ಸಲಿಂಗಕಾಮಕ್ಕೆ ಅಡಿಯಾಯ್ತೆಂದು ಐದು ತಿಂಗಳ ಮಗುವನ್ನೇ ಕೊಂದ ಪಾಪಿಗಳು!
Mother Kills 5-Month-Old Baby With Lesbian Partner, Claiming Child Was Obstacle to Relationship ಸಲಿಂಗಕಾಮಕ್ಕೆ ಅಡ್ಡಿಯಾಗಿದ್ದ ತನ್ನ ಐದು ತಿಂಗಳ ಮಗುವನ್ನೇ ತಾಯಿಯೊಬ್ಬಳು ತನ್ನ ಸಂಗಾತಿಯೊಂದಿಗೆ ಸೇರಿ ಹತ್ಯೆ ಮಾಡಿದ್ದಾಳೆ. ಪತಿಗೆ ಸಿಕ್ಕ ಮೊಬೈಲ್‌ನಿಂದ ಈ ಕೊಲೆ ರಹಸ್ಯ ಬಯಲಾಗಿದೆ.

ಸಲಿಂಗಕಾಮಕ್ಕೆ ಅಡ್ಡಿಯಾಯ್ತೆಂದು ತನ್ನ ಐದು ತಿಂಗಳ ಮಗುವನ್ನೇ ಮಹಿಳೆಯೊಬ್ಬಳು ಕೊಂದಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಮಹಿಳೆ ಮತ್ತು ಯುವತಿಯ ಸಲಿಂಗ ಕಾಮಕ್ಕೆ ಏನೂ ಅರಿಯದ ಕಂದಮ್ಮ ಬಲಿಯಾಗಿದ್ದಾಳೆ. ಸಲಿಂಗ ಕಾಮದ ದಾಹಕ್ಕೆ ಹೆತ್ತ ಮಗುವನ್ನೇ ಕ್ರೂರ ತಾಯಿ ಕೊಂದಿದ್ದು, ರಾಜ್ಯದ ಗಡಿಭಾಗ ತಮಿಳುನಾಡಿನ ಕೆಳಮಂಗಲಂ ಸಮೀಪದ ಚಿನ್ನಟ್ಟಿಯಲ್ಲಿ ಘಟನೆ ನಡೆದಿದೆ.
26 ವರ್ಷದ ಭಾರತಿ ಎನ್ನುವ ವಿವಾಹಿತೆಯ ಜೊತೆ 22 ವರ್ಷದ ಯುವತಿ ಸುಮಿತ್ರಾ ಸಲಿಂಗಕಾಮ ಇರಿಸಿಕೊಂಡಿದ್ದಳು. ಆದರೆ, ತಮ್ಮ ಕಾಮದಾಟಕ್ಕೆ ಅಡ್ಡಿಯಾಯ್ತು ಎನ್ನುವ ಕಾರಣಕ್ಕೆ ಇಬ್ಬರೂ ಸೇರಿ ಐದು ತಿಂಗಳ ಮಗುವನ್ನು ಕೊಂದಿದ್ದಾರೆ.
ಸುರೇಶ್ ಮತ್ತು ಭಾರತಿ ಎಂಬುವವರಿಗೆ ಮದುವೆಯಾಗಿ ಐದು ವರ್ಷವಾಗಿತ್ತು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು, ಒಂದು ಗಂಡು ಮಗುವಿತ್ತು. ಇನ್ನು ಏರಿಯಾದ ಯುವತಿ ಸುಮಿತ್ರಾ ಎಂಬಾಕೆಯ ಜೊತೆಗೆ ಭಾರತಿ ಸ್ನೇಹ ಬೆಳೆಸಿಕೊಂಡಿದ್ದಳು.
ಈ ಸ್ನೇಹ ಸಲಿಂಗ ಕಾಮಕ್ಕೆ ತಿರುಗಿ, ಪತಿ ಇಲ್ಲದೆ ಇದ್ದಾಗ ಮನೆಯಲ್ಲಿ ಇಬ್ಬರೂ ಪರಸ್ಪರ ಲೈಂಗಿಕ ಬಯಕೆ ಈಡೇರಿಸಿಕೊಳ್ಳುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಭಾರತಿ ಹಾಗೂ ಸುಮಿತ್ರಾ ಸಲಿಂಗಕಾಮಿಗಳಾಗಿದ್ದರು.
ಇಬ್ಬರು ಮಾತನಾಡಿಕೊಳ್ಳೋಕೆ ಬೇರೆಯದೆ ಮೊಬೈಲ್ ಇರಿಸಿಕೊಂಡಿದ್ದರು. ಸ್ನಾನ ಮಾಡುವಾಗ ನಗ್ನವಾಗಿ ವಿಡಿಯೋ ಕಾಲ್ ಮಾಡೋದು ಇಬ್ಬರು ಕಿಸ್ ಮಾಡುತ್ತ ಪೋಟೋ ಕ್ಲಿಕ್ ಮಾಡಿ ಪರಸ್ಪರ ಹಂಚಿಕೊಳ್ಳುತ್ತಿದ್ದರು.
