ಗುಡ್ ಬೈ 2018: ಇರಾನ್ ತೈಲ ಬರತ್ತೆ, ಬರಲ್ಲಗಳ ಮಧ್ಯೆ ಮುಗಿದ ವರ್ಷ!

ಇರಾನ್ ಕಚ್ಚಾತೈಲದ ಬರುವಿಕೆಗಾಗಿ ಕಾಯುತ್ತಿದ್ದ ಭಾರತ| ಇರಾನ್ ಮೇಲಿನ ಅಮೆರಿಕದ ಆರ್ಥಿಕ ದಿಗ್ಬಂಧನದ ಪರಿಣಾಮ| ಇರಾನ್‌ನಿಂದ ಭಾರತಕ್ಕೆ ಕಚ್ಚಾತೈಲದ ಆಮದಿನ ಮೇಲೆ ಕರಿನೆರಳು| ಪ್ರಧಾನಿ ಮೋದಿ ಯಶಸ್ವಿ ವಿದೇಶಾಂಗ ನೀತಿಯ ಪರಿಣಾಮ| ಇರಾನ್‌ನಿಂದ ಕಚ್ಚಾತೈಲ ಆಮದಿಗೆ ಭಾರತಕ್ಕೆ ಒಪ್ಪಿಗೆ ನೀಡಿದ ಅಮೆರಿಕ

Goodbye 2018 India Successfully Importing Crude Oil From Iran Despite UN Sanction

ಬೆಂಗಳೂರು(ಡಿ.28): 2018 ಇನ್ನೇನು ಮುಗಿಯುತ್ತಾ ಬಂದಿದೆ. ಭೂಮಿಯ ಆಯಸ್ಸಿಗೆ, ಮಾನವ ಜನಾಂಗದ ಇತಿಹಾಸಕ್ಕೆ ಮತ್ತೊಂದು ವರ್ಷ ಸೇರ್ಪಡೆಯಾಗಲಿದೆ. 2019ರ ರೂಪದಲ್ಲಿ ಮತ್ತೊಂದು ಹೊಸ ವರ್ಷ ನಮ್ಮ ಜೀವನದಲ್ಲಿ ಪ್ರವೇಶ ಪಡೆಯಲಿದೆ.

ವರ್ಷಾಂತ್ಯದಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನವನ್ನೊಮ್ಮೆ ರಿವೈಂಡ್ ಮಾಡಿ ನೋಡುವುದುಂಟು. ಏನಾಯ್ತು?, ಏನಾಗಬೇಕಿತ್ತು?, ಸರಿ ಏನು?, ತಪ್ಪು ಮಾಡಿದ್ದೆಲ್ಲಿ?, ಹೀಗೆ ವರ್ಷದ ರಿಪೋರ್ಟ್ ಕಾರ್ಡ್ ಮನಸ್ಸಲ್ಲೇ ರೆಡಿ ಮಾಡಲಾಗುತ್ತದೆ.

ಹಾಗೆ ದೇಶ ಕೂಡ ಒಂದು ವರ್ಷದ ಅವಧಿಯಲ್ಲಿ ತಾನು ಮುನ್ನಡೆದ ಹಾದಿಯ ಕುರಿತು ಒಮ್ಮೆ ಗ್ಲ್ಯಾನ್ಸ್ ಮಾಡುತ್ತದೆ. ಹೀಗೆ ದೇಶದ ವಾರ್ಷಿಕ ಆಗುಹೋಗುಗಳ ಬಗ್ಗೆ ಹಿಂತಿರುಗಿ ನೋಡಿದರೆ ಪ್ರಮುಖವಾಗಿ ಕಾಣ ಸಿಗುವುದು, ಇರಾನ್ ಮೇಲಿನ ಅಮೆರಿಕದ ಆರ್ಥಿಕ ದಿಗ್ಬಂಧನ ಮತ್ತು ಭಾರತಕ್ಕೆಇರಾನ್ ಕಚ್ಚಾತೈಲ ಆಮದು ಕುರಿತಾದ ಅನಿಶ್ಚಿತತೆ.

ಇರಾನ್‌ನಿಂದ ತೈಲ ಆಮದು ಪ್ರಮಾಣ ಇಳಿಕೆ

ಹೌದು, ಮೊದಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದ ಜನತೆಗೆ, ಇರಾನ್ ಮೇಲಿನ ಆರ್ಥಿಕ ದಿಗ್ಬಂಧನ ಮತ್ತಷ್ಟು ಆತಂಕ ತಂದೊಡ್ಡಿತ್ತು. ಒಂದು ವೇಳೆ ಭಾರತಕ್ಕೆ ಇರಾನ್ ಕಚ್ಚಾತೈಲ ಆಮದು ನಿಂತರೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುವುದು ಖಚಿತ ಎಂಬ ಆತಂಕ ಜನರಲ್ಲಷ್ಟೇ ಅಲ್ಲ ಕೇಂದ್ರ ಸರ್ಕಾರದಲ್ಲೂ ಮನೆ ಮಾಡಿತ್ತು.

