- Home
- Entertainment
- TV Talk
- Bigg Bossಗೆ ಯಾಕ್ರೀ ಹೋಗ್ಬೇಕು- ಇಲ್ಲೇ ಹುಡುಗಿಯರು ಸಿಗಲ್ವೇನ್ರಿ? ಬೆಳಿಗ್ಗೆನೂ ತಗೋತೇನ್ರಿ: ಕಾಕ್ರೋಚ್ ಸುಧಿ ವಿಡಿಯೋ ವೈರಲ್
Bigg Bossಗೆ ಯಾಕ್ರೀ ಹೋಗ್ಬೇಕು- ಇಲ್ಲೇ ಹುಡುಗಿಯರು ಸಿಗಲ್ವೇನ್ರಿ? ಬೆಳಿಗ್ಗೆನೂ ತಗೋತೇನ್ರಿ: ಕಾಕ್ರೋಚ್ ಸುಧಿ ವಿಡಿಯೋ ವೈರಲ್
ಬಿಗ್ ಬಾಸ್-12 ಮನೆಯಲ್ಲಿ ಸದ್ದು ಮಾಡುತ್ತಿರುವ ನಟ ಕಾಕ್ರೋಚ್ ಸುಧಿಯವರ ಹಳೆಯ ಸಂದರ್ಶನದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಹುಡುಗಿಯರು, ಡ್ರಿಂಕ್ಸ್, ಮತ್ತು ಹೆಂಡತಿಯ ಬಗ್ಗೆ ನೀಡಿದ ಪಂಚಿಂಗ್ ಉತ್ತರಗಳು ಗಮನ ಸೆಳೆಯುತ್ತಿವೆ.

Bigg Boss-12 ಮನೆಯಲ್ಲಿ ಕಾಕ್ರೋಚ್ ಸುಧಿ
Bigg Boss-12 ಮನೆಯಲ್ಲಿ ಸದ್ದು ಮಾಡ್ತಿರೋರಲ್ಲ ನಟ ಕಾಕ್ರೋಚ್ ಸುಧಿ ಅವರು ಕೂಡ ಒಬ್ಬರು. ಅವರ ರಿಯಲ್ ಹೆಸರು ಸುಧೀರ್ ಬಾಲ್ರಾಜ್ (Cockroach Sudhi -Sudhir Balraj). ಸ್ಯಾಂಡಲ್‌ವುಡ್‌ನಲ್ಲಿ ವಿಲನ್ ಮತ್ತು ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಕಾಕ್ರೋಚ್ ಸುಧಿ, ಮೈತ್ರಿ, ಮಿ. ಐರಾವತ, ಅಂಜನಿಪುತ್ರ, ಸಲಗ, ಟಗರು, ಯುವರತ್ನ, ಭೀಮ ಮುಂತಾದ ಸಿನಿಮಾಗಳಲ್ಲಿ ಕಾಕ್ರೋಚ್ ಸುಧಿ ಗಮನಸೆಳೆಯುವಂತಹ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಗ್ಬಾಸ್ಗೆ ಹೋಗಲ್ಲ ಎಂದಿದ್ದ ನಟ
'ಯಾಕೆ ಎಲ್ಲಾ ನಾನು ಬಿಗ್ ಬಾಸ್‌ಗೆ ಹೋಗ್ತಿನಿ ಅಂತ ಹೇಳ್ತಾ ಇದ್ದಾರೋ ಗೊತ್ತಿಲ್ಲ. ನನಗೆ ಬಿಗ್ ಬಾಸ್ ನಿಂದ ಎರಡ್ಮೂರು ಸಲ ಕರೆದರು. ಆದರೆ, ನಾನು ಡೇಟ್ ಇಲ್ಲ ಹಾಗೇ ಹೀಗೆ ಅಂತ ಹೇಳಿದ್ದಕ್ಕೆ, ಅಯ್ಯೋ ಈ ಹುಡುಗ ಬರಲ್ಲ ಅಂತ ಅವರೇ ನನ್ನು ಬೈದು ಬಿಟ್ಟುಬಿಟ್ಟವ್ರೇ ಅಂತ ಅನ್ನಿಸುತ್ತದೆ. ನಾನು ಸದ್ಯ ಬಿಗ್ ಬಾಸ್‌ಗೆ ಹೋಗ್ತಿಲ್ಲ' ಎಂದು ಈಚೆಗಷ್ಟೇ ಹೇಳಿದ್ದ ಸುಧಿ ಅವರು ಈಗ ಬಿಗ್ಬಾಸ್ ಮನೆ ಸೇರಿಕೊಂಡಿದ್ದಾರೆ.
