ಬೆಂಗಳೂರು (ನ.8): ಪ್ರತಿ ಟನ್ ಕಬ್ಬಿನ ದರವನ್ನು 100 ರೂಪಾಯಿ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಈ 100 ರೂಪಾಯಿ ಹಣದಲ್ಲಿ ರಾಜ್ಯ ಸರ್ಕಾರ 50 ರೂಪಾಯಿ ಹಾಗೂ ಸಕ್ಕರೆ ಕಾರ್ಖಾನೆಗಳು 50 ರೂಪಾಯಿ ನೀಡಲಿದೆ. ಈಗ ಪ್ರತಿ ಟನ್ ಕಬ್ಬಿಗೆ ರಾಜ್ಯದಲ್ಲಿ 3300 ರೂಪಾಯಿ ಹಣ ಫಿಕ್ಸ್ ಮಾಡಲಾಗಿದೆ. ಆದರೆ, ಹೊಸ ದರವನ್ನು ಕಬ್ಬು ಬೆಳೆಗಾರರು ಸಂಪೂರ್ಣವಾಗಿ ಒಪ್ಪಿಲ್ಲ. ರಾಜ್ಯ ಸರ್ಕಾರದ 50:50 ಸೂತ್ರಕ್ಕೆ ಬೆಳೆಗಾರರು ಕೂಡ 50:50 ಪ್ರತಿಕ್ರಿಯೆ ನೀಡಿದ್ದಾರೆ. ಈ ನಡುವೆ 50 ರೂಪಾಯಿ ನೀಡಲು ಕಾರ್ಖಾನೆ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ..ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್ ಬ್ಲಾಗ್
11:34 PM (IST) Nov 08
10:42 PM (IST) Nov 08
ಬಿಗ್ ಬಾಸ್ ವಿಜೇತ ರೂಪೇಶ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಜೈ' ಚಿತ್ರದ ಪ್ರಚಾರಕ್ಕೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಆಗಮಿಸಿದ್ದರು. ಈ ವೇಳೆ ಅವರು ತಮ್ಮ ತುಳುನಾಡಿನ ಮೂಲವನ್ನು ಸ್ಮರಿಸಿ, ಕನ್ನಡ ಸಿನಿಮಾಗಳ ಯಶಸ್ಸಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು ಮತ್ತು ತಮ್ಮ ಫಿಟ್ನೆಸ್ ರಹಸ್ಯ ಹಂಚಿಕೊಂಡರು.
10:36 PM (IST) Nov 08
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ನಡುವಿನ ಮನಸ್ತಾಪವನ್ನು ಕಿಚ್ಚ ಸುದೀಪ್ ಅವರು ಅಡ್ರೆಸ್ ಮಾಡಿ ಮಾತನಾಡಿದ್ದಾರೆ. ಕಿಚ್ಚನ ಪಂಚಾಯಿತಿಯಲ್ಲಿ ಸತ್ಯ ಏನು ಎಂದು ರಿವೀಲ್ ಆಗಿದೆ.
10:18 PM (IST) Nov 08
'ಅಮೃತಧಾರೆ' ಖ್ಯಾತಿಯ ನಟ ಆನಂದ್ ಕುಮಾರ್, ತಮಿಳಿನ 'ಗಟ್ಟಿಮೇಳಂ' ಸೀರಿಯಲ್‌ನಲ್ಲಿನ ತಮ್ಮ ಮೂಕಾಭಿನಯಕ್ಕಾಗಿ ಉತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಅವರು ತಮ್ಮ ತಾಯಿಗೆ ಸನ್ನೆಗಳ ಮೂಲಕವೇ ಈ ಸಂತಸದ ಸುದ್ದಿ ತಿಳಿಸಿ ಭಾವುಕ ಕ್ಷಣವನ್ನು ಸೃಷ್ಟಿಸಿದರು.