ಇನ್ಮೇಲೆ ನಮಗೆ ಇರಾನ್‌ನಿಂದ ಸ್ವಲ್ಪ ತೈಲವಷ್ಟೇ ಬರೋದು!

ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಸಫಲ ವಿದೇಶಾಂಗ ನೀತಿಯ ಪರಿಣಾಮವಾಗಿ ಇರಾನ್‌ನಿಂದ ಭಾರತಕ್ಕೆ ಕಚ್ಚಾತೈಲ ಆಮದು ಮುಂದುವರೆಯಿತು. ಪ್ರಮುಖವಾಗಿ ಇರಾನ್ ಮೇಲೆ ಆರ್ಥಿಕ ದಿಗ್ಬಂಧನ ಹೇರಿದ್ದ ಅಮೆರಿಕಕ್ಕೆ ಪ್ರಧಾನಿ ಮೋದಿ ಇರಾನ್ ಕಚ್ಚಾತೈಲ ಭಾರತಕ್ಕೆಷ್ಟು ಮಹತ್ವ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಈ ಪರಿಣಾಮ ಭಾರತ ಇರಾನ್‌ನಿಂಧ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳಬಹುದು ಎಂದು ಅಮೆರಿಕ ಸಡಿಲಿಕೆ ನೀಡಿತು.

ಇರಾನ್ ಬೇಡ, ನಾವಿದ್ದೀವಿ ‘ಫ್ರೆಂಡ್’ ಭಾರತದ ಜೊತೆ: ಯುಎಸ್!

ಅಮೆರಿಕ ಬೇಡ ಅಂತಿದೆ: ಕೇಳದ ಭಾರತ ಇರಾನ್‌ಗೇ ಉಘೇ ಎಂದಿದೆ!

ಇರಾನ್ ಕೈ ಬಿಡದಿದ್ದರೆ ‘ನೋಡ್ಕೊತೀವಿ’: ಭಾರತಕ್ಕೆ ಟ್ರಂಪ್ ಬೆದರಿಕೆ!

ದ್ವೇಷ ಶುರು: ಕರೆನ್ಸಿ ಪಟ್ಟಿಯಿಂದ ಭಾರತವನ್ನು ಹೊರಗಟ್ಟಲಿದೆ ಅಮೆರಿಕ?

ಈ ಮಧ್ಯೆ ಒಂದು ವೇಳೆ ಇರಾನ್ ಕಚ್ಚಾತೈಲದಲ್ಲಿ ವ್ಯತ್ಯಯ ಉಂಟಾದರೆ ಸೌದಿ ಅರೇಬಿಯಾದಿಂದ ಕೊರತೆ ನೀಗಿಸಿಕೊಳ್ಳುವ ಯೋಜನೆಯನ್ನು ಕೂಡ ಪ್ರಧಾನಿ ಮೋದಿ ಹೊಂದಿದ್ದರು. ಇದೆಲ್ಲದರ ಪರಿಣಾಮ ಜನ ಕಚ್ಚಾತೈಲ ಆಮದು ಮತ್ತು ಪಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುವ ಭರವಸೆ ವ್ಯಕ್ತಪಡಿಸಿದರು.

ಭಾರತ-ಅಮೆರಿಕ ತೈಲ ಮಾತುಕತೆ: ಟ್ರಂಪ್ ಕೇಳ್ತಾರಾ ನಮ್ಮ ವ್ಯಥೆ?

ಏನಿದು ಆರ್ಥಿಕ ದಿಗ್ಬಂಧನ?:

ಇರಾನ್ ಅಣು ಯೋಜನೆಗಳನ್ನು ಅನುಮಾನದಿಂದ ನೋಡುತ್ತಿದ್ದ ಅಮೆರಿಕ, ಇರಾನ್ ಗುಪ್ತವಾಗಿ ಅಣುಬಾಂಬ್ ತಯಾರಿಸುತ್ತಿದೆ ಎಂದು ಮೊದಲಿನಿಂದಲೂ ಆರೋಪ ಮಾಡುತ್ತಾ ಬಂದಿತ್ತು. ಇರಾನ್ ಗುಪ್ತ ಅಣು ಯೋಜನೆಗಳು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅಶಾಂತಿಯ ವಾತಾವರಣಕ್ಕೆ ಕಾರಣವಾಗಬಹುದು ಎಂಬುದು ಅಮೆರಿಕದ ಆತಂಕವಾಗಿತ್ತು. ಹೀಗಾಗಿ ಅಣು ಯೋಜನೆಗಳನ್ನು ಕೂಡಲೇ ನಿಲ್ಲಿಸುವಂತೆ ಅಮೆರಿಕ ಅಂತಾರಾಷ್ಟ್ರೀಯವಾಗಿ ಒತ್ತಡ ಹೇರುತ್ತಲೇ ಬಂದಿತ್ತು.

ನವೆಂಬರ್ 4ರ ನಿರ್ಬಂಧ ಭೀತಿ: ನಮಗೆ ಇರಾನ್ ತೈಲದ ಗತಿ?

ಟ್ರಂಪ್ ಗೇಮ್ ಆಫ್ ಥ್ರೋನ್ ಫೋಟೋ: ಈ ಅಹಂಕಾರ ಬೇಕಿತ್ತಾ?

ಆದರೆ ಕೇವಲ ಶಾಂತಿಗಾಗಿ ಅಣು ಯೋಜನೆಗಳನ್ನು ಕೈಗೆತ್ತಿಕೊಂಡಿರುವುದಾಗಿ ಪ್ರತಿಪಾದಿಸುತ್ತಾ ಬಂದಿದ್ದ ಇರಾನ್, ತನ್ನ ಅಣು ಯೋಜನೆಗಳನ್ನು ಸ್ಥಗಿತಗೊಳಿಸಲು ನಿರಾಕರಿಸಿತ್ತು. ಈ ಪರಿಣಾಮವಾಗಿ ನವೆಂಬರ್ 4, 2018ರಂದು ಅಮೆರಿಕ ಇರಾನ್ ಮೇಲೆ ಆರ್ಥಿಕ ದಿಗ್ಬಂಧನ ಹೇರಿತು. ಅಲ್ಲದೇ ಯಾವುದೇ ರಾಷ್ಟ್ರ ಇರಾನ್ ಜೊತೆ ವ್ಯವಹರಿಸಬಾರದು ಎಂದು ಕರಾರು ಮಾಡಿತು.

ಹೊಡಿ ಒಂಬತ್: ಇಂಡಿಯಾಗೆ ಇರಾನ್ ಆಯಿಲ್ ಎಂದ ಟ್ರಂಪ್!

ಅಮೆರಿಕದ ಈ ನಿರ್ಧಾರದಿಂದ ಬೆಚ್ಚಿ ಬಿದ್ದಿದ್ದು ಚೀನಾ ಮತ್ತು ಭಾರತ. ಕಾರಣ ಇರಾನ್‌ನಿಂದ ಕಚ್ಚಾತೈಲ ಆಮದು ಮಾಡಿಕೊಳ್ಳುವ ಪಟ್ಟಿಯಲ್ಲಿ ಚೀನಾ ಮತ್ತು ಭಾರತ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ.

ಇರಾನ್‌ಗೆ ನಮ್ಮ ರೂಪಾಯಿ: ಮೋದಿಯಿಂದ ಟ್ರಂಪ್ ಬಡಪಾಯಿ!

ಆಯ್ತ್ರಪ್ಪಾ ನಿಮ್ ದುಡ್ಡೇ ಕೊಡಿ: ಇರಾನ್‌ಗೆ 'ಅರ್ಥ'ವಾದರು ಮೋದಿ!

ಆದರೆ ಯಶಸ್ವಿ ಮಾತುಕತೆಗಳ ಬಳಿಕ ಅಮೆರಿಕ ವಿಶ್ವದ ಒಟ್ಟು 8 ರಾಷ್ಟ್ರಗಳಿಗೆ ಕಚ್ಚಾತೈಲ ಆಮದಿನಲ್ಲಿ ಸಡಲಿಕೆ ನೀಡಲು ಒಪ್ಪಿಕೊಂಡಿತು. ಈ ಎಲ್ಲ ಬೆಳವಣಿಗೆಗಳ ಪರಿಣಾಮವಾಗಿ ಭಾರತಕ್ಕೆ ಇರಾನ್‌ನಿಂದ ಕಚ್ಚಾತೈಲ ಸುಗಮವಾಗಿ ಆಮದು ಆಗುವಂತಾಯಿತು.

ಇದನ್ನೂ ಓದಿ-ಗುಡ್ ಬೈ 2018: ದಿನವೂ ಏಕೆ ಪೆಟ್ರೋಲ್ ಸುದ್ದಿ?, ಮಾರುಕಟ್ಟೆಯಷ್ಟೇ ನಾವೂ ಜಿದ್ದಿ!

ಗುಡ್ ಬೈ 2018: ಆರ್ಥಿಕ ನಾಗಾಲೋಟದಲ್ಲಿ ಮೋದಿ ಕೈ ಬಿಟ್ಟ ಪ್ರಮುಖರು!

ಗುಡ್ ಬೈ 2018: ಆರ್ಥಿಕತೆಯಲ್ಲಿ ವಿಶ್ವಗುರುವಾಗುವತ್ತ ಭಾರತದ ನಡಿಗೆ!

Latest Videos
Follow Us:
Download App:
  • android
  • ios