ಭಾರತದ ಸಂಪ್ರದಾಯಗಳನ್ನು ಪಾಲಿಸುವಲ್ಲಿ ಅಂಬಾನಿ ಕುಟುಂಬ ಮುಂದಿದೆ. ಮಕ್ಕಳ ಬರ್ತ್ ಡೇಯನ್ನು ಅಂಬಾನಿ ಕುಟುಂಬ ಭಿನ್ನವಾಗಿ ಆಚರಿಸಿದ್ದು, ಇದಕ್ಕೂ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬರ್ತ್ ಡೇ ಈಗ ಫ್ಯಾಷನ್ ಆಗ್ಬಿಟ್ಟಿದೆ. ದೊಡ್ಡ ಪಾರ್ಟಿ ಮಾಡಿ, ಕೇಕ್ ಕತ್ತರಿಸಿ, ಪಬ್, ಬಾರ್ ಗಳಲ್ಲಿ ಮೋಜು ಮಸ್ತಿ ಮಾಡುವ ಜನರೇ ಹೆಚ್ಚಿದ್ದಾರೆ. ಶ್ರೀಮಂತ ಕುಟುಂಬದ ಬರ್ತ್ ಡೇ ಪಾರ್ಟಿಗಳು ಹಾಗೇ ಇರುತ್ವೆ ಅಂತ ನಮ್ಮೆಲ್ಲರ ಭಾವನೆ. ಆದ್ರೆ ಭಾರತದ ಶ್ರೀಮಂತ ಕುಟುಂಬ ಅಂಬಾನಿ ಫ್ಯಾಮಿಲಿ, ಬರ್ತ್ ಡೇ ಪಾರ್ಟಿಯನ್ನು ಭಿನ್ನವಾಗಿ ಆಚರಿಸಿ ಎಲ್ಲರ ಗಮನ ಸೆಳೆದಿದೆ.
ಬರ್ತ್ ಡೇ ಯಲ್ಲಿ ಗಣೇಶನ ಭಜನೆ?
ಮಕ್ಕಳ ಬರ್ತ್ ಡೇ ಇರಲಿ ಇಲ್ಲ ದೊಡ್ಡವರ ಬರ್ತ್ ಡೇ ಇರಲಿ, ಕೇಕ್ ಕತ್ತರಿಸುವಾಗ ಇಂಗ್ಲೀಷ್ ಸಾಂಗ್ ಪ್ಲೇ ಆಗ್ತಿರುತ್ತೆ. ಇಲ್ಲ ಬಂದ ಗೆಸ್ಟ್ ಹ್ಯಾಪಿ ಬರ್ತ್ ಡೇ ಟೂ ಯೂ ಅಂತ ಹಾಡು ಹೇಳ್ತಿರ್ತಾರೆ. ಆದ್ರೆ ಅಂಬಾನಿ ಕುಟುಂಬ, ಪಾರ್ಟಿಯಲ್ಲಿ ಹ್ಯಾಪಿ ಬರ್ತ್ ಡೇ ಟೂ ಯೂ ಹಾಡಿನ ಬದಲು ಗಣೇಶನ ಹಾಡನ್ನು ಹಾಡಲಾಗಿದೆ.
ಅಂಬಾನಿ ಕುಟುಂಬದಲ್ಲಿ ಯಾವುದೇ ಶುಭ ಸಮಾರಂಭವಿರಲಿ, ಭಾರತೀಯ ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಗಳಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಇದೀಗ ಕುಟುಂಬದ ಮಕ್ಕಳ ಹುಟ್ಟುಹಬ್ಬದ ಸಂದರ್ಭದಲ್ಲಿ ಗಣಪತಿ ಆರತಿ ಮಾಡುತ್ತಿರುವ ಹಾಡನ್ನು ಹಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಮಕ್ಕಳಿಬ್ಬರು ಕೇಕ್ ಕತ್ತರಿಸುತ್ತಿದ್ದಾರೆ. ನೀತಾ ಅಂಬಾನಿ ಹಾಗೂ ಇಶಾ ಅಂಬಾನಿ ಅವರಿಗೆ ಸಹಾಯ ಮಾಡ್ತಿದ್ದಾರೆ. ಹಿಂದೆ ನಿಂತ ಜನರು, ಗಣೇಶಾನಾಯ ಹಾಡನ್ನು ಹಾಡ್ತಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ಇಂಗ್ಲೀಷ್ ಸಾಂಗ್ ಬದಲು ಗಣೇಶನ ಹಾಡನ್ನು ಹಾಡಿರೋದು ನೆಟ್ಟಿಗರ ಗಮನ ಸೆಳೆದಿದೆ. ಆದ್ರೆ ಅನೇಕರು ಇದಕ್ಕೂ ವಿರೋಧ ವ್ಯಕ್ತಪಡಿಸಿದ್ದಾರೆ. ಕೇಕ್ ಕತ್ತರಿಸಿದ್ದು ಏಕೆ ಅಂತ ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಇದು ತೋರಿಕೆಗೆ ಎಂಬ ಕಮೆಂಟ್ ಮಾಡಿದ್ದಾರೆ. ಇದು ಅಂಬಾನಿ ಕುಟುಂಬದ ಮಕ್ಕಳ ಬರ್ತ್ ಡೇ ಅಲ್ಲ, ಕಾರ್ಯಕ್ರಮವೊಂದರ ವಿಡಿಯೋ ಎನ್ನುವ ಮಾತುಗಳೂ ಕೇಳಿ ಬಂದಿವೆ.
ಅಂಬಾನಿ ಕುಟುಂಬ ಭಾರತದ ಪ್ರತಿಯೊಂದು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತದೆ. ಗಣೇಶ ಚೌತಿಯಲ್ಲೂ ಅಂಬಾನಿ ಕುಟುಂಬ ಗಣೇಶನಿಗೆ ಪೂಜೆ ಮಾಡಿ ವಿಜ್ರಂಭಣೆಯಿಂದ ಗಣೇಶನ ವಿಸರ್ಜನೆ ಮಾಡುತ್ತದೆ.


