How to Identify Real vs Fake Khadi: ಶುದ್ಧ ಖಾದಿ ಬಟ್ಟೆಯನ್ನು ಗುರುತಿಸುವುದು ಹೇಗೆ: ನೀವು ಅಸಲಿ ಖಾದಿ ಖರೀದಿಸಲು ಬಯಸಿದರೆ, ಈ ವಿಷಯಗಳನ್ನು ಗಮನದಲ್ಲಿಡಿ. ಅಸಲಿ ಖಾದಿ ನಿಮಗೆ ಸ್ಟೈಲಿಶ್ ಮತ್ತು ಆರಾಮದಾಯಕ ಲುಕ್ ನೀಡುವುದಲ್ಲದೆ, ಸ್ವದೇಶಿ ಮತ್ತು ಸುಸ್ಥಿರ ಫ್ಯಾಷನ್‌ಗೂ ಬೆಂಬಲ ನೀಡುತ್ತದೆ.
ಭಾರತದಲ್ಲಿ ಖಾದಿ ಬಟ್ಟೆ ಕೇವಲ ಒಂದು ಫ್ಯಾಬ್ರಿಕ್ ಅಲ್ಲ, ಬದಲಿಗೆ ಆತ್ಮವಿಶ್ವಾಸ, ಸ್ವದೇಶಿ ಮತ್ತು ಸ್ವಾತಂತ್ರ್ಯ ಹೋರಾಟದ ಸಂಕೇತವಾಗಿದೆ. ಮಹಾತ್ಮ ಗಾಂಧಿಯವರು ಇದನ್ನು ಸ್ವದೇಶಿ ಚಳುವಳಿಯೊಂದಿಗೆ ಜೋಡಿಸಿ ಮನೆಮನೆಗೆ ತಲುಪಿಸಿದರು. ಇಂದಿಗೂ ಖಾದಿ ಧರಿಸುವುದು ಒಂದು ಸುಸ್ಥಿರ ಮತ್ತು ನೈಸರ್ಗಿಕ ಫ್ಯಾಷನ್ ಸ್ಟೇಟ್ಮೆಂಟ್ ಆಗಿದೆ. ಆದರೆ ಮಾರುಕಟ್ಟೆಯಲ್ಲಿ ಖಾದಿ ಹೆಸರಿನಲ್ಲಿ ಕಲಬೆರಕೆ ಅಥವಾ ನಕಲಿ ಬಟ್ಟೆಗಳನ್ನು ಮಾರಲಾಗುತ್ತದೆ. ಹಾಗಾಗಿ ಅಸಲಿ ಖಾದಿ ಮತ್ತು ನಕಲಿ ಖಾದಿ ನಡುವಿನ ವ್ಯತ್ಯಾಸವನ್ನು ತಿಳಿಯುವುದು ಮುಖ್ಯ.
ಖಾದಿ ಬಟ್ಟೆ ಅಂದ್ರೆ ಏನು?
ಖಾದಿ ಕೈಯಿಂದ ನೂಲು ತೆಗೆದು ಕೈಯಿಂದಲೇ ನೇಯ್ದ ಬಟ್ಟೆಯಾಗಿದೆ. ಇದರಲ್ಲಿ ಹತ್ತಿ, ರೇಷ್ಮೆ ಅಥವಾ ಉಣ್ಣೆಯ ದಾರವನ್ನು ಬಳಸಲಾಗುತ್ತದೆ. ಇದರ ವಿಶೇಷತೆ ಎಂದರೆ ಇದು ಗಾಳಿಯಾಡುವ (breathable) ಮತ್ತು ಹವಾಮಾನಕ್ಕೆ ತಕ್ಕಂತೆ ದೇಹವನ್ನು ತಂಪಾಗಿ ಅಥವಾ ಬೆಚ್ಚಗೆ ಇಡುವ ಬಟ್ಟೆಯಾಗಿದೆ. ಅಂದರೆ, ಖಾದಿ ಬಟ್ಟೆಯಲ್ಲಿ ಯಂತ್ರದ ಬಳಕೆ ತುಂಬಾ ಕಡಿಮೆ ಅಥವಾ ಇಲ್ಲವೇ ಇಲ್ಲ.
ಇದನ್ನೂ ಓದಿ:I Love you America: ಕೆಲಸ ಕಳೆದುಕೊಂಡು ಕಣ್ಣೀರಿನ ವಿದಾಯ ಹೇಳಿದ ಭಾರತೀಯ ಯುವತಿ- ವಿಡಿಯೋ ವೈರಲ್
ಅಸಲಿ ಖಾದಿಯನ್ನು ಗುರುತಿಸುವುದು ಹೇಗೆ?
