ಪೆಟ್ರೋಲ್ ಬಂಕ್ ಡೀಲರ್‌ಗೆ ಒಂದು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಮಾರಾಟ ಮಾಡಿದರೆ ಎಷ್ಟು ಹಣ ಸಿಗುತ್ತದೆ? ಡೀಲರ್ ಕಮಿಷನ್, ಬಂಕ್ ನಿರ್ವಹಣೆ ವೆಚ್ಚ ಮತ್ತು ಇತರ ಎಲ್ಲಾ ಹೂಡಿಕೆ ಸೇರಿ ಎಷ್ಟು ಲಾಭ ಸಿಗುತ್ತೆ ಎಂದು ತಿಳಿದುಕೊಳ್ಳಲು ಈ ಸ್ಟೋರಿ ಓದಿ.

ನಿಮ್ಮ ವಾಹನಕ್ಕೆ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸಿಕೊಳ್ಳಲು ಬಂಕ್‌ಗೆ ಹೋದ ಸಂದರ್ಭದಲ್ಲಿ ಅದರ ಮಾಲೀಕರಿಗೆ ತಿಂಗಳಿಗೆ ಅಥವಾ ದಿನಕ್ಕೆ ಎಷ್ಟು ಹಣ ಸಿಗುತ್ತೆ ಅಂತ ನೀವು ಒಮ್ಮೆ ಆದರೂ ಯೋಚನೆ ಮಾಡಿರುತ್ತೀರಿ. ಪೆಟ್ರೋಲ ಪಂಪ್ ಮಾಲೀಕರು ಟ್ಯಾಂಕರ್ ತುಂಬಿಸಿ ತರುತ್ತಾರೆ, ಆದ್ದರಿಂದ ಅವರಿಗೆ ಲೀಟರ್‌ಗೆ 10-12 ರೂಪಾಯಿ ಲಾಭ ಸಿಗುತ್ತದೆ ಎಂದು ಹಲವರು ಭಾವಿಸುತ್ತಾರೆ. ನೀವು ಕೂಡ ಇದೇ ರೀತಿ ಯೋಚನೆ ಮಾಡಿದ್ದರೆ ನಿಮ್ಮ ಊಹೆ ತಪ್ಪು. ಅಸಲಿಗೆ ಪೆಟ್ರೋಲ್ ಬಂಕ್ ವ್ಯವಹಾರ ಹೇಗೆ ನಡೆಯುತ್ತದೆ ಎಂದು ನಾವು ಹೇಳುತ್ತೇವೆ ಕೇಳಿ.

ಪೆಟ್ರೋಲ್ ಬಂಕ್ ಆದಾಯ

ಪೆಟ್ರೋಲಿಯಂ ಪ್ಲಾನಿಂಗ್ ಅಂಡ್ ಅನಾಲಿಸಿಸ್ ಸೆಲ್ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಡೀಲರ್ ಕಮಿಷನ್ ಅನ್ನು ಒಂದು ಸೂತ್ರದ ಆಧಾರದ ಮೇಲೆ ನೀಡಲಾಗುತ್ತದೆ. ಇದರಲ್ಲಿ ಉತ್ಪನ್ನದ ಬಿಲ್ ಮಾಡುಬಹುದಾದ ಮೌಲ್ಯದ ಒಂದು ಸಣ್ಣ ಶೇಕಡಾವಾರು ಜೊತೆಗೆ ನಿಗದಿತ ಮೊತ್ತವೂ ಸೇರಿದೆ. ಇದರಂತೆ 2024ರ ಡಿಸೆಂಬರ್‌ 01 ರಿಂದ ಪೆಟ್ರೋಲ್‌ಗೆ ಡೀಲರ್ ಕಮಿಷನ್‌ಅನ್ನು ಪ್ರತಿ ಕಿಲೋಮೀಟರ್‌ಗೆ (1000 ಲೀಟರ್) 3,144.03 ರೂ. ಮತ್ತು ಉತ್ಪನ್ನದ ಬಿಲ್ ಮಾಡಬಹುದಾದ ಮೌಲ್ಯದ 0.870 ಪ್ರತಿಶತ ಎಂದು ನಿಗದಿ ಪಡಿಸಲಾಗಿದೆ. ಒಂದು ಕಿಲೋಮೀಟರ್ ಎಂದರೆ 1000 ಲೀಟರ್. ಆದ್ದರಿಂದ ಪ್ರತಿ ಕಿಲೋಗೆ 3,114.03 ರೂ. ಸ್ಥಿರ ಭಾಗವು ಪ್ರತಿ ಲೀಟರ್‌ಗೆ ಸುಮಾರು 3.14 ರೂ. ಆಗಿರುತ್ತದೆ. ಇದಕ್ಕೆ ಉತ್ಪನ್ನದ ಬಿಲ್ ಮಾಡಬಹುದಾದ ಮೌಲ್ಯದ 0.870 ಪ್ರತಿಶತದಷ್ಟು ಕಮಿಷನ್ ಅನ್ನು ಸೇರಿಸಲಾಗುತ್ತದೆ.

