ದೈವತ್ವದ ನೆರಳಿನಲ್ಲಿ ನಡೆಯುವ ರಾಜಕೀಯ ಮೇಲಾಟದಲ್ಲಿ ಸೋಲು ಮತ್ತು ಗೆಲುವು ಯಾರಿಗೆ ಎನ್ನುವ ಪ್ರಶ್ನೆಗೆ ಉತ್ತರ ನಿರೀಕ್ಷಿತವಾದರೂ ಈ ಆಟ ಹೇಗೆ ಸಾಗುತ್ತದೆ ಎನ್ನುವ ಕುತೂಹಲವೇ ಚಿತ್ರವನ್ನು ನೋಡಿಕೊಂಡು ಹೋಗುವ ಗುಣವನ್ನು ದಯಪಾಲಿಸಿದೆ.

ಆರ್‌.ಕೆ.

ವಿಜ್ಞಾನ, ನಂಬಿಕೆ, ಧಾರ್ಮಿಕತೆ ಮತ್ತು ಹಳ್ಳಿ ರಾಜಕೀಯ... ಇವಿಷ್ಟು ತಿರುವುಗಳಲ್ಲಿ ಒಂದು ಸಿನಿಮಾ ಹೇಗೆ ಸಂಚಾರ ಮಾಡುತ್ತದೆ ಎನ್ನುವ ಕುತೂಹಲದ ಹೆಸರೇ ‘ರೋಣ’. ಸರಣಿ ಕೊಲೆಗಳಿಗೂ ಈ ಮೇಲಿನ ತಿರುವುಗಳಿಗೂ ಇರುವ ನಂಟಿನ ನಡುವೆ ಚಿತ್ರದ ಕತೆ ಸಾಗುತ್ತದೆ. ಅದ್ದೂರಿ ಮೇಕಿಂಗ್‌ಗಿಂತ ಸರಳವಾದ ಕತೆಯನ್ನು ಒ‍ಳಗೊಂಡಿರುವುದು ಈ ಚಿತ್ರದ ಸಕರಾತ್ಮಕ ಅಂಶ.

ದೈವತ್ವದ ನೆರಳಿನಲ್ಲಿ ನಡೆಯುವ ರಾಜಕೀಯ ಮೇಲಾಟದಲ್ಲಿ ಸೋಲು ಮತ್ತು ಗೆಲುವು ಯಾರಿಗೆ ಎನ್ನುವ ಪ್ರಶ್ನೆಗೆ ಉತ್ತರ ನಿರೀಕ್ಷಿತವಾದರೂ ಈ ಆಟ ಹೇಗೆ ಸಾಗುತ್ತದೆ ಎನ್ನುವ ಕುತೂಹಲವೇ ಚಿತ್ರವನ್ನು ನೋಡಿಕೊಂಡು ಹೋಗುವ ಗುಣವನ್ನು ದಯಪಾಲಿಸಿದೆ. ಚಿತ್ರದಲ್ಲಿ ಹೇಳಿರುವ ಸಂಗತಿಗಳಿಗೆ ಜಾತ್ರೆ ಮತ್ತು ನೀರಿನಲ್ಲಿ ತೇಲುವ ಕಲ್ಲು ಯಾವ ರೀತಿ ಕಾರಣ ಎನ್ನುವುದು ಮತ್ತೊಂದು ಹೈಲೈಟ್‌.

ಒಂದು ಪವರ್‌ಫುಲ್‌ ಟೈಟಲ್‌ ಜೊತೆಗೆ ಅಷ್ಟೇ ರಗ್ಡ್‌ ಹಳ್ಳಿ ಹಿನ್ನೆಲೆಯ ಕತೆಯನ್ನು ಹೇಳಿರುವ ನಿರ್ದೇಶಕ ಸತೀಶ್‌ ಕುಮಾರ್‌ ಅವರ ಸಾಹಕ್ಕೆ ತೆರೆ ಹಿಂದೆ ಮತ್ತು ತೆರೆ ಮೇಲೆ ಬೆನ್ನೆಲುಬಾಗಿರುವುದು ರಘು ರಾಜಾನಂದ. ಆ್ಯಕ್ಷನ್‌, ಸೆಂಟಿಮೆಂಟ್‌ ಹಾಗೂ ಸಸ್ಪೆನ್ಸ್‌ ಈ ಮೂರು ಚಿತ್ರಕತೆಯನ್ನು ಮುನ್ನಡೆಸುತ್ತವೆ.

ಚಿತ್ರ: ರೋಣ

ತಾರಾಗಣ: ರಘು ರಾಜಾನಂದ, ಪ್ರಕೃತಿ ಪ್ರಸಾದ್‌, ಶರತ್‌ ಲೋಹಿತಾಶ್ವ, ಸಿಂದ್ಲಿಗು ಶ್ರೀಧರ್‌, ಮಾಲೂರು ವಿಜಯ್‌
ನಿರ್ದೇಶನ: ಸತೀಶ್ ಕುಮಾರ್
ರೇಟಿಂಗ್‌: 3

ರಾಜಕಾರಣಿಯಾಗಿ ಸಿದ್ಲಿಂಗು ಶ್ರೀಧರ್‌, ನಾಯಕನ ತಂದೆ ಪಾತ್ರದಲ್ಲಿ ಶರತ್‌ ಲೋಹಿತಾಶ್ವ, ತಾಯಿ ಪಾತ್ರದಲ್ಲಿ ಸಂಗೀತಾ, ನಾಯಕಿ ತಂದೆ ಪಾತ್ರದಲ್ಲಿ ಬಲರಾಜವಾಡಿ ಅವರು ನಿರ್ವಹಿಸಿದ ಪಾತ್ರಗಳು ನೆನಪಿನಲ್ಲಿ ಉಳಿಯುವಂತಿವೆ. ಚಿತ್ರದ ನಾಯಕಿ ಕೃತಿ ಪ್ರಸಾದ್‌ ಅವರದ್ದು ಭರವಸೆ ಮೂಡಿಸುವ ನಟನೆ.