ತಿರುಮಲದಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದ್ದು, ಟಿಟಿಡಿ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಭಕ್ತರ ಆರೋಗ್ಯದ ದೃಷ್ಟಿಯಿಂದ ಕಾಲಿಫ್ಲವರ್ ಬಳಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಅಲ್ಲದೆ, ಮುಂಬರುವ ಬ್ರಹ್ಮೋತ್ಸವ ಮತ್ತು ಗರುಡ ಸೇವೆಗೆ ಸಿದ್ಧತೆಗಳು ನಡೆಯುತ್ತಿವೆ.

ತಿರುಮಲದಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದೆ. ರಜೆಯ ಸಂದರ್ಭದಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಟೋಕನ್ ಇಲ್ಲದೆ ಬರುವ ಭಕ್ತರ ದರ್ಶನಕ್ಕೆ 12 ಗಂಟೆ ಸಮಯ ತೆಗೆದುಕೊಳ್ಳುತ್ತಿದೆ. ಇದೇ ತಿಂಗಳ 28ರಂದು ಎರಡನೇ ಬಾರಿಗೆ ತಿರುಮಲದಲ್ಲಿ ಗರುಡ ವಾಹನ ಸೇವೆ ನಿರ್ವಹಿಸಲಿದ್ದಾರೆ. ಮುಂದಿನ ತಿಂಗಳು ನಡೆಯುವ ಬ್ರಹ್ಮೋತ್ಸವಕ್ಕೆ ಟಿಟಿಡಿ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಇದೇ ಸಮಯದಲ್ಲಿ ಟಿಟಿಡಿ ಹೊಸ ರೂಲ್ಸ್ ಜಾರಿ ಮಾಡಿದೆ. ಈ ಆಹಾರ ಪದಾರ್ಥಗಳ ಮೇಲೆ ಟಿಟಿಡಿ ಬ್ಯಾನ್ ಮಾಡಿದೆ.

ತಿರುಮಲದಲ್ಲಿ ಆ ಆಹಾರಕ್ಕೆ ನಿಷೇಧ: ಟಿಟಿಡಿ ಅಚ್ಚರಿಯ ಆದೇಶ!

ಟಿಟಿಡಿ ತಿರುಮಲದಲ್ಲಿ ಹೊಸ ರೂಲ್ಸ್ ಜಾರಿ ಮಾಡಿದೆ. ಭಕ್ತರಿಗಾಗಿ ಹೊಸ ನಿರ್ಧಾರಗಳನ್ನು ತೆಗೆದುಕೊಂಡಿದೆ. ತಿರುಮಲದಲ್ಲಿ ಕಾಲಿಫ್ಲವರ್ ಅಡುಗೆಗಳನ್ನು ಟಿಟಿಡಿ ನಿಷೇಧಿಸಿದೆ. ಭಕ್ತರ ಆರೋಗ್ಯದ ದೃಷ್ಟಿಯಿಂದ ಈಗಾಗಲೇ ತಿರುಮಲದ ರೆಸ್ಟೋರೆಂಟ್‌ಗಳಲ್ಲಿ, ಫಾಸ್ಟ್‌ಫುಡ್ ಸೆಂಟರ್‌ಗಳಲ್ಲಿ ಚೈನೀಸ್ ಆಡುಗೆಗಳನ್ನು ನಿಷೇಧಿಸಿದೆ.

ಭಕ್ತರ ಆರೋಗ್ಯಕ್ಕಾಗಿ ಈ ವಸ್ತುಗಳು ಬ್ಯಾನ್!

