ಅಲ್ಲಿ ಒಂದಲ್ಲ ... ಎರಡಲ್ಲ... ಐದು ಹುಲಿಗಳಿವೆ. ಕಳೆದ ಎರಡು ತಿಂಗಳಿಂದ 30ಕ್ಕೂ ಹೆಚ್ಚು ಹಸುಗಳನ್ನು ತಿಂದು ತೇಗಿವೆ. ಗ್ರಾಮಸ್ಥರು ಹೊಲಗದ್ದೆಗಳಿಗೆ ಹೋಗಲು ಭಯಪಡುವಂತಾಗಿವೆ. ಹೌದು ಚಾಮರಾಜನಗರ ಜಿಲ್ಲೆಯಲ್ಲಿ ಹುಲಿಗಳ ಸದ್ದು ಜೋರಾಗಿದೆ.
ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಡಿ.20): ಅಲ್ಲಿ ಒಂದಲ್ಲ ... ಎರಡಲ್ಲ... ಐದು ಹುಲಿಗಳಿವೆ. ಕಳೆದ ಎರಡು ತಿಂಗಳಿಂದ 30ಕ್ಕೂ ಹೆಚ್ಚು ಹಸುಗಳನ್ನು ತಿಂದು ತೇಗಿವೆ. ಗ್ರಾಮಸ್ಥರು ಹೊಲಗದ್ದೆಗಳಿಗೆ ಹೋಗಲು ಭಯಪಡುವಂತಾಗಿವೆ. ತೋಟದ ಮನೆಗಳಲ್ಲಿದ್ದ ವಾಸವಿದ್ದ ರೈತರು ತಮ್ಮ ಹಸುಕರುಗಳನ್ನು ಮಾರಿ ಊರು ಸೇರಿಕೊಳ್ಳುತ್ತಿದ್ದಾರೆ. ಅದೆಲ್ಲಿ ಅಂತೀರಾ ಈ ಕುರಿತು ಒಂದು ಸ್ಟೋರಿ ನೋಡಿ..
ಹುಲಿ... ಹುಲಿ.. ಹುಲಿ.. ಹೌದು ಚಾಮರಾಜನಗರ ಜಿಲ್ಲೆಯಲ್ಲಿ ಹುಲಿಗಳ ಸದ್ದು ಜೋರಾಗಿದೆ. ಹುಲಿ ದಾಳಿ ಪ್ರಕರಣಗಳು ವರದಿ ಆಗುತ್ತಲೇ ಇವೆ. ಇದೀಗ ಜಿಲ್ಲಾ ಕೇಂದ್ರದಿಂದ ಕೇವಲ 12 ಕಿಲೋಮೀಟರ್ ದೂರದಲ್ಲಿರುವ ನಂಜೇದೇವನಪುರ ಬಳಿ ಬರೋಬ್ಬರಿ ಐದು ಹುಲಿಗಳು ಒಟ್ಟಿಗೆ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಇಲ್ಲಿನ ಆನೆಮಡುವಿನ ಕೆರೆ ಬಳಿ ಇರುವ ತೋಟವೊಂದರಲ್ಲಿ ಐದು ಹುಲಿಗಳು ಸಂಚರಿಸುತ್ತಿರುವ ದೃಶ್ಯ ತೋಟದ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಲ್ಲಿ ಹುಲಿ ಇರುವ ಬಗ್ಗೆ ನಲವತ್ತು ದಿನಗಳ ಹಿಂದೆಯೇ ಅರಣ್ಯಾಧಿಕಾರಿಗಳ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ ವಹಿಸಿದ್ದಾರೆ.
ಹುಲಿ ಹಿಡಿಯಿರಿ.. ಇಲ್ಲ ನಮಗೆ ಕೊಲ್ಲಲು ಅವಕಾಶ ಕೊಡಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ತಿಂಗಳಿಂದ ಈ ಭಾಗದಲ್ಲಿ 30ಕ್ಕೂ ಹೆಚ್ಚು ಹಸುಗಳು ಹುಲಿ ದಾಳಿಗೆ ಬಲಿಯಾಗಿವೆ. ರೈತರು ಹೊಲಗದ್ದೆಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ತೋಟಗಳಲ್ಲಿ ವಾಸವಾಗಿದ್ಧ ರೈತರು ಹುಲಿ ದಾಳಿಯ ಭಯದಿಂದ ತಮ್ಮ ಹಸುಗಳನ್ನು ಮಾರಿ ಊರು ಸೇರಿಕೊಳ್ಳತೊಡಗಿದ್ದಾರೆ. ಹುಲಿ ಭಯದಿಂದ ಕೂಲಿ ಕಾರ್ಮಿಕರು ಬಾರದೆ ವ್ಯವಸಾಯ ಮಾಡಲು ರೈತರು ಪರದಾಡುವಂತಾಗಿದೆ.
ಡ್ರೋನ್ ಕ್ಯಾಮೆರಾ ಮೂಲಕ ಪತ್ತೆ
ಐದು ಹುಲಿಗಳು ಕಾಣಿಸಿಕೊಂಡ ಬಳಿಕ ಅರಣ್ಯಾಧಿಕಾರಿಗಳು ಎಚ್ಚೆತ್ತಿದ್ದಾರೆ. ಡ್ರೋನ್ ಕ್ಯಾಮೆರಾ ಮೂಲಕ ಹುಲಿಗಳನ್ನು ಪತ್ತೆ ಹಚ್ಚಲು ಮುಂದಾಗಿದ್ಧಾರೆ. ನಾಳೆಯಿಂದ ಆನೆಗಳ ಮೂಲಕ ಕಾರ್ಯಾಚರಣೆ ನಡೆಸಲು ನಿರ್ಧರಿಸಿದ್ದಾರೆ. ಒಟ್ಟಾರೆ ಅದು ಮನುಷ್ಯರಾಗಲಿ ಹುಲಿಯಾಗಲಿ ಪ್ರಾಣ ಹಾನಿಯಾಗದಂತೆ ಅರಣ್ಯ ಇಲಾಖೆ ಎಚ್ಚೆತ್ತು ಹುಲಿಗಳನ್ನು ಸೆರೆಹಿಡಿಯಬೇಕಾಗಿದೆ.


