ್ಗೆಯೂ ವಿಚಾರವೊಂದನ್ನು ಹೇಳಿದ್ದಾರೆ

Koffe With Karan Saif Ali Khan Reveals Ex Wife Amritha
Author
Bengaluru, First Published Nov 19, 2018, 12:12 PM IST

ಮುಂಬೈ : ಕಾಫಿ ವಿತ್ ಕರಣ ಜೋಹಾರ್ ಶೋ ನಲ್ಲಿ  ತಮ್ಮ ಪತ್ನಿ ಕರೀನಾ ಕಪೂರ್ ಜೊತೆಗಿನ ಸೆಕ್ಸ್ ಲೈಫ್ ಬಗ್ಗೆ ಮಾತನಾಡಿದ ಬಾಲಿವುಡ್ ಸೈಫ್ ಅಲಿ ಖಾನ್ ಇದೀಗ ಇದೇ ಶೋ ನಲ್ಲಿ ಮತ್ತೊಂದು ವಿಚಾರವನ್ನು ಬಿಚ್ಚಿಟ್ಟಿದ್ದಾರೆ. 

ಕಾಫಿ ವಿತ್ ಕರಣ್ ಸೀಸನ್ 6ರಲ್ಲಿ ಪುತ್ರಿ ಸಾರಾ ಜೊತೆಗೆ ಪಾಲ್ಗೊಂಡಿದ್ದ ಸೈಫ್ ಅನೇಕ ಖಾಸಗಿ ವಿಚಾರಗಳನ್ನು ಮಾತನಾಡಿದ್ದಾರೆ. ಅಮೃತ ಸಿಂಗ್ ಹಾಗೂ ಕರೀನಾ ಜೊತೆಗೆ ಜೀವನ ಹಂಚಿಕೊಂಡಿರುವ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. 

ಕರೀನಾ ಕಪೂರ್ ಜೊತೆಗೆ ವಿವಾಹಕ್ಕೂ ಮುನ್ನವೇ ಮಾಜಿ ಪತ್ನಿ ಅಮೃತಾ ಸಿಂಗ್ ಗೆ ಪತ್ರ ಬರೆದಿದ್ದಾಗಿ ಹೇಳಿದ್ದಾರೆ. ಅಲ್ಲದೇ ಈ ಪತ್ರವನ್ನು ಕರೀನಾ ಸಹ ಓದಿದ್ದಳು. ಆಕೆ ಅಮೃತಾಗೆ ಈ ಪತ್ರವನ್ನು ಕಳಿಸಲು ಸ್ವತಃ ಒಪ್ಪಿಗೆ ಕೊಟ್ಟಿದ್ದಳು. ಬಳಿಕ ಪತ್ರವನ್ನು ಅಮೃತಾಗೆ ಕಳಿಸಿದ್ದಾಗಿ ಹೇಳಿದ್ದಾರೆ.  

ಅಲ್ಲದೇ ಈ ಪತ್ರ ಓದಿದ ಬಳಿಕ ಮೊದಲ ಪತ್ನಿಯ ಪುತ್ರಿ ಸಾರಾ ಅಲಿಖಾನ್ ತಮಗೆ ಕರೆ ಮಾಡಿ ತಾನು ಹೃದಯಪೂರ್ವಕವಾಗಿ ಆಗಮಿಸುವುದಾಗಿ ಹೇಳಿದ್ದಳು ಎಂದು ಹೇಳಿದ್ದಾರೆ. ಸೈಫ್ ಪಾಲ್ಗೊಂಡಿದ್ದ ಕಾಫಿ ವಿತ್ ಕರಣ್ ಶೋ ನವೆಂಬರ್ 18 ರಂದು ಪ್ರಸಾರವಾಗಿದೆ. ಇದೇ ಶೋ ನಲ್ಲಿ ಕರೀನಾ ಸೆಕ್ಸಿ ಲುಕ್ ಬಗ್ಗೆಯೂ ಕೂಡ ಸೈಫ್ ಹೇಳಿದ್ದಾರೆ.
ಕರೀನಾ ಜೊತೆಗಿನ ಸೆಕ್ಸ್ ಲೈಫ್ ಬಗ್ಗೆ ಬಹಿರಂಗವಾಗಿ ಸೈಫ್ ಹೇಳಿದ್ದೇನು..?

Follow Us:
Download App:
  • android
  • ios