ಸಚಿವ ಪ್ರಿಯಾಂಕ್ ಖರ್ಗೆಯವರು, ಧರ್ಮ ರಕ್ಷಣೆಗಾಗಿ ಹೆಚ್ಚು ಮಕ್ಕಳನ್ನು ಹೆರಲು ಹೇಳುವ ಆರ್‌ಎಸ್‌ಎಸ್‌ ನಾಯಕರು ಯಾಕೆ ಬ್ರಹ್ಮಚಾರಿಗಳಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಅವರಿಗಾಗಿಯೇ 'ಆರ್‌ಎಸ್‌ಎಸ್ ಮ್ಯಾಟ್ರಿಮೊನಿ' ಆರಂಭಿಸಲು ವ್ಯಂಗ್ಯವಾಗಿ ಸಲಹೆ ನೀಡಿದ್ದಾರೆ.

ಬೆಂಗಳೂರು (ಅ.01): ಆರ್‌ಎಸ್‌ಎಸ್‌ನವರು ಹೇಳ್ತಾರೆ ಧರ್ಮ ರಕ್ಷಣೆಗೆ 3-5 ಮಕ್ಕಳು ಹುಟ್ಟಿಸಿ ಅಂತ ಹೇಳ್ತಾರೆ. ಆದರೆ, ಅವರು ಯಾಕೆ ಬ್ರಹ್ಮಚಾರಿಗಳಾಗಿರ್ತಾರೆ?. ಇದಕ್ಕೆ ಪರಿಹಾರವಾಗಿ, ಭಾರತ್ ಮ್ಯಾಟ್ರಿಮೊನಿ, ಲಿಂಗಾಯತ ಮ್ಯಾಟ್ರಿಮೊನಿ, ಒಕ್ಕಲಿಗ ಮ್ಯಾಟ್ರಿಮೊನಿ ಇರುತ್ತದಲ್ಲ ಹಾಗೆ, ಒಂದು ಆರ್‌ಎಸ್‌ಎಸ್ ಮ್ಯಾಟ್ರಿಮೊನಿ ಹಾಕಿಸಿ. ಆರ್‌ಎಸ್‌ಎಸ್‌ ನಾಯಕರೂ ಬರಲಿ, ಅವರು ಮಕ್ಕಳು ಬಂದು ಧರ್ಮ ರಕ್ಷಣೆಗೆ ಇಳಿಯಲಿ. ಅವರ ಮಕ್ಕಳು ಮಾತ್ರ ಸೇಫ್ ಆಗಿರಬೇಕಾ? ಎಂದು ಸಚಿವ ಪ್ರಿಯಾಂಕ ಖರ್ಗೆ ಟೀಕೆ ಮಾಡಿದರು.

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಧರ್ಮ ರಕ್ಷಣೆ ಕುರಿತು ಮಾತನಾಡುವ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರ ಪಾತ್ರದ ಬಗ್ಗೆ ಪ್ರಿಯಾಂಕ್ ಖರ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದರು. ಆರ್‌ಎಸ್‌ಎಸ್‌ನವರು ಹುಟ್ಟಿ 100 ವರ್ಷ ಆಗಿಲ್ಲ, ಆದರೆ ಸನಾತನಾ ಧರ್ಮಕ್ಕೆ 3 ಸಾವಿರ ವರ್ಷದ ಇತಿಹಾಸ ಇದೆ. ಇವರು ಏನು ಧರ್ಮ ರಕ್ಷಣೆ ಮಾಡ್ತಾರೆ? 2,900 ವರ್ಷ ಇವರು ಬದುಕಿದ್ದರಾ? ಇವರು ಹುಟ್ಟೂ ಇರಲಿಲ್ಲ ಎಂದು ಲೇವಡಿ ಮಾಡಿದರು.

