Published : Oct 01, 2025, 07:02 AM ISTUpdated : Oct 01, 2025, 11:48 PM IST

Karnataka News Live: ನಾಯಿ ಕೂಗಿದ್ದಕ್ಕೆ ಬಡಪಾಯಿ ಯುವತಿಯ ವಿವಸ್ತ್ರಗೊಳಿಸಿ ಹಲ್ಲೆ, ಖ್ಯಾತ ನಟಿಯ ವಿರುದ್ಧ ಎಫ್‌ಐರ್!

ಸಾರಾಂಶ

ಮಂಗಳೂರು: ಫೇಸ್‌ಬುಕ್‌ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರು ಹೂಡಿಕೆ ಬಗ್ಗೆ ಪ್ರಚಾರ ಮಾಡುವ ನಕಲಿ ವಿಡಿಯೋ ನಿಜವೆಂದು ನಂಬಿ ಮಹಿಳೆಯೊಬ್ಬರು 9.10 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯು ಹೂಡಿಕೆ ಬಗ್ಗೆ ವಿಡಿಯೋ ನೋಡಿ ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿ ನೋಂದಣಿ ಮಾಡಿದ್ದಾರೆ. ಮೊಬೈಲ್‌ಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ₹20,664 ಹೂಡಿಕೆ ಮಾಡಿದ್ದಾರೆ. ನಂತರ ₹8.90 ಲಕ್ಷ ಸೇರಿ ಒಟ್ಟು ₹9.1 ಲಕ್ಷ ಹೂಡಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Actress Dimple Hayathi  Faces Police Case

11:48 PM (IST) Oct 01

ನಾಯಿ ಕೂಗಿದ್ದಕ್ಕೆ ಬಡಪಾಯಿ ಯುವತಿಯ ವಿವಸ್ತ್ರಗೊಳಿಸಿ ಹಲ್ಲೆ, ಖ್ಯಾತ ನಟಿಯ ವಿರುದ್ಧ ಎಫ್‌ಐರ್!

Actress Dimple Hayathi ನಟಿ ಡಿಂಪಲ್ ಹಯಾತಿ ಮತ್ತು ಅವರ ಪತಿ ಡೇವಿಡ್ ವಿರುದ್ಧ ಅವರ ಮನೆ ಕೆಲಸದಾಕೆ ಪ್ರಿಯಾಂಕಾ ಬೀಬರ್ ದೈಹಿಕ ಮತ್ತು ಮಾನಸಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ನಾಯಿ ಬೊಗಳಿದ್ದಕ್ಕೆ  ವಿವಸ್ತ್ರಗೊಳಿಸಿದ ಆರೋಪ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read Full Story

11:20 PM (IST) Oct 01

ಮನೆಯವರ ಸಂಸ್ಕೃತಿ ಮಾಲ್‌ನಲ್ಲಿ ಅನುಕರಿಸಿದ ಪುಟ್ಟ ಪೋರಿ; ಗೊಂಬೆಗಳ ಕಾಲಿಗೆ ನಮಸ್ಕರಿಸಿದ ವಿಡಿಯೋ ವೈರಲ್!

ಮನೆಯಲ್ಲಿ ಕಲಿತ ಸಂಪ್ರದಾಯದಂತೆ, ಶಾಪಿಂಗ್ ಮಾಲ್‌ನಲ್ಲಿನ ಪ್ರತಿಮೆಗಳನ್ನು ನಿಜವಾದ ಜನರೆಂದು ಭಾವಿಸಿ ಪುಟ್ಟ ಮಗುವೊಂದು ಅವುಗಳ ಪಾದ ಮುಟ್ಟಿ ನಮಸ್ಕರಿಸಿದೆ. ಈ ಮುಗ್ಧ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಗುವಿನ ಸಂಸ್ಕಾರ ಮತ್ತು ಮುಗ್ಧತೆಗೆ ನೆಟ್ಟಿಗರು ಮನಸೋತಿದ್ದಾರೆ.
Read Full Story

11:20 PM (IST) Oct 01

Real vs Fake Khadi - ಖಾದಿ ಅಸಲಿಯೇ ನಕಲಿಯೇ? ಮನೆಯಲ್ಲೇ ಗುರುತಿಸಲು ಈ 5 ಸರಳ ತಂತ್ರ ಬಳಸಿ!

How to Identify Real vs Fake Khadi: ಶುದ್ಧ ಖಾದಿ ಬಟ್ಟೆಯನ್ನು ಗುರುತಿಸುವುದು ಹೇಗೆ: ನೀವು ಅಸಲಿ ಖಾದಿ ಖರೀದಿಸಲು ಬಯಸಿದರೆ, ಈ ವಿಷಯಗಳನ್ನು ಗಮನದಲ್ಲಿಡಿ. ಅಸಲಿ ಖಾದಿ ನಿಮಗೆ ಸ್ಟೈಲಿಶ್ ಮತ್ತು ಆರಾಮದಾಯಕ ಲುಕ್ ನೀಡುವುದಲ್ಲದೆ, ಸ್ವದೇಶಿ ಮತ್ತು ಸುಸ್ಥಿರ ಫ್ಯಾಷನ್‌ಗೂ ಬೆಂಬಲ ನೀಡುತ್ತದೆ.

Read Full Story

11:19 PM (IST) Oct 01

Kantara 1 Movie Review - ಕಾಂತಾರದ ನಾಡೊಳಗೆ ಹೂದೋಟ ಇಟ್ಟ ರಿಷಬ್‌ ಶೆಟ್ಟಿ; ಅಷ್ಟಕ್ಕೂ ಅಸಲಿಗೆ ಹೇಗಿದೆ?

