- Home
- Karnataka Districts
- Bengaluru Urban
- ಹೃದಯ ಬಡಿತದಲ್ಲಿ ವ್ಯತ್ಯಾಸ, ಪೇಸ್‌ಮೇಕರ್ ಅಳವಡಿಕೆ : ತಂದೆಯ ಶಸ್ತ್ರಚಿಕಿತ್ಸೆ ಮಾಹಿತಿ ನೀಡಿದ ಪ್ರಿಯಾಂಕ್ ಖರ್ಗೆ
ಹೃದಯ ಬಡಿತದಲ್ಲಿ ವ್ಯತ್ಯಾಸ, ಪೇಸ್‌ಮೇಕರ್ ಅಳವಡಿಕೆ : ತಂದೆಯ ಶಸ್ತ್ರಚಿಕಿತ್ಸೆ ಮಾಹಿತಿ ನೀಡಿದ ಪ್ರಿಯಾಂಕ್ ಖರ್ಗೆ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯ ಬಡಿತದಲ್ಲಿನ ವ್ಯತ್ಯಾಸದಿಂದಾಗಿ ಅವರಿಗೆ ಪೇಸ್‌ಮೇಕರ್ ಅಳವಡಿಸಲಾಗಿದೆ ಎಂದು ಅವರ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ಖಚಿತಪಡಿಸಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ.

ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ರು. ಇದೀಗ ತಂದೆ ಅವರ ಆರೋಗ್ಯದ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಎಕ್ಸ್ ಖಾತೆ ಮೂಲಕ ಮಾಹಿತಿಯನ್ನು ನೀಡಿದ್ದಾರೆ.
ಹೃದಯ ಬಡಿತದಲ್ಲಿ ವ್ಯತ್ಯಾಸ
ಮಲ್ಲಿಕಾರ್ಜುನ ಖರ್ಗೆ ಹೃದಯ ಬಡಿತದಲ್ಲಿ ವ್ಯತ್ಯಾಸ ಉಂಟಾಗಿದ್ದರಿಂದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಪೇಸ್ ಮೇಕರ್ ಅಳವಡಿಕೆ ಮಾಡಿದ್ದಾರೆ. ಸದ್ಯ ಮಲ್ಲಿಕಾರ್ಜುನ ಖರ್ಗೆ ಅವರು ಆರೋಗ್ಯ ಸ್ಥಿರವಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಹೃದಯ ಬಡಿತ ನಿಯಂತ್ರಣಕ್ಕಾಗಿ ಪೇಸ್ ಮೇಕರ್ ಅಳವಡಿಕೆ ಮಾಡಲಾಗುತ್ತದೆ.
ಪ್ರಿಯಾಂಕ್ ಖರ್ಗೆ ಮಾಹಿತಿ
ಆರಂಭದಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಮತ್ತು ರೂಟಿನ್ ಚೆಕಪ್‌ಗಾಗಿ ಮಲ್ಲಿಕಾರ್ಜುನ ಖರ್ಗೆ ದಾಖಲಾಗಿದ್ದಾರೆ. ಒಂದು ದಿನದ ವಿಶ್ರಾಂತಿ ಬಳಿಕ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಎಕ್ಸ್ ಖಾತೆ ಮೂಲಕ ಮಲ್ಲಿಕಾರ್ಜುನ ಖರ್ಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಾಹಿತಿಯನ್ನು ಪ್ರಿಯಾಂಕ್ ಖರ್ಗೆ ನೀಡಿದ್ದಾರೆ.
ಇದನ್ನೂ ಓದಿ: Caste Survey Controversy Karnataka: ಸಿದ್ದರಾಮಯ್ಯ ಅಧಿಕಾರ ವಿಸ್ತರಣೆಗಾಗಿ ಜಾತಿಗಣತಿ: ಶಾಸಕ ಸುನಿಲ್ ಕುಮಾರ್
ಆರೋಗ್ಯವನ್ನು ವಿಚಾರಿಸಿದ ಸಿದ್ದರಾಮಯ್ಯ
ಇಂದು ಸಿಎಂ ಸಿದ್ದರಾಮಯ್ಯ ಎಂಎಸ್ ರಾಮಯ್ಯ ಆಸ್ಪತ್ರೆಗೆ ಆಗಮಿಸಿ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಆಸ್ಪತ್ರೆಯಿಂದ ಹಿಂದಿರುಗವ ವೇಳೆ ಮಾಧ್ಯಮಗಳಿಂದ ಮಾತನಾಡಿದ ಮುಖ್ಯಮಂತ್ರಿಗಳು, ಖರ್ಗೆಯವರು ಆರೋಗ್ಯವಾಗಿದ್ದು, ಚೆನ್ನಾಗಿ ಮಾತನಾಡುತ್ತಿದ್ದಾರೆ. ನಾಡಿನ ಜನತೆಗೆ ದಸರಾ ಶುಭಾಶಯಗಳು. ನಾಳೆ ಜಂಬೂ ಸವಾರಿ ಇದೆ. ಚಾಮುಂಡಿ ತಾಯಿ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದರು.
ಇದನ್ನೂ ಓದಿ: ಜಾತಿ ಗಣತಿ ಸೂಪರ್‌ಫಾಸ್ಟ್: ನಿನ್ನೆ 15 ಲಕ್ಷ ಮನೆಗಳ ಸರ್ವೇ, ಶೇ.60 ಮನೆಗಳ ಸಮೀಕ್ಷೆ ಪೂರ್ಣ
ಸರಣಿ ಸಭೆ ಮತ್ತು ಪ್ರವಾಸದ ಆಯಾಸ
ಬಿಹಾರ ಚುನಾವಣೆ ಹಿನ್ನೆಲೆ ಮಲ್ಲಿಕಾರ್ಜುನ ಖರ್ಗೆಯವರು ನಿರಂತರವಾಗಿ ಪ್ರವಾಸ ಮಾಡುತ್ತಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್‌ನ CWC ಸಭೆಯನ್ನು ಸಹ ಆಯೋಜನೆ ಮಾಡಲಾಗಿತ್ತು. ಪಕ್ಷದ ಅಧ್ಯಕ್ಷರಾಗಿರುವ ಕಾರಣ ಬಿಹಾರ ಚುನಾವಣೆ ಗೆಲ್ಲಲು ಸರಣಿ ಸಭೆಗಳನ್ನು ಮಲ್ಲಿಕಾರ್ಜುನ ಖರ್ಗೆ ಮಾಡುತ್ತಿದ್ದಾರೆ.
Sri Kharge was advised pacemaker to be implanted and is admitted to the hospital for the planned procedure. He is stable and doing well.
Grateful to all of you for your concern and wishes.— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 1, 2025