ಎಲ್‌ ನಿನೋ ಪ್ರಭಾವದಿಂದ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಪ್ರಮಾಣ ದಾಖಲಾಗಿದೆ. ಕರ್ನಾಟಕ ಮಾತ್ರವಲ್ಲದೇ, ಭಾರತದ ಹಲವು ರಾಜ್ಯಗಳಲ್ಲಿ ಮಳೆಯ ಪ್ರಯಾಣ ಕಡಿಮೆಯಾಗಿದ್ದು, ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಇದರೊಂದಿಗೆ ಟಿಟಿಡಿ ಪ್ರಮುಖ ನಿರ್ಣಯ ತೆಗೆದುಕೊಂಡಿದೆ.

ಟಿಟಿಡಿ ಪ್ರಮುಖ ನಿರ್ಣಯ ತೆಗೆದುಕೊಂಡಿದೆ. ಬರಗಾಲ ಪರಿಸ್ಥಿತಿಯ ಸಂದರ್ಭದಲ್ಲಿ ತಿರುಮದಲ್ಲಿ ವರುಣಯಾಗ ಮಾಡಲು ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಹೂರ್ತವನ್ನು ಅಂತಿಮ ಮಾಡಿದ್ದು, ಈ ಹಿಂದೆಯೂ ಇಂತಹ ಸಂದರ್ಭದಲ್ಲಿ ಟಿಟಿಡಿ ವರುಣಯಾಗ ನಿರ್ವಹಿಸಿದರು. ಈ ಬಾರಿ ಐದು ದಿನಗಳ ಕಾಲ ವರುಣಯಾಗ ನಿರ್ವಹಿಸಲು ಟಿಟಿಡಿ ನಿರ್ಧಾರ ಮಾಡಿದೆ. ಈ ವರುಣಯಾಗ ನಿರ್ವಹಿಸಲು ಪ್ರತ್ಯೇಕ ನಿಯಮ, ನಿಬಂಧನೆಗಳನ್ನು ಪಾಲಿಸುತ್ತಾರೆ.

ಆಗಸ್ಟ್ 30ರಿಂದ ವರುಣಯಾಗ ಆರಂಭ

ಈ ವರ್ಷ ಎಲ್‌ ನಿನೋ ಪ್ರಭಾವದಿಂದ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಪ್ರಮಾಣ ದಾಖಲಾಗಿದೆ. ಕರ್ನಾಟಕ ಮಾತ್ರವಲ್ಲದೇ, ಭಾರತದ ಹಲವು ರಾಜ್ಯಗಳಲ್ಲಿ ಮಳೆಯ ಪ್ರಯಾಣ ಕಡಿಮೆಯಾಗಿದ್ದು, ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಇದರೊಂದಿಗೆ ಟಿಟಿಡಿ ಪ್ರಮುಖ ನಿರ್ಣಯ ತೆಗೆದುಕೊಂಡಿದೆ. ದೇಶದಲ್ಲಿ ಬೆಳೆಗಳು ಬೆಳೆದು, ಸಮೃದ್ಧಿಯಾಗಿ ಮಳೆಯಾಗಿ ಜನರು ಕ್ಷೇಮವಾಗಿ ಇರುವಂತೆ ಕೋರಿ ಇದೇ ತಿಂಗಳ 30ರಂದು ಐದು ದಿನಗಳ ಕಾಲ ಧರ್ಮಗಿರಿ ವೇದಪಾಠ ಶಾಲೆಯಲ್ಲಿ ವರುಣಯಾಗ ನಿರ್ವಹಿಸಲು ನಿರ್ಧಾರ ಮಾಡಿದೆ.

