ಗಣೇಶ ಹಬ್ಬದಲ್ಲಿ ನೀತಾ ಅಂಬಾನಿ ಅವರು ಧರಿಸಿದ್ದ 'ಆಮ್ರಪಾಲಿ ಭಾರತಂ' ಎಂಬ ವಿಶೇಷ ನೆಕ್ಲೆಸ್ ಎಲ್ಲರ ಗಮನ ಸೆಳೆದಿದೆ. ದೇಶದ ವಿವಿಧ ಭಾಗಗಳ ಪ್ರಾಚೀನ ಆಭರಣಗಳನ್ನು3 ವರ್ಷಗಳ ಕಾಲ ಸಂಗ್ರಹಿಸಿ ಈ ಅಪರೂಪದ ಹಾರವನ್ನು ತಯಾರಿಸಲಾಗಿದೆ. ಇದರ ಬೆಲೆ ಬಹಿರಂಗವಾಗಿಲ್ಲದಿದ್ದರೂ, ಇದು ಲಕ್ಷಾಂತರ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ.

ಅಗರ್ಭ ಶ್ರೀಮಂತ ಮುಕೇಶ್‌ ಅಂಬಾನಿ ಪತ್ನಿ ನೀತಾ ಅಂಬಾನಿ ಮತ್ತೆ ಟ್ರೆಂಡಿಂಗ್‌ನಲ್ಲಿದ್ದಾರೆ. ಕಾರಣ ಇಷ್ಟೇ, ಅವರು ಈ ಬಾರಿ ಗಣೇಶ ಹಬ್ಬದಲ್ಲಿನ ಉಡುಗೆ ವಿಚಾರಕ್ಕೆ. ರಾಯಲ್‌ ಲುಕ್‌ನಲ್ಲಿ ಮಿಂಚಿದರು‌. ಈ ವೇಳೆ ಅವರು ರಾಯಲ್‌ ನೆಕ್ಸೆಸ್‌ ತೊಟ್ಟಿದ್ದರು. ಆ ಫೋಟೋವೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ನೆಟ್ಟಿಗರ ಕಣ್ಣು ಅವರು ತೊಟ್ಟಿದ್ದ ನೆಕ್ಲೆಸ್‌ ಮೇಲೆ ಬಿದ್ದಿದೆ..

ಹೇಗಿತ್ತು ಲುಕ್?‌

ನೀತಾ ಅಂಬಾನಿ ಲುಕ್ ಅದ್ಭುತವಾಗಿತ್ತು. 60ನೇ ವಯಸ್ಸಿನಲ್ಲೂ ತುಂಬಾ ಚೆನ್ನಾಗಿ ಕಾಣುತ್ತಿದ್ದರು. ಅವರು ಕಿತ್ತಳೆ ಮತ್ತು ಗುಲಾಬಿ ಬಣ್ಣದ ಓಂಬ್ರೆ ರೇಷ್ಮೆ ಸೀರೆ ಧರಿಸಿದ್ದರು. ಅವರು ಸೀರೆಯನ್ನು ದೊಡ್ಡ ಗಾತ್ರದ ಹಾರದೊಂದಿಗೆ ಜೋಡಿಸಿದ್ದರು. ಇದು ಎಲ್ಲರ ಗಮನಸೆಳೆಯಿತು. ಚಿನ್ನದಿಂದ ಮಾಡಲ್ಪಟ್ಟ ಹಾರವು ತುಂಬಾ ಅದ್ಭುತವಾಗಿತ್ತು.

ನೆಕ್ಲೆಸ್‌ನ ವಿಶೇಷತೆ ಏನು?

ಕೆಲವು ವರದಿಗಳ ಪ್ರಕಾರ.. ಈ ಹಾರವನ್ನು ʼಆಮ್ರಪಾಲಿ ಭಾರತಂʼ ಎಂದು ಕರೆಯುತ್ತಾರೆ. ಇದನ್ನು ಆಮ್ರಪಾಲಿ ಜ್ಯುವೆಲ್ಸ್ ರಚಿಸಿದೆ. ಅಂದ್ಹಾಗೆ ಇದು ಸಾಮಾನ್ಯ ಸರವಲ್ಲ. ಇದನ್ನ ಮತ್ತೆ ಮರುಸೃಷ್ಟಿ ಮಾಡೋದು ಸುಲಭವಿಲ್ಲ. ವಿಶೇಷತೆ ಏನು ಅಂದರೆ ದೇಶದ ವಿವಿಧ ಭಾಗಗಳಿಂದ ವಿಂಟೇಜ್ ಮತ್ತು ಪ್ರಾಚೀನ ಆಭರಣಗಳನ್ನು ಸಂಗ್ರಹಿಸಿ ತಯಾರಿಸಲಾಗಿದೆ. ಈ ಆಭರಣಗಳನ್ನ ಸಂಗ್ರಹಿಸಲು 3 ವರ್ಷಗಳು ಬೇಕಾಯಿತು. ನಂತರ ಹದಿನಾಲ್ಕು ನುರಿತ ಕುಶಲಕರ್ಮಿಗಳು ಜೋಡಿಸಲು ಹಲವಾರು ತಿಂಗಳುಗಳ ಕಾಲ ಕೆಲಸ ಮಾಡಿದರು ಎಂದು ವರದಿಯಾಗಿದೆ.