ಟಿಟಿಡಿ ಆರೋಗ್ಯ ವಿಭಾಗದ ಉಪ ಕಾರ್ಯನಿರ್ವಾಹಕ ಅಧಿಕಾರಿ (Deputy EO) ಸೋಮನ್ನಾರಾಯಣ ಅವರು ತಿರುಮಲದಲ್ಲಿನ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಫಾಸ್ಟ್-ಫುಡ್ ಕೇಂದ್ರಗಳ ನಿರ್ವಾಹಕರೊಂದಿಗೆ ಸಭೆ ನಡೆಸಿದರು. ಇತ್ತೀಚೆಗೆ ಕಾಲಿಫ್ಲವರ್‌ನಲ್ಲಿ ಹುಳು ಬರುತ್ತಿರೋದನ್ನು ಗಮನಿಸಿದ್ದಾರೆ. ಭಕ್ತರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡ ತಾತ್ಕಾಲಿಕವಾಗಿ ಗೋಬಿ ಬಳಕೆಯನ್ನು ನಿಷೇಧಿಸಿದೆ. ಮುಂದಿನ ಆದೇಶ ಬರುವವರೆಗೂ ಕಾಲಿಫ್ಲವರ್‌ ಆಹಾತ ತಯಾರಿಯಲ್ಲಿ ಉಪಯೋಗ ಮಾಡುವುದಂತೆ ಟಿಟಿಡಿ ಸೂಚನೆ ನೀಡಿದೆ. ಈಗಾಗಲೇ ತಿರುಮಲದಲ್ಲಿ ಫಾಸ್ಟ್‌ಫುಡ್‌ ಸೆಂಟರ್, ರೆಸ್ಟಾರೆಂಟ್‌ನಲ್ಲಿ ಚೈನೀಸ್ ಆಡುಗೆಗಳನ್ನು ಕೂಡ ನಿಷೇಧ ಮಾಡಿದೆ.

ಈ ವರ್ಷ ಎರಡು ಬಾರಿ ಬ್ರಹ್ಮೋತ್ಸವ

ಟಿಟಿಡಿ (TTD) ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದು, ಶ್ರವಣ ಪೂರ್ಣಿಮೆಯ ದಿನವಾದ ಆಗಸ್ಟ್ 28 ರಂದು ತಿರುಮಲದಲ್ಲಿ ಗರುಡ ಸೇವೆಯನ್ನು ಅತ್ಯಂತ ವೈಭವದಿಂದ ನಡೆಸಲಿದೆ. ಈ ಸಂದರ್ಭದಲ್ಲಿ, ಶನಿವಾರ ಸಂಜೆ 7 ರಿಂದ 9 ಗಂಟೆಯ ನಡುವೆ ಶ್ರೀ ಮಲಯಪ್ಪ ಸ್ವಾಮಿಯವರು ತಮ್ಮ ನೆಚ್ಚಿನ ವಾಹನವಾದ ಗರುಡ ವಾಹನದ ಮೇಲೆ ಆಸೀನರಾಗಿ ಭಕ್ತರಿಗೆ ಅನುಗ್ರಹಿಸಲಿದ್ದಾರೆ. ಈ ಬಾರಿ ಎರಡು ಬಾರಿ ಬ್ರಹ್ಮೋತ್ಸವದಲ್ಲಿ ನಡೆಯಲಿದೆ.

ರೇಷ್ಮೆ ವಸ್ತ್ರಗಳನ್ನು ಅರ್ಪಿಸಲಿರುವ ಸಿಎಂ

ತಿರುಮಲ ಶ್ರೀವಾರಿ ಬ್ರಹ್ಮೋತ್ಸವಕ್ಕಾಗಿ ಟಿಟಿಡಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಸೆಪ್ಟೆಂಬರ್ 15 ರಿಂದ 23 ವರೆಗೂ ನಡೆಯುವ ಸಾಲಕಟ್ಲ ಬ್ರಹ್ಮೋತ್ಸವ 14ರಂದು ಶಾಸ್ತ್ರೋಕ್ತ ವಿಧಿವಿಧಾನಗಳ ಪ್ರಕಾರ ಸಾಂಕೇತಿಕವಾಗಿ ಅಂಕುರಾರ್ಪಣ ನಡೆಯಲಿದೆ. ಬ್ರಹ್ಮೋತ್ಸವದ ಅಂಗವಾಗಿ 15ರಂದು ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಮತ್ತು ಅವರ ಪತ್ನಿ ಅಲ್ಲಿನ ದೇವರಿಗೆ ರೇಷ್ಮೆ ವಸ್ತ್ರಗಳನ್ನು ಅರ್ಪಿಸಲು ಸಿದ್ಧತೆ ನಡೆಸುತ್ತಿರುವಂತೆಯೇ, ಟಿಟಿಡಿ (TTD) ಕೂಡ ಹಲವು ಉದ್ಘಾಟನೆಗಳಿಗೆ ಸಜ್ಜಾಗುತ್ತಿದೆ. ಹಬ್ಬದ ವೇಳೆಗೆ ತಿರುಪತಿಯಲ್ಲಿ ಎರಡು ವಸತಿ ಸಂಕೀರ್ಣಗಳು ಕಾರ್ಯಾರಂಭ ಮಾಡಲಿವೆ.