Asianet Suvarna News

ದೇಶಕ್ಕಾಗಿ ಕಷ್ಟ ಇಷ್ಟ ಎಂದ ಭಾರತೀಯ: ಅಪನಗದೀಕರಣಕ್ಕೆ 3 ವರ್ಷದ ಐತಿಹ್ಯ!

ಅಪನಗದೀಕರಣದಿಂದ ಸಾಧಿಸಿದ್ದೆಷ್ಟು?, ಸಾಧಿಸಬೇಕಾಗಿದ್ದೆಷ್ಟು?| ಅಪನಗದೀಕರಣದ ನಂತರದ ಭಾರತದ ಆರ್ಥಿಕ ವ್ಯವಸ್ಥೆ ಹೇಗಿದೆ?| ನೋಟ್ ಬ್ಯಾನ್ ಬಳಿಕ ಹಳಿ ತಪ್ಪಿದ್ದ ಆರ್ಥಿಕತೆ ಈಗ ಹೇಗಿದೆ?| ಜಿಡಿಪಿ ಬೆಳವಣಿಗೆ ಏರಿಕೆ ಭವಿಷ್ಯದ ಸದೃಢ ಅರ್ಥ ವ್ಯವಸ್ಥೆಯ ಸೂಚನೆ| ಹೊಸ ಕರೆನ್ಸಿ ನೋಟುಗಳ ಹರಿವು ಹೆಚ್ಚಾದ ಪರಿಣಾಮ ಏನು?| ಮತ್ತೆ ಪುಟಿದೇಳುವತ್ತ ಗುಡಿ ಕೈಗಾರಿಕೆಗಳ ಸ್ಥಿತಿಗತಿ?| ಮೋದಿ 1.0 ಸರ್ಕಾರದ ಸಾಧನೆ ಏನು?| ಮೋದಿ 2.0 ಸರ್ಕಾರದ ಗುರಿಗಳೇನು?| ಅಪನಗದೀಕರಣಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ದೇಶದ ಅರ್ಥ ವ್ಯವಸ್ಥೆಯ ಪಕ್ಷನೋಟ| ಹಿನ್ನಡೆಗೆ ಕಾರಣ, ಮುನ್ನಡೆಗೆ ಹೂರಣ ಎರಡರ ವಿಶ್ಲೇಷಣೆ| ಜಾಗತಿಕ ಆರ್ಥಿಕ ಹಿಂಜರಿಕೆಗೆ ಭಾರತ ನೀಡುವ ಪರಿಹಾರವೇನು?| ಅಪನಗದಿಕರಣದ ನಂತರ ಭಾರತದ ಅರ್ಥ ವ್ಯವಸ್ಥೆಯಲ್ಲಿ ಸುಧಾರಣೆ ಕಂಡಿದೆಯಾ?| 5 ಟ್ರಿಲಿಯನ್ ಡಾಲರ್ ಆರ್ಥಿಕ ವ್ಯವಸ್ಥೆಯ ಗುರಿ ಈಡೇರಿಕೆ ಹೇಗೆ?|

India After 3  Yeras Of Demonitisation Ups and Downs Of Economy
Author
Bengaluru, First Published Nov 8, 2019, 2:34 PM IST
  • Facebook
  • Twitter
  • Whatsapp

ನವದೆಹಲಿ(ನ.08): ಅದು ನವೆಂಬರ್ 8, 2016..ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಮನೆಯ ಟಿವಿ ಪರದೆ ಮೇಲೆ ಪ್ರತ್ಯಕ್ಷರಾದರು. ಆಗ ಚಾಲ್ತಿಯಲ್ಲಿದ್ದ 500,1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ ಹೊಸ 2000,500 ನೋಟುಗಳನ್ನು ಜಾರಿಗೆ ತರುವ ಘೋಷಣೆ ಮಾಡಿದ್ದರು ಮೋದಿ.

"

ಇದಕ್ಕೆ ಕಾರಣವನ್ನೂ ನೀಡಿದ್ದ ಪ್ರಧಾನಿ, ಆರ್ಥಿಕ ಸ್ಥಿತಿ ಸುಧಾರಣೆ, ಕಪ್ಪುಹಣದ ಮೇಲೆ ಪ್ರಹಾರ, ಭಯೋತ್ಪಾದನೆ ನಿಗ್ರಹ ಸೇರಿದಂತೆ ಅಪನಗದೀಕರಣಕ್ಕೆ ಕಾರಣಗಳನ್ನು ಪಟ್ಟಿ ಮಾಡುತ್ತಾ ಹೋಗಿದ್ದರು.

ಮೋದಿ ಅವರ ಈ ನಿರ್ಧಾರಕ್ಕೆ ಇಡೀ ವಿಶ್ವವೇ ಅಚ್ಚರಿಪಡುವಂತೆ ದೇಶದ ಜನತೆ ಅವರ ಬೆನ್ನಿಗೆ ನಿಂತಿತು. ಮೋದಿ ಅವರ ಅಪನಗದೀಕರಣವನ್ನು ದೇಶದ ಜನತೆ ಬೆಂಬಲಿಸಿದ ರೀತಿ ನಿಜಕ್ಕೂ ಅದ್ಭುತವಾಗಿತ್ತು. ಅದರ ಮುಂದಿನ ಬೆಳವಣಿಗೆಗಳೆಲ್ಲಾ ಇದೀಗ ಇತಿಹಾಸದ ಪುಟ ಸೇರಿವೆ.

ನೋಟ್ ಬ್ಯಾನ್ ಸಾಧಿಸಿದ್ದೇನು?: ಮೋದಿ ಬೈದವರಿಗೆ ಇಲ್ಲಿದೆ ಉತ್ತರ!

ಮೋದಿ 1.0:

ಅಪನಗದೀಕರಣದ ಆರಂಭದಲ್ಲಿ ದೇಶ ಕೆಲವು ಹಿನ್ನಡೆಗಳನ್ನು ಅನುಭವಿಸಬೇಕಾಯಿತು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಪ್ರಮುಖವಾಗಿ ಹೊಸ ಕರೆನ್ಸಿ ನೋಟುಗಳನ್ನು ಕೊಳ್ಳಲು ಎಟಿಎಂ ಮುಂದೆ ಜನ ಪರದಾಡಬೇಕಾಗಿ ಬಂದಿದ್ದು, ಕೆಲವು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನೆಲ ಕಚ್ಚಿದ್ದು, ದೇಶದ ಅರ್ಥ ವ್ಯವಸ್ಥೆ ಮತ್ತು ಜಿಡಿಪಿ ಹಿನ್ನಡೆ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು.

ಪ್ರಮುಖವಾಗಿ ಶೇ.8ರ ಆಸುಪಾಸಿನಲ್ಲಿದ್ದ ಜಿಡಿಪಿ ಏಕಾಏಕಿ ಶೇ.2 ರಷ್ಟು ಕುಸಿತ ಕಂಡಿತ್ತು. ಜಿಡಿಪಿಯನ್ನು ಮತ್ತೆ ಏರಿಕೆಯ ಹಳಿ ಮೇಲೆ ತರುವುದು ಮೋದಿ 1.0 ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.

ಆದರೆ ಅಪನಗದೀಕರಣದ ಎರಡು ವರ್ಷಗಳ ಬಳಿಕ ಅಂದರೆ 2017-18ರ ನಡುವೆ ಜಿಡಿಪಿ 7.3% ದಾಖಲಾಗಿದ್ದು, ಇದು ವಿಶ್ವದಲ್ಲೇ ಅತ್ಯಂತ ವೇಗದ ಆರ್ಥಿಕ ಬೆಳವಣಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ನೋಟ್ ಬ್ಯಾನ್: ಉತ್ತರ ಸಿಗದ ಪ್ರಶ್ನೆಗಳು, ಮೋದಿ ಅರಿಯದ ವಿಪಕ್ಷಗಳು!

