ಭಾರತದ ಆರ್ಥಿಕತೆ ಅತ್ಯಂತ ದುರ್ಬಲವಾಗಿದೆ ಎಂದ ಅಭಿಜಿತ್ ಬ್ಯಾನರ್ಜಿ| 2019ರ ಸಾಲಿನ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ| ಭಾರತದ ಆರ್ಥಿಕತೆ ಸುಧಾರಿಸುವ ಯಾವುದೇ ಲಕ್ಷಣವಿಲ್ಲ ಎಂದ ಬ್ಯಾನರ್ಜಿ| 'ಭಾರತದ ಆರ್ಥಿಕತೆ ಅಸ್ಥಿರವಾಗಿರುವುದು ಪ್ರಸ್ತುತ ಅಂಕಿ ಆಂಶಗಳಿಂದ ಸ್ಪಷ್ಟ'| 'ಕಳೆದ ಐದು ವರ್ಷಗಳಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಸಾಕ್ಷಿಯಾಗಿದೆ'| 'ಸರ್ಕಾರದ ಹಲವು ತಪ್ಪು ನೀತಿಗಳಿಂದಾಗಿ ಭಾರತದಲ್ಲಿ ಆರ್ಥಿಕ ಹಿಂಜರಿಕೆ'|ಆರ್ಥಿಕ ಹಿಂಜರಿಕೆ ದೇಶವನ್ನು ಮತ್ತಷ್ಟು ದುಸ್ಥಿತಿಗೆ ತಳ್ಳುವುದು ಖಚಿತ ಎಂದ ಅಭಿಜಿತ್|

ನವದೆಹಲಿ(ಅ.16): ಭಾರತದ ಆರ್ಥಿಕತೆ ಅತ್ಯಂತ ದುರ್ಬಲವಾಗಿದ್ದು, ಸುಧಾರಿಸುವ ಯಾವುದೇ ಭರವಸೆಯೂ ಇಲ್ಲ 2019ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಆರ್ಥಿಕತೆ ಅಸ್ಥಿರವಾಗಿರುವುದು ಪ್ರಸ್ತುತ ಅಂಕಿ ಆಂಶಗಳಿಂದ ಸ್ಪಷ್ಟವಾಗುತ್ತಿದ್ದು, ತಕ್ಷಣಕ್ಕೆ ಸುಧಾರಿಸುವ ಯಾವುದೇ ಲಕ್ಷಣವೂ ಇಲ್ಲ ಎಂದು ಭಾರತೀಯ ಮೂಲದ ಅಮೆರಿಕದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅಂದಾಜಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಸಾಕ್ಷಿಯಾಗಿದ್ದು, ಸರ್ಕಾರದ ಹಲವು ತಪ್ಪು ನೀತಿಗಳಿಂದಾಗಿ ಭಾರತೀಯರಿಗೆ ಇದೀಗ ಅಭಿವೃದ್ಧಿ ಭಾಗ್ಯವೂ ಇಲ್ಲವಾಗಿದೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.

Scroll to load tweet…

ಭಾರತ ಸರ್ಕಾರ ಆರ್ಥಿಕ ನೀತಿಗಳನ್ನು ನಿರೂಪಿಸುವಲ್ಲಿ ಎಡವುತ್ತಿದ್ದು, ಆರ್ಥಿಕ ಹಿಂಜರಿಕೆ ದೇಶವನ್ನು ಮತ್ತಷ್ಟು ದುಸ್ಥಿತಿಗೆ ತಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಅಭಿಜಿತ್ ಬ್ಯಾನರ್ಜಿ ಎಚ್ಚರಿಸಿದ್ದಾರೆ.

ಜಾಗತಿಕ ಬಡತನ ನಿರ್ಮೂಲನೆಗೆ ತೋರಿದ ಪ್ರಯೋಗಾತ್ಮಕ ನಡೆಗಳಿಗಾಗಿ ಅಭಿಜಿತ್‌ ಬ್ಯಾನರ್ಜಿ ಹಾಗೂ ಅವರ ಪತ್ನಿ ಈಸ್ಟರ್‌ ಡುಫ್ಲೋ, ಮೈಖಲ್ ಕ್ರೆಮರ್ ಜೊತೆ 2019ರ ಸಾಲಿನ ನೊಬೆಲ್‌ ಪ್ರಶಸ್ತಿ ಹಂಚಿಕೊಂಡಿದ್ದಾರೆ.