ಎಷ್ಟೇ ದುಡಿದ್ರೂ ಹಣೆಬರ ಇಷ್ಟೇ ಒಂದು ಪೈಸೆ ಕೈಯಲ್ಲಿ ನಿಲ್ಲಲ್ಲ ಅನ್ನೋರಿಗೆ ಈ ಸ್ಟೋರಿ ಸಹಾಯ ಆಗಬಹುದು. ಜಸ್ಟ್‌ 15 ವರ್ಷಕ್ಕೆ ಸಿಂಚನಾ ಎಂಬ ಬೆಂಗಳೂರಿನ ಹುಡುಗಿ 14 ಲಕ್ಷ ಹೂಡಿಕೆ ಮಾಡಿದ್ದಾಳೆ. ಇದು ಹೇಗೆ ಸಾಧ್ಯ? ಸ್ಟೋರಿ ಓದಿ..

ಅದೆಷ್ಟೋ ಮಂದಿ ದುಡ್ಡು ಮಾಡಬೇಕು, ಕೈತುಂಬಾ ಹಣ ಉಳಿಸಿಕೊಳ್ಳಬೇಕು ಅಂದ್ಕೊಳ್ತಾರೆ. ಬದುಕಿನಲ್ಲಿ ಶಿಸ್ತು ಇಲ್ಲದಿದ್ದಾಗ ಒಂದು ಪೈಸೇ ಕೂಡ ಜೇಬಿನಲ್ಲಿ ಇರೋದಿಲ್ಲ. ನೀವೇನಾದರೂ ಹಣ ಉಳಿಸಬೇಕು? ಹೇಗೆ ಪ್ಲಾನ್‌ ಮಾಡೋದು ಅಂತಾ ಯೋಚ್ನೆ ಮಾಡ್ತಿದ್ರೆ ಈ ಸ್ಟೋರಿ ತುಂಬಾನೇ ಹೆಲ್ಪ್‌ಫುಲ್‌ ಆಗಬಹುದು. ಮುಂದೆ ಓದಿ..

ಹೆಸರು ಸಿಂಚನಾ ಸಂತೋಷ್.‌ ವಯಸ್ಸು 15.. ಊರು ಬೆಂಗಳೂರಿನ ರಾಜರಾಜೇಶ್ವರಿನಗರ. SSLC ಓದುತ್ತಿರುವ ಈಕೆ, 13.9 ಲಕ್ಷಣ ಹಣವನ್ನು ಹೂಡಿಕೆ ಮಾಡಿದ್ದಾರೆ. ಜೊತೆಗೆ ಇಷ್ಟೂ ಹಣವನ್ನೂ ಯಾರ ಸಹಾಯವಿಲ್ಲದೆಯೇ ಸ್ವತಃ ಆಕೆಯೇ ನಿರ್ವಹಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಸಣ್ಣ ಪಾಕೆಟ್‌ ಮನಿಯಿಂದ ಶುರುವಾದ ಉಳಿತಾಯ ಇಂದು ಅವರನ್ನು ಎತ್ತರಕ್ಕೆ ಕೊಂಡೊಯ್ದಿದೆ. ಷೇರು ಮಾರುಕಟ್ಟೆ ಬಗ್ಗೆ ಅಪಾರ ಜ್ಞಾನ ಹೊಂದಿರುವ ಇವರ ಸ್ಫೂರ್ತಿದಾಯ ಕತೆ ಇಲ್ಲಿದೆ.

ಹಣ ಉಳಿತಾಯ ಶುರುವಾದ ಮೂಲ

ಸಿಂಚನಾ ಚಿಕ್ಕವರಿದ್ದಾಗ ಅಪ್ಪ-ಅಮ್ಮ ಪಾಕೆಟ್‌ ಮನಿ ಕೊಡ್ತಿದ್ದರು. ಹಬ್ಬ ಹರಿದಿನಗಳಲ್ಲಿ ಮನೆಯ ಹಿರಿಯರೂ ಕೂಡ ಹಣ ನೀಡುತ್ತಿದ್ದರು. ಈ ಹಣವನ್ನ ಸಿಂಚನಾ ಖರ್ಚು ಮಾಡುತ್ತಿರಲಿಲ್ಲ. ಎಲ್ಲೆವನ್ನೂ ತೆಗೆದುಕೊಂಡು ಬಂದು ಮಡಿಕೆಯ ಹುಂಡಿಯಲ್ಲಿ ಇಡುತ್ತಿದ್ದಳು. ಹೀಗೆ ಮಣ್ಣಿನ ಹುಂಡಿಯಲ್ಲಿ ಇಡುತ್ತಿದ್ದ ಹಣ ಆಕೆಗೆ 12 ವರ್ಷ ತುಂಬುವಷ್ಟರಲ್ಲಿ 10 ಸಾವಿರ ಜಮೆ ಆಗಿತ್ತು. ಈ ರೀತಿ ಹಣ ಉಳಿಸಿ ಇಂದು ಷೇರು ಮಾರುಕಟ್ಟೆಯಲ್ಲಿ ಬರೋಬ್ಬರಿ 14 ಲಕ್ಷ ಹಣ ಹೂಡಿಕೆ ಮಾಡಿದ್ದಾರೆ.

ಹೂಡಿಕೆ ಬಗ್ಗೆ ಅಪಾರ ಜ್ಞಾನ

ಸಿಂಚನಾಗೆ ಕೇವಲ ಹಣ ಉಳಿಸಿದರೆ ಸಾಲದು. ಅದನ್ನು ಹೂಡಿಕೆ ಮಾಡಬೇಕು ಎಂಬುದನ್ನ ಅಪ್ಪ-ಅಮ್ಮ ತಿಳಿಸಿಕೊಟ್ಟರು ಎನ್ನಲಾಗಿದೆ. ಇದೇ ಕಾರಣಕ್ಕೆ ಪೋಷಕರ ಸಲಹೆಯಂತೆ, ಯೂಟ್ಯೂಬ್ ಮೂಲಕ ಅಂಕುರ್ ವಾರಿಕೂ, ಡೇವ್ ರಾಮ್ಸೆ, ಸೋನಿಯಾ ಶೆಣೈ ಮೊದಲಾದ ತಜ್ಞರ ವೀಡಿಯೊಗಳನ್ನು ನೋಡಲು ಶುರುಮಾಡಿ ತಿಳಿದುಕೊಂಡಿದ್ದಾಳೆ. ವಿಷಯವನ್ನು ತಿಳಿದಕೊಳ್ಳುವುದಷ್ಟೇ ಅಲ್ಲದೇ, ಮಾರುಕಟ್ಟೆಗೆ ಸಂಬಂಧಿಸಿದ ರಾಷ್ಟ್ರಮಟ್ಟದ ಪರೀಕ್ಷೆಗಳನ್ನ ಎದುರಿಸಿದಳು. ಕಠಿಣ ಪರೀಕ್ಷೆಗಳಾದ NISM ನ ಎರಡು ಸರ್ಟಿಫಿಕೇಟ್ ಹಾಗೂ SEBI (ಸೆಬಿ)ನ ಒಂದು ಪ್ರಮಾಣಪತ್ರ ಪಡೆದಿದ್ದಾಳೆ ಎನ್ನಲಾಗಿದೆ.

13.9 ಲಕ್ಷ ಹೂಡಿಕೆ ಮಾಡಿದ್ದು ಹೇಗೆ?

ಹಣಕಾಸು ವಿಚಾರದಲ್ಲಿ ಮಗಳಿಗೆ ಬಂದಿರುವ ಜ್ಞಾನ ನೋಡಿದ ಪೋಷಕರು, ಕೆಲವು ಇನ್ಶೂರೆನ್ಸ್‌ ಪಾಲಿಸಿಗಳಲ್ಲಿದ್ದ ಹಣವನ್ನು ಹಿಂಪಡೆದು ಮಗಳ ಕೈಗೆ ಕೊಟ್ಟಿದ್ದಾರೆ. ನಂತರ ಹಿರಿಯರ ಸಲಹೆಯಂತೆ ಸಿಂಚನಾ ಷೇರುಗಳು, ಮ್ಯೂಚುಯಲ್ ಫಂಡ್‌ಗಳು ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ಹಣ ತೊಡಗಿಸಿದ್ದಾಳೆ. ಇನ್ನು ಆಕೆ ಮ್ಯೂಚುಯಲ್ ಫಂಡ್ ಆಯ್ಕೆಗೆ GDP ಎಂಬ ಸರಳ ಸೂತ್ರವನ್ನು ಫಾಲಿಸಿಕೊಂಡು ಬರುತ್ತಿದ್ದಾಳೆ. ಅದು ಏನು ಅಂತಾ ನೋಡೋದಾದ್ರೆ..

  • Growth: ದೀರ್ಘಾವಧಿಯಲ್ಲಿ ಹಣ ಬೆಳೆಯುವ ‘ಗ್ರೋತ್ ಫಂಡ್‌’ಗಳು (Growth Funds).
  • D (Direct): ಯಾವುದೇ ಮಧ್ಯವರ್ತಿಗಳಿಲ್ಲದೆ ಕಮಿಷನ್ ಉಳಿಸುವ ‘ಡೈರೆಕ್ಟ್ ಪ್ಲಾನ್’ಗಳು (Direct Plans).
  • P (Passive): ಇಂಡೆಕ್ಸ್ ಆಧರಿಸಿ ಸುರಕ್ಷಿತವಾಗಿರುವ ‘ಪ್ಯಾಸಿವ್ ಫಂಡ್‌’ಗಳು (Passive Index Funds).