* ಡ್ರಗ್ಸ್ ಕೇಸಿನಲ್ಲಿ ಅನುಶ್ರೀ ಹೆಸರು ವಿಚಾರ* ಸಾಕಷ್ಟು ಸಾಕ್ಷ್ಯಾಧಾರ ಇಲ್ಲದೆ ಅವರ ಹೆಸರನ್ನು ಬಿಡಲಾಗಿದೆ* ಸಾಕ್ಷ್ಯಾಧಾರ ಇಲ್ಲದೆ ಅವರ ಹೆಸರು ಬಿಟ್ಟಿದ್ದೇವೆ ಎಂದು ಕಮಿಷನರ್ ಹೇಳಿದ್ದಾರೆ* ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನಲ್ಲಿ ಮಾಡಾಳು ಗ್ರಾಮದಲ್ಲಿ ಸಚಿವ ಮಾಧುಸ್ವಾಮಿ ಹೇಳಿಕೆ

ಹಾಸನ(ಸೆ. 09) ಡ್ರಗ್ಸ್ ಕೇಸಿನಲ್ಲಿ ಅನುಶ್ರೀ ಹೆಸರನ್ನು ಬೊಟ್ಟಿರುವ ವಿಚಾರಕ್ಕೆ ಸಂಬಂಧಿಸಿ ಸಚಿವ ಮಾಧುಸ್ವಾಮಿ ಮಾತನಾಡಿದ್ದಾರೆ. ಸಾಕಷ್ಟು ಸಾಕ್ಷ್ಯಾಧಾರ ಇಲ್ಲದೆ ಅವರ ಹೆಸರನ್ನು ಬಿಡಲಾಗಿದೆ. ಸಾಕ್ಷ್ಯಾಧಾರ ಇಲ್ಲದೆ ಅವರ ಹೆಸರು ಬಿಟ್ಟಿದ್ದೇವೆ ಎಂದು ಕಮಿಷನರ್ ಹೇಳಿದ್ದಾರೆ ಎಂದು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿ ಮಾಡಾಳು ಗ್ರಾಮದಲ್ಲಿ ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡ್ರಗ್ ಕೇಸ್ ನಲ್ಲಿ ನಿರೂಪಕಿ ಅನುಶ್ರಿ ಹೆಸರು ಕೈಬಿಟ್ಟ ಬಗ್ಗೆ ಒಂದರ್ಥದಲ್ಲಿ ಸಮರ್ಥನೆ ಮಾಡಿಕೊಂಡರು. ಪೊಲೀಸ್ ತನಿಖೆ ಹೀಗೆ ಮಾಡಿ, ಹಾಗೆ ಮಾಡಿ ಎಂದು ಹೇಳಲು ಆಗಲ್ಲ. ಅವರನ್ನ ಇವರನ್ನ ಫಿಕ್ಸ್ ಮಾಡಿ ಎಂದು ನಾವ್ಯಾರು ಹೇಳಲು ಆಗಲ್ಲ ಅವರೇನು ಫಿಕ್ಸ್ ಮಾಡಿ ಕೋರ್ಟ್ ಮುಂದೆ ಹೇಳ್ತಾರೆ ಅದರ ಮೇಲೆ ಟ್ರಯಲ್ ನಡೆಯುತ್ತದೆ. ಅನುಶ್ರಿ ಹೆಸರು ಕೈಬಿಟ್ಟಿರೋ ಹಿಂದೆ ಪ್ರಭಾವ ಇದೆ ಎಂದು ನನಗನ್ನಿಸಲ್ಲ ಎಂದರು.

ಕಾಣದ ಕೈ ಅನುಶ್ರೀ ಕಾಪಾಡಿತೆ? ಕಮಿಷನರ್ ಏನಂತಾರೆ!

ಚಾರ್ಜ್ ಶೀಟ್ ನಲ್ಲಿ ಕೈಬಿಟ್ಟಿದಾರೆ ಎಂದು ನಾವು ಮೂರನೆಯವರು ಹೇಗೆ ಹೇಳೋದು? ಪೊಲೀಸರು ಈ ಬಗ್ಗೆ ತೀರ್ಮಾನ ಮಾಡ್ತಾರೆ ನ್ಯಾಯಾಲಯದ ದಲ್ಲಿ ಈ ಬಗ್ಗೆ ಪ್ರಶ್ನೆ ಮಾಡಬಹುದು. ಪಿಸಿಆರ್ ಹಾಕಿ ಕೋರ್ಟ್ ನಲ್ಲೇ ಕೇಳಬಹುದು. ನಾರ್ಕೊಟಿಕ್ ಕೇಸ್ ನಲ್ಲಿ ಪೊಲೀಸರು ಹೀಗೆ ಪ್ರಭಾವದಿಂದ ಹೆಸರು ಕೈಬಿಡ್ತಾರೆ ಎಂದು ನಾನಂದುಕೊಂಡಿಲ್ಲ. ಜನ ಏನೇನೋ‌ ಮಾತಾಡ್ತಾರೆ, ಒಬ್ಬೊಬ್ಬರಿಗೆ ಒಂದೊಂದು ರೀತಿ ಅನ್ನಿಸುತ್ತೆ. ಪ್ರಭಾವ ಇರೋದು ಎಂದು ಸುಮ್ಮ ಸುಮ್ಮನೇ ಚಾರ್ಜ್ ಶೀಟ್ ನಲ್ಲಿ ತರೋಕೆ ಆಗಲ್ಲ ಎಂದರು.