Kantara 1 Movie Review: ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಸಿನಿಮಾ ನೋಡಿ ವಾವ್‌ ಎಂದ ಜನರು ‘ಕಾಂತಾರ ಚಾಪ್ಟರ್‌ 1’ ನೋಡಲು ಕಾತುರದಿಂದ ಕಾದಿದ್ದರು. ಈಗ ಸಿನಿಮಾ ರಿಲೀಸ್‌ ಆಗಿದ್ದು, ಹೇಗಿದೆ? 

Read Full Story

11:03 PM (IST) Oct 01

ಡೆನ್ಮಾರ್ಕ್‌ನ ಈ 4 ಸೌಲಭ್ಯ ಭಾರತದಲ್ಲಿಯೂ ಇರಬೇಕು - ಯುವತಿಯ ಆಸೆಗಳ ವಿಡಿಯೋ ವೈರಲ್!

ಕೋಪನ್‌ಹೇಗನ್‌ನಲ್ಲಿ ವಾಸಿಸುವ ದೆಹಲಿ ಮೂಲದ ಯುವತಿ, ಡೆನ್ಮಾರ್ಕ್‌ನಲ್ಲಿರುವ ನಾಲ್ಕು ಸೌಲಭ್ಯಗಳು ಭಾರತದಲ್ಲೂ ಇರಬೇಕೆಂದು ಆಶಿಸಿ ವಿಡಿಯೋ ಹಂಚಿಕೊಂಡಿದ್ದಾರೆ. ಅವರ ಆಸೆಗಳುಳ್ಳ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Read Full Story

10:58 PM (IST) Oct 01

ಪ್ರೀತಿ ಮಾಯೆ ಹುಷಾರು..! ಗೆಳತಿಯಿಂದಲೇ ರೇ ಪ್ ದೂರು, ಜೈಲಿಂದ ಬಂದ ಟೆಕ್ಕಿ ರೈಲಿಗೆ ಹಾರಿ ಸಾವು

Bilaspur Engineer Ends Life After Girlfriend Files Rpe Case: ನೋಯ್ಡಾದ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ, ಗೆಳತಿಯ ದೂರಿನ ಮೇರೆಗೆ ಗೌರವ್ ಅತ್ಯಾ೧ಚಾರ ಪ್ರಕರಣದಲ್ಲಿ ಜೈಲು ಸೇರಿದ್ದರು. ಪ್ರೀತಿಯಲ್ಲಿ ಮೋಸವಾಗಿದೆ ಎಂದು ಬರೆದಿದ್ದ ಯುವಕನ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿದೆ.

Read Full Story

10:32 PM (IST) Oct 01

Festive season hair care tips - - ಹಬ್ಬದ ಸಂಭ್ರಮ - ನಿಮ್ಮ ಕೂದಲಿನ ರಹಸ್ಯ ಸೌಂದರ್ಯ

festive season hair care tips: ಹಬ್ಬದ ಸೀಸನ್‌ನಲ್ಲಿ ಹೇರ್ ಸ್ಟೈಲಿಂಗ್ ಉಪಕರಣ, ರಾಸಾಯನಿಕ ಕೂದಲಿಗೆ ಹಾನಿ.ನೈಸರ್ಗಿಕ ಶ್ಯಾಂಪೂ, ಡೀಪ್ ಕಂಡೀಷನಿಂಗ್ ಮಾಸ್ಕ್‌, ಎಣ್ಣೆ ಮಸಾಜ್, ಮರದ ಬಾಚಣಿಗೆ ಬಳಕೆ ಸರಳ ಸಲಹೆ ಅನುಸರಿಸುವ ಮೂಲಕ ಕೂದಲನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಇರಿಸಿಕೊಳ್ಳಬಹುದು.

Read Full Story

10:28 PM (IST) Oct 01

ಕಾಂತಾರ ಚಾಪ್ಟರ್ 1 ಪ್ರೀಮಿಯರ್ ಶೋ ರಿವೀವ್; ನಿಮ್ಮ ನಿರೀಕ್ಷೆಗೂ ಮೀರಿದ ಸಿನಿಮಾ, ಟ್ವಿಟರ್‌ನಲ್ಲಿ 9+ ರೇಟಿಂಗ್!

'ಕಾಂತಾರ ಚಾಪ್ಟರ್ 1' ಪ್ರಿವ್ಯೂ ಶೋಗೆ ನಿಮ್ಮ ನಿರೀಕ್ಷೆಗೂ ಮೀರಿದ ಸಿನಿಮಾವೆಂಬ ವಿಮರ್ಶೆಗಳು ವ್ಯಕ್ತವಾಗಿವೆ. ರಿಷಬ್ ಶೆಟ್ಟಿ ನಟನೆ, ಚಿತ್ರದ ದೃಶ್ಯ ವೈಭವ ಮತ್ತು ವಿಶೇಷವಾಗಿ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ ಎಂದು ಶ್ಲಾಘಿಸಿದ್ದು, ಸಿನಿಮಾ ಬ್ಲಾಕ್‌ಬಸ್ಟರ್ ಆಗುವ ಸೂಚನೆ ನೀಡಿದ್ದಾರೆ.

Read Full Story

09:54 PM (IST) Oct 01

Diet during fever - ಜ್ವರ ಬಂದಾಗ ಈ 5 ತಪ್ಪು ಯಾವ ಕಾರಣಕ್ಕೂ ಮಾಡಬೇಡಿ

Diet during fever: ಸೋಂಕಿನಿಂದ ಎಷ್ಟು ದೂರ ಇರಲು ಸಾಧ್ಯವೋ ಅಷ್ಟು ಜ್ವರದ ತೀವ್ರತೆ ಕಡಿಮೆಯಾಗುತ್ತದೆ. ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳದಿದ್ದರೆ ಜ್ವರ ಕಡಿಮೆಯಾಗಲು ಹಲವು ದಿನಗಳು ಬೇಕಾಗಬಹುದು. ಗಮನಿಸಬೇಕಾದ ವಿಷಯಗಳು ಇಲ್ಲಿವೆ.