ಇದರ ನಡುವೆ ಎದೆ ಮೇಲೆ sumi ಎಂದು ಭಾರತಿ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಳು. ಇಬ್ಬರು ಪರಸ್ಪರ ಚಾಕುವಿನಿಂದ ಕೈ ಕುಯ್ದುಕೊಂಡಿರುವುದು ಕೂಡ ಗೊತ್ತಾಗಿದೆ. ತಮ್ಮ ಪೋಟೋಗಳನ್ನ ಹಾಕಿ ರೀಲ್ಸ್ ವಿಡಿಯೋ ಕೂಡ ಮಾಡಿದ್ದರು.
ಇನ್ನು ಕಳೆದ ಐದು ತಿಂಗಳ ಹಿಂದೆಯಷ್ಟೇ ಗಂಡು ಮಗುವಿಗೆ ಜನ್ಮ ಭಾರತಿ ಜನ್ಮ ನೀಡಿದ್ದಳು. ಆದರೆ, ಮಗು ಆದ ದಿನದಿಂದ ಭಾರತಿ ನನ್ನನ್ನು ಅವಾಯ್ಡ್ ಮಾಡ್ತಿದ್ದಾಳೆ ಎಂದು ಸುಮಿತ್ರಾ ದೂರು ಹೇಳಿದ್ದಳು.
ಇದೇ ವಿಚಾರವಾಗಿ ಇಬ್ಬರ ಮಧ್ಯೆ ಪದೇ ಪದೇ ಜಗಳವಾಡಿ ಕಿತ್ತಾಡಿಕೊಂಡಿದ್ದರು. ಮಗುವಿನಿಂದಲೇ ಈ ಗಲಾಟೆ ಅಂತ ಮಗುವನ್ನ ಕೊಲೆ ಮಾಡುವಂತೆ ಸುಮಿತ್ರಾ, ಭಾರತಿಗೆ ತಿಳಿಸಿದ್ದಳು.
ಅದರಂತೆಯೇ ಮಗುವನ್ನ ಉಸಿರುಗಟ್ಟಿಸಿ ಕೊಲೆ ಭಾರತಿ ಕೊಲೆ ಮಾಡಿದ್ದಳು. ಬಳಿಕ ಹಾಲು ಕುಡಿಯುವಾಗ ನೆತ್ತಿಗೇರಿ ಸಾವನ್ನಪ್ಪಿದೆ ಅಂತಾ ಕಥೆ ಕಟ್ಟಿದ್ದಳು. ಮಗುವನ್ನ ಅಂತ್ಯಸಂಸ್ಕಾರ ಕೂಡ ಕುಟುಂಬಸ್ಥರು ಮಾಡಿದ್ದರು. ಈ ವೇಳೆ ಮನೆಯಲ್ಲಿ ಭಾರತಿ ಮತ್ತು ಸುಮಿತ್ರಾ ಬಳಸುತ್ತಿದ್ದ ಮೊಬೈಲ್ ಸುರೇಶ್‌ಗೆ ಸಿಕ್ಕಿತ್ತು. ಅದರಲ್ಲಿ ಇಬ್ಬರ ಸಲಿಂಗ ಕಾಮದ ವಿಷಯ ಮತ್ತು ಮಗುವಿನ ಕೊಲೆ ರಹಸ್ಯ ಬಯಲಾಗಿದೆ.
ಪೋಲಿಸರಿಗೆ ಕಂಪ್ಲೇಂಟ್ ಕೊಡೋದಾಗಿ ಸುರೇಶ್, ಭಾರತಿಗೆ ಹೇಳಿ ಹೋಗಿದ್ದ. ಈ ವೇಳೆ ಪೋನ್ ಮಾಡಿ ಸುರೇಶ್ ಜೊತೆಗೆ ಮಗುವನ್ನ ಕೊಲೆ ಮಾಡಿದ್ದಾಗಿ ಭಾರತಿಯೇ ಒಪ್ಪಿಕೊಂಡಿದ್ದಳು. ಆ ಬಳಿಕ ಆಡಿಯೋ, ವಿಡಿಯೋ, ಪೋಟೋಗಳ ಸಮೀತವಾಗಿ ಸುರೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಕೆಳಮಂಗಲಂ ಪೊಲೀಸ್ ಠಾಣೆಯಲ್ಲಿ ಭಾರತಿ ಮತ್ತು ಸುಮಿತ್ರಾ ಇಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ.
ಕೆಳಮಂಗಲಂ ತಹಶೀಲ್ದಾರ್ ಗಂಗೈ ಅವರ ಸಮ್ಮುಖದಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆದಿದೆ. ಅಂತ್ಯಸಂಸ್ಕಾರ ಮಾಡಿದ್ದ ಗುಂಡಿಯಿಂದ ಮಗು ದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಇಬ್ಬರು ಸಲಿಂಗ ಕಾಮಿ ಆರೋಪಿಗಳನ್ನ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.