MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • Mysuru dasara 2025: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಾಡಹಬ್ಬ ದಸರಾ ಸಂಭ್ರಮ!

Mysuru dasara 2025: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಾಡಹಬ್ಬ ದಸರಾ ಸಂಭ್ರಮ!

Nadahabba Dasara Celebration in Kempegowda international airport: ಕೆಂಪೇಗೌಡ ವಿಮಾನ ನಿಲ್ದಾಣ ಬೆಂಗಳೂರು ಒಂದು ವಾರ ಕಾಲ ‘ನಾಡಹಬ್ಬ ದಸರಾ’ವನ್ನು ಅದ್ದೂರಿಯಾಗಿ ಆಚರಿಸಿ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಮತ್ತು ಜಾನಪದ ಪರಂಪರೆಯನ್ನು ವಿಶಿಷ್ಟವಾಗಿ ಅನಾವರಣಗೊಳಿಸಿತು.  

2 Min read
Ravi Janekal
Published : Oct 01 2025, 05:41 PM IST
Share this Photo Gallery
  • FB
  • TW
  • Linkdin
  • Whatsapp
14
ಟರ್ಮಿನಲ್‌ಗಳಲ್ಲಿ ಕರ್ನಾಟಕದ ಕಲಾ ವೈಭವ:
Image Credit : Asianet News

ಟರ್ಮಿನಲ್‌ಗಳಲ್ಲಿ ಕರ್ನಾಟಕದ ಕಲಾ ವೈಭವ:

ಸೆಪ್ಟೆಂಬರ್‌ 22ರಿಂದ ಸೆಪ್ಟೆಂಬರ್‌ 29ರವರೆಗೆ, ವಿಮಾನ ನಿಲ್ದಾಣದ ಟರ್ಮಿನಲ್‌ 1 ಮತ್ತು ಟರ್ಮಿನಲ್‌ 2 ಎರಡರಲ್ಲೂ ನಾಡಹಬ್ಬ ದಸರಾ ಸಂಭ್ರಮ ಮನೆಮಾಡಿತ್ತು. ಟರ್ಮಿನಲ್‌ಗಳಲ್ಲಿ ದಸರಾ ಗೊಂಬೆಗಳನ್ನು ಕೂರಿಸುವ ಮೂಲಕ ಈ ಆಚರಣೆಯು ಅಪ್ಪಟ ಕರ್ನಾಟಕದ ಕಲೆ, ಸಂಸ್ಕೃತಿಗಳನ್ನು ಸಾರುವ ವೇದಿಕೆಯಾಯಿತು. ಜೊತೆಗೆ, ವಿಮಾನ ನಿಲ್ದಾಣದ ಆವರಣದಲ್ಲಿ ಆಯೋಜನೆಗೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಪ್ರಯಾಣಿಕರಿಗಷ್ಟೇ ಅಲ್ಲದೆ, ಬೆಂಗಳೂರು ನಗರದ ನಾಗರಿಕರಿಗೂ ಮುಕ್ತ ಮತ್ತು ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಬೆಂಗಳೂರು ನಗರದಿಂದ ಆಗಮಿಸಿದ್ದ ನಾಗರಿಕರು ವಿಮಾನ ಟಿಕೆಟ್‌ ಇಲ್ಲದೆಯೂ ಸಾಂಸ್ಕೃತಿಕ ಪ್ರದರ್ಶನಗಳನ್ನು ಆಸ್ವಾದಿಸಿ ಸಂಭ್ರಮಿಸಿದರು.

