ಕಿಚ್ಚ ಸುದೀಪ್‌ಗೆ ಹುಟ್ಟು ಹಬ್ಬದ ಸಂಭ್ರಮ. ಹುಟ್ಟುಹಬ್ಬ ದಿನವೇ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ಶ್ರೀಕೃಷ್ಣ ದೇವರಾಯ ಆಧಾರಿತ ದೇವರಾಯ ಸಿನಿಮಾದ ಟೀಸರ್ ಲಾಂಚ್ ಮಾಡಿದ್ದಾರೆ. ಬಾಹುಬಲಿ ಸೇರಿದಂತೆ ಹಲವು ಐಕಾನಿಕ್ ಸಿನಿಮಾಗಳನ್ನು ಮೀರಿಸುವಂತ ಟೀಸರ್ ಭಾರಿ ಸಂಚಲನ ಸೃಷ್ಟಿಸಿದೆ.
ಬೆಂಗಳೂರು (ಸೆ.02) ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ಹುಟ್ಟು ಹಬ್ಬದ ಸಂಭ್ರಮ. ಬರ್ತ್‌ಡೇ ದಿನವೇ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಬಿಗ್ ನ್ಯೂಸ್ ನೀಡಿದ್ದಾರೆ. ಭಾರತೀಯ ಸಿನಿಮಾ ರಂಗದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಮಾತ್ರವಲ್ಲ ಹಲವು ಸಿನಿಮಾಗಳ ದಾಖಲೆ ಧೂಳೀಪಟ ಮಾಡುವ ದೇವರಾಯ ಸಿನಿಮಾ ಟೀಸರ್ ಲಾಂಚ್ ಆಗಿದೆ. ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಚಕ್ರವರ್ತಿ ಕೃಷ್ಣದೇವರಾಯ ಆಧಾರಿತ ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ. ಟೀಸರ್ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
ಪೀಪಲ್ ಮೀಡಿಯಾ ಫ್ಯಾಕ್ಟರಿ ಮತ್ತು ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ಕೃಷ್ಣದೇವರಾಯ ಪಾತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ವಿಜಯನಗರ ಸಾಮ್ರಾಜ್ಯ ಸಣ್ಣ ಝಲಕ್, ವೈಭವೋಪೇತ ಸಾಮ್ರಾಜ್ಯ, ಯುದ್ಧ ಸೇರಿದಂತೆ ಹಲವು ಸೂಕ್ಷ್ಮತೆಗಳು ಈ ಟೀಸರ್‌ನಲ್ಲಿ ತೋರಿಸಲಾಗಿದೆ. ದೇಶದಲ್ಲೇ ಸಾಂಸ್ಕೃತಿಕ, ರಾಜಕೀಯ, ಜ್ಞಾನ, ಸಾಹಿತ್ಯಗಳ ಉತ್ತುಂಗದಲ್ಲಿದ್ದ ವಿಜಯನಗರ ಸಾಮ್ರಾಜ್ಯದ ಈ ಸಿನಿಮಾ ದೇಶದ ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆ ಬರೆಯುವ ಸಾಧ್ಯತೆ ಇದೆ.
ರಾಜನಂತೆ ಕಂಗೊಳಿಸಿದ ಸುದೀಪ್
ಟೀಸರ್ ಜೊತೆ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಕೂಡ ಬಿಡುಗಡೆಯಾಗಿದೆ. ಪೋಸ್ಟರ್‌ನಲ್ಲಿ ಸುದೀಪ್ ರಾಜಮನೆತನದ ಉಡುಪು, ಆಭರಣಗಳು ಮತ್ತು ರಾಜಮುದ್ರೆಯೊಂದಿಗೆ ರಾಜನಂತೆ ಕಾಣಿಸಿಕೊಂಡಿದ್ದಾರೆ. ಸಿನಿ ತಂಡ ದೇವರಾಯ ಸಿನಿಮಾವನ್ನು 2027ರಲ್ಲಿ ರಿಲೀಸ್ ಮಾಡಲು ಮುಂದಾಗಿದೆ. ಪ್ಯಾನ್ ಇಂಜಿಯಾ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಅಭಿಮಾನಿಗಳಿಗೆ ಡಬಲ್ ಧಮಾಕಾ
ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದಂದು ಎರಡು ದೊಡ್ಡ ಚಿತ್ರಗಳ ಪ್ರಮೋಷನ್ ಆರಂಭವಾಗಿರುವುದು ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. ಒಂದೆಡೆ ಐತಿಹಾಸಿಕ ಚಿತ್ರ 'ದೇವರಾಯ'ದ ಟೀಸರ್, ಮತ್ತೊಂದೆಡೆ ಭವಿಷ್ಯದ ವಿಜ್ಞಾನ ಕಥೆಯ 'ಬಿಲ್ಲ ರಂಗ ಭಾಷಾ'ದ ಪ್ರಮೋಷನ್ ಕ್ಯಾಲೆಂಡರ್ ಬಿಡುಗಡೆಯಾಗಿದೆ.
ಬಿಲ್ಲ ರಂಗ ಭಾಷಾ ಚಿತ್ರವು 2209 A.D. ಕಾಲಘಟ್ಟದ ಫ್ಯೂಚರಿಸ್ಟಿಕ್ ಡಿಸ್ಟೋಪಿಯನ್ ಪ್ರಪಂಚದ ಹಿನ್ನೆಲೆಯಲ್ಲಿ ಸಾಗುವ ಭಾರೀ ಸೈನ್ಸ್ ಫಿಕ್ಷನ್ ಆಕ್ಷನ್-ಅಡ್ವೆಂಚರ್ ಚಿತ್ರವಾಗಿದೆ. ಈ ಚಿತ್ರವು ಹಿಮಾಲಯಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಪ್ರಸ್ತುತ ಭಾರೀ ಸೆಟ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ


