ಚಿನ್ನದ ಸಾಲವನ್ನು ನವೀಕರಿಸುವಾಗ ಚಿನ್ನದ ಪ್ರಸ್ತುತ ಮೌಲ್ಯ ಮತ್ತು ಎಲ್‌ಟಿವಿ (LTV) ಅನುಪಾತವನ್ನು ಗಮನಿಸುವುದು ಅತ್ಯಗತ್ಯ. ಚಿನ್ನದ ಬೆಲೆ ಕಡಿಮೆಯಾದರೆ ಎಲ್‌ಟಿವಿ ಹೆಚ್ಚಾಗಿ, ಬ್ಯಾಂಕ್‌ಗಳು ಬಾಕಿ ಮೊತ್ತ ಪಾವತಿಸಲು ಅಥವಾ ಹೆಚ್ಚುವರಿ ಚಿನ್ನ ನೀಡಲು ಕೇಳಬಹುದು. ಆದ್ದರಿಂದ ನವೀಕರಣಕ್ಕೂ ಮುನ್ನ ಬಡ್ಡಿದರ, ಶುಲ್ಕಗಳು ಮತ್ತು ಮರುಮೌಲ್ಯಮಾಪನದ ಬಗ್ಗೆ ಎಚ್ಚರವಿರಬೇಕು.

ಅತ್ಯಂತ ಸಂದಿಗ್ಧ ಸಂದರ್ಭದಲ್ಲಿ ಕೂಡಲೇ ಹಣ ಬೇಕು ಎಂದರೆ ಹಲವರು ತಮ್ಮ ಬಳಿ ಇರುವ ಚಿನ್ನ ಅಡವಿಟ್ಟು ಸಾಲ ಪಡೆದುಕೊಳ್ಳುವುದು ಸುಲಭ ಮಾರ್ಗ. ಮನೆಯಲ್ಲಿರುವ ಆಭರಣ ಅಡವಿಟ್ಟು ಅಗತ್ಯ ಹಣ ಪಡೆದುಕೊಳ್ಳುತ್ತೇವೆ. ಆದರೆ ಸಾಲ ಗಡುವು ಮುಗಿಯುವ ಸಂದರ್ಭದಲ್ಲಿ ಒಂದೇ ಬಾರಿಗೆ ಒಟ್ಟು ಮೊತ್ತವನ್ನು ಕಟ್ಟುವುದು ಕಷ್ಟ ಆದರೆ, ಕೆಲವರು ಲೋನ್ ರೆನ್ಯೂವಲ್ ಮಾಡಿಕೊಳ್ಳುತ್ತಾರೆ. ಇದು ನಮಗೆ ಸುಲಭವಾದ ವಿಧಾನ ಎನಿಸಿದರೂ, ಲೋನ್ ರೆನ್ಯೂವಲ್ ಮಾಡುವ ಸಂದರ್ಭದಲ್ಲಿ ಒಂದು ಅಂಶವನ್ನು ಗಮನಿಸಬೇಕು.

ಚಿನ್ನದ ಸಾಲ ರಿನ್ಯೂವಲ್ ಮಾಡುವಾಗ ಈ ರಹಸ್ಯ ನಿಯಮ ನಿಮಗೆ ಗೊತ್ತೇ?

ಹೌದು, ನೀವು ಸಾಲ ರಿನ್ಯೂವಲ್ ಮಾಡಿಕೊಳ್ಳುವ ಸಂದರ್ಭದಲ್ಲಿ ನಿಮ್ಮ ಚಿನ್ನದ ಇಂದಿನ ಮೌಲ್ಯ ಎಷ್ಟು ಎಂಬ ಅಂಶವನ್ನು ಗಮನಿಸಬೇಕು. ಏಕೆಂದರೆ ಸಾಲಕ್ಕೆ ಭದ್ರತೆ ಇದ್ದರೂ ಚಿನ್ನದ ಬೆಲೆ ಮಾರ್ಕೆಟ್ ಬೆಲೆಗೆ ತಕ್ಕಂತೆ ಮತ್ತೆ ಲೆಕ್ಕ ಮಾಡುವ ಅವಕಾಶ ಇರುತ್ತದೆ. ಚಿನ್ನ ದರದಲ್ಲಿ ಬದಲಾವಣೆ ಆದರೆ ನಿಮ್ಮ ಸಾಲಕ್ಕೆ ಸಂಬಂಧಿಸಿದ Loan to Value ಅಂದರೆ LTV ಕೂಡ ಬದಲಾವಣೆ ಆಗುತ್ತದೆ.

ಚಿನ್ನದ ದರ ಕಡಿಮೆಯಾದರೆ ಏನಾಗುತ್ತೆ?

ನೀವು ಚಿನ್ನ ಮೇಲಿನ ಸಾಲ ತೆಗೆದುಕೊಂಡ ಸಂದರ್ಭದಲ್ಲಿ ಬೆಲೆ ಹೆಚ್ಚು ಇರಬಹುದು. ಆ ಸಮಯದಲ್ಲಿ ಆಭರಣ ಬೆಲೆ ಹೆಚ್ಚಾಗಿರುವ ಕಾರಣ ಬ್ಯಾಂಕ್ ನಿಮಗೆ ಅಗತ್ಯ ಇರುವಷ್ಟು ಹಣದ ಸಾಲವನ್ನು ನೀಡುತ್ತದೆ. ಆದರೆ ಆ ಬಳಿಕ ಚಿನ್ನದ ಬೆಲೆ ಕಡಿಮೆಯಾದರೆ ಚಿನ್ನಾಭರಣದ ಬೆಲೆ ಕೂಡ ಕಡಿಮೆಯಾಗುತ್ತದೆ. ಆದರೆ ನಿಮಗೆ ಕಟ್ಟಬೇಕಾದ ಹಣ ಕಡಿಮೆ ಆಗುವುದಿಲ್ಲ. ಇದರ ಪರಿಣಾಮವಾಗಿ, ಸಾಲದ ಮೌಲ್ಯ ಮತ್ತು ಅಡಮಾನವಿಟ್ಟ ಚಿನ್ನದ ಮೌಲ್ಯದ ನಡುವಿನ ಅನುಪಾತವು ಹೆಚ್ಚಾಗುವ ಸಾಧ್ಯತೆಯಿದೆ.ಇದನ್ನು ಎಲ್‌ಟಿವಿ ಹೆಚ್ಚಾಗುವುದು ಅಂತ ಕರೆಯುತ್ತಾರೆ.

ಆರ್‌ಬಿಐ ನಿಯಮಗ ಅನ್ವಯ, ನಿಗದಿಪಡಿಸಲಾದ ಗರಿಷ್ಠ ಎಲ್‌ಟಿವಿ (LTV) ಮಿತಿಯನ್ನು ಸಾಲದ ಸಂಪೂರ್ಣ ಅವಧಿಯಾದ್ಯಂತ ಕಡ್ಡಾಯವಾಗಿ ಪಾವತಿಸಬೇಕಾಗುತ್ತದೆ. ಇದರಿಂದ ನಿಮ್ಮ ಚಿನ್ನದ ಮೌಲ್ಯ ಗಣನೀಯವಾಗಿ ಕಡಿಮೆಯಾಗಲಿದೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ನವರು ಬಾಕಿ ಮೊತ್ತವನ್ನು ಕಡಿಮೆ ಮಾಡಲು ಅಥವಾ ನಿಯಮಗಳ ಪ್ರಕಾರ ಅರ್ಹ ಭದ್ರತೆಯ ಚಿನ್ನವನ್ನು ಒದಸಿಲು ನಿಮಗೆ ಕೇಳಬಹುದು.