Read Full Story

09:41 PM (IST) Oct 01

Okinotori Shima - ಒಂದು ಕಲ್ಲಿನ ರಕ್ಷಣೆಗೆ ಜಪಾನ್ 4,500 ಕೋಟಿ ಖರ್ಚು; ಅದು ನೀರಲ್ಲಿ ಮುಳುಗಿದರೆ ಏನಾಗುತ್ತೆ?

Okinotori Shima: ಈ ಬಂಡೆಯ ಗಾತ್ರ ಕೇವಲ 60 ಚದರ ಮೀಟರ್ ನಿಮ್ಮ ಕಾರು ಪಾರ್ಕಿಂಗ್ ಜಾಗಕ್ಕಿಂತ ಸ್ವಲ್ಪ ದೊಡ್ಡದಷ್ಟೇ. ಆದರೆ ಈ ಚಿಕ್ಕ ಕಲ್ಲಿಗೆ ಜಪಾನ್ ಏಕೆ ಇಷ್ಟೊಂದು ಹಣ ಖರ್ಚು ಮಾಡಿದೆ? ಒಂದು ವೇಳೆ ಇದು ಸಮುದ್ರದಲ್ಲಿ ಮುಳುಗಿದರೆ ಏನಾಗುತ್ತದೆ? ಈ ಕುತೂಹಲಕಾರಿ ಕಥೆಯ ಹಿಂದಿನ ರಹಸ್ಯವನ್ನು ತಿಳಿಯೋಣ.

Read Full Story

08:40 PM (IST) Oct 01

ಬೆಂಗಳೂರಲ್ಲಿ 'ಕಾಂತಾರ ಚಾಪ್ಟರ್ 1' ಓಪನಿಂಗ್ ದಾಖಲೆ; ಒಂದೇ ದಿನದಲ್ಲಿ 1000ಕ್ಕೂ ಹೆಚ್ಚು ಪ್ರದರ್ಶನ!

ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ ಚಾಪ್ಟರ್ 1' ಚಿತ್ರವು ಬೆಂಗಳೂರಿನಲ್ಲಿ ಒಂದೇ ದಿನ 1,000ಕ್ಕೂ ಹೆಚ್ಚು ಪ್ರದರ್ಶನಗಳನ್ನು ಹೊಂದುವ ಮೂಲಕ ಹೊಸ ದಾಖಲೆ ಬರೆದಿದೆ. ಮುಂಗಡ ಬುಕ್ಕಿಂಗ್‌ನಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ಪಡೆದಿರುವ ಈ ಚಿತ್ರ, 'ವಿಕ್ರಾಂತ್ ರೋಣ' ನಂತರ ಈ ಸಾಧನೆ ಮಾಡಿದೆ.

Read Full Story

08:37 PM (IST) Oct 01

Davanagere - ವಿಜಯದಶಮಿ ಶೋಭಾಯಾತ್ರೆಗೆ ಬೆಣ್ಣೆನಗರಿ ಸಜ್ಜು, ಎಲ್ಲೆಲ್ಲೂ ಕೇಸರಿಮಯ, ಪೊಲೀಸ್ ಸರ್ಪಗಾವಲು

Davanagere Vijayadashami procession: ದಾವಣಗೆರೆಯಲ್ಲಿ ವಿಶ್ವ ಹಿಂದು ಪರಿಷತ್‌ನಿಂದ ವಿಜಯದಶಮಿ ಶೋಭಾಯಾತ್ರೆಗೆ ಬೃಹತ್ ಸಿದ್ಧತೆ ನಡೆದಿದೆ. ಸಾವಿರಾರು ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆ., ಶೋಭಾಯಾತ್ರೆ ಮಾರ್ಗದುದ್ದಕ್ಕೂ ಆಕರ್ಷಕ ಟ್ಯಾಬ್ಲೋಗಳು ಕೇಸರಿಮಯವಾಗಿದೆ. ಪೊಲೀಸರ ಸರ್ಪಗಾವಲು.

Read Full Story

08:10 PM (IST) Oct 01

Kantara Chapter 1 - ಆಂಧ್ರಪ್ರದೇಶದಲ್ಲಿ ಟಿಕೆಟ್ ದರ ಹೆಚ್ಚಳ ವಿವಾದ, ರಿಷಬ್ ಶೆಟ್ಟಿ ಬೆಂಬಲಕ್ಕೆ ನಿಂತ ಪವನ್ ಕಲ್ಯಾಣ್

Pawan Kalyan on Kantara movie: ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ ಚಾಪ್ಟರ್ 1' ಚಿತ್ರಕ್ಕೆ ಆಪ್ರ ಟಿಕೆಟ್ ದರ ಏರಿಕೆಗೆ ಅನುಮತಿ, ಈ ನಿರ್ಧಾರ  ಪ್ರೇಕ್ಷರಿಂದ ಟೀಕೆಗೆ ಗುರಿಯಾಗಿ ಬಹಿಷ್ಕಾರದ ಕರೆಗೂ ಕಾರಣವಾಗಿದೆ. ಈ ಬಗ್ಗೆ ಪವನ್, ಎರಡೂ ಚಿತ್ರರಂಗ ಸಮಸ್ಯೆ ಬಗೆಹರಿಸಿಕೊಳ್ಳುವಂಟೆ ಸಲಹೆ.

Read Full Story

07:28 PM (IST) Oct 01

Mallikarjun Kharge health update - ಮೈನರಿ ಸರ್ಜರಿ ಯಶಸ್ವಿ, ಪರ್ಮನೆಂಟ್ ಫೇಸ್‌ ಮೇಕರ್ ಅಳವಡಿಸಿದ ವೈದ್ಯರು!