09:48 PM (IST) Nov 08
ಕರ್ನಾಟಕದಿಂದ ತೈಲ ಮಾರಾಟ ಕಂಪನಿಗಳಿಗೆ ನಿಗದಿ ಮಾಡಿರುವುದು 47 ಕೋಟಿ ಲೀಟರ್ ಎಥೆನಾಲ್ ಅಲ್ಲ, 116.30 ಕೋಟಿ ಲೀಟರ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಲ್ಹಾದ್ ಜೋಶಿಗೆ ತಿರುಗೇಟು ನೀಡಿದ್ದಾರೆ.
09:31 PM (IST) Nov 08
ಕಬ್ಬು ಬೆಳೆಗಾರರು ನಡೆಸಿದ ಸಂಘಟಿತ ಹೋರಾಟಕ್ಕೆ ಕಡೆಗೂ ಮಣಿದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರತಿ ಟನ್ ಕಬ್ಬಿಗೆ 3300 ರು. ದರ ನಿಗದಿಪಡಿಸಿ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
09:22 PM (IST) Nov 08
ಒಂದೂವರೆ ಗಂಟೆ ಬೆಂಗಳೂರು ಆಗಸದಲ್ಲೇ ಗಿರಕಿ ಹೊಡೆದ ವಿಮಾನ, ಏರ್ ಇಂಡಿಯಾದಿಂದ ಸ್ಪಷ್ಟನೆ ನೀಡಿದೆ. ಲ್ಯಾಂಡಿಂಗ್ ಸಮಸ್ಯೆಯಾಗಿ ಜೆಪಿ ನಗರ ಆಗಸದಲ್ಲೇ ಸುತ್ತಾಡಿತ್ತಾ ವಿಮಾನ? ಏರ್ ಇಂಡಿಯಾ ಹೇಳಿದ್ದೇನು?
09:22 PM (IST) Nov 08
ನನಗೆ ಸಿದ್ದರಾಮಯ್ಯ ಅವರ ಗುಣ ಗೊತ್ತಿದೆ. ಅವರು ನಮ್ಮ ಪಕ್ಷದಲ್ಲಿ ಇದ್ದಾಗಲೇ ಅವರ ಗುಣ ತಿಳಿದುಕೊಂಡಿದ್ದೇನೆ. ಹೀಗಾಗಿ, ಯಾವ ಬದಲಾವಣೆಯೂ ಅಗುವುದಿಲ್ಲ. ಯಾವ ಕ್ರಾಂತಿನೂ ಆಗಲ್ಲ ಎಂದರು ಎಚ್.ಡಿ.ಕುಮಾರಸ್ವಾಮಿ.
08:57 PM (IST) Nov 08
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಜನಗಣಮನದ ಅರ್ಥ ಗೊತ್ತಿದೆಯೇ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ. ರಾಷ್ಟ್ರಗೀತೆ ಬಗ್ಗೆ ಕಾಗೇರಿ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.
08:42 PM (IST) Nov 08
'ಬಾಹುಬಲಿ' ಮತ್ತು 'RRR' ನಂತಹ ಅದ್ಭುತ ಚಿತ್ರಗಳನ್ನು ನೀಡಿದ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಮುಂದಿನ ಚಿತ್ರದ ವಿಲನ್ ಲುಕ್ ಹೊರಬಿದ್ದಿದೆ. ನಾವು ಮಾತನಾಡುತ್ತಿರುವುದು SSMB29 ಎಂಬ ತಾತ್ಕಾಲಿಕ ಶೀರ್ಷಿಕೆಯ ಚಿತ್ರದ ಬಗ್ಗೆ.
08:33 PM (IST) Nov 08
ಬೆಂಗಳೂರಲ್ಲಿ ದೃಶ್ಯ ಸಿನಿಮಾ ಶೈಲಿಯಲ್ಲಿ ವೃದ್ಧೆಯ ಕೊಲೆ, ಶವ ಬಚ್ಚಿಟ್ಟ ಮಹಿಳೆ ಅರೆಸ್ಟ್ ಆಗಿದ್ದೇ ರೋಚಕ, ಹತ್ಯೆ ಮಾಡಿ ಯಾರಿಗೂ ತಿಳಿಯದಂತೆ ಮಹಿಳೆ ಎಸ್ಕೇಪ್ ಆಗಿದ್ದಾಳೆ. ಸಿನಿಮಾ ಕತೆ ರೀತಿಯಲ್ಲೇ ಈ ಹತ್ಯೆ ನಡೆದಿದೆ.