ಅಲ್ಲದೇ ನೆಲಕಚ್ಚಿದ್ದ ದೇಶದ ಗುಡಿ ಕೈಗಾರಿಕೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ತೇಜನಕ್ಕಾಗಿ ಈ ಮೂರು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಪರಿಣಾಮವಾಗಿ ಈ ಕ್ಷೇತ್ರಗಳಲ್ಲಿ ಉತ್ತಮ ವಹಿವಟು ದಾಖಲಾಗುತ್ತಿದೆ.

ಅದರಂತೆ ಹೊಸ ಕರೆನ್ಸಿ ನೋಟುಗಳ ಚಲಾವಣೆಯಲ್ಲೂ ವೃದ್ಧಿಯಾಗಿದ್ದು, ನೋಟುಗಳು ಎಟಿಎಂಗಳಿಗೆ ಸರಾಗವಾಗಿ ಹರಿದು ಬರುತ್ತಿದೆ. ಆದರೆ ದೇಶದ ಎರಡನೇ ಮತ್ತು ತೃತೀಯ ದರ್ಜೆ ನಗರಗಳಲ್ಲಿ ಹಣದ ಹರಿವು ಇನ್ನು ಸುಧಾರಿಸಬೇಕಿದೆ. ಮುಂದಿನ ದಿನಗಳಲ್ಲಿ ಸುಧಾರಣೆ ಕಾಣುವ ಭರವಸೆ ಕೂಡ ಇದೆ.

ನೋಟು ಸಾಗಿಸಲು ಆರ್ ಬಿಐ ನಿಂದ ಹೆಲಿಕಾಪ್ಟರ್‌ ಹಾಗೂ ವಾಯುಪಡೆ ವಿಮಾನಗಳ ಬಳಕೆ

ಆರ್‌ಬಿಐ 2016-17ರಲ್ಲಿ ಹೊಸ ನೋಟುಗಳನ್ನು ಪ್ರಿಂಟ್ ಮಾಡಲು 7,965 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. 2017-18 ರಲ್ಲಿ 4,912 ಕೋಟಿ ರೂ. ಖರ್ಚು ಮಾಡಿದೆ. ಇದರ ಅರ್ಥ ಈ ಮೊದಲು ಪ್ರಿಂಟ್ ಮಾಡಿದ್ದ ನೊಟುಗಳ ಚಲಾವಣೆ ದೇಶದಲ್ಲಿ ಸರಾಗವಾಗಿ ಆಗುತ್ತಿದ್ದು, ಈ ಮೊದಲಿನ ವೇಗದಲ್ಲಿ ನೋಟುಗಳನ್ನು ಪ್ರಿಂಟ್ ಮಾಡಲಾಗುತ್ತಿಲ್ಲ.

ನೋಟ್ ಬ್ಯಾನ್ ಪಾಸಾ..? ಫೇಲಾ..?

ಒಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಅಪನಗದೀಕರಣ ಮತ್ತು ಆ ನಂತರದ ಭಾರತದ ಬೆಳವಣಿಗೆಯತ್ತ ಗಮನಹರಿಸಿದರೆ, ಮೂರು ಹೆಜ್ಜೆ ಮುಂದೆ ಇಡಲು ಒಂದು ಹೆಜ್ಜೆ ಹಿಂದಕ್ಕೆ ಹೋಗಿದ್ದು, ಭವಿಷ್ಯದಲ್ಲಿ ಭಾರತದ ಆರ್ಥಿಕತೆ ಮತ್ತಷ್ಟು ಸದೃಢವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದು.

