ಅಫ್ಘಾನ್ ಜಲೇಬಿ ಹಾಡಿಗೆ ಯುವತಿಯೊಬ್ಬಳು ತಲೆ ಹಾಗೂ ಸೊಂಟದ ಮೇಲೆ ತಲವಾರು ಇಟ್ಟುಕೊಂಡು ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ. ಲಾವಣ್ಯ ದಾಸ್ ಮಣಿಕ್‌ಪುರಿ ಎಂಬ ಯುವತಿ ಹಲವು ಪ್ರಯತ್ನಗಳ ನಂತರ, ತಲವಾರು ಕೆಳಗೆ ಬೀಳದಂತೆ ಬ್ಯಾಲೆನ್ಸ್ ಮಾಡಿ ಮಾಡಿದ ಈ ಡಾನ್ಸ್ 74 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದಿದೆ.

ತಲೆ ಹಾಗೂ ಸೊಂಟದ ಮೇಲೆ ತಲವಾರು ಇರಿಸಿಕೊಂಡು ಯುವತಿಯೊಬ್ಬಳು ಅಫ್ಘಾನ್ ಜಲೇಬಿ ಹಾಡಿಗೆ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. 74 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದು, ಆಕೆ ತನ್ನ ನೃತ್ಯದ ನಡುವೆಯೂ ಈ ತಲವಾರು ಕೆಳಗೆ ಬೀಳದಂತೆ ಬ್ಯಾಲೆನ್ಸ್ ಮಾಡುತ್ತಿರುವುದು ನೋಡಿ ಅನೇಕರು ಫಿದಾ ಆಗಿದ್ದಾರೆ. ಈ ವೀಡಿಯೋವನ್ನು ಲಾವಣ್ಯ ದಾಸ್ ಮಣಿಕ್‌ಪುರಿ ಎಂಬ ಹೆಸರಿನ ಇನ್ಸ್ಟಾ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ಸ್ವತಃ ಅವರು ಹೆಚ್ಚು ಕಟ್ಟಪಡದೇ ಸೊಂಟ ಹಾಗೂ ತಲೆಯ ಮೇಲೆ ತಲವಾರು ಇರಿಸಿಕೊಂಡು ಡಾನ್ಸ್ ಮಾಡಿದ್ದಾರೆ.

ಮೊದಲಿಗೆ ಸೊಂಟ ಹಾಗೂ ತಲೆಯ ಮೇಲೆ ಈ ತಲವಾರು ಇರಿಸಿಕೊಂಡು ಡಾನ್ಸ್ ಮಾಡುವುದಕ್ಕೆ ಪ್ರಯತ್ನ ಪಡುತ್ತಿರುವ ದೃಶ್ಯವಿದ್ದು, ಹಲವು ಪ್ರಯತ್ನಗಳ ನಂತರ ಬಹಳ ಪರ್ಫೆಕ್ಟ್ ಆಗಿ ಅವರು ತಲವಾರು ಕೆಳಗೆ ಬೀಳದಂತೆ ಬ್ಯಾಲೆನ್ಸ್ ಮಾಡಿಕೊಂಡು ಬಿಂದಾಸ್ ಆಗಿ ಡಾನ್ಸ್ ಮಾಡೋದನ್ನು ಕಾಣಬಹುದಾಗಿದೆ. ವೀಡಿಯೋ ನೋಡಿದ ಒಬ್ಬರು ಇದು ಬರೀ ಡಾನ್ಸ್ ಅಲ್ಲ ಇದೊಂದು ಶುದ್ಧ ಮ್ಯಾಜಿಕ್ ಎಂದು ಕಾಮೆಂಟ್ ಮಾಡಿದ್ದಾರೆ. ಕೊನೆಯವರೆಗೂ ಕಾಯಿರಿ ಅಪ್ಘಾನ್ ಜಿಲೇಬಿ ಎಂದು ಬರೆದು ಈ ವೀಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಸೊಂಟ ಹಾಗೂ ತಲೆ ಎರಡು ಕಡೆಯೂ ಅವರು ತಲವಾರು ಇಟ್ಟು ಡಾನ್ಸ್ ಮಾಡಿದ್ದು, ಈ ವೀಡಿಯೋ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ.

ಪ್ರಾಕ್ಟಿಸ್ ಮಾಡುವಾಗ ಈ ತಲವಾರು ತಲೆಯಿಂದ ಹಲವು ಬಾರಿ ಅಪಾಯಕಾರಿಯಾಗೆ ಕೆಳಗೆ ಬೀಳುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಆದರೂ ಹಲವು ಪ್ರಯತ್ನಗಳ ನಂತರ ಅವರು ಈ ಬ್ಯಾಲೆನ್ಸ್ ಡಾನ್ಸ್‌ನಲ್ಲಿ ಮಾಸ್ಟರ್ ಎನಿಸಿದ್ದು, ಬಿಂದಾಸ್ ಆಗಿ ಹೆಜ್ಜೆ ಇಡುತ್ತಾ ಬಹಳ ನಾಜೂಕಿನಿಂದ ಬ್ಯಾಲೆನ್ಸ್ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

ಈ ಜಿಲೇಬಿ ಹಾಡು ಕತ್ರೀನಾ ಕೈಫ್ ಹಾಗೂ ಸೈಫ್ ಅಲಿ ಖಾನ್ ನಟನೆಯ ಪ್ಯಾಂಟಮ್ ಸಿನಿಮಾದ ಹಿಟ್ ಸಾಂಗ್ ಆಗಿದೆ. ಈ ಹಾಡಿಗೆ ಲಾವಣ್ಯ ದಾಸ್ ಮಾಣಿಕ್‌ಪುರಿ ಮಾಡಿದ ಈ ತಲವಾರ್‌ ಬೆಲ್ಲಿ ಡಾನ್ಸ್ ಭಾರಿ ವೈರಲ್ ಆಗಿದ್ದು, ನೆಟ್ಟಿಗರಿಂದ ಹಲವು ಕಾಮೆಂಟ್‌ಗಳು ಬರುತ್ತಿವೆ. ಈ ಹಾಡಿಗೆ ಲಾವಣ್ಯ ಬರೀ ಡಾನ್ಸ್ ಮಾಡಿಲ್ಲ, ಡಾನ್ಸ್‌ನ ಜೊತೆ ಜೊತೆಗೆ ದೇಹದಿಂದ ತಲವಾರ್ ಕೆಳಗೆ ಬೀಳದಂತೆ ಬ್ಯಾಲೆನ್ಸ್ ಮಾಡಿದ್ದಾರೆ. ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದು, ಲಾವಣ್ಯದಾಸ್ ಡಾನ್ಸ್‌ಗೆ ಫಿದಾ ಆಗಿದ್ದಾರೆ.

View post on Instagram