Mallikarjun Kharge health update: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ. ಹೃದಯ ಬಡಿತದ ವ್ಯತ್ಯಾಸದ ಕಾರಣ, ಜಯದೇವ ಆಸ್ಪತ್ರೆಯ ವೈದ್ಯರು ಪರ್ಮನೆಂಟ್ ಫೇಸ್‌ಮೇಕರ್ ಅಳವಡಿಸಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.

Read Full Story

07:14 PM (IST) Oct 01

RSS ಮ್ಯಾಟ್ರಿಮೊನಿ ಮಾಡಿಕೊಂಡು ಮದುವೆಯಾಗಿ 8-10 ಮಕ್ಕಳು ಮಾಡ್ಕೊಂಡು ಧರ್ಮ ರಕ್ಷಣೆ ಮಾಡಲಿ; ಪ್ರಿಯಾಂಕ ಖರ್ಗೆ!

ಸಚಿವ ಪ್ರಿಯಾಂಕ್ ಖರ್ಗೆಯವರು, ಧರ್ಮ ರಕ್ಷಣೆಗಾಗಿ ಹೆಚ್ಚು ಮಕ್ಕಳನ್ನು ಹೆರಲು ಹೇಳುವ ಆರ್‌ಎಸ್‌ಎಸ್‌ ನಾಯಕರು ಯಾಕೆ ಬ್ರಹ್ಮಚಾರಿಗಳಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಅವರಿಗಾಗಿಯೇ 'ಆರ್‌ಎಸ್‌ಎಸ್ ಮ್ಯಾಟ್ರಿಮೊನಿ' ಆರಂಭಿಸಲು ವ್ಯಂಗ್ಯವಾಗಿ ಸಲಹೆ ನೀಡಿದ್ದಾರೆ.

Read Full Story

06:51 PM (IST) Oct 01

'ಪ್ಯಾಲೆಸ್ತೀನ್ ಬೆಂಬಲ ನೀತಿಗೆ ವಿರುದ್ಧವಾಗಿದೆ', ಟ್ರಂಪ್ ಗಾಜಾ ಯೋಜನೆಗೆ ಪಾಕ್ ಯು-ಟರ್ನ್!

Pakistan U-turn on Gaza plan: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗಾಜಾ ಶಾಂತಿ ಯೋಜನೆಗೆ ಆರಂಭದಲ್ಲಿ ಬೆಂಬಲ ಸೂಚಿಸಿದ್ದ ಪಾಕಿಸ್ತಾನ, ಇದೀಗ ಸಾರ್ವಜನಿಕರ ತೀವ್ರ ವಿರೋಧದಿಂದಾಗಿ ಯು-ಟರ್ನ್ ಹೊಡೆದಿದೆ. ಪ್ರಧಾನಿ ಶಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥರ ನಿರ್ಧಾರಕ್ಕೆ  ಆಕ್ರೋಶ ವ್ಯಕ್ತವಾಗಿದೆ.

Read Full Story

06:38 PM (IST) Oct 01

ದೇವರಗುಡ್ಡ ಕಾರ್ಣಿಕ 2025 - 'ನಾಡು ಬಂಗಾರದ ಗಿಂಡಿಲೇ, ನಾಡು ಸಿರಿಯಾಗೀತಲೇ ಪರಾಕ್' ವಿಶ್ಲೇಷಣೆ ಇಲ್ಲಿದೆ!

ಹಾವೇರಿಯ ದೇವರಗುಡ್ಡದಲ್ಲಿ ನಡೆದ ಪ್ರಸಿದ್ಧ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ, ಗೊರವಯ್ಯನವರು 'ನಾಡು ಬಂಗಾರದ ಗಿಂಡಿಲೇ.. ನಾಡು ಸಿರಿಯಾಗೀತಲೇ ಪರಾಕ್!' ಎಂದು ಈ ವರ್ಷದ ಭವಿಷ್ಯ ನುಡಿದಿದ್ದಾರೆ. ಈ ದೈವವಾಣಿಯು ನಾಡಿನ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.

Read Full Story

06:16 PM (IST) Oct 01

ಮಲೆನಾಡು ಬಯಲುಸೀಮೆ ಆಗುತ್ತಾ? ದಸರಾ ಸಂಭ್ರಮದ ಹೊತ್ತಲ್ಲಿ ಕೋಡಿಶ್ರೀ ಶಾಕಿಂಗ್ ಭವಿಷ್ಯ!

Kodimath Swamiji latest predictions: ಕೋಡಿಮಠದ ಶ್ರೀಗಳು ಮಲೆನಾಡು ಬಯಲುಸೀಮೆಯಾಗುವ, ಬಯಲುಸೀಮೆ ಮಲೆನಾಡಾಗುವ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸಿದ್ದರಾಮಯ್ಯ ಸರ್ಕಾರಕ್ಕೆ ಸಂಕ್ರಾಂತಿವರೆಗೆ ಯಾವುದೇ ತೊಂದರೆಯಿಲ್ಲ ಎಂದಿರುವ ಅವರು, ಜಾತಿ ಸಮೀಕ್ಷೆಯ ಬಗ್ಗೆ ಜನರು ತಾವೇ ನಿರ್ಧರಿಸುತ್ತಾರೆ ಎಂದಿದ್ದಾರೆ

Read Full Story

06:11 PM (IST) Oct 01

ಬಿಜೆಪಿ ಸಂಸದರಿಗೆ ಮೋದಿ ಮನ್ ಕಿ ಬಾತ್ ಪೋಸ್ಟ್ ಮಾಡಿಕೊಳ್ಳೋದೇ ಕೆಲಸ, ಅನುದಾನ ಕೇಳೋ ತಾಕತ್ತಿಲ್ಲ; ಪ್ರಿಯಾಂಕ್ ಖರ್ಗೆ!

