LIVE NOW
Published : Dec 20, 2025, 06:58 AM ISTUpdated : Dec 20, 2025, 09:57 AM IST

Karnataka News Live: ಪವರ್‌ ಪಾಯಿಂಟ್‌ - ದ್ವೇಷ ಭಾಷಣ ಮಸೂದೆಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ

ಸಾರಾಂಶ

ಬೆಳಗಾವಿ: ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಹಠಯೋಗಿ ಲೋಕೇಶ್ವರ ಸ್ವಾಮೀಜಿಯು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾ*ಚಾರ ಎಸಗಿದ ಆರೋಪ ಸಾಬೀತಾಗಿದೆ. ಜಿಲ್ಲಾ ಪೋಕ್ಸೋ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದ್ದು, ಅಪರಾಧಿಗೆ ಶಿಕ್ಷೆಯನ್ನು ಶನಿವಾರ ನೀಡಲಿದೆ. ಹಠಯೋಗಿ ಲೋಕೇಶ್ವರ ಸ್ವಾಮೀಜಿ ಉರೂಫ್‌ ಲೋಕೇಶ್ವರ ಸಾಬಣ್ಣ ಜಂಬಗಿ (30) ಬಾಲಕಿ ಮೇಲೆ ಅತ್ಯಾ*ಚಾರ ಎಸಗಿದ ಅಪರಾಧಿ. ಮೇ 13ರಂದು ನಿಮ್ಮ ಮನೆಗೆ ಬಿಡುತ್ತೇನೆಂದು ಹೇಳಿ ಅಪ್ರಾಪ್ತ ಬಾಲಕಿಯನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಆಂಧ್ರಪ್ರದೇಶದ ಮಂತ್ರಾಲಯಕ್ಕೆ ತೆರಳಿ ಲಾಡ್ಜ್‌ವೊಂದರಲ್ಲಿ ಬಾಲಕಿ ಮೇಲೆ ಒತ್ತಾಯ ಪೂರ್ವಕವಾಗಿ ಅತ್ಯಾ*ಚಾರ ಎಸಗಿದ್ದ.

PowerPoint Hate Speech Bill Threatens Freedom of Expression shobha karandlaje

09:57 AM (IST) Dec 20

ಪವರ್‌ ಪಾಯಿಂಟ್‌ - ದ್ವೇಷ ಭಾಷಣ ಮಸೂದೆಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ

ಈ ಮಸೂದೆ ಸರ್ಕಾರಿ ಅಧಿಕಾರಿಗಳಿಗೆ ಜನರು ಯಾವ ಮಾತನಾಡಲು ಅನುಮತಿಸಬಹುದು ಎಂಬುದನ್ನು ನಿರ್ಧರಿಸುವ ಅಧಿಕಾರ ನೀಡುತ್ತದೆ. ಇದು ಸಾರ್ವಜನಿಕ ಹಿತಾಸಕ್ತಿಗೆ ಅಪಾಯ ಉಂಟುಮಾಡುವ ಮಾತುಗಳನ್ನು ಮಾತ್ರ ಗುರಿಯಾಗಿಸದೆ, ಸರ್ಕಾರವಿರೋಧಿ ಧ್ವನಿಗಳನ್ನು ಮುಚ್ಚಿಹಾಕುವ ಸಾಧನವಾಗಿ ಪರಿವರ್ತನೆಗೊಳ್ಳಬಹುದು

 

Read Full Story

09:42 AM (IST) Dec 20

BBK 12 - ಮುಗ್ಧೆಯೂ ಅಲ್ಲ, ಪಾಪವೂ ಅಲ್ಲ, ಇಷ್ಟು ದ್ವೇಷವೇ?; ಈ ಕೀಳು ಕೆಲಸಕ್ಕೆ ಕರ್ಮ ಬಿಡೋದಿಲ್ಲ Rakshita Shetty

Bigg Boss Rakshita Shetty: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಸೀಕ್ರೆಟ್‌ ರೂಮ್‌ಗೆ ರಕ್ಷಿತಾ ಶೆಟ್ಟಿ ಹೋದಾಗಿನಿಂದ ವೀಕ್ಷಕರಿಗೆ ಇರಿಟೇಟ್‌ ಅನಿಸಿದೆ. ಅದಕ್ಕೂ ಮೊದಲೇ ರಕ್ಷಿತಾ ಇರಿಟೇಟ್‌ ಅನಿಸಿದ್ದರು. ಈಗ ಇದು ಅತಿರೇಕಕ್ಕೆ ಹೋಗಿದೆ. ರಕ್ಷಿತಾ ವ್ಯಕ್ತಿತ್ವ ಏನು ಎನ್ನೋದು ಬಯಲಾಗಿದೆ.