ನಿಮಗೆ ಚಿನ್ನ ಮೌಲ್ಯದ ಆಧಾರವಾಗಿಯೇ ಸಾಲ ನೀಡುವುದರಿಂದ ಚಿನ್ನ ಬೆಲೆ ಬಹಳ ಮುಖ್ಯವಾಗುತ್ತದೆ. ಆರ್ಬಿಐ ನಿಯಮಗಳ ಅನ್ವಯ, ಗ್ರಾಹಕ ಸಾಲಗಳಿಗೆ ಗರಿಷ್ಠ ಎಲ್‌ಟಿವಿ 2.5 ಲಕ್ಷದ ವರೆಗಿನ ಸಾಲಗಳಿಗೆ ಶೇಕಡಾ 85, 2.5 ಲಕ್ಷಕ್ಕಿಂತ ಹೆಚ್ಚು 5 ಲಕ್ಷದ ವರೆಗೂ ನೀಡಿದರೆ ಶೇಕಡಾ 80ರಷ್ಟು ಮತ್ತು 5 ಲಕ್ಷಕ್ಕಿಂತ ಹೆಚ್ಚಿನ ಸಾಲಗಳಿಗೆ ಶೇಕಡಾ 75 ರಷ್ಟು ಮಿತಿಯನ್ನು ವಿಧಿಸಲಾಗಿದೆ.

ಉದಾಹರಣೆಗೆ ನೀವು 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಅಡವಿಟ್ಟು 5 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರೆ, ಚಿನ್ನದ ಮೌಲ್ಯ 6.6 ಲಕ್ಷಕ್ಕೆ ಇಳಿದಿದ್ದರೆ, ಆಗ ನೀವು ಪಾವತಿಸಬೇಕಾದ 5 ಲಕ್ಷ ಮೇಲಾಧಾರ ಚಿನ್ನದ ಮೌಲ್ಯದ ಭಾಗವಾಗುತ್ತದೆ. ಆದ್ದರಿಂದ ಸಾಲ ತೆಗೆದುಕೊಳ್ಳುವ ಮುನ್ನ ಲೋನ್ ನವೀರಕಸಿಲಾಗುತ್ತಾ ಅಂತ ಕೂಡ ಗಮನಿಸಬೇಕಾಗುತ್ತದೆ. ನಿಮ್ಮ ಬಾಕಿ ಮೊತ್ತ ಎಷ್ಟು? ಹೊಸ ಎಲ್‌ಟಿವಿ ಅನುಪಾತ ಎಷ್ಟು? ಇಂತಹ ವಿಚಾರಗಳನ್ನು ಗಮನಿಸಬೇಕಾಗುತ್ತದೆ.

ನೀವು ಚಿನ್ನದ ಸಾಲ ನವೀಕರಿಸುವ ಸಂದರ್ಭದಲ್ಲಿ, ಹೊಸ ಅವಧಿ, ಬಡ್ಡಿದರ, ಬಡ್ಡಿ ಪಾವತಿ ವಿಧಾನ, ಇತರ ಶುಲ್ಕಗಳಂತ ಅಂಶಗಳನ್ನು ನಾವು ಗಮನಿಸಬೇಕು. ಸಾಲ ನವೀಕರಿಸುವ ಮುನ್ನ ಸೇವ ಶುಲ್ಕ ಇದೆಯಾ? ಸಾಲದಾತರು ಚಿನ್ನದ ಮರುಮೌಲ್ಯಮಾಪನ ಮಾಡುತ್ತಾರಾ? ಚಿನ್ನ ಬೆಲೆಗಳಲ್ಲಿ ಆದ ಬದಲಾವಣೆಯನ್ನು ತಿಳಿದುಕೊಳ್ಳಬೇಕು. ಚಿನ್ನ ಬೆಲೆ ಕುಸಿತ ಕಂಡ ಸಂದರ್ಭದಲ್ಲಿ ಎಲ್‌ಟಿವಿ ಮಿತಿ ಕಡಿಮೆಯಾದರೆ, ಸಾಲ ಪಡೆದುಕೊಂಡವರಿಗೆ ಸಮಸ್ಯೆಯಾಗುತ್ತದೆ.