Asianet Suvarna News Asianet Suvarna News

ಆರ್ಥಿಕ ಪುನಶ್ಚೇತನ ಒಂದು ಊಹೆ: ಆ್ಯಕ್ಟೀವ್ ಆಯ್ತು ಆರ್‌ಬಿಐ ಗವರ್ನರ್ ಗುಹೆ!

ಆರ್ಥಿಕ ಪುನಶ್ಚೇತನ ಕಷ್ಟಸಾಧ್ಯ ಎಂದ ಆರ್‌ಬಿಐ ಗವರ್ನರ್| ಸದ್ಯದ ಪರಿಸ್ಥಿತಿಯಲ್ಲಿ ಪುನಶ್ಚೇತನ ಕೇವಲ ಊಹಾಪೋಹ ಎಂದ ಶಕ್ತಿಕಾಂತ್ ದಾಸ್|  ದೇಶದ ಜಿಡಿಪಿ ಕುಸಿತ ಅನಿರೀಕ್ಷಿತ ಬೆಳವಣಿಗೆ ಎಂದ ಶಕ್ತಿಕಾಂತ್| 'ಉದ್ಯೋಗ ಕಡಿತಕ್ಕೆ ಕಾರಣವಾದ ಉತ್ಪಾದನಾ ಕ್ಷೇತ್ರದಲ್ಲಿನ ಭಾರೀ ಕುಸಿತ'| ಆರ್ಥಿಕ ಕುಸಿತದ ಆತಂಕವನ್ನು ಆರ್‌ಬಿಐ ಮೊದಲೇ ಗ್ರಹಿಸಿತ್ತು ಎಂದ ದಾಸ್| ರೆಪೋ ದರ ಕಡಿತ ಆರ್ಥಿಕ ಪ್ರಗತಿಗೆ ಸಹಾಯಕ ಎಂದು ಅಭಿಪ್ರಾಯಪಟ್ಟ ಆರ್‌ಬಿಐ ಗವರ್ನರ್|

RBI Governor Shaktikanta Das Says Difficult To Predict Indian Economic Revival
Author
Bengaluru, First Published Sep 17, 2019, 12:49 PM IST

ನವದೆಹಲಿ(ಸೆ.17): ದೇಶದ ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಆರ್ಥಿಕ ಪುನಶ್ಚೇತನ ಕಷ್ಟಸಾಧ್ಯ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅಭಿಪ್ರಾಯಪಟ್ಟಿದ್ದಾರೆ.

ಜಿಡಿಪಿ ಅಭಿವೃದ್ಧಿ ದರ ಶೇ.5ಕ್ಕೆ ಕುಸಿತ ಕಂಡಿದ್ದ ಅನಿರೀಕ್ಷಿತ ಬೆಳವಣಿಗೆ ಎಂದು ಹೇಳಿರುವ ಶಕ್ತಿಕಾಂತ್, ವೇಗದ ಆರ್ಥಿಕ ಪುನಶ್ಚೇತನ ಕೇವಲ ಊಹಾಪೋಹ ಎಂದು ಹೇಳಿದ್ದಾರೆ.

ವಿವಿಧ ಕ್ಷೇತ್ರಗಳ ಉತ್ಪಾದನಾ ಸಾಮರ್ಥ್ಯ ಕುಸಿತವಾಗಿದ್ದು, ಇದಕ್ಕೆ ಪೂರಕವಾಗಿ ಉದ್ಯೋಗದಲ್ಲೂ ಭಾರೀ ಕಡಿತ ಕಂಡುಬರುತ್ತಿದೆ ಎಂದು ಆರ್‌ಬಿಐ ಗವರ್ನರ್ ಆತಂಕ ವ್ಯಕ್ತಪಡಿಸಿದ್ದು, ದೀರ್ಘ ಕಾಲದ ಯೋಜನೆಗಳ ಮೂಲಕ ಪುನಶ್ಚೇತನಕ್ಕೆ ದಾರಿ ಕಂಡುಕೊಳ್ಳಬೇಕಿದೆ ಎಂದು ಸಲಹೆ ನೀಡಿದ್ದಾರೆ.

ಆರ್ಥಿಕ ಕುಸಿತದ ಆತಂಕವನ್ನು ಆರ್‌ಬಿಐ ಮೊದಲೇ ಗ್ರಹಿಸಿತ್ತು ಎಂದಿರುವ ಶಕ್ತಿಕಾಂತ್, ಇದೇ ಕಾರಣಕ್ಕೆ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಲು ಹಾಗೂ ಬೇಡಿಕೆ ಹೆಚ್ಚಿಸುವ ಸಲುವಾಗಿ ರೆಪೋ ದರದಲ್ಲಿ 25 ಮೂಲಾಂಕದಷ್ಟು ಕಡಿತ ಮಾಡಲು ನಿರ್ಧರಿಸಲಾಯಿತು ಎಂದು ತಿಳಿಸಿದ್ದಾರೆ.

 

Follow Us:
Download App:
  • android
  • ios