ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಕಿಚ್ಚ ಸುದೀಪ್ ಮನೆಯಲ್ಲಿ ಮದುವೆಯ ಸಂಭ್ರಮ ಬಹಳ ಜೋರಾಗಿಯೇ ನಡೆಯುತ್ತಿದೆ. ಈ ಸಂಭ್ರಮದ ನಡುವೆ ಸುದೀಪ್ ಪುತ್ರಿ ಸಾನ್ವಿ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಂಡು ಮದುವೆ ಸೀಸನ್ ಶುರು, ಆದರೆ ನನ್ನ ಮದುವೆ…. ಎಂದು ಬರೆದು ಪೋಸ್ಟ್ ಹಾಕಿದ್ದಾರೆ.

ಸಾನ್ವಿ ಸುದೀಪ್
ಕಿಚ್ಚ ಸುದೀಪ್ ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದ್ದು, ಸುದೀಪ್ ಸೇರಿ ಮನೆಯವರೆಲ್ಲರೂ ಸಂಭ್ರಮದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಇದೀಗ ಸಾನ್ವಿ ಸುದೀಪ್ ಶೇರ್ ಮಾಡಿರುವ ಫೋಟೊ ವೈರಲ್ ಆಗಿದೆ.
ಸುದೀಪ್ ಅಕ್ಕನ ಮಗನ ಮದುವೆ
ಕಿಚ್ಚ ಸುದೀಪ್ ಅಕ್ಕನ ಮಗನ ಮದುವೆ ಶಾಸ್ತ್ರಗಳು ಜೋರಾಗಿಯೇ ನಡೆಯುತ್ತಿದೆ. ನಿನ್ನೆ ಅರಶಿನ ಶಾಸ್ತ್ರದ ಫೋಟೊಗಳನ್ನು ಸಾನ್ವಿ ಹಂಚಿಕೊಂಡಿದ್ದರು. ಅರಿಶಿನ ಶಾಸ್ತ್ರದಲ್ಲಿ ನವಜೋಡಿ ಜೊತೆ ತಮ್ಮ ಪ್ರೀತಿಯ ಮಗಳಿಗೂ ಸುದೀಪ್ ಮತ್ತು ಪ್ರಿಯಾ ಸುದೀಪ್ ಅರಿಶಿಣ ಹಚ್ಚಿದ್ದು, ಆ ಫೋಟೊ ಕೂಡ ಸೊಶಿಯಲ್ ಮೀಡೀಯಾದಲ್ಲಿ ವೈರಲ್ ಆಗಿತ್ತು.
ಮತ್ತಷ್ಟು ಫೋಟೊ ಹಂಚಿಕೊಂಡ ಸಾನ್ವಿ
ಇದೀಗ ಸಾನ್ವಿ ಸುದೀಪ್ ತಮ್ಮ ಇನ್’ಸ್ಟಾಗ್ರಾಂನಲ್ಲಿ ಮದುವೆ ಸಂಭ್ರಮದ ಮತ್ತಷ್ಟು ಫೋಟೊಗಳನ್ನು ಶೇರ್ ಮಾಡಿದ್ದು, ತಮ್ಮ ಮುದ್ದಾದ ಫೋಟೊಗಳ ಜೊತೆಗೆ ಸಾನ್ವಿ ಹಂಚಿಕೊಂಡ ಕ್ಯಾಪ್ಶನ್ ತಮಾಷೆಯಾಗಿದ್ದು, ಅದು ಕೂಡ ವೈರಲ್ ಆಗುತ್ತಿದೆ.
ಏನಂತಿದ್ದಾರೆ ಸಾನ್ವಿ
ಮೆಟಾಲಿಕ್ ಬಣ್ಣದ ಸುಂದರವಾದ ಡ್ರೆಸ್ ಧರಿಸಿರುವ ಸಾನ್ವಿ ತಮ್ಮ ಫೋಟೊಗಳ ಜೊತೆಗೆ Wedding season but NOT MINE !! ಅಂದರೆ ಮದುವೆ ಸೀಸನ್ ಶುರುವಾಗಿದೆ, ಆದರೆ ನನ್ನ ಮದುವೆ ಅಲ್ಲ ಎಂದು ಬರೆದುಕೊಂಡಿದ್ದಾರೆ.
ಸ್ಪಷ್ಟನೆ ಕೊಡ್ತಿರೋದಾ ಸಾನ್ವಿ?
ನಿನ್ನೆಯಿಂದ ಸಾನ್ವಿ ಕೆನ್ನೆ ಮೇಲೆ ಸುದೀಪ್ ಹಾಗೂ ಪ್ರಿಯಾ ಅರಶಿನ ಹಚ್ಚುತ್ತಿರುವ ಫೊಟೊ ವೈರಲ್ ಆಗುತ್ತಿದೆ. ಹಾಗಾಗಿ ಹೆಚ್ಚಿನ ಜನರು ಸಾನ್ವಿ ಮದುವೆ ಎಂದು ಅಂದುಕೊಂಡಿದ್ದಾರೆ. ಹಾಗಾಗಿ ಸಾನ್ವಿ ಇದೀಗ ನನ್ನ ಮದುವೆ ಅಲ್ಲ ಎಂದು ಹೇಳುವ ಮೂಲಕ ಅದಕ್ಕೆ ಸ್ಪಷ್ಟನೆ ಕೊಟ್ಟಂತಿದೆ.
ಪ್ರೀತಿ ಬಗ್ಗೆ ಏನು ಹೇಳಿದ್ರು ಸಾನ್ವಿ?
ಇತ್ತೀಚೆಗಷ್ಟೆ ಸಾನ್ವಿ ಸುದೀಪ್ ಮದುವೆ ಬಗ್ಗೆ ಮುಕ್ತವಾಗಿ ಮಾತನಾಡಿ ಜೆನ್‌ಜಿಗಳಲ್ಲಿ ಬೇರೆ ಬೇರೆ ರೀತಿಯ ರಿಲೇಶನ್‌ಶಿಪ್‌ಗಳಿವೆ. ಆದ್ರೆ ನನಗೆ ಇವುಗಳಲ್ಲಿ ನಂಬಿಕೆ ಇಲ್ಲ. ಸಂಬಂಧಗಳಲ್ಲಿ ಸೆಲ್ಫ್ ರೆಸ್ಪೆಕ್ಟ್ ಬೇಕಾಗುತ್ತದೆ. ನಾನು ಸೀರಿಯಸ್ ರಿಲೇಶನ್‌ಶಿಪ್‌ನಲ್ಲಿ ನಂಬಿಕೆ ಇಟ್ಟಿದ್ದೇನೆ ಎಂದು ಸಾನ್ವಿ ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