07:52 PM (IST) Nov 08
ಬೆಂಗಳೂರು ಯುವತಿಯ ತೊಡೆ ಸವರಿ ಅನುಚಿತ ವರ್ತನೆ ತೋರಿದ ಬೈಕ್ ಟ್ಯಾಕ್ಸಿ ಚಾಲಕ ಅರೆಸ್ಟ್, ಕಿರುಕುಳದ ವಿಡಿಯೋ ಹಂಚಿಕೊಂಡುಕಣ್ಣೀರಿಟಿದ್ದ ಯುವತಿಯಿಂದ ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
07:48 PM (IST) Nov 08
ಸಾರಿಗೆ ಸಂಸ್ಥೆ ನೌಕರರ ವೇತನ ಪರಿಷ್ಕರಣೆ ಹಿಂದಿನ ಸರ್ಕಾರ ಮಾಡಿದ ತಪ್ಪಿನಿಂದ ತಡವಾಗುತ್ತಿದೆ. ಸಾರಿಗೆ ನೌಕರರ ವೇತನ ಪರಿಷ್ಕರಣೆ ನನ್ನ ಕೈಯಲ್ಲಿಲ್ಲ. ಈ ಕುರಿತು ಮುಖ್ಯಮಂತ್ರಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
07:37 PM (IST) Nov 08
ನಮ್ಮಲ್ಲಿ ಹೆಚ್ಚಿನವರು ಬೆಳಿಗ್ಗೆ ಎದ್ದ ತಕ್ಷಣ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸವನ್ನು ಹೊಂದಿದ್ದಾರೆ. ಅದನ್ನು ಕುಡಿಯದಿದ್ದರೆ ತಲೆನೋವು ಬರುತ್ತದೆ ಎಂದು ಹೇಳುತ್ತಾರೆ. ಅದಕ್ಕೆ ಕಾರಣವೇನು.
07:08 PM (IST) Nov 08
2019ರಲ್ಲಿ ಹಾರ್ದಿಕ್ ಪಾಂಡ್ಯ-ಕೆಎಲ್ ರಾಹುಲ್ ಜೊತೆಗಿನ 'ಕಾಫಿ ವಿತ್ ಕರಣ್' ವಿವಾದದ ನಂತರ ಕರಣ್ ಜೋಹರ್ ಯಾವುದೇ ಕ್ರಿಕೆಟಿಗರನ್ನು ಶೋಗೆ ಕರೆದಿಲ್ಲ. ಹಾರ್ದಿಕ್ ಕಾಮೆಂಟ್‌ನಿಂದಾಗಿ ಇಬ್ಬರನ್ನೂ ಅಮಾನತುಗೊಳಿಸಲಾಗಿತ್ತು.
07:06 PM (IST) Nov 08
ತೃಣಮೂಲ ಕಾಂಗ್ರೆಸ್‌ನ ಸಂಸದ ಕಲ್ಯಾಣ್ ಬ್ಯಾನರ್ಜಿ ಸೈಬರ್ ವಂಚನೆಗೆ ಬಲಿಯಾಗಿದ್ದು, ಬರೋಬ್ಬರಿ 55 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ವಂಚಕರು ಅವರ ಸಕ್ರಿಯ ಖಾತೆಯಿಂದ ನಿಷ್ಕ್ರಿಯ ಖಾತೆಗೆ ಹಣ ವರ್ಗಾಯಿಸಿ, ನಂತರ ಸಂಪೂರ್ಣ ಹಣವನ್ನು ಲಪಟಾಯಿಸಿದ್ದಾರೆ.
06:56 PM (IST) Nov 08
12ಕ್ಕೂ ಹೆಚ್ಚು ಕಂಡೀಷನ್ ಹಾಕಿ ಧರಣಿ ಅಂತ್ಯಗೊಳಿಸಿದ ಕಬ್ಬು ಬೆಳೆಗಾರರು, ಷರತ್ತುಗಳೇನು? ಕಬ್ಬಿನ ಬೆಲೆ ನಿಗದಿ ಆದೇಶ ಪ್ರತಿ ಹೋರಾಟಗಾರರಿಗೆ ನೀಡಿದ ಬಳಿಕ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಪ್ರತಿಭಟನೆ ಅಂತ್ಯಗೊಂಡಿದೆ. ಇದೀಗ ಸರ್ಕಾರಕ್ಕೆ ಕಂಡಿಷನ್ ತಲೆನೋವು ಶುರುವಾಗಿದೆ.
06:31 PM (IST) Nov 08
ನಾಲ್ಕುನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಗಣಪತಿ ದೇವಾಲಯ ವಾರ್ಷಿಕ ಜಾತ್ರೆ ಮತ್ತು ರಥೋತ್ಸವ ಅದ್ದೂರಿಯಿಂದ ನೆರವೇರಿತು. ಕಾರ್ತಿಕ ಮಾಸದ ಕೃಷ್ಣಪಕ್ಷದ ಚತುರ್ಥಿ ಲಗ್ನದಲ್ಲಿ ಗಣೇಶನ ಬ್ರಹ್ಮ ರಥೋತ್ಸವ ನಡೆಯಿತು.
06:20 PM (IST) Nov 08
ವಿಜಯ್ ಮತ್ತು ರಶ್ಮಿಕಾ ಮದುವೆ ಫೆಬ್ರವರಿ 26, 2026ರಂದು ಉದಯಪುರದಲ್ಲಿ ನಡೆಯಲಿದೆ ಎನ್ನಲಾಗಿದೆ. ಈ ಜೋಡಿ ಅಕ್ಟೋಬರ್‌ನಲ್ಲಿ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈಗ ಮದುವೆ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಈ ಮದುವೆ ದಕ್ಷಿಣ ಭಾರತದ ಸಂಪ್ರದಾಯದಂತೆ ನಡೆಯಲಿದೆ.
05:53 PM (IST) Nov 08
ಮೇಕಿಂಗ್‌ನಲ್ಲಿ ನಿರ್ದೇಶಕರಿಗೆ ಸೀಮಿತ ಅವಕಾಶಗಳು ಇದ್ದಿದ್ದನ್ನು ಸಿನಿಮಾನೇ ಕಾಣಿಸುತ್ತದೆ. ಅದರ ಹೊರತಾಗಿ ನಾಯಕಿ ಸಂಹಿತಾ ವಿನ್ಯಾ ಅವರು ಯೂಟ್ಯೂಬರ್ ಪಾತ್ರದಲ್ಲಿ ಸೊಗಸಾಗಿ ನಟಿಸಿದ್ದಾರೆ. ಜಯವರ್ಧನ್ ಮೆಚ್ಚುಗೆ ಗಳಿಸುತ್ತಾರೆ.
05:38 PM (IST) Nov 08
ಬೈಕ್‌ಗೆ ಲಾರಿ ಡಿಕ್ಕಿಯಾಗಿ ಪೋಸ್ಟ್ ವುಮೆನ್ ಸ್ಥಳದಲ್ಲೇ ಸಾವನಪ್ಪಿದ ಘಟನೆ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಕಿತ್ತಾಗನಹಳ್ಳಿ ಗೇಟ್ ಬಳಿ ನಡೆದಿದೆ. ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
05:12 PM (IST) Nov 08
ನಾಯಕ ಕರ್ಣ ಬ್ಯುಸಿನೆಸ್ ಮ್ಯಾನ್ ಪುತ್ರನಾಗಿದ್ದರೂ ಫ್ಯಾಶನ್ ಅರಸಿ ಹೊರಟ ಪ್ರತಿಭಾವಂತ. ಗತಿಸಿದ ಅಮ್ಮನ ನೆನಪಲ್ಲಿ ಅಮ್ಮನ ಊರು ಕಾರ್ಕಳಕ್ಕೆ ಬರುವ ನಾಯಕನ ಬದುಕಿನಲ್ಲಿ ಇಲ್ಲಿಂದಲೇ ಘಾಟಿರಸ್ತೆಯ ತಿರುವುಗಳು ಎದುರಾಗುತ್ತದೆ.