ತೆರೆಮರೆಯ ಅಚ್ಚರಿಯ ಲೆಕ್ಕಾಚಾರ

ಸರಳವಾಗಿ ಹೇಳುವುದಾದರೆ, ಒಂದು ಪೆಟ್ರೋಲ್ ಪಂಪ್ 1,000 ಲೀಟರ್ ಪೆಟ್ರೋಲ್ ಮಾರಾಟ ಮಾಡಿದರೆ, ಅದು ಸ್ಥಿರ ಕಮಿಷನ್ ಆಗಿ ಸುಮಾರು 3,144 ರೂಪಾಯಿ ಗಳಿಸುತ್ತದೆ. ಇದರಲ್ಲಿ 0.870 ಪಾಲು ಕೂಡ ಸೇರಿರುತ್ತದೆ. ಅದೇ ರೀತಿ 5 ಸಾವಿರ ಲೀಟರ್ ಪೆಟ್ರೋಲ್ ಮಾಡಿದರೆ, ಸ್ಥಿರ ಕಮಿಷನ್ ಸುಮಾರು 15,720 ರೂಪಾಯಿ ಸಿಗುತ್ತದೆ. ಆದ್ದರಿಂದ ಪೆಟ್ರೋಲ್ ಬಂಕ್ ಆದಾಯವೂ ಲೀಟರ್‌ಗೆ ಗಳಿಸುವ ಲಾಭಕ್ಕಿಂತ ಮಾರಾಟವಾಗುವ ಲೀಟರ್‌ಗಳ ಸಂಖ್ಯೆಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ.

ಕಮಿಷನ್ ಸಿಗುವ ಅಷ್ಟು ಹಣವೂ ಲಾಭ ಅಲ್ಲ!

ಇನ್ನು, ಡೀಸೆಲ್ ಮಾರಾಟದಿಂದ ಸಿಗುವ ಆದಾಯ ಎಷ್ಟು ಅಂತ ನೋಡುವುದಾದರೆ. 2024 ಡಿಸೆಂಬರ್ 1ರಂದು ಪಿಪಿಎಸಿ ನೀಡಿರುವ ಮಾಹಿತಿಯ ಅನ್ವಯ, ಡೀಸೆಲ್‌ಗೆ ಡೀಲರ್ ಕಮಿಷನ್ ಪ್ರತಿ ಕಿಲೋಮೀಟರ್‌ಗೆ (1000 ಲೀಟರ್) 2,332.51 ರೂ. ಮತ್ತು ಉತ್ಪನ್ನದ ಬಿಲ್ ಮಾಡಬಹುದಾದ ಮೌಲ್ಯದ 0.266 ಶೇಕಡಾ ಇರುತ್ತದೆ. ಅಂದರೆ ಸ್ಥಿರ ಭಾಗವು ಪ್ರತಿ ಲೀಟರ್‌ಗೆ 2.33 ರೂ. ರಷ್ಟಿರುತ್ತದೆ. ಒಂದು ಬಂಕ್ ದಿನಕ್ಕೆ 5 ಸಾವಿರ ಲೀಟರ್ ಡೀಸೆಲ್ ಮಾರಾಟ ಮಾಡಿದರೆ ಸ್ಥಿರ ಭಾಗಕ್ಕೆ ಕಮಿಷನ್ ಸುಮಾರು 11,662.55 ರೂ. ಸಿಗುತ್ತದೆ. ಇದರಲ್ಲಿ ಉತ್ಪನ್ನದ ಬಿಲ್ ಮಾಡಬಹುದಾದ ಮೌಲ್ಯದ 0.266 ಶೇಕಡಾ ಭಾಗವೂ ಸೇರಿರುತ್ತದೆ.

