- Home
- Entertainment
- TV Talk
- BBK 12: ಈ ವಾರ ಡೇಂಜರ್ ಝೋನ್‌ನಲ್ಲಿರುವ ಘಟಾನುಘಟಿ ಸ್ಪರ್ಧಿಗಳು, ಎಲಿಮಿನೇಟ್ ಆಗೋದು ಯಾರು?
BBK 12: ಈ ವಾರ ಡೇಂಜರ್ ಝೋನ್‌ನಲ್ಲಿರುವ ಘಟಾನುಘಟಿ ಸ್ಪರ್ಧಿಗಳು, ಎಲಿಮಿನೇಟ್ ಆಗೋದು ಯಾರು?
BBK 12 Updates: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈ ಬಾರಿ ಇಡೀ ಮನೆ ನಾಮಿನೇಟ್ ಆಗಿದೆ. ಕಿಚ್ಚ ಸುದೀಪ್ ಅವರೇ ಇಡೀ ಮನೆಯನ್ನು ನಾಮಿನೇಟ್ ಮಾಡಿದ್ದರು. ಈ ವಾರ ವ್ಯಕ್ತಿತ್ವದ ಆಟ, ಫಿಸಿಕಲ್ ಟಾಸ್ಕ್ ಇರೋದಿಲ್ಲ ಎಂದು ಹೇಳಿದ್ದರು. ಹಾಗಿದ್ರೆ ಯಾರು ಬಚಾವ್ ಆಗ್ತಾರೆ.

ಮನೆಯವರ ಪತ್ರ
ಈ ಬಾರಿ ಲೆಟರ್ ಟಾಸ್ಕ್ ಇತ್ತು. ಎಲ್ಲ ಸ್ಪರ್ಧಿಗಳಿಗೂ ಮನೆಯವರಿಂದ ಪತ್ರ ಬಂದಿತ್ತು. ಆದರೆ ಎಲ್ಲರಿಗೂ ಪತ್ರ ಮಾತ್ರ ಸಿಗುತ್ತಿರಲಿಲ್ಲ, ಇದರಲ್ಲಿ ಟ್ವಿಸ್ಟ್ ಇತ್ತು.
ಪತ್ರ ಸಿಗೋದರಲ್ಲೂ ಟ್ವಿಸ್ಟ್
ಇಬ್ಬರು ಸ್ನೇಹಿತರು ಅಥವಾ ಮೂವರು ಗುಂಪು ಮಾಡಿ ಅವರಲ್ಲಿ ಒಬ್ಬರಿಗೆ ಪತ್ರ ಸಿಗಬೇಕು ಎಂದು ಬಿಗ್ ಬಾಸ್ ಪ್ಲ್ಯಾನ್ ಮಾಡಿದ್ದರು. ಇಲ್ಲಿಯೂ ಎಮೋಶನಲ್ ಟ್ವಿಸ್ಟ್ ಇತ್ತು.
ಯಾರಿಗೆ ಪತ್ರ ಸಿಗಬೇಕು?
ರಾಶಿಕಾ ಶೆಟ್ಟಿ, ರಕ್ಷಿತಾ ಶೆಟ್ಟಿ ನಡುವೆ ಯಾರಿಗೆ ಪತ್ರ ಸಿಗಬೇಕು ಎಂದು ಬಿಗ್ ಬಾಸ್ ಶೋನ ಉಳಿದ ಸ್ಪರ್ಧಿಗಳು ನಿರ್ಧಾರ ಮಾಡಬೇಕಿತ್ತು. ನೀಡಿದ ಸಮಯದೊಳಗಡೆ ನಿರ್ಧಾರ ತಿಳಿಸದ ಕಾರಣ, ಇಬ್ಬರಿಗೂ ಪತ್ರ ಸಿಗಲಿಲ್ಲ.
ಇಮ್ಯುನಿಟಿ ಪಡೆದವರು ಯಾಋಉ?
ಈಗ ಅಭಿಷೇಕ್ ಶ್ರೀಕಾಂತ್, ಜಾಹ್ನವಿ, ಕಾವ್ಯ ಶೈವ, ಮಾಳು ನಿಪನಾಳ, ರಿಷಾ ಗೌಡ ಅವರಿಗೆ ಪತ್ರ ಸಿಕ್ಕಿದೆ. ಪತ್ರ ಸಿಕ್ಕಿದವರಿಗೆ ಇಮ್ಯುನಿಟಿ ಕೂಡ ಸಿಗುವುದು. ಹೀಗಾಗಿ ಇವರು ಒಂದು ವಾರ ಸೇಫ್ ಆಗುತ್ತಾರೆ.
ಎಲಿಮಿನೇಟ್ ಆಗೋರು ಯಾರು?
ಉಳಿದ ಸ್ಪರ್ಧಿಗಳಲ್ಲಿ ಯಾರು ಈ ವಾರ ಎಲಿಮಿನೇಟ್ ಆಗ್ತಾರೆ ಎಂದು ಕಾದು ನೋಡಬೇಕಿದೆ. ಉಳದವರೆಲ್ಲರೂ ಘಟಾನುಘಟಿಗಳೇ. ಹೀಗಾಗಿ ಯಾರು ಎಲಿಮಿನೇಟ್ ಆಗ್ತಾರೆ ಎಂದು ಕಾದು ನೋಡಬೇಕಿದೆ. ಅಥವಾ ಮಿಡ್ ವೀಕ್ ಎಲಿಮಿನೇಶನ್ ಮಾಡಿದ್ರೂ ಆಶ್ಚರ್ಯವಿಲ್ಲ.