05:11 PM (IST) Nov 08
ಪರಪ್ಪನ ಅಗ್ರಹಾರದಲ್ಲಿ ಉಗ್ರನಿಗೂ ರಾಜಾತಿಥ್ಯ, ಜೈಲಿನ ಸಾಲು ಸಾಲು ಅಕ್ರಮ ಬಯಲು, ADGP ದಯಾನಂದ್ ಹಾಗೂ ಹೋಮ್ ಗಾರ್ಡ್ ಇಲಾಖೆಯ ಕಾರ್ಯದರ್ಶಿ ಶರತ್ಚಂದ್ರ ನಡುವಿನ ಶೀತಲ ಸಮರವೇ ಈ ಅಕ್ರಮ ಬಯಲು ಮಾಡಿದೆ.
04:57 PM (IST) Nov 08
ಗೆಳೆಯರ ತರಲೆ, ಅದರ ಮಧ್ಯೆ ಹೀರೋ ಮತ್ತು ಹೀರೋಯಿನ್ ಇಬ್ಬರ ಸರಸ ಸಲ್ಲಾಪದ ಮೂಲಕ ಕತೆ ಮುಂದೆ ಸಾಗುತ್ತಿರುತ್ತದೆ. ಅದರ ಜೊತೆಗೆ ಸೀರಿಯಲ್ ಕಿಲ್ಲರ್ ಒಬ್ಬನ ಕತೆಯೂ ನಡೆಯುತ್ತಿರುತ್ತದೆ.
04:41 PM (IST) Nov 08
ಡಿ.ಕೆ.ಶಿವಕುಮಾರ್ ಅದಷ್ಟು ಬೇಗ ಸಿಎಂ ಆಗ್ತಾರೆ ಎಂದು ತುಳುನಾಡ ದೈವ ಭವಿಷ್ಯ ನುಡಿದಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಶ್ರೀ ಗುರು ಗಿರಿ ಸಿದ್ದೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಡಿಕೆಶಿ ಅಭಿಮಾನಿಯೊಬ್ಬರ ಪ್ರಶ್ನೆಗೆ ದೈವ ಉತ್ತರಿಸಿದೆ.
04:29 PM (IST) Nov 08
BBK 12 Updates: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರು ನನಗೆ ಚಪ್ಪಲಿ ತೋರಿಸಿದರು, ಕಲಾವಿದರಿಗೆ ಅವಮಾನ ಆಡಿದರು ಎಂದು ಅಶ್ವಿನಿ ಗೌಡ ಪಟ್ಟು ಹಿಡಿದಿದ್ದರು. ಇದು ಹೊರಗಡೆಯೂ ಸೌಂಡ್ ಆಗಿತ್ತು. ಈ ಬಗ್ಗೆ ಕಿಚ್ಚ ಸುದೀಪ್ ಅವರು ಕಿಚ್ಚನ ಪಂಚಾಯಿತಿಯಲ್ಲಿ ಮಾತನಾಡಿದ್ದಾರೆ.
04:24 PM (IST) Nov 08
ದೈವತ್ವದ ನೆರಳಿನಲ್ಲಿ ನಡೆಯುವ ರಾಜಕೀಯ ಮೇಲಾಟದಲ್ಲಿ ಸೋಲು ಮತ್ತು ಗೆಲುವು ಯಾರಿಗೆ ಎನ್ನುವ ಪ್ರಶ್ನೆಗೆ ಉತ್ತರ ನಿರೀಕ್ಷಿತವಾದರೂ ಈ ಆಟ ಹೇಗೆ ಸಾಗುತ್ತದೆ ಎನ್ನುವ ಕುತೂಹಲವೇ ಚಿತ್ರವನ್ನು ನೋಡಿಕೊಂಡು ಹೋಗುವ ಗುಣವನ್ನು ದಯಪಾಲಿಸಿದೆ.
