Ramayana Trailer: ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ಚಿತ್ರ 'ರಾಮಾಯಣ'ದ ಟ್ರೇಲರ್ ಬಿಡುಗಡೆಯಾದ ತಕ್ಷಣ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅವರನ್ನು ಸಾಕಷ್ಟು ಹೊಗಳಲಾಗುತ್ತಿದ್ದರೂ, ಒಂದು ಪಾತ್ರವನ್ನು ಅಭಿಮಾನಿಗಳು ಮಿಸ್ ಮಾಡುತ್ತಿದ್ದಾರೆ.
‘ರಾಮಾಯಣ’ ಟ್ರೈಲರ್ ನಲ್ಲಿ ಮುಖ್ಯ ಪಾತ್ರಧಾರಿಯೇ ಮಿಸ್ಸಿಂಗ್
ನಿತೇಶ್ ತಿವಾರಿ ಅವರ ಮೆಗಾ-ಬಜೆಟ್ ಸಿನಿಮಾ "ರಾಮಾಯಣ". ಸಿನಿಮಾ ಘೋಷಣೆಯಾದಾಗಿನಿಂದ, ಪ್ರೇಕ್ಷಕರು ಅದರ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ದೀಪಾವಳಿಯ ಆಸುಪಾಸಿನಲ್ಲಿ ಇದು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಟ್ರೇಲರ್ ಈಗ ಬಿಡುಗಡೆಯಾಗಿದ್ದು, 4 ನಿಮಿಷ, 9 ಸೆಕೆಂಡುಗಳ ಟ್ರೇಲರ್ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದ್ದು, ಟ್ರೈಲರ್ ನೋಡಿ ಅಭಿಮಾನಿಗಳು, ಸಿನಿರಸಿಕರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಟ್ರೇಲರ್ ಪ್ರೇಕ್ಷಕರ ನಿರೀಕ್ಷೆಗಳನ್ನು ಪೂರೈಸಿದೆ ಎಂದು ವರದಿಯಾಗಿದೆ. ಟ್ರೇಲರ್ ನೋಡಿದ ಅಭಿಮಾನಿಗಳ ಉತ್ಸಾಹ ಹೆಚ್ಚಾಗಿದೆ. ಆದರೆ ಟ್ರೈಲರ್ ನಲ್ಲಿ ಮುಖ್ಯ ಪಾತ್ರವೇ ಮಿಸ್ಸಿಂಗ್ ಎನ್ನುತ್ತಿದ್ದಾರೆ ಜನ.
ಟ್ರೇಲರ್‌ನಲ್ಲಿ, ರಣಬೀರ್ ಕಪೂರ್ ಭಗವಾನ್ ಶ್ರೀರಾಮನಾಗಿ ಡಿವೈನ್ ಮತ್ತು ಶಕ್ತಿಶಾಲಿಯಾಗಿ ಕಾಣಿಸಿಕೊಂಡರೆ, ಸಾಯಿ ಪಲ್ಲವಿ ತಾಯಿ ಸೀತೆಯ ಪಾತ್ರದಲ್ಲಿ ಸುಂದರವಾಗಿ ಮತ್ತು ಪರ್ಫೆಕ್ಟ್ ಆಗಿ ಕಾಣುತ್ತಾರೆ, ಆ ಪಾತ್ರ ಅವರಿಗೆ ಹೇಳಿ ಮಾಡಿಸಿದಂತಿದೆ. ಯಶ್ ಬಗ್ಗೆ ಹೇಳುವುದಾದರೆ, ಟ್ರೇಲರ್‌ನಲ್ಲಿ ಅವರು ರಾವಣನ ಪಾತ್ರದಲ್ಲಿ ಸಂಪೂರ್ಣವಾಗಿ ಟ್ರೈಲರ್’ನಲ್ಲಿ ಆವರಿಸಿಕೊಂಡಿದ್ದಾರೆ. ಅಭಿಮಾನಿಗಳು ಇದನ್ನು ಇಷ್ಟಪಟ್ಟಿದ್ದಾರೆ. ಟ್ರೇಲರ್‌ನ ಭವ್ಯ ದೃಶ್ಯಗಳು, ಬೃಹತ್ ಸೆಟ್‌ಗಳು ಮತ್ತು ಮಹಾಕಾವ್ಯದ ಭಾವನೆಯನ್ನು ಎಲ್ಲರೂ ಹೊಗಳುತ್ತಿದ್ದಾರೆ. ಆದರೂ, ವೀಕ್ಷಕರನ್ನು ಕಾಡುತ್ತಿರುವ ಒಂದು ವಿಷಯವೆಂದರೆ ಹನುಮಾನ್, ಅಂದ್ರೆ ಸನ್ನಿ ಡಿಯೋಲ್ ಎಲ್ಲಿಯೂ ಕಾಣಿಸದಿರುವುದು. ಟ್ರೇಲರ್ ಬಿಡುಗಡೆಯಾದ ತಕ್ಷಣ, ಸಾಮಾಜಿಕ ಮಾಧ್ಯಮದಲ್ಲಿ "ಹನುಮಾನ್ ಎಲ್ಲಿ?" ಎನ್ನುವ ಪ್ರಶ್ನೆ ಚರ್ಚೆಯಲ್ಲಿದೆ.
‘ಹನುಮಾನ್ ಎಲ್ಲಿ?’ ಕೇಳುತ್ತಿದ್ದಾರೆ ಸಿನಿ ರಸಿಕರು
4 ನಿಮಿಷ 9 ಸೆಕೆಂಡುಗಳ ಈ ಟ್ರೇಲರ್‌ನಲ್ಲಿ ರಾಮ ಮತ್ತು ಸೀತೆಯ ಮದುವೆ, ವನವಾಸ, ಶೂರ್ಪನಖಿಯ ಘಟನೆ, ಸೀತೆಯ ಅಪಹರಣ ಮತ್ತು ರಾವಣನೊಂದಿಗಿನ ಯುದ್ಧದ ಬಹುತೇಕ ಎಲ್ಲಾ ಅಂಶಗಳು ಒಳಗೊಂಡಿವೆ. ಆದರೆ, ಚಿತ್ರದಲ್ಲಿ ಹನುಮಂತನ ಪಾತ್ರದಲ್ಲಿರುವ ಸನ್ನಿ ಡಿಯೋಲ್ ಟ್ರೇಲರ್‌ನಲ್ಲಿ ಕಾಣೆಯಾಗಿದ್ದು, ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಟ್ರೇಲರ್‌ನಲ್ಲಿ ಅಂತಹ ಪ್ರಮುಖ ಪಾತ್ರವನ್ನು ಏಕೆ ಸೇರಿಸಲಾಗಿಲ್ಲ ಎಂದು ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ. ಅಥವಾ ರಾಮಾಯಣ ಭಾಗ 2ಕ್ಕಾಗಿ ಹನುಮಂತನ ಪಾತ್ರವನ್ನು ಸೀಕ್ರೆಟ್ ಆಗಿ ಇಡಲಾಗಿದೆಯೇ ಎಂದು ಸಹ ಹೇಳಲಾಗುತ್ತಿದೆ.
ಈ ಚಿತ್ರವನ್ನು ಎರಡು ಭಾಗಗಳಲ್ಲಿ ನಿರ್ಮಿಸಲಾಗುತ್ತಿದೆ. ರಾಮಾಯಣದ ಮೊದಲ ಭಾಗ 2026 ರ ದೀಪಾವಳಿಯ ಸುಮಾರಿಗೆ ಬಿಡುಗಡೆಯಾಗಲಿದ್ದು, ಎರಡನೇ ಭಾಗ 2027 ರಲ್ಲಿ ಬಿಡುಗಡೆಯಾಗಲಿದೆ. ರಾಮಾಯಣ ಕಥೆಯಲ್ಲಿ, ಸೀತೆಯ ಅಪಹರಣದ ನಂತರ ಹನುಮಂತನ ಪ್ರವೇಶವಾಗುತ್ತದೆ. ಮೊದಲ ಚಿತ್ರ ಸೀತೆಯ ಅಪಹರಣದೊಂದಿಗೆ ಕೊನೆಗೊಂಡರೆ, ಎರಡನೇ ಭಾಗದಲ್ಲಿ ಹನುಮನ ಪೂರ್ಣ ಪಾತ್ರವನ್ನು ತೋರಿಸುವ ಸಾಧ್ಯತೆಯಿದೆ. ಇದು ಚಿತ್ರದ ದೊಡ್ಡ ಹೈಲೈಟ್ ಆಗಬಹುದು ಎನ್ನಲಾಗಿದೆ
ಚಿತ್ರದಲ್ಲಿ ಯಾರಿದ್ದಾರೆ?
ರಾಮಾಯಣದ ತಾರಾಬಳಗ ಬಹು ದೊಡ್ಡದೇ ಇದೆ. ರಣಬೀರ್ ಕಪೂರ್ (ರಾಮ್), ಸಾಯಿ ಪಲ್ಲವಿ (ಸೀತಾ), ಯಶ್ (ರಾವಣ), ಸನ್ನಿ ಡಿಯೋಲ್ (ಹನುಮಾನ್), ಜೊತೆಗೆ ರವಿ ದುಬೆ, ಲಾರಾ ದತ್ತ, ಅರುಣ್ ಗೋವಿಲ್, ರಾಕುಲ್ ಪ್ರೀತ್ ಸಿಂಗ್ ಮತ್ತು ವಿವೇಕ್ ಒಬೆರಾಯ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಸಂಗೀತವನ್ನು ಹಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಅವರಂತಹ ಪ್ರಸಿದ್ಧ ಸಂಯೋಜಕರು ಸಂಯೋಜಿಸಿದ್ದಾರೆ.