ಋತ್ವಿಜರ ಸಮ್ಮುಖದಲ್ಲಿ ವರುಣ ಯಾಗ

ದೇಶದಾದ್ಯಂತ ಮಳೆ ಚೆನ್ನಾಗಿ ಬಿದ್ದ, ನೀರಿನ ಸಮಸ್ಯೆ ದೂರವಾಗಲಿ ಎಂಬ ಆಕಾಂಕ್ಷೆಯೊಂದಿಗೆ ಧರ್ಮಗಿರಿ ವೇದವಿಜ್ಞಾನ ಪೀಠದಲ್ಲಿ ವರುಣಯಾಗ ನಡೆಸಲು ಮುಹೂರ್ತ ನಿರ್ಧಾರ ಮಾಡಲಾಗಿದೆ. ಇದರ ಭಾಗವಾಗಿ ವೇದವಿಜ್ಞಾನಪೀಠದಲ್ಲಿ ಆಗಸ್ಟ್ 30 ಮತ್ತು 31 ಹಾಗೂ ಸೆಪ್ಟೆಂಬರ್ 1, 2 ಮತ್ತು 3 ರಂದು ಯಾಗವನ್ನು ನಡೆಯಲಿದ್ದು, ಮತ್ತು ಋತ್ವಿಜರ ಸಮ್ಮುಖದಲ್ಲಿ ವರುಣ ಯಾಗವನ್ನು ನಡೆಸಲಾಗುವುದು.

ಈ ವರ್ಷ ಎರಡು ಬಾರಿ ಗರುಡ ವಾಹನ ಸೇವೆ

ಐದು ದಿನಗಳ ಈ ಯಾಗ ನಿರ್ವಹಿಸಲು ಈಗಾಗಲೇ ಟಿಟಿಡಿ ಆದೇಶ ನೀಡಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಆರಂಭ ಮಾಡಿದೆ. ವರುಣದೇವನನ್ನು ಪ್ರಸನ್ನ ಮಾಡಿಕೊಳ್ಳಲು ಈ ಐದು ದಿನಗಳ ಯಾಗ ನಿರ್ವಹಿಸಲಿದ್ದಾರೆ. ದೇಶಾದ್ಯಂತದ ಹಲವಾರು ಪ್ರಮುಖ ಋತ್ವಿಜರು ವೈಖಾನಸ ಆಗಮ ಶಾಸ್ತ್ರದ ಪ್ರಕಾರ ಯಾಗವನ್ನು ನೆರವೇರಿಸಲಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಎರಡು ಬಾರಿ ನಡೆಯಲಿದೆ ಬ್ರಹ್ಮೋತ್ಸವ

ಇನ್ನು, ತಿರುಮಲದಲ್ಲಿ ಎರಡು ಬಾರಿ ಗರುಡ ವಾಹನ ಸೇವೆ ನಿರ್ವಹಿಸಲಿದ್ದಾರೆ. ಗರುಡ ಪಂಚಮಿ, ಶ್ರಾವಣ ಹುಣ್ಣಿಮೆ ದಿನ ಗರುಡ ವಾಹನ ಸೇವೆ ನಡೆಯಲಿದೆ. ಈ ವರ್ಷ ಎರಡು ಬಾರಿ ತಿರುಮಲದಲ್ಲಿ ಶ್ರೀವಾರಿ ಬ್ರಹ್ಮೋತ್ಸವ ನಿರ್ವಹಿಸಲಿದ್ದಾರೆ. ಮುಂಬರುವ ತಿಂಗಳಿನಲ್ಲಿ ಬ್ರಹ್ಮೋತ್ಸವಗಳನ್ನು ವಿಜೃಂಭಣೆಯಿಂದ ನಡೆಸಿಲು ಸಿದ್ಧತೆ ನಡೆದಿದ್ದು, ಮುಂಬರುವ ತಿಂಗಳು ನಡೆಯಲಿರುವ ಬ್ರಹ್ಮೋತ್ಸವಕ್ಕಾಗಿ ಭಾರೀ ಪ್ರಮಾಣದಲ್ಲಿ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದೆ. ವಸತಿ ಸಮುದಾಯ ಭವನಗಳ ನಿರ್ಮಾಣ ಕೂಡ ನಡೆಯುತ್ತಿದೆ.