ಎಸ್ ಎಸ್ ರಾಜಮೌಳಿ ತನ್ನ ನಿರ್ದೇಶನದ ‘ವಾರಣಾಸಿ’ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಶತಪ್ರಯತ್ನ ಮಾಡುತ್ತಿದ್ದಾರೆ.
cine-world Dec 05 2025
Author: Govindaraj S Image Credits:Social media
Kannada
ಜೇಮ್ಸ್ ಕ್ಯಾಮರಾನ್ ಜೊತೆ ಒಪ್ಪಂದ
ಅದರ ಭಾಗವಾಗಿ ತನ್ನ ಸ್ನೇಹಿತರೂ ಆಗಿರುವ ಖ್ಯಾತ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರಾನ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ.
Image credits: Twitter
Kannada
ಟೀಸರ್ ಅಟ್ಯಾಚ್
ಆ ಪ್ರಕಾರ ಡಿಸೆಂಬರ್ 19ರಂದು ರಿಲೀಸ್ ಆಗಲಿರುವ ಕ್ಯಾಮರಾನ್ ನಿರ್ದೇಶನದ ‘ಅವತಾರ್ 3: ಫೈರ್ ಆ್ಯಂಡ್ ಆ್ಯಶ್’ ಸಿನಿಮಾಕ್ಕೆ ‘ವಾರಣಾಸಿ’ ಸಿನಿಮಾದ ಟೀಸರ್ ಅಟ್ಯಾಚ್ ಮಾಡಲಾಗಿದೆ.
Image credits: youtube/varanasi movie
Kannada
ಚಿತ್ರದ ತುಣುಕು ಪ್ರದರ್ಶನ
ಸಿನಿಮಾ ಬ್ರೇಕ್ ವೇಳೆ ಟೀಸರ್ ಪ್ರದರ್ಶನಗೊಳ್ಳಲಿದೆ ಎನ್ನಲಾಗಿದೆ. ಅಮೆರಿಕಾ, ಐರೋಪ್ಯ ರಾಷ್ಟ್ರಗಳು ಸೇರಿದಂತೆ ವಿಶ್ವದ ವಿವಿಧೆಡೆ ‘ಅವತಾರ್ 3’ ಜೊತೆ ‘ವಾರಣಾಸಿ’ ಚಿತ್ರದ ತುಣುಕು ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ.
Image credits: Asianet News
Kannada
ವೃತ್ತಿಜೀವನದ ಅತಿದೊಡ್ಡ ಸಿನಿಮಾ
ಈ ಬಗ್ಗೆ ಅಧಿಕೃತ ಸುದ್ದಿ ಇನ್ನಷ್ಟೇ ಹೊರಬೀಳಬೇಕಿದೆ. ಇದು ನನ್ನ ಮತ್ತು ಮಹೇಶ್ ಬಾಬು ವೃತ್ತಿಜೀವನದ ಅತಿದೊಡ್ಡ ಸಿನಿಮಾ ಆಗಲಿದೆ. ನನಗೆ ರಾಮಾಯಣ, ಮಹಾಭಾರತ ಇಷ್ಟ.
Image credits: youtube/varanasi movie
Kannada
ನನಗೇ ಖುಷಿ ಕೊಟ್ಟಿದೆ
ಇದರಲ್ಲಿ ರಾಮಾಯಣ ಅಂಶ ನಾನು ನಿರೀಕ್ಷಿಸದೇ ಬಂದಿದ್ದು ನನಗೇ ಖುಷಿ ಕೊಟ್ಟಿದೆ. ಮಹೇಶ್ ತಂದೆ ಕೃಷ್ಣಂರಾಜು ಚಿತ್ರರಂಗಕ್ಕೆ ಅನೇಕ ಹೊಸತುಗಳನ್ನು ಕೊಟ್ಟವರು.
Image credits: facebook.com/SSRajamouli
Kannada
ಲಾರ್ಜ್ ಸ್ಕೇಲ್ ಫಾರ್ಮ್ಯಾಟ್ ತಂತ್ರಜ್ಞಾನ
ಈ ಸಿನಿಮಾ ಮೂಲಕ ಪ್ರೀಮಿಯಂ ಲಾರ್ಜ್ ಸ್ಕೇಲ್ ಫಾರ್ಮ್ಯಾಟ್ ತಂತ್ರಜ್ಞಾನವನ್ನು ಪರಿಚಯಿಸುತ್ತಿದ್ದೇವೆ ಎಂದು ರಾಜಮೌಳಿ ತಿಳಿಸಿದ್ದಾರೆ.