ಮೋದಿ 2.0:

ಇನ್ನು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎರಡನೇ ಅವಧಿಗೆ ಸರ್ಕಾರ ರಚಿಸಿದೆ. ನೋಟ್ ಬ್ಯಾನ್ ಬಳಿಕ ಮೋದಿ ಹಾಗೂ ಕೇಂದ್ರ ಸರ್ಕಾರದ ವರ್ಚಸ್ಸು ಕುಂದಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಈ ಊಹಾಪೋಹಗಳನ್ನು ಸುಳ್ಳಾಗಿಸಿ ದೇಶದ ಜನತೆ ಹೆಚ್ಚಿನ ಬಹುಮತದೊಂದಿಗೆ ಪ್ರಧಾನಿ ಮೋದಿ ಅವರನ್ನು ಎರಡನೇ ಬಾರಿ ದೇಶದ ಪ್ರಧಾನಿ ಕುರ್ಚಿ ಮೇಲೆ ಕುಳ್ಳಿರಿಸಿದರು.

ಎರಡನೇ ಬಾರಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೇ ಆರ್ಥಿಕ ಪುನಶ್ಚೇತನಕ್ಕೆ ಕೈ ಇಟ್ಟ ಪ್ರಧಾನಿ ಮೋದಿ, ಪ್ರಮುಖವಾಗಿ ನೋಟ್ ಬ್ಯಾನ್ ಬಳಿಕದ ಹಿನ್ನಡೆಯನ್ನು ಮೆಟ್ಟಿ ನಿಲ್ಲಲು ನಿರ್ಧರಿಸಿದರು.

ನೋಟ್‌ ಬ್ಯಾನ್‌ನಿಂದ ತೆರಿಗೆ ವಂಚನೆ ಇಳಿಮುಖ: ಸಚಿವೆ ಸೀತಾರಾಮನ್‌

5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಗಮನಹರಿಸಿರುವ ಮೋದಿ ಸರ್ಕಾರ, ಈ ನಿಟ್ಟಿನಲ್ಲಿ ದೃಢ ಹೆಜ್ಜೆ ಹಾಕುತ್ತಿದೆ. ಆದರೆ ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮವಾಗಿ ದೇಶದ ಅರ್ಥ ವ್ಯವಸ್ಥೆ ಕೂಡ ಕೊಂಚ ಹಳಿ ತಪ್ಪಿದ್ದು ಸುಳ್ಳಲ್ಲ.

2024ರೊಳಗೆ ಭಾರತ 5 ಟ್ರಿಲಿಯನ್‌ ಡಾಲರ್‌ ಆರ್ಥಿಕ ಶಕ್ತಿ: ಮೋದಿ ಗುರಿ

ಪ್ರಮುಖವಾಗಿ ದೇಶದ ಉತ್ಪಾದನಾ ಕ್ಷೇತ್ರಗಳು ಹಿನ್ನಡೆ ಅನುಭವಿಸಿದ್ದು, ಉತ್ಪಾದನೆ ಕುಠಿತದ ಜೊತೆಗೆ ಉದ್ಯೋಗ ಕಡಿತದ ಕಹಿಯನ್ನೂ ಅನುಭವಿಸುವಂತಾಗಿದೆ. ಹಾಗೆಯೇ ಕೃಷಿ ಕ್ಷೇತ್ರದಲ್ಲಿ ಯಾವುದೇ ಸುಧಾರಣೆ ಕಾಣದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಉತ್ಪಾದನಾ ಕ್ಷೇತ್ರದ ಸ್ಥಿತಿಗತಿ:

ಆರ್ಥಿಕ ಹಿನ್ನೆಡೆ ಕೈಗಾರಿಕಾ ಕ್ಷೇತ್ರದ ಪ್ರಮುಖ ವಲಯಗಳ ಮೇಲೆ ಭಾರೀ ದುಷ್ಪರಿಣಾಮ ಬೀರಿದ್ದು, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ನಿರಾಶಾದಾಯಕವಾಗಿವೆ. ಆರ್ಥಿಕ ಕುಸಿತದಿಂದಾಗಿ ವಿದ್ಯುತ್, ಕಚ್ಚಾ ತೈಲ, ಸಿಮೆಂಟ್ ಸೇರಿದಂತೆ ಪ್ರಮುಖ 8 ಕೈಗಾರಿಕಾ ವಲಯಗಳ ಆರ್ಥಿಕ ಬೆಳವಣಿಗೆ ಪ್ರಮಾಣ ಜುಲೈನಲ್ಲಿ ಶೇ 2.1ಕ್ಕೆ ಕುಸಿದಿದೆ ಎಂದು ಕೇಂದ್ರದ ಅಂಕಿ ಅಂಶಗಳು ಸ್ಪಷ್ಟಪಡಿಸಿವೆ.