03:43 PM (IST) Nov 08
BBK 12 Updates: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈ ಬಾರಿ ಇಡೀ ಮನೆ ನಾಮಿನೇಟ್ ಆಗಿದೆ. ಕಿಚ್ಚ ಸುದೀಪ್ ಅವರೇ ಇಡೀ ಮನೆಯನ್ನು ನಾಮಿನೇಟ್ ಮಾಡಿದ್ದರು. ಈ ವಾರ ವ್ಯಕ್ತಿತ್ವದ ಆಟ, ಫಿಸಿಕಲ್ ಟಾಸ್ಕ್ ಇರೋದಿಲ್ಲ ಎಂದು ಹೇಳಿದ್ದರು. ಹಾಗಿದ್ರೆ ಯಾರು ಬಚಾವ್ ಆಗ್ತಾರೆ.
03:22 PM (IST) Nov 08
ಬೆಂಗಳೂರು ರ‍್ಯಾಪಿಡ್ ಚಾಲಕನ ಕಿರುಕುಳ ವಿಡಿಯೋ ಶೇರ್ ಮಾಡಿ ನೋವು ತೋಡಿಕೊಂಡ ಯುವತಿ, ಬೈಕ್ ಟ್ಯಾಕ್ಸಿ ಬುಕ್ ಮಾಡಿದ ಯುವತಿ ಇಡೀ ಪ್ರಯಾಣದಲ್ಲಿ ಕಿರುಕುಳ ಅನುಭವಿಸಿದ್ದಾಳೆ. ಚಾಲಕನ ಅಸಭ್ಯ ವರ್ತನೆ, ಅಣ್ಣಾ ಏನು ಮಾಡುತ್ತಿದ್ದಿಯಾ ಎಂದು ಕೇಳಿದರೂ ತನ್ನ ಕಿರುಕುಳ ಮುಂದುವರಿಸಿದ್ದಾನೆ.
03:06 PM (IST) Nov 08
02:59 PM (IST) Nov 08
Husband Posts Wife's Nude Photos on Social Media After She Refuses Money for Online Betting ಆನ್‌ಲೈನ್ ಬೆಟ್ಟಿಂಗ್ ಆಡಲು ಹಣ ನೀಡದ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯ ಬೆತ್ತಲೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವಿಕೃತಿ ಮೆರೆದಿದ್ದಾನೆ.
02:19 PM (IST) Nov 08
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸರ್ಕಾರದ ಸ್ಥಿರತೆಯ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೆ ಸರ್ಕಾರ ಪತನವಾಗುವುದು ಖಚಿತ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಡಿಕೆ ಶಿವಕುಮಾರ್ ಅವರ ಸಿಎಂ ಆಗುವ ಆಸೆ ಕಷ್ಟಸಾಧ್ಯ ಎಂದಿದ್ದಾರೆ.
01:46 PM (IST) Nov 08
ತೂಕದ ಬಗ್ಗೆ ನನಗೆ ಪ್ರಶ್ನೆ ಮಾಡಿದ್ದರು ಎಂದು ನಟಿ ಹಿತಾ ಚಂದ್ರಶೇಖರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ದಪ್ಪಗಿದ್ದರೂ ಮಾತಾಡ್ತಾರೆ, ಸಣ್ಣ ಆದರೂ ಮಾತಾಡ್ತಾರೆ ಎಂದು ಅವರು ಹೇಳಿದ್ದಾರೆ.
01:36 PM (IST) Nov 08
Ranganpete-Timmapura Kannada Sahitya Sangha history: 1943ರಲ್ಲಿ ನಿಜಾಮ್ ಪ್ರಾಂತ್ಯದಲ್ಲಿ ಸ್ಥಾಪಿತವಾದ ಸುರಪುರದ ರಂಗಂಪೇಟೆ-ತಿಮ್ಮಾಪುರ ಕನ್ನಡ ಸಾಹಿತ್ಯ ಸಂಘವು 83 ವರ್ಷಗಳಿಂದ ಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸುತ್ತಿದೆ. ಇತ್ತೀಚೆಗೆ 2023ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದೆ.
