'ಅಮೃತಧಾರೆ' ಸೀರಿಯಲ್‌ನಲ್ಲಿ ಜೈದೇವನಿಂದ ಸತ್ಯ ಹೊರತರಲು ಪೊಲೀಸ್ ಅಧಿಕಾರಿ ಮಧುರಾ ಮಾಡಿದ ಪ್ಲ್ಯಾನ್‌ ವಿಫಲವಾಗಿದೆ. ತನ್ನ ಫೋನ್‌ಗೆ ಪಾಸ್‌ವರ್ಡ್ ಹಾಕದೇ ಮರೆತಿದ್ದರಿಂದ, ಜೈದೇವ ಸುಲಭವಾಗಿ ಫೋನ್ ಪರಿಶೀಲಿಸಿ ಇಡೀ ಯೋಜನೆಯನ್ನು ಬಯಲು ಮಾಡಿದ್ದಾನೆ. ಈ ದೃಶ್ಯ ಇದೀಗ ನೆಟ್ಟಿಗರಿಂದ ಟ್ರೋಲ್‌ ಆಗುತ್ತಿದೆ.

ಸೀರಿಯಲ್‌ಗಳು ಎಂದರೇನೇ ಅದೊಂದು ಕಲ್ಪನೆ. ಅಲ್ಲಿ ಏನು ಬೇಕಾದ್ರೂ ಆಗತ್ತೆ, ಏನು ಬೇಕಾದ್ರೂ ನಡೆಯತ್ತೆ ಎನ್ನೋದು ನಿಜನೇ. ಕೆಲವೊಮ್ಮೆ ತೀರಾ ಬಾಲಿಶವಾದಂಥ ದೃಶ್ಯಗಳು ಕಾಣಿಸಿಕೊಂಡರೆ, ಕೆಲವೊಮ್ಮೆ ನಿಜ ಜೀವನದಲ್ಲಿ ಸಾಧ್ಯವೇ ಇಲ್ಲದ ಸೀನ್‌ಗಳು ಕಾಣಿಸುತ್ತವೆ. ಒಟ್ಟಿನಲ್ಲಿ ಮನರಂಜನೆಯನ್ನು ಮನರಂಜನೆಯಾಗಿ ನೋಡುವುದಕ್ಕೆ ಸೀರಿಯಲ್‌ ಇಷ್ಟು ಪಾಪ್ಯುಲರ್‌ ಆಗ್ತಿವೆ.

ಆದರೆ, ಕೆಲವೊಮ್ಮೆ ಕೆಲವು ದೃಶ್ಯಗಳು ಟ್ರೋಲ್‌ ಆಗುವುದು ಇವೆ. ಅವುಗಳಲ್ಲಿ ಒಂದು ಅಮೃತಧಾರೆ ಸೀರಿಯಲ್‌ (Amruthadhaare Serial)ನ ದೃಶ್ಯ. ಇದರಲ್ಲಿ ಪೊಲೀಸ್‌ ಸಿಬ್ಬಂದಿ ಮಧುರಾ, ಜೈದೇವನ ಬಾಯಿಯಿಂದ ಕೊಲೆಯಾಗಿರುವ ದಿಯಾ ಮತ್ತು ಕಾಣೆಯಾಗಿರುವ ಅನು ಬಗ್ಗೆ ತಿಳಿದುಕೊಳ್ಳಲು ಬಂದಿದ್ದಾಳೆ. ಮಲ್ಲಿ ಮತ್ತು ಭೂಮಿಕಾ ಸೇರಿ ಈಪ್ಲ್ಯಾನ್‌ ಮಾಡಿದ್ದಾರೆ. ಇನ್ನೇನು ಪ್ಲ್ಯಾನ್‌ ಸಕ್ಸಸ್‌ ಆಗಬೇಕು ಎನ್ನುವಷ್ಟರಲ್ಲಿಯೇ ಎಡವಟ್ಟು ಆಗಿದೆ. ಅದೇನೆಂದರೆ, ಮಲ್ಲಿ ಮಧುರಾಗೆ ಕಾಲ್‌ ಮಾಡಿದ್ದಾಳೆ. ಆಗ ಮಧುರಾ ಫೋನ್‌ ಅಲ್ಲಿಯೇ ಬಿಟ್ಟು ಹೋಗಿದ್ದಾಳೆ. ಆಗ ಜೈದೇವ ಅದನ್ನು ತೆಗೆದುಕೊಂಡಿದ್ದಾನೆ.