ಆರ್‌ಎಸ್‌ಎಸ್ ಮ್ಯಾಟ್ರಿಮೊನಿ ಮಾಡಲಿ:

ಧರ್ಮ ರಕ್ಷಣೆಗಾಗಿ ಹೆಚ್ಚು ಮಕ್ಕಳನ್ನು ಹುಟ್ಟಿಸಿ ಎಂದು ಆರ್‌ಎಸ್‌ಎಸ್ ಹೇಳಿಕೆ ನೀಡುವ ವಿಚಾರವನ್ನು ಪ್ರಸ್ತಾಪಿಸಿ ಪ್ರಿಯಾಂಕ್ ಖರ್ಗೆ ತೀಕ್ಷ್ಣ ವ್ಯಂಗ್ಯವಾಡಿದರು. 'ಆರ್‌ಎಸ್‌ಎಸ್‌ನವರು ಹೇಳ್ತಾರೆ ಧರ್ಮ ರಕ್ಷಣೆಗೆ ಮೂರು, ಐದು ಮಕ್ಕಳು ಹುಟ್ಟಿಸಿ ಅಂತ. ಆದರೆ, ಅವರು ಯಾಕೆ ಬ್ರಹ್ಮಚಾರಿಗಳಾಗಿರ್ತಾರೆ? ಎಂದು ಪ್ರಶ್ನಿಸಿದರು. ಇದಕ್ಕೆ ಪರಿಹಾರವಾಗಿ, ಭಾರತ್ ಮ್ಯಾಟ್ರಿಮೊನಿ, ಲಿಂಗಾಯತ ಮ್ಯಾಟ್ರಿಮೊನಿ, ಒಕ್ಕಲಿಗ ಮ್ಯಾಟ್ರಿಮೊನಿ ಇರುತ್ತದಲ್ಲ ಹಾಗೆ, ಒಂದು ಆರ್‌ಎಸ್‌ಎಸ್ ಮ್ಯಾಟ್ರಿಮೊನಿ ಹಾಕಿಸಿ. ಆರ್‌ಎಸ್‌ಎಸ್‌ ನಾಯಕರೂ ಬರಲಿ, ಅವರು ಮಕ್ಕಳು ಧರ್ಮ ರಕ್ಷಣೆಗೆ ಇಳಿಯಲಿ. ಅವರ ಮಕ್ಕಳು ಮಾತ್ರ ಸೇಫ್ ಆಗಿರಬೇಕಾ? ಎಂದು ಸವಾಲು ಹಾಕಿದರು.

ನಾಳೆ ವಿಜಯ ದಶಮಿಯಂದು ಒಂದು ನಿರ್ಣಯ ಕೈಗೊಳ್ಳಿ. ಆರ್‌ಎಸ್‌ಎಸ್‌ನವರು ಮದುವೆ ಮಾಡ್ಕೋಬೇಕು. ಅವರು ಸಹಾ ಒಂದು ಎಂಟು-ಹತ್ತು ಮಕ್ಕಳು ಹುಟ್ಟಿಸಬೇಕು ಮತ್ತು ಅವರಿಗೆಲ್ಲರಿಗೂ ಧರ್ಮ ರಕ್ಷಣೆಗೆ ಬಿಡಬೇಕು ಅಂತ ಹೇಳಿ. ಆರ್‌ಎಸ್‌ಎಸ್ ಮ್ಯಾಟ್ರಿಮೊನಿ ಒಂದು ಮಾಡಿಸಿ, ಅದಕ್ಕೆ ಏನಾದರೂ ಸಲಹೆ ಬೇಕಾದರೆ ನಾನೇ ಕೊಡುತ್ತೇನೆ ಎಂದು ಪ್ರಿಯಾಂಕ ಖರ್ಗೆ ವ್ಯಂಗ್ಯವಾಡಿದರು.

ಶಸ್ತ್ರಾಸ್ತ್ರ ಇಟ್ಟುಕೊಂಡು ಓಡಾಡಲಿ, ಕಾನೂನು ಕ್ರಮ ಕೈಗೊಳ್ಳೋದು ಗೊತ್ತು:

ಬಿಜೆಪಿ ಮುಖಂಡ ನಾರಾಯಣ ಬಾಂಡಗೆ ಅವರು ಹಿಂದೂಗಳು ದಯವಿಟ್ಟು ಶಸ್ತ್ರಾಸ್ತಗಳನ್ನು ಇಟ್ಟುಕೊಂಡು ಓಡಾಡಲಿ. ನಾವು ಏನು ಕ್ರಮ ತಗೋಬೇಕೋ ತಗೋತಿವಿ. ಹಿಂದೂ ಇರಬಹುದು, ಮುಸ್ಲಿಂ ಇರಬಹುದು, ಸಿಖ್, ಪಾರ್ಸಿ ಯಾರೇ ಇರಲಿ, ಶಸ್ತ್ರಾಸ್ತ್ರ ಇಟ್ಟುಕೊಂಡು ಓಡಾಡಬೇಕು ಅಂದರೆ ದಯವಿಟ್ಟು ಓಡಾಡಲಿ. ಕಾನೂನು ಪ್ರಕಾರ ನಾವು ಕ್ರಮ ತಗೆದುಕೊಳ್ಳುತ್ತೇವೆ. ಏನಿದು ಹುಡುಗಾಟನಾ ಈ ಬಿಜೆಪಿಯವರಿಗೆ? ಎಂದು ಪ್ರಶ್ನಿಸಿದರು.

ಇದೇ ವೇಳೆ, ಬಿಜೆಪಿ ಶಾಸಕರು ಮತ್ತು ನಾಯಕರಿಗೆ ಅವರು ತಮ್ಮದೇ ಮಕ್ಕಳಿಗೆ ತ್ರಿಶೂಲ ಕೊಡಲಿ ಎಂದು ಸವಾಲು ಹಾಕಿದರು. 'ಬಿಜೆಪಿಯ ಶಾಸಕರೆಲ್ಲರೂ ಅವರ ಮಕ್ಕಳಿಗೆ ಕತ್ತಿ-ತಲವಾರು ಕೊಡಲಿ. ಅವರ ಮಕ್ಕಳಿಗೆ ತ್ರಿಶೂಲ ದೀಕ್ಷೆ ಕೊಡಿಸಲಿ. ಅವರು ತ್ರಿಶೂಲ ಸೇರಿ ಶಸ್ತ್ರಾಸ್ತ್ರ ಹಿಡಿದುಕೊಂಡು ಓಡಾಡಲಿ. ನಾವು ಾಗ ಕಾನೂನು ಪ್ರಕಾರ ಏನು ಕ್ರಮ ತಗೋಬೇಕೋ ತಗೋತಿವಿ' ಎಂದರು.

ದೇಶದ ಸಮಸ್ಯೆ ಮರೆತು ಧರ್ಮ ರಕ್ಷಣೆ ಮಾತು:

ದೇಶದ ಪ್ರಮುಖ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು. 'ದೇಶದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ, ನಿರುದ್ಯೋಗವಿದೆ. ಮೋದಿಯವರ ಸ್ನೇಹಿತ ಟ್ರಂಪ್ (ಟ್ರಂಪ್) ಟಾರೀಫ್ ಮೇಲೆ ಟಾರೀಫ್ ಹಾಕ್ತಿದ್ದಾರೆ. ಪಾಕಿಸ್ತಾನಕ್ಕೆ ವಿಶ್ವಬ್ಯಾಂಕ್‌ನವರು ಮಿಲಿಯನ್ ಡಾಲರ್ ಫಂಡ್ ಕೊಡ್ತಿದ್ದಾರೆ. ಇವರು ನೋಡಿದರೆ ಹೀಗೆ ಮಾತಾಡ್ತಾರೆ. ಮೊದಲು ನಿಮ್ಮ ಮನೆ ಮಕ್ಕಳಿಗೆ ಧರ್ಮ ರಕ್ಷಣೆಗೆ ಬಿಡಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.