ಕೇಂದ್ರದೊಂದಿಗೆ ಘರ್ಷಣೆ ಬೇಡವೆಂದ ಎಚ್.ಡಿ. ಕುಮಾರಸ್ವಾಮಿಗೆ ರಾಜ್ಯದ ಪಾಲಿನ ಅನುದಾನ ಕೇಳುವುದು ಭಿಕ್ಷೆಯಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆತಿರುಗೇಟು ಕೊಟ್ಟಿದ್ದಾರೆ. ಬಿಜೆಪಿ ಸಂಸದರು ಅನುದಾನ ಕೇಳದೇ, ಮೋದಿ ಮನ್‌ಕಿ ಬಾತ್ ಮಾಡೋದನ್ನ ಕನ್ನಡದಲ್ಲಿ ಪೋಸ್ಟ್ ಮಾಡಿಕೊಳ್ಳೋದೇ ಇವರ ಕೆಲಸವಾಗಿದೆ ಎಂದರು.

Read Full Story

05:43 PM (IST) Oct 01

Bigg Boss 12ಕ್ಕೆ ಡಾ.ಬ್ರೋ ಹೋಗದ ಕಾರಣ ಕೊನೆಗೂ ರಿವೀಲ್! ಗಗನ್​ ಹೇಳಿದ್ದೇನು ಕೇಳಿ

ಯುಟ್ಯೂಬರ್ ಡಾ.ಬ್ರೋ ಖ್ಯಾತಿಯ ಗಗನ್ ಅವರು ಬಿಗ್ ಬಾಸ್ ಸ್ಪರ್ಧಿಯಾಗಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ, ತಾವೇಕೆ ಈ ಶೋಗೆ ಹೋಗುವುದಿಲ್ಲ ಎಂಬುದನ್ನು ಸ್ವತಃ ಗಗನ್ ಅವರೇ ಬಹಿರಂಗಪಡಿಸಿದ್ದಾರೆ. ಅದರ ವಿಡಿಯೋ ವೈರಲ್​ ಆಗಿದೆ. ಬ್ರೋ ಹೇಳಿದ್ದೇನು? 

Read Full Story

05:41 PM (IST) Oct 01

Mysuru dasara 2025 - ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಾಡಹಬ್ಬ ದಸರಾ ಸಂಭ್ರಮ!

Nadahabba Dasara Celebration in Kempegowda international airport: ಕೆಂಪೇಗೌಡ ವಿಮಾನ ನಿಲ್ದಾಣ ಬೆಂಗಳೂರು ಒಂದು ವಾರ ಕಾಲ ‘ನಾಡಹಬ್ಬ ದಸರಾ’ವನ್ನು ಅದ್ದೂರಿಯಾಗಿ ಆಚರಿಸಿ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಮತ್ತು ಜಾನಪದ ಪರಂಪರೆಯನ್ನು ವಿಶಿಷ್ಟವಾಗಿ ಅನಾವರಣಗೊಳಿಸಿತು. 

 

Read Full Story

05:32 PM (IST) Oct 01

ಇಷ್ಟು ಹಣವಿದ್ರೂ ಒಡೆದ ಪ್ಲೇಟ್ ನಲ್ಲಿ ವರುಣ್ ಧವನ್ ಊಟ ! ವೈರಲ್ ಆಯ್ತು ಕನ್ಯಾ ಪೂಜೆ ಥಾಲಿ

ಬಾಲಿವುಡ್ ಸ್ಟಾರ್ ವರುಣ್ ಧವನ್, ಕನ್ಯಾ ಪೂಜೆ ಮಾಡಿದ್ದಾರೆ. ಕನ್ಯಾ ಪೂಜೆ ವೇಳೆ ಅವರು ಮಕ್ಕಳಿಗೆ ಊಟ ಬಡಿಸಿದ್ದಾರೆ. ಆದ್ರೆ ಊಟದ ಪ್ಲೇಟ್ ಈಗ ವೈರಲ್ ಆಗಿದೆ. ಜನ, ಹಣ ಇಲ್ವಾ ಕೇಳ್ತಿದ್ದಾರೆ?

 

Read Full Story

05:18 PM (IST) Oct 01

ದರ್ಶನ್​ ಇಲ್ಲದ ದಸರಾ! ಕಳೆದ ವರ್ಷ ಸಿಕ್ಕಿತ್ತು ಜಾಮೀನು- ಥಾಯ್ಲೆಂಡ್​ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ

ನಟ ದರ್ಶನ್ ಜೈಲಿನಲ್ಲಿರುವ ಕಾರಣ, ಅವರ ಪತ್ನಿ ವಿಜಯಲಕ್ಷ್ಮಿ ಈ ಬಾರಿ ಸರಳವಾಗಿ ಆಯುಧ ಪೂಜೆ ನೆರವೇರಿಸಿದ್ದಾರೆ. ದರ್ಶನ್ ಅವರ ಕೋಟ್ಯಂತರ ರೂಪಾಯಿ ಮೌಲ್ಯದ ಕಾರುಗಳಿಗೆ ಪೂಜೆ ಸಲ್ಲಿಸಿ, ಪತಿಯೊಂದಿಗಿನ ಹಳೆಯ ಥಾಯ್ಲೆಂಡ್ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Read Full Story

05:14 PM (IST) Oct 01

Mysuru dasara 2025 - ಅರಮನೆಯಲ್ಲಿ ರಾಜವೈಭವದ ಪೂಜೆ; ಜಂಬೂ ಸವಾರಿಗೆ ಕ್ಷಣಗಣನೆ!