ಖಾದಿಯ ಟೆಕ್ಸ್ಚರ್‌ನಿಂದ ಗುರುತಿಸಿ: ಅಸಲಿ ಖಾದಿ ಮುಟ್ಟಲು ಸ್ವಲ್ಪ ಒರಟು ಮತ್ತು ದಪ್ಪ ಎನಿಸುತ್ತದೆ. ನಕಲಿ ಖಾದಿ (ಯಂತ್ರದಿಂದ ತಯಾರಿಸಿದ್ದು) ತುಂಬಾ ನಯವಾಗಿ ಮತ್ತು ಹೊಳಪಾಗಿರುತ್ತದೆ. ಅಸಲಿ ಖಾದಿಯಲ್ಲಿ ದಾರದ ದಪ್ಪ ಎಲ್ಲ ಕಡೆ ಒಂದೇ ರೀತಿ ಇರುವುದಿಲ್ಲ.
ಖಾದಿ ದಾರಗಳ ಅಸಮಾನತೆ: ಕೈಯಿಂದ ತಯಾರಿಸುವುದರಿಂದ ಅಸಲಿ ಖಾದಿಯಲ್ಲಿ ದಾರಗಳಲ್ಲಿ ಸ್ವಲ್ಪ ಅಸಮಾನತೆ ಕಾಣಿಸುತ್ತದೆ. ಯಂತ್ರದಿಂದ ತಯಾರಿಸಿದ ನಕಲಿ ಖಾದಿಯಲ್ಲಿ ದಾರಗಳು ತುಂಬಾ ಪರ್ಫೆಕ್ಟ್ ಮತ್ತು ಒಂದೇ ಸಮನಾಗಿರುತ್ತವೆ.
ಗಾಳಿಯಾಡುವ ಗುಣ: ಅಸಲಿ ಖಾದಿ ಧರಿಸಿದಾಗ ದೇಹಕ್ಕೆ ಸುಲಭವಾಗಿ ಗಾಳಿ ಸಿಗುತ್ತದೆ. ಬೇಸಿಗೆಯಲ್ಲಿ ತಂಪು ಮತ್ತು ಚಳಿಗಾಲದಲ್ಲಿ ಬೆಚ್ಚಗಿರುತ್ತದೆ. ನಕಲಿ ಖಾದಿ ಈ ನೈಸರ್ಗಿಕ ಗುಣವನ್ನು ನೀಡುವುದಿಲ್ಲ, ಅದು ದೇಹಕ್ಕೆ ಅಂಟಿಕೊಳ್ಳುತ್ತದೆ.
ಇದನ್ನೂ ಓದಿ: ಪ್ರೀತಿ ಮಾಯೆ ಹುಷಾರು..! ಗೆಳತಿಯಿಂದಲೇ ರೇ ಪ್ ದೂರು, ಜೈಲಿಂದ ಬಂದ ಟೆಕ್ಕಿ ರೈಲಿಗೆ ಹಾರಿ ಸಾವು
ಖಾದಿಯ ಬರ್ನ್ ಟೆಸ್ಟ್: ಅಸಲಿ ಖಾದಿಯ ದಾರವನ್ನು ಸುಟ್ಟಾಗ ಬೂದಿಯಾಗುತ್ತದೆ ಮತ್ತು ಕಾಗದ/ಮರದಂತಹ ವಾಸನೆ ಬರುತ್ತದೆ. ನಕಲಿ ಖಾದಿ (ಪಾಲಿಯೆಸ್ಟರ್ ಅಥವಾ ಸಿಂಥೆಟಿಕ್ ಮಿಶ್ರಣ) ಸುಟ್ಟಾಗ ಪ್ಲಾಸ್ಟಿಕ್‌ನಂತಹ ವಾಸನೆ ಮತ್ತು ಗಟ್ಟಿಯಾದ ಗಂಟು ಉಳಿಯುತ್ತದೆ.
ಖಾದಿಯ ಪ್ರಮಾಣೀಕೃತ ಚಿಹ್ನೆ: ಅಸಲಿ ಖಾದಿ ಬಟ್ಟೆಗಳ ಮೇಲೆ ಸಾಮಾನ್ಯವಾಗಿ KVIC (ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ) ಟ್ಯಾಗ್ ಅಥವಾ ಖಾದಿ ಮಾರ್ಕ್ ಇರುತ್ತದೆ. ಈ ಟ್ಯಾಗ್ ಸರ್ಕಾರದಿಂದ ಪ್ರಮಾಣೀಕರಿಸಲ್ಪಟ್ಟಿರುತ್ತದೆ. ಈ ಟ್ಯಾಗ್ ಇಲ್ಲದೆ ಖರೀದಿಸಿದ ಖಾದಿ ಅಸಲಿಯೇ ಎಂಬ ಬಗ್ಗೆ ಅನುಮಾನ ಮೂಡಬಹುದು.
