ಟ್ರಂಪ್ ಗೇಮ್ ಆಫ್ ಥ್ರೋನ್ ಫೋಟೋ: ಈ ಅಹಂಕಾರ ಬೇಕಿತ್ತಾ?
ಇರಾನ್ ಅಣಕಿಸಲು ಇಂಥಾ ಫೋಟೋ ಬೇಕಿತ್ತಾ ಟ್ರಂಪ್?! ಗೇಮ್ ಆಫ್ ಥ್ರೋನ್ ಪೋಸ್ಟರ್ ರೀತಿಯ ಫೋಟೋ ವೈರಲ್! ಟ್ವಿಟ್ಟರ್‌ನಲ್ಲಿ ಫೋಟೋ ಶೇರ್ ಮಾಡಿದ ಅಧ್ಯಕ್ಷ ಡೋನಾಲ್ಡ್ ಟ್ರಂಪ್! ಸಾರ್ವಭೌಮ ರಾಷ್ಟ್ರವೊಂದಕ್ಕೆ ಅವಮಾನಿಸುವ ಪರಿ ಸರಿಯೇ?! ಟ್ರಂಪ್ ಫೋಟೋಗೆ ಕೇಳಿ ಬಂತು ವ್ಯಾಪಕ ಟೀಕೆ
ವಾಷಿಂಗ್ಟನ್(ನ.3): ಆರ್ಥಿಕ ದಿಗ್ಬಂಧನ ಎನ್ನುವುದು ವಿಶ್ವದ ರಾಜಕೀಯ ಭೂಪಟದಲ್ಲಿ ಅತಿರೇಕದಿಂದ ವರ್ತಿಸುವ ರಾಷ್ಟ್ರವೊಂದಕ್ಕೆ ಪಾಠ ಕಲಿಸಲು ಬಳಸುವ ಪ್ರಬಲ ಅಸ್ತ್ರ.
ವಿಶ್ವಶಾಂತಿಯ ಮೇಲೆ ದುಷ್ಪರಿಣಾಮ ಬೀರಬಲ್ಲ ರಾಷ್ಟ್ರವೊಂದರ ರಾಜಕೀಯ ನೀತಿಗಳಿಗೆ ಕಡಿವಾಣ ಹಾಕಲು, ಇತರ ರಾಷ್ಟ್ರಗಳು ಅದರ ಮೇಲೆ ದಿಗ್ಬಂಧನ ಹೇರುವುದು ಸಾಮಾನ್ಯವೂ ಮತ್ತು ನ್ಯಾಯಯುತವೂ ಆಗಿದೆ.
ಅದರಂತೆ ಇರಾನ್ ಮೇಲಿನ ಅಮೆರಿಕದ ದಿಗ್ಬಂಧನಕ್ಕೆ ಇನ್ನೇನು ಕ್ಷಣಗಣನೆ ಶುರುವಾಗಿದೆ. ಇರಾನ್ ಮೇಲಿನ ಅಮೆರಿಕದ ದಿಗ್ಬಂಧನ ಎಷ್ಟು ನ್ಯಾಯಯುತವದುದು, ಇದೊಂದು ಅನ್ಯಾಯದ ಏಕಪಕ್ಷೀಯ ನಿರ್ಧಾರವೇ ಈ ಕುರಿತಾದ ಚರ್ಚೆ ಈಗಾಗಲೇ ನಡೆಯುತ್ತಿದೆ. ಆದರೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನಿರ್ಬಂಧದ ಕುರಿತು ಮಾಡಿರುವ ಟ್ವೀಟ್‌ವೊಂದು ಮಾತ್ರ ಎಲ್ಲರೂ ಟೀಕಿಸುವಂತೆ ಮಾಡಿದೆ.
— Donald J. Trump (@realDonaldTrump) November 2, 2018
ಹೌದು, ಇರಾನ್ ಮೇಲಿನ ಅಮೆರಿಕದ ಆರ್ಥಿಕ ದಿಗ್ಬಂಧನದ ಕುರಿತು ಅಲ್ಲಿನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದು, ಅದರಲ್ಲಿ ತಮ್ಮನ್ನು ಹೀರೋ ಎಂಬಂತೆ ಬಿಂಬಿಸಿಕೊಂಡಿದ್ದಾರೆ. ಹಾಲಿವುಡ್ ನ ಪ್ರಸಿದ್ಧ ವೆಬ್ ಸಿರೀಸ್ ಆದ ‘ಗೇಮ್ ಆಫ್ ಥ್ರೋನ್ಸ್ ಪೋಸ್ಟರ್’ ರೀತಿಯಲ್ಲಿ ಟ್ರಂಪ್ ತಮ್ಮ ಫೋಟೋ ಮುಂಭಾಗದಲ್ಲಿ ‘Sanctions Are Coming..November 5..’ ಎಂದು ಶಿರ್ಷಿಕೆ ನೀಡಿದ್ದಾರೆ.
ಇರಾನ್ ಮೇಲಿನ ಅಮೆರಿಕದ ದಿಗ್ಬಂಧನದ ಕುರಿತು ಪರ ವಿರೋಧ ಏನೇ ಏರಲಿ ಆದರೆ ಸಾರ್ವಭೌಮ ರಾಷ್ಟ್ರವೊಂದರ ಮೇಲೆ ಈ ರೀತಿಯ ಗಮ್ಮತ್ತಿನ ಸವಾರಿಯ ನಡೆ ಸರಿಯಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಇರಾನ್ ಗೆ ಬೆದರಿಸುವ ರೀತಿಯಲ್ಲಿರುವ ಟ್ರಂಪ್ ಫೋಟೋಗೆ ಟೀಕೆಗಳೂ ಕೇಳಿ ಬಂದಿವೆ.