ಕಲ್ಲಿದ್ದಲು, ರಸಗೊಬ್ಬರ, ಉಕ್ಕು, ಪೆಟ್ರೋಲಿಯಂ ಉತ್ಪನ್ನಗಳು, ಕಚ್ಚಾ ತೈಲ, ವಿದ್ಯುತ್‌, ನೈಸರ್ಗಿಕ ಅನಿಲ ಹಾಗೂ ಸಿಮೆಂಟ್ ವಲಯಗಳ ಬೆಳವಣಿಗೆ ದರ ಕುಸಿದಿದೆ.  ಕಳೆದ ವರ್ಷ ಜುಲೈನಲ್ಲಿ ಇದೇ ವಲಯಗಳ ಅಭಿವೃದ್ದಿ ದರ ಶೇ 7.3ರಷ್ಟಿತ್ತು. ಆದರೆ ಈ ವರ್ಷ ಜುಲೈನಲ್ಲಿ ಕೇವಲ ಶೇ 2.1ರಷ್ಟಿದೆ.

ಆಟೋಮೊಬೈಲ್‌ ಕ್ಷೇತ್ರಕ್ಕೆ ಕರಾಳ ಆಗಸ್ಟ್‌; ವಾಹನ ಉದ್ಯಮಕ್ಕೆ ಭಾರೀ ಸಂಕಷ್ಟ!

ಇನ್ನು ಕೈಗಾರಿಕಾ ಉತ್ಪಾದನೆ ಸೂಚ್ಯಂಕದಲ್ಲಿ (ಐಐಪಿ) ಈ ಕೈಗಾರಿಕೆಗಳ ಕೊಡುಗೆ ಶೇ 40.27ರಷ್ಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಈ ಕ್ಷೇತ್ರಗಳಲ್ಲಿ ಭಾರೀ ಕುಸಿತ ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ವಲಯಗಳು ಕ್ರಮವಾಗಿ ಶೇ.6.6, ಶೇ.7.9 ಮತ್ತು ಶೇ.4.2 ಇಳಿಕೆ ಕಂಡಿವೆ. ಇವು ಕಳೆದ ವರ್ಷ ಕ್ರಮವಾಗಿ ಶೇ.6.9, ಶೇ.11.2 ಹಾಗೂ ಶೇ.6.7ರಷ್ಟು ಬೆಳವಣಿಗೆ ಕಂಡಿದ್ದವು ಎಂದು ವರದಿ ತಿಳಿಸಿದೆ.