24
ಕಲಾ ಪ್ರದರ್ಶನಗಳ ಮೂಲಕ ಭವ್ಯ ಪ್ರಾರಂಭ
Image Credit : Asianet News

ಕಲಾ ಪ್ರದರ್ಶನಗಳ ಮೂಲಕ ಭವ್ಯ ಪ್ರಾರಂಭ

ನಾಡಹಬ್ಬ ದಸರಾ ಆಚರಣೆಯು ಕಣ್ಮನ ಸೆಳೆಯುವ ಜಾನಪದ ಕಲಾ ಪ್ರದರ್ಶನಗಳ ಮೂಲಕ ಭವ್ಯವಾಗಿ ಪ್ರಾರಂಭಗೊಂಡಿತು. ವೀರಾವೇಶಭರಿತ ಡೊಳ್ಳು ಕುಣಿತದ ಲಯಬದ್ಧ ಸದ್ದು ಮತ್ತು ಕಲಾವಿದರ ಶಕ್ತಿಪೂರ್ಣ ಹೆಜ್ಜೆಗಳು ವೀಕ್ಷಕರನ್ನು ರೋಮಾಂಚನಗೊಳಿಸಿದರೆ, ಬೃಹತ್ ಗಾತ್ರದ ಗಾರುಡಿ ಗೊಂಬೆಗಳ ನೃತ್ಯವು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರ ಗಮನ ಸೆಳೆಯಿತು. ಇದರ ಜೊತೆಗೆ, ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಬಿಂಬಿಸುವ ಬೇಡರ ನೃತ್ಯ ಮತ್ತು ತಮಟೆ ವಾದ್ಯಗಳ ಪ್ರದರ್ಶನಗಳು

Related Articles

Related image1
ಮೈಸೂರು ದಸರಾ: ಬಾನಂಗಳದಲ್ಲಿ ಡ್ರೋನ್‌ಗಳ ಚಿತ್ತಾರ, ಹುಲಿ ಕಲಾಕೃತಿಯಿಂದ ವಿಶ್ವದಾಖಲೆ
34
ಕೆಐಎಎಫ್‌ ಬೆಂಬಲಿತ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ವಾದ್ಯಗೋಷ್ಠಿ
Image Credit : Asianet News

ಕೆಐಎಎಫ್‌ ಬೆಂಬಲಿತ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ವಾದ್ಯಗೋಷ್ಠಿ

ಅಷ್ಟೇ ಅಲ್ಲದೇ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ (ಕೆಐಎಎಫ್) ಬೆಂಬಲಿತ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಂದ ಘಟಂ ವಾದ್ಯಗೋಷ್ಠಿ, ನೃತ್ಯಗಂಗಾ ಪ್ರದರ್ಶಕ ಕಲಾ ಕೇಂದ್ರದಿಂದ ದಸರಾ ವೈಭವ ಪ್ರದರ್ಶನಗಳು ದಸರಾ ಸಂಭ್ರಮವನ್ನು ಹೆಚ್ಚಿಸಿದವು. ಶಾಸ್ತ್ರೀಯ ಸಂಯೋಜನೆಯ ಮೂಲಕ ನವರಾತ್ರಿಯ ಕಥಾ ವರ್ಣನೆ, ಸುಗಮ ಸಂಗೀತ, ಕಂಸವಧೆ ಯಕ್ಷಗಾನ ಪ್ರಸಂಗ, ವಾದ್ಯಗೋಷ್ಠಿ ಹಾಗೂ ಭರತನಾಟ್ಯ ನೃತ್ಯರೂಪಕದಂತಹ ವೈವಿಧ್ಯಮಯ ಕಾರ್ಯಕ್ರಮಗಳು ವೀಕ್ಷಕರಿಗೆ ಕರ್ನಾಟಕದ ಸಾಂಸ್ಕೃತಿಕ ಸೊಬಗನ್ನು ತಲುಪಿಸಲು ಯಶಸ್ವಿಯಾದವು. ಟರ್ಮಿನಲ್ 2 ರ ಕಲಾ ಕಾರ್ಯಕ್ರಮದ ಭಾಗವಾಗಿರುವ ಹೂವಿನಹಳ್ಳಿ ಗ್ರಾಮದ 9ನೇ ತಲೆಮಾರಿನ ಗೊಂಬೆಯಾಟದ ಕಲಾವಿದರಾದ ಶ್ರೀ ಗುಂಡುರಾಜು ಅವರು ಸಾಂಪ್ರದಾಯಿಕ ತೊಗಲು ಗೊಂಬೆಯಾಟವನ್ನು ಪ್ರಸ್ತುತಪಡಿಸುವ ಮೂಲಕ, ರಾಮಾಯಣ, ಮಹಾಭಾರತ ಮತ್ತು ಪುರಾಣಗಳ ಅಮರ ಕಥೆಗಳು ವೀಕ್ಷಕರನ್ನು ಮಂತ್ರಮುಗ್ಧಗೊಳಿಸಿದವು. ಪ್ರತಿಯೊಂದು ಪ್ರದರ್ಶನಗಳು ಮನರಂಜನೆಯ ಜೊತೆಗೆ, ನಮ್ಮ ನಾಡಿನ ಸಾಂಸ್ಕೃತಿಕ ಬೇರುಗಳ ಪರಿಚಯವನ್ನೂ ಮಾಡಿಕೊಟ್ಟವು. ಈ ಮೂಲಕ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಕೇವಲ ಪ್ರಯಾಣದ ಕೇಂದ್ರವಾಗಷ್ಟೇ ಆಗಿರದೇ, ಕಲೆ ಮತ್ತು ಸಂಸ್ಕೃತಿಯ ಹೆಬ್ಬಾಗಿಲು ಎಂಬುದನ್ನು ನಿರೂಪಿಸಿತು. ಜೊತೆಗೆ, ಅಂತಾರಾಷ್ಟ್ರೀಯ ಸಂಜ್ಞಾ ಭಾಷಾ ದಿನ ಮತ್ತು ಶ್ರವಣದೋಷವುಳ್ಳವರ ವಾರಗಳಿಗೆ ದಸರಾ ಶುಭಕೋರುವ ಮೂಲಕ ಎಲ್ಲರನ್ನೂ ಒಳಗೊಳ್ಳುವಿಕೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಪ್ರತಿಬಿಂಬಿಸಿತು.

