Baba Ramdev vs Kangana : ನಟಿ ಕಂಗನಾ ಹಾಗೂ ಬಾಬಾ ರಾಮ್ ದೇವ್ ಮಾತಿನ ಸಮರ ಮುಂದುವರೆದಿದೆ. ರಾಮ್ ದೇವ್ ಗೆ ಕಂಗನಾ ತಿರುಗೇಟು ನೀಡಿದ್ದಾರೆ.

ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರಣಾವತ್ ಮತ್ತು ಯೋಗ ಗುರು ಬಾಬಾ ರಾಮ್ದೇವ್ ನಡುವಿನ ಮಾತಿನ ಸಮರ ಜೋರಾಗಿದೆ. ಕಂಗನಾ ಈಗ ರಾಮ್ ದೇವ್ ಅವರಿಗೆ ತಿರುಗೇಟು ನೀಡಿದ್ದಾರೆ. ಕಂಗನಾ ಇತ್ತೀಚೆಗೆ ಭಾರತದ ಝೆನ್ ಜಿ ಅವರನ್ನು ಗಟರ್ ಜನರೇಷನ್ ಎಂದು ಕರೆದಿದ್ದರು. ಅದಕ್ಕೆ ಬಾಬಾ ರಾಮ್ ದೇವ್ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಕಂಗನಾ ಆರೋಪವನ್ನು ರಾಮ್ ದೇವ್ ಟೀಕಿಸಿದ್ದರು. ಅದಕ್ಕೀಗ ಕಂಗನಾ ಉತ್ತರ ನೀಡಿದ್ದಾರೆ.

ಉಪನ್ಯಾಸ ಮಾಡ್ಬೇಡಿ

ಕಂಗನಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ದೀರ್ಘವಾದ ಪೋಸ್ಟ್ ಹಂಚಿಕೊಂಡು ರಾಮ್ದೇವ್ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಯೌವನ ಅಥವಾ ವೈಯಕ್ತಿಕ ಜೀವನದ ಬಗ್ಗೆ ಊಹಾಪೋಹಗಳನ್ನು ಮಾಡುವುದನ್ನು ನಿಲ್ಲಿಸಿ, ವ್ಯಕ್ತಿತ್ವದ ಬಗ್ಗೆ ಪಾಠ ಹೇಳಬೇಡಿ ಎಂದು ಅವರು ಹೇಳಿದ್ದಾರೆ.

ಕಂಗನಾ ತಮ್ಮ ಪೋಸ್ಟ್ನಲ್ಲಿ, ತಮ್ಮ ಯೌವನ ಅಥವಾ ಬೆಡ್ರೂಮ್ ಬಗ್ಗೆ ಹಗಲುಗನಸು ಕಾಣುವುದನ್ನು ಬಾಬಾ ರಾಮ್ದೇವ್ ನಿಲ್ಲಿಸಬೇಕು ಎಂದು ಕಟುವಾಗಿ ಹೇಳಿದ್ದಾರೆ. ತಮ್ಮ ಬಗ್ಗೆ ಜನರು ಕೇವಲ ವದಂತಿ ಮತ್ತು ಗಾಸಿಪ್ಗಳ ಆಧಾರದ ಮೇಲೆ ಊಹೆ ಮಾಡಬಾರದು ಎಂದಿದ್ದಾರೆ. ಇಷ್ಟಕ್ಕೆ ನಿಲ್ಲದ ಕಂಗನಾ, ಪತಂಜಲಿ ಸಂಸ್ಥೆಗೆ ಸಂಬಂಧಿಸಿದ ವಿವಾದಗಳನ್ನೂ ಪ್ರಸ್ತಾಪಿಸಿದ್ದಾರೆ. ಸುಳ್ಳು ಅಥವಾ ತಪ್ಪು ವೈದ್ಯಕೀಯ ಜಾಹೀರಾತುಗಳ ವಿಚಾರದಲ್ಲಿ ನನಗೆ ಸುಪ್ರೀಂ ಕೋರ್ಟ್ನಿಂದ ಎಂದಿಗೂ ಛೀಮಾರಿ ಬಿದ್ದಿಲ್ಲ ಎಂದಿದ್ದಾರೆ. ಮಾತುಗಳು ಗಾಸಿಪ್ ಆಧಾರಿತವಾಗಿವೆ. ದಾಖಲೆಗಳ ಮೇಲೆ ಆಧಾರಿತವಾಗಿವೆ ಎಂದು ಕಂಗನಾ ಪ್ರತಿಪಾದಿಸಿದ್ದಾರೆ.

ವಿವಾದ ಶುರುವಾಗಿದ್ದು ಹೇಗೆ?

ಇತ್ತೀಚೆಗೆ Gen Z ಬಗ್ಗೆ ಮಾತನಾಡಿದ್ದ ಕಂಗನಾ, ಈ ಪೀಳಿಗೆಯನ್ನು ಗಟರ್ ಜನರೇಷನ್ ಎಂದು ಕರೆದಿದ್ದರು. ಇದಕ್ಕೆ ಬಾಬಾ ರಾಮ್ದೇವ್ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು. ಯುವಕರನ್ನು ಇಂತಹ ಪದಗಳಿಂದ ಕರೆಯುವುದು ತಪ್ಪು ಎಂದು ಹೇಳಿದ್ದ ಅವರು, ಕಂಗನಾ ಅವರ ಹಿಂದಿನ ಜೀವನದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದರು.

ಇದೀಗ ರಾಮ್ದೇವ್ ಅವರ ಹೇಳಿಕೆಗೆ ಕಂಗನಾ ನೀಡಿರುವ ತಿರುಗೇಟು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಇಬ್ಬರು ಜನಪ್ರಿಯ ವ್ಯಕ್ತಿಗಳ ನಡುವಿನ ಈ ವಾಕ್ಸಮರ ಮುಂದೇನು ತಿರುವು ಪಡೆಯಲಿದೆ ಕಾದುನೋಡ್ಬೇಕಿದೆ.