ಆರ್ಥಿಕತೆ: 7ನೇ ಸ್ಥಾನಕ್ಕೆ ಕುಸಿದ ಭಾರತ, ಮೇಲಕ್ಕೇರಿದ ಬ್ರಿಟನ್‌, ಫ್ರಾನ್ಸ್‌

ಈ ಮಧ್ಯೆ ರಸಗೊಬ್ಬರ ಕೈಗಾರಿಕೆ ಲಾಭದಲ್ಲಿ ಮುನ್ನಡೆದಿದ್ದು, ಶೇ.1.5ರಷ್ಟು ಬೆಳವಣಿಗೆ ದಾಖಲಾಗಿದೆ. ಇದು ಕಳೆದ ವರ್ಷ ಜುಲೈನಲ್ಲಿ ಶೇ.1.3ರಷ್ಟು ದಾಖಲಾಗಿತ್ತು. ಉತ್ಪಾದನಾ ವಲಯದ ಅಭಿವೃದ್ಧಿ ದರ ಕೂಡ 15 ತಿಂಗಳ ಹಿಂದಿನ ದರಕ್ಕಿಂತ ಕೆಳಮಟ್ಟಕ್ಕೆ ಕುಸಿದಿದ್ದು, ಆದಾಯ ಸಂಗ್ರಹದಲ್ಲಿ ಕಂಡುಬಂದಿರುವ ನಕಾರಾತ್ಮಕ ಬೆಳವಣಿಗೆಗೆ ಪ್ರಧಾನಿ ಕಾರ್ಯಾಲಯ ಆತಂಕ ವ್ಯಕ್ತಪಡಿಸಿದೆ.

ಕಹಿ ಸತ್ಯ ಕೇಳುವ ಮನೋಭಾವ ಇರಲಿ: ಸ್ವಾಮಿ ಹೇಳಿಕೆಗೆ ಮೋದಿ ತಲೆ ಕೆದರಿಕೊಳ್ಳದಿರಲಿ!

ಈ ಹಿನ್ನೆಲೆಯಲ್ಲಿ 2019-20ನೇ ಸಾಲಿನ ಜಿಎಸ್'ಟಿ ಸಂಗ್ರಹ ಗುರಿಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದ್ದು, 7.6 ಲಕ್ಷ ಕೋಟಿ ರೂ.ದಿಂದ 6.63 ಲಕ್ಷ ಕೋಟಿ ರೂ.ಗೆ ಇಳಿಕೆ ಮಾಡಿದೆ.

ಈ ಮಧ್ಯೆ ಆರ್‌ಬಿಐನಲ್ಲಿರುವ ಹೆಚ್ಚುವರಿ ಹಣವನ್ನು ಈಗಾಗಲೇ ಕೇಂದ್ರ ಸರ್ಕಾರ ಮರಳಿ ಪಡೆದಿದ್ದು, ಇದು ದೇಶದ ಆರ್ಥಿಕ ಬೆಳವಣಿಗೆ ದೃಷ್ಟಿಯಲ್ಲಿ ಉತ್ತಮ ನಡೆಯಲ್ಲ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ಕಾಣದಾಗಿದೆ ಪರಿಹಾರ: ಗುರಿ ಕಡಿತಗೊಳಿಸಿದ ಮೋದಿ ಸರ್ಕಾರ!

ಆರ್ಥಿಕತೆ ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ ಎಂದ ನೊಬೆಲ್ ಪುರಸ್ಕೃತ:

ಇನ್ನು 2019ರ ಅರ್ಥಶಾಸ್ತ್ರ ನೊಬೆಲ್ ಪುರಸ್ಕೃತ ಭಾರತೀಯ ಮೂಲದ ಅಮೆರಿಕನ್ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, ದೇಶದ ಅರ್ಥ ವ್ಯವಸ್ಥೆ ಸುಧಾರಿಸುವ ಲಕ್ಷಣ ಕಾಣಿಸುತ್ತಿಲ್ಲ ಎಂದು ಹೇಳಿದ್ದು ಗಾಯದ ಮೇಲೆ ಬರೆ ಎಳೆದಂತಾಗಿತ್ತು.

ದುರ್ಬಲ ಆರ್ಥಿಕತೆ ಸುಧಾರಿಸುವುದಿಲ್ಲ: ನೊಬೆಲ್ ಪುರಸ್ಕೃತನ ಮಾತು ಕೇಳೊರಿಲ್ವಾ?

ಭಾರತದ ಅರ್ಥ ವ್ಯವಸ್ಥೆಯ ಕುಸಿತದ ಆರಂಭ ಅಪನಗದೀಕರಣದಿಂದಲೇ ಪ್ರಾರಂಭವಾಗಿದೆ ಎಂಬ ಅಭಿಜಿತ್ ಬ್ಯಾನರ್ಜಿ ಹೇಳಿಕೆ, ವಿಪಕ್ಷಗಳ ಶಕ್ತಿ ಹೆಚ್ಚಿಸಿದ್ದು ಸುಳ್ಳಲ್ಲ.