ಟ್ರೂಕಾಲ್​ನಲ್ಲಿ ರಿವೀಲ್​

ಅಲ್ಲಿ ಬಂದಿರೋ ನಂಬರ್‌ ನೋಡಿ ಅವನಿಗೆ ಡೌಟ್‌ ಬಂದು, ಟ್ರೂಕಾಲರ್‌ನಲ್ಲಿ ನೋಡಿದಾಗ, ಅದು ಮಲ್ಲಿಯದ್ದು ಎಂದು ತಿಳಿದಿದೆ. ಕೊನೆಗೆ, ಅವಳು ಮಾಡಿರುವ ಫೋನ್‌ಗಳು ಜೀವಾ, ಭೂಮಿಕಾಗೆ ಎಂದು ತಿಳಿದದ್ದು, ಅವಳ ಕಾಲ್‌ ರಿಕಾರ್ಡ್‌‌ನಲ್ಲಿ, ತನ್ನ ಮಾತುಗಳನ್ನು ರಿಕಾರ್ಡ್ ಮಾಡಿಕೊಂಡಿರುವುದು ಎಲ್ಲವೂ ತಿಳಿದಿದೆ. ಅದೆಲ್ಲವೂ ಓಕೆ. ಆದರೆ ಇದೀಗ ಸಕತ್‌ ಟ್ರೋಲ್‌ ಆಗ್ತಿರೋದು ಏನೆಂದರೆ, ಮೊಬೈಲ್‌ ಎಕ್ಸೀಸ್‌ ಮಾಡಿದ್ದು ಹೇಗೆ ಜೈದೇವ ಎನ್ನುವ ವಿಷ್ಯ.

ಪಾಸ್​ವರ್ಡೇ ಇಲ್ಲ!

ಜೈದೇವನಿಂದ ಸತ್ಯ ಹೊರತರಲು ಹೋಗಿರುವ ಮಧುರಾ, ಮೈಯೆಲ್ಲಾ ಕಣ್ಣಾಗಿರಬೇಕು. ಮೊಬೈಲ್‌ಗಳನ್ನು ಹೇಗೆಂದು ಹಾಗೆ ಇಟ್ಟುಹೋಗುವಂತಿಲ್ಲ ಎನ್ನುವುದು ನಿಜವಾದರೂ, ಅವರು ತನ್ನ ಮೊಬೈಲ್‌ಗೆ ಪಾಸ್‌ವರ್ಡ್ ಹಾಕಿ ಲಾಕ್‌ ಮಾಡಿರಲಿಲ್ಲವೇ ಎಂದು ಟ್ರೋಲ್‌ ಆಗುತ್ತಿದೆ. ಜೈದೇವ ಫೋನ್‌ ಎಲ್ಲಾ ನೋಡಲು ಹೇಗೆ ಸಾಧ್ಯವಾಯಿತು, ಸತ್ಯ ಹೊರತರಲು ಹೋದ ಒಬ್ಬ ಪೊಲೀಸ್‌ ಫೋನ್‌ ಲಾಕ್‌ ಆಗಿರಲ್ವಾ? ಇದನ್ನು ನೋಡಿ ಏನನ್ನಬೇಕು, ಕಥೆ ಬರೆದವರ ತಲೆಗೆ ಹ್ಯಾಟ್ಸ್‌ಆಫ್‌ ಹೇಳಬೇಕಾ, ನಿರ್ದೇಶಕರ ತಲೆಗೋ ಅಥವಾ ಪೊಲೀಸ್‌ ಆಗಿರೋ ಮಧುರಾ ತಲೆಗಾ ಎಂದು ಪ್ರಶ್ನಿಸುತ್ತಿದ್ದಾರೆ ನೆಟ್ಟಿಗರು.