ಆಭರಣದಲ್ಲಿ ಕೇರಳದ ಹಾರಗಳು, ನಾಥ್, ಜುಮರ್, ಜುಮ್ಕಾಸ್, ಬದ್ಲಾ ಮತ್ತು ಚಾಂದ್‌ಬಾಲಿ ಮುಂತಾದ ಪ್ರಾಚೀನ ದಕ್ಷಿಣ ಭಾರತದ ಆಭರಣಗಳು ಸೇರಿವೆ. ಮುತ್ತುಗಳು, ವರ್ಣರಂಜಿತ ರತ್ನದ ಕಲ್ಲುಗಳು ಮತ್ತು ವಜ್ರಗಳನ್ನು ಸಹ ಇದರಲ್ಲಿ ಸೇರಿಸಲಾಗಿದೆ. ಹೀಗಾಗಿ ಇದನ್ನು ಸೃಷ್ಟಿಸೋದು ಸುಲಭ ಆಗಿರಲಿಲ್ಲ. ಚೆನ್ನಾಗಿ ಮೂಡಿಬರಲಿ ಎಂದು ವಿನ್ಯಾಸವನ್ನು ಪದೇ ಪದೇ ಪರೀಕ್ಷೆ ಮಾಡುತ್ತಿದ್ದರು. ಈ ವಿಂಟೇಜ್ ಆಭರಣಗಳ ನಡುವಿನ ಖಾಲಿ ಜಾಗವನ್ನು ತುಂಬಲು ಅಮೂಲ್ಯವಾದ ಮುತ್ತುಗಳು, ವಜ್ರಗಳು, ಕೆಂಪು ಮತ್ತು ಹಸಿರು ರತ್ನಗಳನ್ನು ಬಳಸಲಾಗಿದೆ.

ಬೆಲೆ ಎಷ್ಟು?

ಪ್ರಾಚೀನ ಆಭರಣವು ತನ್ನದೇ ಆದ ವಿಶಿಷ್ಟ ಗುರುತನ್ನು ಹೊಂದಿದೆ. ಹೀಗಾಗಿ ಹಾರದ ವಿನ್ಯಾಸ ಒಂದೇ ರೀತಿ ಇಲ್ಲ. ಭಿನ್ನಭಿನ್ನವಾಗಿದೆ. ಇನ್ನು ಈ ಹಾರವು ವಸ್ತು ಸಂಗ್ರಾಲಯದಲ್ಲಿರುವ ಪ್ರಾಚೀನ ಮತ್ತು ಅಪರೂಪದ ಆಭರಣಗಳ ಸಂಗ್ರಹ ಹೋಲುತ್ತದೆ. ಇದರ ಬೆಲೆಯನ್ನ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಅದನ್ನು ತಯಾರಿಸಿದ ರೀತಿ ಮತ್ತು ಅದರ ಮೇಲಿನ ವಜ್ರಗಳು ಮತ್ತು ಮುತ್ತುಗಳು ಲಕ್ಷಾಂತರ ಮೌಲ್ಯದ್ದಾಗಿರಬಹುದೆಂದು ಹೇಳುತ್ತವೆ. ಆಮ್ರಪಾಲಿ ಭಾರತಂ (Amrapali Bharatam) ಎಂಬುದು ಭಾರತದ ಪ್ರಸಿದ್ಧ ಆಭರಣ ಸಂಸ್ಥೆ. ಆಮ್ರಪಾಲಿ ಜ್ಯುವೆಲ್ಸ್ ವಿನ್ಯಾಸಗೊಳಿಸಿದ ಅತ್ಯಂತ ಅಪರೂಪದ ಮತ್ತು ಭವ್ಯವಾದ ನೆಕ್ಲೇಸ್ (ಹಾರ) ಆಗಿದೆ. ಉದ್ಯಮಿ ನೀತಾ ಅಂಬಾನಿ ಅವರು ತಮ್ಮ ಮನೆಯ ಗಣೇಶ ಚತುರ್ಥಿ ಆಚರಣೆಯ ಸಂದರ್ಭದಲ್ಲಿ ಧರಿಸಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ನೀತಾ ಅಂಬಾನಿ ಅವರಿಗಿಂತ ಮೊದಲು, ಬಾಲಿವುಡ್ ನಟಿ ಸೋನಂ ಕಪೂರ್ ಅವರು ನವೆಂಬರ್ 2025 ರಲ್ಲಿ ತಮ್ಮ ಗರ್ಭಾವಸ್ಥೆಯ ಫೋಟೋಶೂಟ್ ಒಂದಕ್ಕಾಗಿ ಇದೇ 'ಆಮ್ರಪಾಲಿ ಭಾರತಂ' ನೆಕ್ಲೇಸ್ ಅನ್ನು ಧರಿಸಿದ್ದರು.