ಕಾದಲನ್ ಸಿನಿಮಾದ ಮುಕ್ಕಾಲ ಹಾಡಿಗೆ ಮಧ್ಯವಯಸ್ಕ ದಂಪತಿಯೊಂದು ಬಿಂದಾಸ್ ಆಗಿ ಡಾನ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ಶಕೀರಾ ಹಾಡಿಗೆ ರಾಜಸ್ಥಾನಿ ಮಹಿಳೆಯ ನೃತ್ಯವೂ ವೈರಲ್ ಆಗಿದೆ.
ಪ್ರಭುದೇವ್ ಹಾಗೂ ನಗ್ಮಾ ನಟನೆಯ 1994ರ ತಮಿಳು ಸಿನಿಮಾ ಕಾದಲನ್‌ನ ಮುಕ್ಕಾಲ ಮುಕ್ಕಾಬುಲಾ ಹಾಡು ಎಂದಿಗೂ ಎವರ್‌ಗ್ರೀನ್. ಈ ಸಿನಿಮಾ ಬಂದು ಮೂರು ದಶಕಗಳೇ ಕಳೆದರೂ ಈ ಹಾಡಿನ ಕ್ರೇಜ್ ಮಾತ್ರ ಎಂದಿಗೂ ಕಡಿಮೆಯಾಗಿಲ್ಲ, ಈ ಹಾಡಿಗೆ ವಯಸ್ಸಿನ ಭೇದವಿಲ್ಲದೇ ಹಿರಿಯರಿಂದ ಕಿರಿಯವರವರೆಗೆ ಎಲ್ಲರೂ ಹೆಜ್ಜೆ ಹಾಕುವ ಜೊತೆಗೆ ದನಿಗೂಡಿಸುತ್ತಾರೆ. ಇದರ ಜೊತೆಗೆ ಮನೋರಂಜನಾ ಟಿವಿ ಚಾನೆಲ್‌ಗಳ ಯಾವುದೇ ನೃತ್ಯ ಅಥವಾ ಹಾಡಿಗೆ ಸಂಬಂಧಿಸಿದ ರಿಯಾಲಿಟಿ ಶೋಗಳಿರಲಿ ಇದೊಂದು ಹಾಡು ಇದ್ದೇ ಇರುತ್ತದೆ. ಟಿವಿ ಚಾನೆಲ್‌ಗಳು ಮಾತ್ರವಲ್ಲದೇ ದಕ್ಷಿಣ ಭಾರತದ ಬಹುತೇಕ ಡಿಜೆಗಳಲ್ಲಿ ಈ ಹಾಡು ಬಹಳ ಫೇಮಸ್ ಇಂತಹ ಪ್ರಸಿದ್ಧ ಹಾಡಿಗೆ ಈಗ ಮಧ್ಯವಯಸ್ಕ ಜೋಡಿಯೊಂದು ತಮ್ಮ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.
ಮುಕ್ಕಾಲ ಹಾಡಿಗೆ ದಂಪತಿಯ ಬಿಂದಾಸ್ ಡಾನ್ಸ್:
ಸಂಪ್ರದಾಯಿಕ ಧಿರಿಸಾದ ಲುಂಗಿ ಶರ್ಟ್ ಹಾಗೂ ಸೀರೆ ಧರಿಸಿರುವ ದಂಪತಿ ಈ ಮುಕ್ಕಾಲ ಮುಕ್ಕಾಬುಲಾ ಹಾಡಿಗೆ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ಡಿಜೆ ಲೋಕಿತ್ ಕುಮಾರ್ ಎಂಬುವವರು ಈ ವೀಡಿಯೋವನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದು, 10 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿ ದಂಪತಿಯ ಈ ಡಾನ್ಸ್ ಸ್ಕಿಲ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಕ್ಕಾಲ ಮುಕ್ಕಾಬುಲ ಹಾಡು ಪ್ಲೇ ಆಗುತ್ತಿದ್ದಂತೆ ದಂಪತಿ ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ಬಿಂದಾಸ್ ಆಗಿ ನರ್ತಿಸಿದ್ದಾರೆ. ಇದನ್ನು ಇತರರು ರೆಕಾರ್ಡ್ ಮಾಡಿದ್ದು, ಅವರ ಪಾಲಿಗೆ ಇದು ಮರೆಯಲಾಗದ ನೆನಪಾಗಿ ಉಳಿದಿದೆ. ವೀಡಿಯೋ ನೋಡಿದ ಅನೇಕರು ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ.
ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕಾಣ ಸಿಗುವ ಪ್ರತಿಭೆಗಳಿಗೆ ಇಂದು ಏನೂ ಕಡಿಮೆ ಇಲ್ಲ. ಕೆಲವು ಮಹಿಳೆಯರು ಈ ಸೋಶಿಯಲ್ ಮೀಡಿಯಾದ ಮೂಲಕ ತಮ್ಮ ಯೌವ್ವನದ ದಿನಗಳಲ್ಲಿ ಈಡೇರದ ಆಸೆಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬರು ಮಹಿಳೆಯ ಡಾನ್ಸ್ ಮೂವ್ ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಸೃಷ್ಟಿಸಿದೆ. ಸೀರೆಯುಟ್ಟ ಮಹಿಳೆಯೊಬ್ಬರು ಪಾಪ್ ಗಾಯಕಿ ಶಾಕಿರಾ ಅವರ ಹಾಡಿಗೆ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ಯಾವ ನರ್ತಕರಿಗೂ ಕಡಿಮೆ ಇಲ್ಲದಂತೆ ಅವರು ಸ್ಟೆಪ್‌ಗಳನ್ನು ಹಾಕುತ್ತಿದ್ದು ಅವರ ವೀಡಿಯೋ ಈಗ ಭಾರಿ ವೈರಲ್ ಆಗ್ತಿದೆ.
ಶಕೀರಾ ಹಾಡಿಗೆ ಸೊಂಟ ಬಳುಕಿಸಿದ ಭಾರತೀಯ ನಾರಿ:
ಶಕೀರಾ ಅವರ 'ಹಿಪ್ಸ್ ಡೋಂಟ್ ಲೈ' ಹಾಡಿಗೆ ಗುಂಘಟ್(ತಲೆಯ ಮೇಲೆ ಧರಿಸುವ ಸಾಲು ಅಥವಾ ತಲೆಯ ಮೇಲೆ ಧರಿಸುವ ಸೀರೆಯ ಸೆರಗು) ಧರಿಸಿದ ರಾಜಸ್ಥಾನಿ ಮಹಿಳೆಯೊಬ್ಬರು ನೃತ್ಯ ಮಾಡುತ್ತಿದ್ದು, ಪ್ರಿಯಾಂಕಾ ಚೋಪ್ರಾ ಅವರು ಈ ಮಹಿಳೆಯ ನೃತ್ಯವನ್ನು ಮೆಚ್ಚಿಕೊಂಡಿದ್ದಾರೆ. ಅಂದಹಾಗೆ ಶಕೀರಾ ಅವರ ಹಾಡಿಗೆ ಡಾನ್ಸ್ ಮಾಡಿದ ಮಹಿಳೆಯ ಹೆಸರು ಕಾಂಚನಾ ಅಗ್ರವತ್, ಜೋಧ್‌ಪುರ ಮೂಲದ ಕಾಂಚನ್ ಅಗ್ರವತ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ಡಾನ್ಸ್ ವೀಡಿಯೋವನ್ನು 3.8 ಮಿಲಿಯನ್‌ಗಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಶಕೀರಾ ಅವರ ಸಿಗ್ನೇಚರ್ ಸ್ಟೆಪ್‌ಗಳನ್ನು ಈ ಮಹಿಳೆ ಬಹಳ ಸುಲಭವಾಗಿ ಮಾಡಿದ್ದಾರೆ. ಯಾವುದೇ ಆಧುನಿಕ ಧಿರಿಸು ಧಿರಿಸದೇ ಎಲ್ಲೂ ದೇಹವನ್ನು ಅರೆಬರೆ ತೋರಿಸದೇ ಮೈ ತುಂಬಾ ಸೀರೆಯುಟ್ಟು ಗೌರವಯುತವಾಗಿ ಅವರು ತಮ್ಮ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಿದ್ದು ಇದೇ ಕಾರಣಕ್ಕೆ ಅವರ ವೀಡಿಯೋ ಈಗ ಭಾರಿ ವೈರಲ್ ಆಗ್ತಿದೆ. ಜನ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ. ಇವರ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಇಂತಹ ಸಾಕಷ್ಟು ವೀಡಿಯೋಗಳಿದ್ದು ಪ್ರತಿಯೊಂದರಲ್ಲೂ ಕಾಂಚನಾ ಅವರು ತಮ್ಮ ಅಮೋಘ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಇದನ್ನೂ ಓದಿ: ನಡುರಸ್ತೆಯಲ್ಲಿ ಸ್ಟಂಟ್ ಮಾಡಿದ ಸ್ಪೈಡರ್ ಮ್ಯಾನ್‌ಗೆ ಬಾರಿ ದಂಡ
ಇದನ್ನೂ ಓದಿ: ಗಣೇಶನ ತೋಳಲ್ಲಿ ಸುಖ ನಿದ್ದೆಗೆ ಜಾರಿದ ಬೆಕ್ಕು: ಮಾಲೀಕನ ಮುದ್ದಾಡಲು ಮಗುವಿನೊಂದಿಗೆ ಶ್ವಾನದ ಸ್ಪರ್ಧೆ