ಪಂಚಿಂಗ್ ಡೈಲಾಗ್
ಕಾಕ್ರೋಚ್ ಸುಧಿ ಮಾತನಾಡಿದ್ರೆ ಒಂದೊಂದು ಪಂಚಿಂಗ್ ಡೈಲಾಗ್‌ಗಳು ಅವರ ಬಾಯಲ್ಲಿ ಬರುತ್ತವೆ. ಅವು ಯಾವ ಮಾಸ್ ಸಿನಿಮಾಕ್ಕೂ ಕಮ್ಮಿ ಇರೋದಿಲ್ಲ. ಅವರ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ.
ಹಳೆಯ ವಿಡಿಯೋ ವೈರಲ್
ಇದರ ನಡುವೆಯೇ, ಅವರ ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ka___36__boy ಎನ್ನುವ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ಅದರಲ್ಲಿ ಆ್ಯಂಕರ್, ಸುಧಿ ಅವರು ಬಿಗ್ಬಾಸ್ಗೆ ಹೋದ್ರೆ ಹುಡುಗಿಯರನ್ನು ಫ್ರೆಂಡ್ಸೇ ಮಾಡಿಕೊಳ್ಳಲ್ಲ ಹೌದಾ ಎಂದಾಗ, ಸುಧಿ ಅವರು ಫಸ್ಟ್ ಆಫ್ ಆಲ್ ಬಿಗ್ಬಾಸ್ಗೇ ನಾನು ಹೋಗಲ್ಲ. ಹುಡುಗಿಯರನ್ನು ಫ್ರೆಂಡ್ಸ್ ಮಾಡಿಕೊಳ್ಳಲು ಬಿಗ್ಬಾಸ್ಗೆ ಯಾಕೆ ಹೋಗಬೇಕು, ಇಲ್ಲೇ ಪಕ್ಕದಲ್ಲೇ ಹೋದ್ರೆ ಸಿಗಲ್ವಾ ಎಂದು ಪ್ರಶ್ನಿಸಿದ್ದರು. ಬಿಗ್ಬಾಸ್ಗೆ ಹೋದ್ರೆ ಸುಧಿ ಅವ್ರು ಲವ್ ಮಾಡಲ್ವಾ ಎಂದು ಪ್ರಶ್ನಿಸಿದಾಗ, ಅವರು ನನ್ನನ್ನು ಲವ್ ಮಾಡಬೇಕಲ್ಲ ಎಂದು ಉತ್ತರ ಕೊಟ್ಟಿದ್ದರು!
ಎದ್ದಾಗಲೂ ಡ್ರಿಂಕ್ಸ್ ಮಾಡ್ತೀನಿ
ಪ್ರತಿದಿನ ಡ್ರಿಂಕ್ಸ್ ಮಾಡದೇ ಸುಧೀರ್ ಅವರು ಮಲಗೋದೇ ಇಲ್ಲ ಎಂದು ಕೇಳಿದಾಗ, ಎದ್ದಾಗಲೂ ಡ್ರಿಂಕ್ಸ್ ಮಾಡ್ತೀನಿ ಎಂದು ತಮಾಷೆ ಮಾಡಿದ್ದಾರೆ. ಮನಿ ಮತ್ತು ಹನಿ ಎರಡಲ್ಲಿ ಒಂದು ಆಯ್ಕೆ ಮಾಡಿ ಎಂದಾಗ, ದುಡ್ಡಿದ್ರೆ ವಿಜಯ ಮಲ್ಯ, ಇಲ್ಲಾಂದ್ರೆ ಸುಮ್ನೆ ಮಲಿಕಳಯ್ಯ ಎಂದು ಥಟ್ ಎಂದು ಉತ್ತರಿಸಿದ್ದಾರೆ. ನೆಮ್ಮದಿಯಿಂದ ಇರ್ತಾರಾ ಯಾವಾಗ್ಲೂ ಸುಧಿ ಎಂದು ಕೇಳಿದಾಗ, ಸುಧೀರ್ ಅವರು ಕೆಲವು ಜೀವಗಳು ನೆಮ್ಮದಿಯನ್ನು ಹಾಳು ಮಾಡಲೇ ಬರ್ತಾವೆ ಎಂದಿದ್ದಾರೆ!
ವೈಫ್ ಜೊತೆ...
ನಿಮ್ಮ ಫೆವರೆಟ್ ವಿಸ್ಕಿ, ವೈನ್, ವೈಫ್ ಯಾವುದು ಎಂದು ಪ್ರಶ್ನಿಸಿದಾಗ, ವೈಫ್ನ ಕರ್ಕೊಂಡು ವೈನ್ಶಾಪ್ಗೆ ಹೋಗಿ ವಿಸ್ಕಿ ಕುಡಿತೇನೆ ಎನ್ನೋದಾ ಸುಧೀರ್?