01:22 PM (IST) Nov 08
Mother Kills 5-Month-Old Baby With Lesbian Partner, Claiming Child Was Obstacle to Relationship ಸಲಿಂಗಕಾಮಕ್ಕೆ ಅಡ್ಡಿಯಾಗಿದ್ದ ತನ್ನ ಐದು ತಿಂಗಳ ಮಗುವನ್ನೇ ತಾಯಿಯೊಬ್ಬಳು ತನ್ನ ಸಂಗಾತಿಯೊಂದಿಗೆ ಸೇರಿ ಹತ್ಯೆ ಮಾಡಿದ್ದಾಳೆ. ಪತಿಗೆ ಸಿಕ್ಕ ಮೊಬೈಲ್‌ನಿಂದ ಈ ಕೊಲೆ ರಹಸ್ಯ ಬಯಲಾಗಿದೆ.
12:46 PM (IST) Nov 08
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬೀದಿ ನಾಯಿ ಹಾವಳಿ ನಿಯಂತ್ರಿಸಲು, ನಗರದ ಹೊರವಲಯದಲ್ಲಿ ಶೆಲ್ಟರ್ ನಿರ್ಮಿಸಲು ಸರ್ಕಾರಿ ಭೂಮಿ ಗುರುತಿಸಲಾಗುತ್ತಿದೆ. ಜೊತೆಗೆ, ಸುಮ್ಮನಹಳ್ಳಿಯ ಪ್ರಾಣಿ ಚಿತಾಗಾರ ದುರಸ್ತಿ ಮತ್ತು ಸಂತಾನಹರಣ ಕಾರ್ಯಕ್ರಮ ಬಗ್ಗೆ ಗಮನಿಸಲಾಗುವುದು ಬೃಹತ್ ಬೆಂಗಳೂರು ಪ್ರಾಧಿಕಾರ ತಿಳಿಸಿದೆ.
12:39 PM (IST) Nov 08
Parappana Agrahara Jail Scandal Videos Show ISIS Terrorists Rapists Receiving Royal Treatment ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರರು, ಅ*ತ್ಯಾಚಾರಿಗಳು ಸೇರಿದಂತೆ ಕುಖ್ಯಾತ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿರುವ ವಿಡಿಯೋಗಳು ಬಯಲಾಗಿವೆ.
12:38 PM (IST) Nov 08
Damaging public property:ಯು-ಟರ್ನ್ ಮುಚ್ಚಿದ್ದನ್ನು ವಿರೋಧಿಸಿ, ಮಾಜಿ ಶಾಸಕ ಅನಿಲ್ ಅಕ್ಕರ ಅವರು ಸ್ವತಃ ಗುದ್ದಲಿ ತೆಗೆದುಕೊಂಡು ಹೊಸದಾಗಿ ನಿರ್ಮಿಸಿದ ಡಿವೈಡರ್‌ನ್ನು ಒಡೆದು ಹಾಕಿದ್ದು,ಅವರ ವಿರುದ್ಧ ಕೇಸ್ ದಾಖಲಾಗಿದೆ.
12:19 PM (IST) Nov 08
Actor Extra Marital Affair: ಸದ್ಯ ಅಕ್ರಮ ಸಂಬಂಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿಂದಿನ ಕಾಲದಲ್ಲಿಯೂ ಅಕ್ರಮ ಸಂಬಂಧ ಇತ್ತು ಎನ್ನಲಾಗುವುದು, ಇದಕ್ಕೆ ಅನೇಕ ಕಾರಣಗಳು ಇರಬಹುದು. ಈಗ ನಟರೋರ್ವರು ಅಕ್ರಮ ಸಂಬಂಧ ಇತ್ತು, ಅದಿಕ್ಕೆ ಕಾರಣ ಏನು ಎಂದು ಕೂಡ ಹೇಳಿದ್ದಾರೆ.
12:17 PM (IST) Nov 08