ಇನ್ನು, ಕಮಿಷನ್ ಸಿಗುವ ಅಷ್ಟು ಹಣವೂ ಲಾಭ ಅಂದುಕೊಂಡರೆ ಸರಿ ಅಲ್ಲ. ಏಕೆಂದರೆ ಮೆಟ್ರೋಲ್ ಪಂಪ್ ಮಾಲೀಕ, ನೌಕರರ ಸಂಬಳ, ವಿದ್ಯುತ್, ಬಂಕ್ ನಿರ್ವಹಣೆ, ಯಂತ್ರಗಳ ಸೇವೆ ಮತ್ತು ಸರ್ವೀಸ್, ಭದ್ರತೆ, ಸ್ವಚ್ಛತೆ, ಬ್ಯಾಂಕ್ ಮತ್ತು ಡಿಜಿಟಲ್ ಪಾವತಿ ಸಂಬಂಧಿತ ವೆಚ್ಚಗಳು ಸೇರಿ ಹಲವು ವೆಚ್ಚಗಳನ್ನು ಭರಿಸಬೇಕಾಗುತ್ತದೆ.

ಒಂದು ಅಂದಾಜು ಲೆಕ್ಕಾ ತೆಗೆದುಕೊಂಡದರೆ, ಒಂದು ಪೆಟ್ರೋಲ್ ಬಂಕ್‌ನಲ್ಲಿ ಪ್ರತಿ ದಿನ 5 ಸಾವಿರ ಲೀಟರ್ ಪೆಟ್ರೋಲ್ ಮಾರಾಟ ಆದರೆ, ಡೀಲರ್ ಕಮಿಷನ್ 15,720 ರೂಪಾಯಿ ಸಿಗುತ್ತದೆ. ಪ್ರತಿ ದಿನ 5 ಸಾವಿರ ಲೀಟರ್, ತಿಂಗಳಿಗೆ 30 ದಿನ ಅಂದರೆ 4.71 ಲಕ್ಷ ರೂಪಾಯಿ ಕಮಿಷನ್ ಹಣ ಸಿಗುತ್ತದೆ. ಇದರಲ್ಲಿ ಸಿಬ್ಬಂದಿ ಸಂಬಂಳ, ವಿದ್ಯುತ್ ಸೇರಿದಂತೆ ಎಲ್ಲಾ ವೆಚ್ಚಗಳನ್ನು ಕಡಿತಗೊಳಿಸಿದರೆ, ಮಾಲೀಕರಿಗೆ ತಿಂಗಳಿಗೆ 2 ಲಕ್ಷ ರೂಪಾಯಿ ನಿವ್ವಳ ಲಾಭ ಸಿಗಲಿದೆ ಎಂದು ಅಂದಾಜು ಮಾಡಬಹುದು. ಅಂದರೆ ಒಂದು ಲೀಟರ್ ಪೆಟ್ರೋಲ್ ಮಾಡಿದರೆ ಮಾಲೀಕನಿಗೆ ಒಂದು ರೂಪಾಯಿಯಿಂದ ಒಂದೂವರೆ ರೂಪಾಯಿ ನಿವ್ವಳ ಆದಾಯ ಸಿಗುತ್ತದೆ.