44
ಪ್ರಯಾಣಿಕರಿಗೆ ಸಾಂಸ್ಕೃತಿಕ ಸ್ವಾಗತ ಮತ್ತು ಅನುಭವ
Image Credit : Asianet News

ಪ್ರಯಾಣಿಕರಿಗೆ ಸಾಂಸ್ಕೃತಿಕ ಸ್ವಾಗತ ಮತ್ತು ಅನುಭವ

ವಿವಿಧ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಟರ್ಮಿನಲ್‌ಗಳಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಭುತ ಸ್ವಾಗತ ನೀಡಿದವು. ಈ ಮೂಲಕ, ವಿಮಾನ ನಿಲ್ದಾಣವು ಕೇವಲ ಪ್ರಯಾಣದ ಕೇಂದ್ರವಾಗದೆ, ಸಾಂಸ್ಕೃತಿಕ ರಾಯಭಾರಿಯಾಗಿ ಕಾರ್ಯನಿರ್ವಹಿಸಿತು. ವಿವಿಧ ರಾಜ್ಯ ಮತ್ತು ದೇಶಶಗಳ ಪ್ರಯಾಣಿಕರಿಗೆ ಕರ್ನಾಟಕದ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಸಂಭ್ರಮದಲ್ಲಿ ಭಾಗಿಯಾಗಲು ಇದೊಂದು ವಿಶಿಷ್ಟ ಅವಕಾಶವಾಗಿತ್ತು. ಬಿಡುವಿಲ್ಲದ ಪ್ರಯಾಣದ ನಡುವೆ ಸಿಕ್ಕ ಈ ಹಬ್ಬದ ವಾತಾವರಣವು, ಪ್ರಯಾಣಿಕರಿಗೆ ಹೊಸ ಉತ್ಸಾಹವನ್ನು ತುಂಬಿತು.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಮೈಸೂರು ದಸರಾ
ವಿಮಾನ ನಿಲ್ದಾಣ
ಕರ್ನಾಟಕ ಸುದ್ದಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved