business idea : ಕಸ ಅಂತ ಎಸೆಯುವ ವಸ್ತುಗಳೇ ನಮ್ಮ ಆದಾಯಕ್ಕೆ ಮೂಲವಾಗ್ತಿದೆ. ಜನರಲ್ಲಿ ಪರಿಸರ ಸ್ನೇಹ ಹೆಚ್ಚಾಗ್ತಿದ್ದು, ನೈಸರ್ಗಿಕ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ನೀವು ಈ ಬ್ಯುಸಿನೆಸ್ ಶುರು ಮಾಡಿ ಹಣ ಸಂಪಾದನೆ ಮಾಡ್ಬಹುದು.

ಬಾಳೆ ಹಣ್ಣು, ಕಾಯಿಯನ್ನು ನಾವು ಬಳಸ್ತೇವೆ. ಆದ್ರೆ ದಿಂಡನ್ನು ಸಾಮಾನ್ಯವಾಗಿ ಕಸ ಅಂತ ಎಸಿತೇವೆ. ನೀವೂ ಬಾಳೆ ಕೃಷಿ ಮಾಡ್ತಿದ್ರೆ ಬರೀ ಬಾಳೆ ಕಾಯಿ, ಹಣ್ಣಿನ ಮಾರಾಟವಲ್ಲ, ಬಾಳೆ ದಿಂಡಿನಿಂದ ಲಕ್ಷಾಂತರ ರೂಪಾಯಿ ದುಡಿಯಬಹುದು. ಅದು ಹೇಗೆ ಅಂತ ನಾವು ಹೇಳ್ತೇವೆ.

ಬಾಳೆ ನಾರಿನ ಬ್ಯುಸಿನೆಸ್

ಬಾಳೆ ದಿಂಡಿನಿಂದ ನೈಸರ್ಗಿಕ ಬಾಳೆ ನಾರನ್ನು ತಯಾರಿಸಿ ಬಿಸಿನೆಸ್ ಮಾಡಬಹುದು. ಜವಳಿ, ಕರಕುಶಲ ವಸ್ತುಗಳು, ಪೇಪರ್, ಪ್ಯಾಕೇಜಿಂಗ್ ಮತ್ತು ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆಯಲ್ಲಿ ಬಾಳೆ ನಾರನ್ನು ಬಳಸಲಾಗುತ್ತದೆ. ನೈಸರ್ಗಿಕ ಮತ್ತು ಪರಿಸರ ಸ್ನೇಹಿ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಈ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿವೆ.

ಎಷ್ಟು ಹೂಡಿಕೆ ಬೇಕು?

ಸಣ್ಣ ಪ್ರಮಾಣದಲ್ಲಿ ಆರಂಭಿಸುವುದಾದರೆ ಸುಮಾರು 2 ರಿಂದ 5 ಲಕ್ಷ ರೂಪಾಯಿ ಹೂಡಿಕೆ ಮಾಡ್ಬೇಕು. ಮಧ್ಯಮ ಮಟ್ಟದಲ್ಲಿ ಬ್ಯುಸಿನೆಸ್‌ ಶುರು ಮಾಡೋದಾದ್ರೆ 8 ರಿಂದ 20 ಲಕ್ಷ ರೂಪಾಯಿ ಹಾಗೂ ದೊಡ್ಡ ಪ್ರಮಾಣದ ಪ್ರೊಸೆಸಿಂಗ್ ಯೂನಿಟ್ಗೆ 25 ಲಕ್ಷ ರೂಪಾಯಿಗೂ ಹೆಚ್ಚು ಹೂಡಿಕೆ ಅಗತ್ಯವಿದೆ. ನಿಜವಾದ ವೆಚ್ಚ ಯಂತ್ರೋಪಕರಣ, ಸ್ಥಳ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.

ನೀವು ಬಾಳೆ ಬೆಳೆಯಬೇಕಾಗಿಲ್ಲ. ಬಾಳೆ ಬೆಳೆಯುವ ಪ್ರದೇಶ ಹಾಗೂ ಬಾಳೆ ಬೆಳೆಯುವ ರೈತರನ್ನು ಸಂಪರ್ಕಿಸಿ ಬಾಳೆ ನಾರಿನ ಬ್ಯುಸಿನೆಸ್‌ ಶುರು ಮಾಡ್ಬಹುದು. ರೈತರಿಂದ ಬಾಳೆ ದಿಂಡನ್ನು ನಿರಂತರವಾಗಿ ಪಡೆಯುವ ವ್ಯವಸ್ಥೆ ಮಾಡಬೇಕು. ನಂತರ ನಾರು ತೆಗೆಯುವ ಯಂತ್ರ ಮತ್ತು ಸಂಸ್ಕರಣಾ ವಿಧಾನಗಳ ಬಗ್ಗೆ ತರಬೇತಿ ಪಡೆಯಬೇಕು. ದಿಂಡಿನಿಂದ ನಾರನ್ನು ಬೇರ್ಪಡಿಸಿ, ಸ್ವಚ್ಛಗೊಳಿಸಿ, ಒಣಗಿಸಿ ಉತ್ತಮ ಗುಣಮಟ್ಟದಲ್ಲಿ ತಯಾರಿಸುವುದು ಮುಖ್ಯ.

ಈ ನಾರನ್ನು ಜವಳಿ ತಯಾರಕರು, ಹ್ಯಾಂಡಿಕ್ರಾಫ್ಟ್ ತಯಾರಕರು, ಪೇಪರ್ ಮತ್ತು ಪ್ಯಾಕೇಜಿಂಗ್ ಕಂಪನಿಗಳು, ಪರಿಸರ ಸ್ನೇಹಿ ಉತ್ಪನ್ನಗಳ ಬ್ರ್ಯಾಂಡ್ಗಳು ಹಾಗೂ ರಫ್ತುದಾರರಿಗೆ ಮಾರಾಟ ಮಾಡಬಹುದು. ಕೇವಲ ನಾರನ್ನು ಮಾರಾಟ ಮಾಡುವ ಬದಲು ಅದರಿಂದ ಹಗ್ಗ, ಚಾಪೆ, ಬ್ಯಾಗ್, ಹ್ಯಾಂಡಿಕ್ರಾಫ್ಟ್ ವಸ್ತುಗಳು, ವಿಶೇಷ ಪೇಪರ್ ಮತ್ತು ಪರಿಸರ ಸ್ನೇಹಿ ಪ್ಯಾಕೇಜಿಂಗ್ ಉತ್ಪನ್ನಗಳನ್ನು ತಯಾರಿಸಿದರೆ ಹೆಚ್ಚಿನ ಲಾಭ ಗಳಿಸಬಹುದು.

ಸ್ಥಳೀಯ ಮಾರುಕಟ್ಟೆಯಿಂದ ಆರಂಭಿಸಿ, B2B ಗ್ರಾಹಕರನ್ನು ಬೆಳೆಸಿಕೊಂಡು, ಬೇಡಿಕೆ ಹೆಚ್ಚಾದಂತೆ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಿ ವಿದೇಶಿ ಮಾರುಕಟ್ಟೆಗೂ ವಿಸ್ತರಿಸಬಹುದು. ಕೃಷಿ ತ್ಯಾಜ್ಯವನ್ನು ಆದಾಯದ ಮೂಲವನ್ನಾಗಿ ಮಾಡಿಕೊಳ್ಳುವ ಈ ಬಿಸಿನೆಸ್ ನಲ್ಲಿ ನೀವು ಹೆಚ್ಚಿನ ಲಾಭ ಗಳಿಸಬಹುದು.