Mysuru dasara 2025: ಮೈಸೂರು ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್ ಅವರು ಸಾಂಪ್ರದಾಯಿಕವಾಗಿ ಆಯುಧ ಪೂಜೆ ನೆರವೇರಿಸಿದರು. ನಾಳೆ ನಡೆಯಲಿರುವ ವಿಶ್ವವಿಖ್ಯಾತ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಗೆ ಸಾಂಸ್ಕೃತಿಕ ನಗರಿ ಸಕಲ ರೀತಿ ಸಜ್ಜಾಗಿದ್ದು, 6ನೇ ಬಾರಿಗೆ ಅಂಬಾರಿ ಹೊರಲಿರುವ ಅಭಿಮನ್ಯು

Read Full Story

04:58 PM (IST) Oct 01

ಮಲ್ಲಿಕಾರ್ಜುನ ಖರ್ಗೆ ಅನಾರೋಗ್ಯ; ಆಸ್ಪತ್ರೆಯಲ್ಲಿ ನಡೆದಿದ್ದೇನೆಂದು ಹೇಳಿದ ಪುತ್ರ ಪ್ರಿಯಾಂಕ ಖರ್ಗೆ!

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಸಣ್ಣ ಸರ್ಜರಿಗೆ ಒಳಗಾಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ವಯೋಸಹಜ ಕಾರಣಗಳಿಂದ ವೈದ್ಯರು ಪೇಸ್‌ಮೇಕರ್ ಅಳವಡಿಕೆಗೆ ಸಲಹೆ ನೀಡಿದ್ದಾರೆ ಎಂದು ಅವರ ಪುತ್ರ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.

Read Full Story

04:44 PM (IST) Oct 01

Bigg Bossಗೆ ಯಾಕ್ರೀ ಹೋಗ್ಬೇಕು- ಇಲ್ಲೇ ಹುಡುಗಿಯರು ಸಿಗಲ್ವೇನ್ರಿ? ಬೆಳಿಗ್ಗೆನೂ ತಗೋತೇನ್ರಿ - ಕಾಕ್ರೋಚ್​ ಸುಧಿ ವಿಡಿಯೋ ವೈರಲ್

ಬಿಗ್ ಬಾಸ್-12 ಮನೆಯಲ್ಲಿ ಸದ್ದು ಮಾಡುತ್ತಿರುವ ನಟ ಕಾಕ್ರೋಚ್ ಸುಧಿಯವರ ಹಳೆಯ ಸಂದರ್ಶನದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಹುಡುಗಿಯರು, ಡ್ರಿಂಕ್ಸ್, ಮತ್ತು ಹೆಂಡತಿಯ ಬಗ್ಗೆ ನೀಡಿದ ಪಂಚಿಂಗ್ ಉತ್ತರಗಳು ಗಮನ ಸೆಳೆಯುತ್ತಿವೆ.
Read Full Story

04:21 PM (IST) Oct 01

ಸಾಗರದ ಪುಟ್ಟ ಹಳ್ಳಿಯ ವಿಶೇಷಚೇತನ ಮಕ್ಕಳ ದೊಡ್ಡ ಸಾಧನೆ; ಡೆಲ್ಲಿಯಲ್ಲಿ ಮೊಳಗಿದ ಕನ್ನಡ ಕಹಳೆ!

ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪೆಷಲ್ ಒಲಿಂಪಿಕ್‌ ಭಾರತ್ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕದ ವಿಶೇಷ ಚೇತನ ಮಕ್ಕಳು ಅದ್ವಿತೀಯ ಸಾಧನೆ ಮಾಡಿದ್ದಾರೆ. ರಾಜ್ಯವನ್ನು ಪ್ರತಿನಿಧಿಸಿದ್ದ 8 ಕ್ರೀಡಾಪಟುಗಳು 2 ಚಿನ್ನ, 3 ಬೆಳ್ಳಿ ಹಾಗೂ 1 ಕಂಚು ಸೇರಿದಂತೆ ಒಟ್ಟು 6 ಪದಕ ಗೆದ್ದು ಬೀಗಿದ್ದಾರೆ.

Read Full Story

04:17 PM (IST) Oct 01

ಬಿಗ್ ಬಾಸ್ ಮನೆಗೆ ಬಂದು 3 ದಿನದಲ್ಲಿ ತಮ್ಮದೇ ಗುಂಪಿನ ಬೆನ್ನಿಗೆ ಚೂರಿ ಹಾಕಿದ ಚಂದ್ರಪ್ರಭ-ಡಾಗ್ ಸತೀಶ್!

ಫೈನಲಿಸ್ಟ್ ಕಂಟೆಂಡರ್ ಆಗಲು ಬಿಗ್ ಬಾಸ್ ನೀಡಿದ ಟಾಸ್ಕ್‌ನಲ್ಲಿ ಸ್ವತಃ ತಮ್ಮದೇ ಜಂಟಿಗಳ ತಂಡಕ್ಕೆ ಚಂದ್ರಪ್ರಭ ಮತ್ತು ಡಾಗ್ ಸತೀಶ್ ಮೋಸ ಮಾಡಿದ್ದಾರೆ. ಸ್ವಿಮ್ಮಿಂಗ್ ಪೂಲ್ ಟಾಸ್ಕ್‌ನಲ್ಲಿ ಉದ್ದೇಶಪೂರ್ವಕವಾಗಿ ಸೋತು, ತಮ್ಮ ತಂಡದ ಸೋಲಿಗೆ ಕಾರಣರಾಗುವ ಮೂಲಕ ಬೆನ್ನಿಗೆ ಚೂರಿ ಹಾಕಿದ್ದಾರೆ.

Read Full Story

03:50 PM (IST) Oct 01

NCRB Report - ಕರ್ನಾಟಕದಲ್ಲಿ ಮಹಿಳೆಯರ ಮೇಲೆ ಅಪರಾಧ ಕಳೆದ 2 ವರ್ಷದಲ್ಲಿ ಶೇ. 40ರಷ್ಟು ಏರಿಕೆ!

Crimes Against Women in Karnataka Rise by 40% ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ, ವರದಕ್ಷಿಣೆ ಪ್ರಕರಣಗಳು, ಪತಿ ಅಥವಾ ಅವನ ಸಂಬಂಧಿಕರಿಂದ ಕ್ರೌರ್ಯ ಮತ್ತು ಅಪಹರಣ ಪ್ರಕರಣಗಳು ದಾಖಲಾಗಿರುವ ಪ್ರಮುಖ ಪ್ರಕರಣಗಳಲ್ಲಿ ಸೇರಿವೆ.