 

Read Full Story

09:36 AM (IST) Dec 20

'ಲಕ್ಷ್ಮಿ ಹೆಬ್ಬಾಳ್ಕರ್ ಅವರೇ, ಫೆಬ್ರವರಿ-ಮಾರ್ಚ್ ಹಣ ಯಾವಾಗ ಬರುತ್ತೆ? ಸದನಕ್ಕೆ ತಪ್ಪು ಮಾಹಿತಿ ವಿರುದ್ಧ ರೊಚ್ಚಿಗೆದ್ದ ಗೃಹಲಕ್ಷ್ಮಿಯರು!

ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಫೆಬ್ರವರಿ-ಮಾರ್ಚ್ ತಿಂಗಳ ಹಣ ಬಿಡುಗಡೆಯಾಗದ ಕಾರಣ ಬಿಜೆಪಿ ತೀವ್ರ ಆಕ್ರೋಶ.. ಹಣ ಬರುತ್ತದೆಂದು ನಂಬಿ ಸಾಲ ಮಾಡಿದ್ದ ಮಹಿಳೆಯರು ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸದನದಲ್ಲಿ ತಪ್ಪು ಮಾಹಿತಿ ನೀಡಿ ನಂತರ ಒಪ್ಪಿಕೊಂಡಿದ್ದಾರೆ..

Read Full Story

09:17 AM (IST) Dec 20

ಶಾಸಕ ಬೈರತಿಗೆ ಕಂಟಕವಾದ ಕುಂಭಮೇಳ ಯಾತ್ರೆ!

 ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣ ಸಂಬಂಧ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜು ಅವರ ಪಾಲಿಗೆ ಉತ್ತರಪ್ರದೇಶದ ಪ್ರಯಾಗರಾಜ್‌ನ ‘ಮಹಾ ಕುಂಭಮೇಳ ಯಾತ್ರೆ’ಗೆ ತೆರಳಿದ್ದ ವಿಮಾನದ ಟಿಕೆಟ್‌ಗಳೇ ಕಂಟಕವಾಗಿವೆ ಎಂಬ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.

Read Full Story

09:13 AM (IST) Dec 20

BBK 12 - ನೋಡಿದ್ದು, ಕೇಳಿದ್ದು ಸುಳ್ಳಾಗಬಹುದು - ಬಿಗ್‌ಬಾಸ್ ಸೀಸನ್ 12ರಲ್ಲಿ ರೋಚಕ ತಿರುವು

BBK 12 Elimination Twist: ಈ ವಾರ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗುವ ಸಾಧ್ಯತೆಯಿದೆ. ಮತ್ತೊಂದೆಡೆ, ಸೀಕ್ರೆಟ್ ರೂಮ್‌ನಲ್ಲಿರುವ ರಕ್ಷಿತಾ ಶೆಟ್ಟಿ, ಧ್ರುವಂತ್ ವರ್ತನೆಯಿಂದ ಬೇಸತ್ತು ಮನೆಗೆ ಮರಳಲು ಮನವಿ ಮಾಡಿದ್ದಾರೆ.

Read Full Story

08:31 AM (IST) Dec 20

BBK 12 - ಈ ವಾರ ಮಾತ್ರ ಕಿಚ್ಚ ಸುದೀಪ್‌ ಈ ವಿಷ್ಯ ಮಾತಾಡ್ಬೇಕು; ಇಲ್ಲ ಅಂದ್ರೆ ಸಮಸ್ಯೆ ತಪ್ಪಿದ್ದಲ್ಲ!

Bigg Boss Kannada Season 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಯಾವ ವಿಷಯವನ್ನು ಚರ್ಚೆ ಮಾಡುತ್ತಾರೆ? ಕಿಚ್ಚ ಸುದೀಪ್‌ ಅವರು ಯಾರಿಗೆ ಕ್ಲಾಸ್‌ ತಗೊಳ್ತಾರೆ ಎಂಬ ಪ್ರಶ್ನೆ ಇರುತ್ತದೆ. ಹಾಗಾದರೆ ಯಾವ ವಿಷಯದ ಬಗ್ಗೆ ಮಾತನಾಡಬೇಕು?

Read Full Story

08:11 AM (IST) Dec 20

ಕರ್ನಾಟಕಕ್ಕೆ ಶೀತ ಅಲೆಯ ಕಂಟಕ - ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?