ಅಲ್ಲದೇ ಕೇಂದ್ರ ಸರ್ಕಾರದ ಅಪನಗದೀಕರಣದ ಹಠಾತ್ ಕ್ರಮವು ಭಾರತದ ಗ್ರಾಹಕರ ಖರೀದಿ ಸಾಮರ್ಥ್ಯವೇ ಕುಸಿಯುವಂತೆ ಮಾಡಿದೆ. ತನ್ಮೂಲಕ ಹಿಂಜರಿತಕ್ಕೆ ಕಾರಣವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಆರ್ಥಿಕತೆ ನಿಜಕ್ಕೂ ಕುಸಿಯುತ್ತಿದೆಯಾ?: ಭರವಸೆಯ ಬೆಳಕೊಂದು ಕಾಣುತ್ತಿದೆಯಾ?

ಅಪನಗದೀಕರಣದಿಂದಾಗಿ ಗ್ರಾಹಕ ಉಪಯೋಗಿ ವಸ್ತುಗಳ ಸಾಲಗಳ ವಿತರಣೆ ಪ್ರಮಾಣ ಕುಸಿತದ ಹಾದಿ ಹಿಡಿಯಿತು. ಸತತ ಆರು ವರ್ಷಗಳ ಕಾಲ ಏರಿಕೆ ಕಂಡಿದ್ದ ಆ ಸಾಲಗಳ ಪ್ರಮಾಣ 2017ರ ಮಾರ್ಚ್ ಅಂತ್ಯಕ್ಕೆ 20,791 ಕೋಟಿ ರು. ತಲುಪಿತ್ತು. ಆದರೆ ಅಪನಗದೀಕರಣದ ಬಳಿಕ ಶೇ.73ರಷ್ಟುಕುಸಿದು, 5,623 ಕೋಟಿ ರು.ಗೆ ಜಾರಿತು. 2017-18ರಲ್ಲಿ 5.2ರಷ್ಟು, 2018-19ರಲ್ಲಿ ಶೇ.68ರಷ್ಟುಕುಸಿತ ಕಂಡುಬಂದಿದೆ ಎಂದು ವರದಿ ತಿಳಿಸಿತ್ತು.

ಆರ್‌ಬಿಐ ಜಿಡಿಪಿ ಅಂದಾಜು:

2019-2020ಕ್ಕೆ ಜಿಡಿಪಿ ಅಂದಾಜನ್ನು ಕಡಿತಗೊಳಿಸಿರುವ ಆರ್‌ಬಿಐ, ಶೇ.6.5 ರ ಆಸುಪಾಸಿನಲ್ಲಿ ಜಿಡಿಪಿ ಲೆಕ್ಕಾಚಾರ ಮಾಡಿದೆ. ವಿವಿಧ ಕ್ಷೇತ್ರಗಳಲ್ಲಿನ ಕುಂಠಿತವೇ ಜಿಡಿಪಿ ಲೆಕ್ಕಾಚಾರದ ಅದಲು ಬದಲಿಗೆ ಕಾರಣ ಎಂದೂ ವಿಶ್ಲೇಷಿಸಲಾಗಿದೆ. ಸದ್ಯ ಶೇ.5ರಷ್ಟಿರುವ ಜಿಡಿಪಿ ಬೆಳವಣಿಗೆ ಹೆಚ್ಚೆಂದರೆ ಶೇ.6.5ರ ಆಸುಪಾಸಿನಲ್ಲಿ ಬೆಳವಣಿಗೆ ಕಾಣಬಹುದು ಎಂದು ಆರ್‌ಬಿಐ ಅಂದಾಜಿಸಿದೆ.