 

Read Full Story

03:48 PM (IST) Oct 01

ದಾಖಲೆ ಬರೆದ ಕಾಂತಾರ ಚಾಪ್ಟರ್​ 1- 4.40 ಲಕ್ಷ ಟಿಕೆಟ್​ ಮಾರಾಟ! ಪ್ರೀ ಬುಕ್ಕಿಂಗ್​ ಕಲೆಕ್ಷನ್​ ಎಷ್ಟು ಗೊತ್ತಾ?

ರಿಷಭ್ ಶೆಟ್ಟಿ ಅವರ 'ಕಾಂತಾರ' ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ, ಅದರ ಮುಂದುವರಿದ ಭಾಗ 'ಕಾಂತಾರ: ಅಧ್ಯಾಯ 1' ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವು ಬಿಡುಗಡೆಗೂ ಮುನ್ನವೇ ಮುಂಗಡ ಬುಕಿಂಗ್‌ನಲ್ಲಿ ಕೋಟಿಗಟ್ಟಲೆ ಗಳಿಸಿ, ದೇಶಾದ್ಯಂತ ಸಾವಿರಾರು ಪರದೆಗಳಲ್ಲಿ ತೆರೆಕಾಣುವ ಮೂಲಕ ಹೊಸ ದಾಖಲೆ ಬರೆಯುತ್ತಿದೆ.

Read Full Story

02:53 PM (IST) Oct 01

ಭಾನುವಾರ ಸುದೀಪ್ ಹೇಳಿದ ಮಾತು ಎರಡೇ ದಿನದಲ್ಲಿ ಸತ್ಯ ಆಯ್ತು! ಏನದು ಕಿಚ್ಚನ ಭವಿಷ್ಯವಾಣಿ

Sudeep Prediction: ವೇದಿಕೆಯಲ್ಲಿ ಸುದೀಪ್ ನೀಡಿದ್ದ ಎಚ್ಚರಿಕೆಯ ಮಾತುಗಳು ಕೇವಲ ಎರಡೇ ದಿನಗಳಲ್ಲಿ ಸತ್ಯವಾಗಿದ್ದು, ಮಲ್ಲಮ್ಮ ಮತ್ತು ಬಿಗ್‌ಬಾಸ್ ನಡುವಿನ ಸಂಭಾಷಣೆ ವೀಕ್ಷಕರ ಗಮನ ಸೆಳೆಯುತ್ತಿದೆ.

Read Full Story

02:32 PM (IST) Oct 01

NCRB Report - ರೈತರು, ಉದ್ಯಮಿಗಳ ಆತ್ಮಹ*ತ್ಯೆಯಲ್ಲಿ ದೇಶದಲ್ಲಿಯೇ ರಾಜ್ಯ ನಂ.2

NCRB Report 2023ರ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (NCRB) ವರದಿಯ ಪ್ರಕಾರ, ದೇಶದಲ್ಲಿ 10,786 ಕೃಷಿ ವಲಯದ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. 

Read Full Story

02:21 PM (IST) Oct 01

ಮದುವೆ ಬಗ್ಗೆ ಕಿಪ್ಪಿ ಕೀರ್ತಿ ಓಪನ್​ ಮಾತು - ಆ ಹುಡುಗ ಯಾರು? ನಾಚಿಕೊಂಡು ರೀಲ್ಸ್​ ಕ್ವೀನ್​ ಹೇಳಿದ್ದೇನು?

'ಹೇಳಿ ಜನರೇ' ಮೂಲಕ ಖ್ಯಾತರಾದ ಕಿಪ್ಪಿ ಕೀರ್ತಿ, ಖಾಸಗಿ ವಿಡಿಯೋ ಲೀಕ್ ಪ್ರಕರಣದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಿಯತಮ ಮುತ್ತು ವಿರುದ್ಧ ದೂರು ದಾಖಲಿಸಿದ್ದು, ಇದರ ನಡುವೆ  ಮದುವೆ ಸುದ್ದಿಯ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ. ಅವರು ಹೇಳಿದ್ದೇನು? 

Read Full Story

01:57 PM (IST) Oct 01

ಬರದಿರುವ ಭಾಷೆ ಮಾತಾಡಿ ಅಗೌರವ ತೋರಿಸೋದಿಲ್ಲ - ಹೈದರಾಬಾದ್ ಈವೆಂಟ್ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು?

ಗೊತ್ತಿರದ ಭಾಷೆಯಲ್ಲಿ ಮಾತಾಡಿ ಆಭಾಸವಾದರೆ ಆ ಭಾಷೆಗೆ ಅಗೌರವ ತೋರಿಸಿದಂತಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದ ಕೆಲವರು ಅಲ್ಲಿ ಆ ಭಾಷೆ ಮಾತಾಡಿದ್ದಾರೆ ಎಂದು ರಿಷಬ್‌ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

Read Full Story

01:37 PM (IST) Oct 01

ಕೊನೆಗೂ ಎಸ್‌ಐಟಿಗೆ ಸಿಕ್ತು ಚಿನ್ನಯ್ಯ ತೋರಿಸಿದ್ದ ಸ್ಪಾಟ್‌ನಲ್ಲಿ ಸಿಕ್ಕ ತಲೆಬುರುಡೆಯ ಎಫ್‌ಎಸ್‌ಲ್‌ ವರದಿ!

ಧರ್ಮಸ್ಥಳದಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ಚಿನ್ನಯ್ಯನ ಆರೋಪದ ಮೇಲೆ ನಡೆದ ಎಸ್‌ಐಟಿ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಪತ್ತೆಯಾಗಿದ್ದ ಮೂರು ತಲೆಬುರುಡೆಗಳ ಎಫ್‌ಎಸ್‌ಎಲ್‌ ವರದಿ ಲಭ್ಯವಾಗಿದೆ.