Karnataka weather update: ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಪ್ರಮುಖ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಶೀತ ಅಲೆ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Read Full Story

08:03 AM (IST) Dec 20

ಡಾ ರಾಜ್‌ಕುಮಾರ್‌, ಸರಿತಾ ಯುಗವನ್ನು ನೆನಪಿಸಿದ ಶಿವರಾಜ್‌ಕುಮಾರ್‌, ಸರಿತಾ! ವೀಕ್ಷಕರಿಂದ ಮೆಚ್ಚುಗೆ

Dance Karnataka Dance Show: ‘ಚಲಿಸುವ ಮೋಡಗಳು’ ಸಿನಿಮಾದ ‘ಚಂದಿರ ತಂದ ಹುಣ್ಣಿಮೆ ರಾತ್ರಿ’ ಹಾಡು ಇಂದಿಗೂ ಕೂಡ ಪ್ರಸ್ತುತವಾಗಿದೆ. ಎಲ್ಲರೂ ಈ ಹಾಡಿಗೆ ಡ್ಯಾನ್ಸ್‌ ಮಾಡೋದುಂಟು. ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ರಚಿತಾ ರಾಮ್‌, ಶಿವರಾಜ್‌ಕುಮಾರ್‌ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

Read Full Story

07:56 AM (IST) Dec 20

BBK 12 - ಧ್ರುವಂತ್ ನೆಮ್ಮದಿ ನನ್ನ ಕೈಯಲ್ಲುಂಟು - ಸುದೀಪ್ ಮುಂದೆ ಕಣ್ಣೀರಿನ ಕಥೆ ಹೇಳಿಕೊಂಡ ರಕ್ಷಿತಾ ಶೆಟ್ಟಿ

ಸೀಕ್ರೆಟ್‌ ರೂಮ್‌ನಲ್ಲಿರುವ ರಕ್ಷಿತಾ ಶೆಟ್ಟಿ, ಕಿಚ್ಚ ಸುದೀಪ್ ಮುಂದೆ ತಮ್ಮ ಕಣ್ಣೀರಿನ ಕಥೆ ಹೇಳಿಕೊಂಡಿದ್ದಾರೆ. ಧ್ರುವಂತ್ ಜೊತೆ ಇರಲು ಸಾಧ್ಯವಾಗುತ್ತಿಲ್ಲ, ನನ್ನ ನೆಮ್ಮದಿ ಹಾಳಾಗುತ್ತಿದೆ ಎಂದು ಅವರು ಮನವಿ ಮಾಡಿದ್ದಾರೆ. ಇವರಿಬ್ಬರ ತದ್ವಿರುದ್ಧ ಮನಸ್ಥಿತಿಯೇ ಸೀಕ್ರೆಟ್ ರೂಮ್‌ನ ಮನರಂಜನೆಯಾಗಿದೆ.

Read Full Story

07:47 AM (IST) Dec 20

ಬೆಳಗಾವಿ ಅಧಿವೇಶನ ಕೊನೆ ದಿನವೂ ಗದ್ದಲ - ವಿಪಕ್ಷ, ಸಂಘಟನೆಗಳಿಂದ ಪ್ರತಿಭಟನೆ!

ಬೆಳಗಾವಿ ಚಳಿಗಾಲದ ಅಧಿವೇಶನದ ಕೊನೆಯ ದಿನ, ಗೃಹಲಕ್ಷ್ಮೀ ಯೋಜನೆ ಭ್ರಷ್ಟಾಚಾರ ಆರೋಪದ ಮೇಲೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ ನಡೆಸಿತು. ಇದರೊಂದಿಗೆ, ಅಲೆಮಾರಿ ಸಮುದಾಯಗಳು, ದಲಿತ ಕುಟುಂಬಗಳು ಸೇರಿದಂತೆ ವಿವಿಧ ಸಂಘಗಳು ಬೇಡಿಕೆಗಳ ಈಡೇರಿಕೆಗೆ ಧರಣಿ ನಡೆಸಿದವು.

Read Full Story

07:34 AM (IST) Dec 20

ಸಿಎಂ ಕುರ್ಚಿ ಕನಸು ನನಸಾಗುತ್ತಾ? ಅಂಕೋಲಾ ದೇವಿಯ ಸನ್ನಿಧಿಯಲ್ಲಿ ಡಿಕೆಶಿಗೆ ಸಿಕ್ಕ ಆ 'ಶುಭ ಸೂಚನೆ' ಏನು?

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅಂಕೋಲಾದ ಆಂದ್ಲೆ ಜಗದೀಶ್ವರಿ ದೇವಸ್ಥಾನದಲ್ಲಿ ಇಷ್ಟಾರ್ಥಸಿದ್ಧಿ ಪೂಜೆ ಸಲ್ಲಿಸಿದರು. ತಾಯಿ ತನಗೆ ಶುಭ ಸೂಚನೆ ನೀಡಿದ್ದಾಳೆ ಎಂದ ಡಿಕೆಶಿ, ಮುಖ್ಯಮಂತ್ರಿ ಹುದ್ದೆಯ ಕುರಿತ ಪ್ರಶ್ನೆಗೆ ಇದು ತನ್ನ ಮತ್ತು ದೇವಿಯ ನಡುವಿನ ವಿಚಾರವೆಂದು ಗೂಢಾರ್ಥವಾಗಿ ನುಡಿದರು.
Read Full Story

More Trending News