ಆರ್ಥಿಕ ಪುನಶ್ಚೇತನ ಒಂದು ಊಹೆ: ಆ್ಯಕ್ಟೀವ್ ಆಯ್ತು ಆರ್‌ಬಿಐ ಗವರ್ನರ್ ಗುಹೆ!

ಇಂತದ್ದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ವಿಶ್ವ ಬ್ಯಾಂಕ್ ಹಾಗೂ ಅಂತಾರಾಷ್ಟ್ರೀಯ ಹಣಕಾಸು ನಿಧಿ, ಭಾರತದ ಜಿಡಿಪಿ ನಿರೀಕ್ಷಿತ ಫಲಿತಾಂಶ ಸಾಧಿಸುವಲ್ಲಿ ಹಿನ್ನಡೆ ಕಂಡರೂ, ದೇಶದ ಅರ್ಥಿಕ ಸ್ಥಿತಿ ಸ್ಥಿತ್ಯಂತರ ಕಾಣಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದವು.

GDP ಮಹಾ ಕುಸಿತ; ಆತಂಕ ಸೃಷ್ಟಿಸಿದ ಆರ್ಥಿಕ ಹಿಂಜರಿತ!

ಯಾವ ಪಥದಲ್ಲಿ ಭಾರತದ ನಡೆ?:

ಜಾಗತಿಕ ಆರ್ಥಿಕ ಹಿಂಜರಿಕೆ, ಅಮೆರಿಕ-ಚೀನಾ ವಾಣಿಜ್ಯ ಯುದ್ಧ ಹೀಗೆ ಅರ್ಥ ವ್ಯವಸ್ಥೆಯ ಮೇಲೆ ಕವಿದಿದ್ದ ಎಲ್ಲಾ ಕಾರ್ಮೋಡಗಳೂ ಒಂದೊಂದಾಗಿ ಸರಿಯತೊಡಗಿದ್ದು, ಜಾಗತಿಕ ಸಂವೇದನೆ ಹಾಗೂ ಜಾಗತಿಕ ಸಹಕಾರ ಆರ್ಥಿಕ ಕುಸಿತದಿಂದ ಹೊರಬರುವ ಮಾರ್ಗ ಎಂದು ಭಾರತ ವಿಶ್ವ ವೇದಿಕೆಗಳಲ್ಲಿ ಪ್ರತಿಪಾದಿಸಿದೆ.

ಜಾಗತಿಕ ಆರ್ಥಿಕ ಬಿಕ್ಕಟ್ಟು: ನಿರ್ಮಲಾ ಬಿಚ್ಚಿಟ್ಟರು ಪರಿಹಾರದ ಗುಟ್ಟು!

ಅದರಂತೆ ಜಾಗತಿಕ ಆರ್ಥಿಕ ಸಹಕಾರದತ್ತ ದೃಢ ಹೆಜ್ಜೆಳನ್ನಿರಿಸಿರುವ ಮೋದಿ ಸರ್ಕಾರ, ದೇಶದ ಅರ್ಥ ವ್ಯವಸ್ಥೆಯನ್ನು ಮತ್ತೆ ನಾಗಾಲೋಟದ ಹಳಿಯ ಮೇಲೆ ತರಲು ಶ್ರಮಿಸುತ್ತಿದೆ. ಆದರೆ ಕೇವಲ ಕಾರ್ಪೋರೇಟ್ ಅರ್ಥ ವ್ಯವಸ್ಥೆ ಮಾತ್ರವಲ್ಲದೇ ದೇಶದ ಅರ್ಥ ವ್ಯವಸ್ಥೆಯ ಮತ್ತೊಂದು ಮಗ್ಗಲು ಎಂದೇ ಹೇಳಬಹುದಾದ ಕೃಷಿ, ಕೈಗಾರಿಕಾ ಕ್ಷೇತ್ರಗಳತ್ತಲೂ ಮೋದಿ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಿದೆ ಎಂಬುದು ಎಲ್ಲರೂ ಒಪ್ಪುವ ವಾದ.

Follow Us:
Download App:
  • android
  • ios