Read Full Story

01:32 PM (IST) Oct 01

5 ಪಾಲಿಕೆಗಳಿಗೆ ಒಟ್ಟು 368 ವಾರ್ಡ್‌ ರಚನೆ - ವಾರ್ಡ್‌ ವಿಂಗಡಣೆಯ ಕರಡು ಅಧಿಸೂಚನೆ ಪ್ರಕಟ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಡಿ ನೂತವಾಗಿ ರಚಿಸಲಾದ 5 ನಗರ ಪಾಲಿಕೆಗಳ 368 ವಾರ್ಡ್‌ ವಿಂಗಡಣೆಯ ಕರಡು ಅಧಿಸೂಚನೆಯನ್ನು ಪ್ರಕಟಿಸಿರುವ ರಾಜ್ಯ ಸರ್ಕಾರವು, ಆಕ್ಷೇಪಣೆ ಸಲ್ಲಿಸುವುದಕ್ಕೆ ಅ.15ರವರೆಗೆ ಕಾಲಾವಕಾಶ ನೀಡಿದೆ.

Read Full Story

01:13 PM (IST) Oct 01

ಸಮಾಜದ ಸಹಯೋಗದಿಂದ ಆರೆಸ್ಸೆಸ್‌ 100 - ಪರಿಶ್ರಮಪೂರಕ, ಸವಾಲುಗಳಿಂದ ಕೂಡಿದ ಪಯಣ

ಸಮಾಜದ ನಿರಂತರ ಬೆಂಬಲದಿಂದಲೇ ಸಂಘಕಾರ್ಯ ಮುಂದೆ ಸಾಗುತ್ತಾ ಹೋಯಿತು. ಸಂಘದ ಕೆಲಸವು ಜನಸಾಮಾನ್ಯರ ಭಾವನೆಗಳಿಗೆ ಅನುರೂಪವಾಗಿರುವ ಕಾರಣದಿಂದ ಸಂಘಕಾರ್ಯಕ್ಕೆ ಸಮಾಜದಲ್ಲಿ ಮತ್ತೆ ಮತ್ತೆ ಸ್ವೀಕೃತಿ ಹೆಚ್ಚುತ್ತಾ ಸಾಗಿತು.

Read Full Story

12:34 PM (IST) Oct 01

Brahmagantu - ದಿಶಾ ಕಂಡ್ರೆ ದೀಪಾಗೆ ಹೊಟ್ಟೆ ಉರಿ! ತನ್ಮೇಲೆ ತಾನೇ ಹೊಟ್ಟೆಕಿಚ್ಚು ಪಡೋ ಜಗತ್ತಿನ ಏಕೈಕ ಮಹಿಳೆ!

ಬ್ರಹ್ಮಂಟು ಸೀರಿಯಲ್​ನಲ್ಲಿ ಬಾಡಿ ಶೇಮಿಂಗ್​ಗೆ ಒಳಗಾಗುವ ದೀಪಾ, ಗುಣವೇ ಮುಖ್ಯ ಎಂದು ಸಾರಲು ದಿಶಾ ಎಂಬ ಮಾಡೆಲ್ ಆಗಿ ರೂಪಾಂತರಗೊಳ್ಳುತ್ತಾಳೆ. ಆದರೆ, ತನ್ನ ಪತಿ ಚಿರು ದಿಶಾಳ ಸೌಂದರ್ಯಕ್ಕೆ ಮಾರುಹೋದಾಗ, ದೀಪಾ ತನ್ನದೇ ಇನ್ನೊಂದು ರೂಪದ ಮೇಲೆ ಅಸೂಯೆ ಪಡುತ್ತಾಳೆ.

Read Full Story

12:28 PM (IST) Oct 01

ಹೃದಯ ಬಡಿತದಲ್ಲಿ ವ್ಯತ್ಯಾಸ, ಪೇಸ್‌ಮೇಕರ್ ಅಳವಡಿಕೆ - ತಂದೆಯ ಶಸ್ತ್ರಚಿಕಿತ್ಸೆ ಮಾಹಿತಿ ನೀಡಿದ ಪ್ರಿಯಾಂಕ್ ಖರ್ಗೆ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯ ಬಡಿತದಲ್ಲಿನ ವ್ಯತ್ಯಾಸದಿಂದಾಗಿ ಅವರಿಗೆ ಪೇಸ್‌ಮೇಕರ್ ಅಳವಡಿಸಲಾಗಿದೆ ಎಂದು ಅವರ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ಖಚಿತಪಡಿಸಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ.
Read Full Story

12:12 PM (IST) Oct 01

ಶೈನ್ ಶೆಟ್ಟಿ ಡ್ರೀಮ್​ ಗರ್ಲ್​ ಈಕೆ - ಕನಸಿನ ಕನ್ಯೆಯ ಬಗ್ಗೆ Bigg Boss ವಿನ್ನರ್​ ಓಪನ್​ ಮಾತು

'ಜಸ್ಟ್ ಮ್ಯಾರೀಡ್' ಚಿತ್ರದ ಖುಷಿಯಲ್ಲಿರುವ ನಟ ಹಾಗೂ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ, ತಮ್ಮ ರಿಯಲ್ ಲೈಫ್‌ನಲ್ಲಿ ಇನ್ನೂ ಅವಿವಾಹಿತರಾಗಿದ್ದಾರೆ. ಆದರೆ, ಸಂದರ್ಶನವೊಂದರಲ್ಲಿ ತಮ್ಮ ಕನಸಿನ ಕನ್ಯೆ  ಬಗ್ಗೆ ಹೇಳಿದ್ದು, ಅವರ ಜೊತೆ ಒಂದು ಚಿತ್ರದಲ್ಲಾದರೂ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ.

Read Full Story

More Trending News